ಮೊದಲ ಪ್ರಯಾಣ ಆರಂಭಿಸಿದ ವಿಶ್ವದ ಅತಿ ದೊಡ್ಡ ಕ್ರೂಸ್ ಹಡಗು
ಐಷಾರಾಮಿ ಸೌಲಭ್ಯಗಳೊಂದಿಗೆ ಸಮುದ್ರದಲ್ಲಿ ಪ್ರಯಾಣಿಸಲು ಇಚ್ಚಿಸುವವರಿಗೆ ಇದು ಸಿಹಿ ಸುದ್ದಿ. ವಿಶ್ವದ ಅತಿ ದೊಡ್ಡ ಕ್ರೂಸ್ ಹಡಗು(Largest cruise Ship)ರಾಯಲ್ ಕೆರಿಬಿಯನ್‌ನ ‘ಐಕಾನ್ ಆಫ್ ದಿ ಸೀಸ್(Icon of the seas)’ ತನ್ನ ಮೊದಲ ಪ್ರಯಾಣ ಪ್ರಾರಂಭಿಸಿದೆ.
ಶನಿವಾರ ಸಂಜೆ ಯುನೈಟೆಡ್ ಸ್ಟೇಟ್ಸ್ ಆಪ್ ಅಮೆರಿಕದ(United States America)ಫ್ಲೋರಿಡಾದ ಮಿಯಾಮಿ ಬಂದರಿನಿಂದ ಬೃಹತ್ ಹಡಗು ಪ್ರಯಾಣ ಬೆಳೆಸಿದೆ. ಒಂದು ವಾರದವರೆಗೆ ವಿವಿಧ ದ್ವೀಪಗಳನ್ನು ಇದು ಸುತ್ತಲಿದೆ.
365 ಮೀಟರ್ ಉದ್ದದ ಕ್ರೂಸ್ ಹಡಗಿನಲ್ಲಿ 6 ವಾಟರ್ ಸ್ಲೈಡ್‌ಗಳು, 7 ಈಜುಕೊಳಗಳು, ಐಸ್ ಸ್ಕೇಟಿಂಗ್ ರಿಂಕ್, ಸಿನಿಮಾ ಥಿಯೇಟರ್(Film Theatre )ಮತ್ತು 40ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳಿವೆ. ಪ್ರಯಾಣಿಸುವ ಕುಟುಂಬಗಳಿಗೆ ಅತ್ಯುತ್ತಮ ಅನುಭವ ಒದಗಿಸಲು ಹಡಗು ಸಿದ್ಧವಾಗಿದೆ.
ನೀವು ಇದನ್ನು ಇಷ್ಟ ಪಡಬಹುದು:ಕನಿಷ್ಠ ತಾಪಮಾನದಿಂದಾಗಿ ಐಸ್ ಲ್ಯಾಂಡ್ ಆಗಿ ಬದಲಾದ ತಮಿಳುನಾಡಿನ “ಊಟಿ”:
ಹಡಗು 2,350 ಸಿಬ್ಬಂದಿ ಮತ್ತು 7,600 ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ.ಐಕಾನ್ ಆಫ್ ದಿ ಸೀಸ್ ಕಳೆದ ವರ್ಷ ಜೂನ್ 22ರಂದು ಫಿನ್‌ಲ್ಯಾಂಡ್‌ನ ಟರ್ಕು ಎಂಬಲ್ಲಿ ತನ್ನ ಮೊದಲ ಸಮುದ್ರ ಪ್ರಯೋಗಗಳನ್ನು ಪೂರ್ಣಗೊಳಿಸಿತ್ತು. ನಂತರ ಅಧಿಕೃತವಾಗಿ ಮೊದಲ ಬಾರಿಗೆ ಸಮುದ್ರದಲ್ಲಿ ಪ್ರಯಾಣಿಸಿದೆ.
ಆಕ್ವಾ ಪಾರ್ಕ್, ಈಜು-ಅಪ್ ಬಾರ್, ಅನನ್ಯ ಊಟದ ಅನುಭವಗಳು, ಆರ್ಕೇಡ್‌ಗಳು, ಲೈವ್ ಸಂಗೀತ ಮತ್ತು ಪ್ರದರ್ಶನಗಳು ಈ ಹಡಗಿನಲ್ಲಿವೆ. ಬಹಾಮಾಸ್, ಮೆಕ್ಸಿಕೋ, ಹೊಂಡುರಾಸ್, ಸೇಂಟ್ ಮಾರ್ಟೆನ್ ಮತ್ತು ಸೇಂಟ್ ಥಾಮಸ್‌ನಂತಹ ಬಂದರುಗಳೊಂದಿಗೆ ಪೂರ್ವ ಅಥವಾ ಪಶ್ಚಿಮ ಕೆರಿಬಿಯನ್ ಮೂಲಕ ಈ ಹಡಗಿನಲ್ಲಿ ಏಳು ರಾತ್ರಿಗಳನ್ನು ಪ್ರವಾಸಿಗರು ಕಳೆಯಬಹುದಾಗಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.