ವಂಡರ್ ಬಾಕ್ಸ್ವಿಂಗಡಿಸದಸ್ಮರಣೀಯ ಜಾಗ

ಕನಿಷ್ಠ ತಾಪಮಾನದಿಂದಾಗಿ ಐಸ್ ಲ್ಯಾಂಡ್ ಆಗಿ ಬದಲಾದ ತಮಿಳುನಾಡಿನ “ಊಟಿ”:

ತಮಿಳುನಾಡಿನ ಊಟಿಯು (Ooty) ಅತಿಯಾದ ಚಳಿಯಿಂದಾಗಿ ಹಿಮದಿಂದ ಆವೃತವಾಗಿದೆ. ತಾಪಮಾನವು 2.5°C ಗಿಂತ ಕಡಿಮೆಯಾಗಿದೆ ಮತ್ತು ಸಾಪೇಕ್ಷ ಆರ್ದ್ರತೆಯು (relative humidity ) 65 ಪ್ರತಿಶತದಷ್ಟು ದಾಖಲಾಗಿದೆ. ಊಟಿಯ ಸುತ್ತಲಿನ ಪ್ರದೇಶಗಳು ಸಹ ಹಿಮದಿಂದ ಆವೃತವಾಗಿವೆ.

ನೀಲಗಿರಿ ಗುಡ್ಡಗಾಡು ಜಿಲ್ಲೆಗಳು (Nilgiri hilly district) ವಾರ್ಷಿಕವಾಗಿ ನವೆಂಬರ್ ನಿಂದ ಫೆಬ್ರವರಿವರೆಗೆ ಹಿಮಕ್ಕೆ ಸಾಕ್ಷಿಯಾಗುತ್ತವೆ. ಆದರೆ, ಈ ವರ್ಷ ಬಿರುಗಾಳಿ ಸಹಿತ ಮಳೆಯಿಂದಾಗಿ ಜನವರಿ ಅಂತ್ಯದಲ್ಲಿ ಹಿಮ ಆರಂಭವಾಗಿದೆ.

ಊಟಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಾದ ಕಾಂತಲ್ (Kanthal), ಪಿಂಕರ್ ಪೋಸ್ಟ್ (Fingerpost) ಮತ್ತು ಥಲೈ ಕುಂಟಾ ಪ್ರದೇಶಗಳು ಸಹ ಹಿಮವನ್ನು ಅನುಭವಿಸುತ್ತಿವೆ.

ತೀವ್ರ ಚಳಿಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಟ್ಟದ ಮೇಲೆ ವಾಸಿಸುವ ಜನರು ಹೊರ ಬರಲಾರದೇ, ಮನೆಯೊಳಗೆ ಇದ್ದಾರೆ. ಅವರ ಕೆಲಸ ಕಾರ್ಯಗಳಿಗೆ ಚಳಿ ಅಡ್ಡಿ ಉಂಟು ಮಾಡಿದೆ.

ಹಸಿರು ಹುಲ್ಲುಗಾವಲುಗಳು ಬಿಳಿ ಇಬ್ಬನಿಯಿಂದಾಗಿ ಹೊಳೆಯುತ್ತಿದ್ದು, ನೋಡಲು ಮನೋಹರವಾಗಿವೆ. ಊಟಿ ನಗರ, ತಾಲಿಕುಂದ (Thalikunda), HPF, ಕಾಂತಲ್ ಮತ್ತು ಫಿಂಗರ್‌ಪೋಸ್ಟ್ ಸೇರಿದಂತೆ ಸುಪ್ರಸಿದ್ಧ ಗಿರಿಧಾಮದ ಹಲವಾರು ಪ್ರದೇಶಗಳು ಹಿಮದಿಂದ ಅಲಂಕೃತವಾಗಿ ಹೊಸ ಲೋಕವನ್ನೇ ಸೃಷ್ಟಿಸಿವೆ.

ನಿಂತ ವಾಹನಗಳ ಮೇಲೂ ಒಂದು ಇಂಚಿನಷ್ಟು ಹಿಮ ಆವರಿಸಿದೆ. ಈ ದೃಶ್ಯ ನೋಡಲು ಚೆಂದವೆನಿಸಿದರೂ, ವಾಹನ ಚಾಲಕರಿಗೆ ವಾಹನಗಳನ್ನು ಪ್ರಾರಂಭಿಸುವುದೇ ದೊಡ್ಡ ಸವಾಲಿನ ಸಂಗತಿ ಆಗಿದೆ.

ಸ್ಥಳೀಯ ಹವಾಮಾನ (MeT) ಅಧಿಕಾರಿಗಳು ಕಳೆದ ಕೆಲವು ವಾರಗಳಲ್ಲಿ ಹಗಲು ಮತ್ತು ರಾತ್ರಿ ತಾಪಮಾನದಲ್ಲಿ ಗಣನೀಯ ಏರಿಳಿತವನ್ನು ಗಮನಿಸಿದ್ದಾರೆ.

ಹಗಲಿನಲ್ಲಿ ಸ್ಥಿರವಾದ 25°C ತಾಪಮಾನವನ್ನು ಊಟಿ ಮತ್ತು ಆಸುಪಾಸಿನ ಪ್ರದೇಶಗಳು ಅನುಭವಿಸುತ್ತಿದ್ದು, ಈ ಹವಾಮಾನ ವೈಪರೀತ್ಯದಿಂದಾಗಿ ಬಿಳಿಯ ಮಂಜು ಸೃಷ್ಟಿಯಾಗಿವೆ. ಇವು ತಮಿಳುನಾಡಿನ ಕೆಲವು ಪ್ರದೇಶಗಳನ್ನು ಚಳಿಗಾಲದ ಐಸ್ ಲ್ಯಾಂಡ್ (Iceland) ಆಗಿ ಪರಿವರ್ತಿಸಿವೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button