ಮ್ಯಾಜಿಕ್ ತಾಣಗಳುವಿಂಗಡಿಸದಸಂಸ್ಕೃತಿ, ಪರಂಪರೆ

ವಿಶ್ವದ ಮೊದಲ ವಸತಿ ವಿಶ್ವವಿದ್ಯಾನಿಲಯದ ಬಗ್ಗೆ ಇಲ್ಲಿವೆ ಇಂಟ್ರೆಸ್ಟಿಂಗ್ ಸಂಗತಿ

” ನಳಂದ” ಈ ಹೆಸರನ್ನು ಬಹುತೇಕರು ಕೇಳಿಯೇ ಇರ್ತಾರೆ. ಶಾಲೆಗಳಲ್ಲಿ, ಪಠ್ಯ ಪುಸ್ತಕಗಳಲ್ಲಿ ನಳಂದಾದ ಬಗ್ಗೆ ಎಲ್ಲರೂ ಓದಿಯೇ ಇರುತ್ತಾರೆ.

ಈ ಹೆಸರು ಕೇಳಿದಾಗ ಎಲ್ಲರಿಗೂ ಜ್ಞಾನಲೋಕವೇ ನೆನಪಾಗುತ್ತದೆ. ಅಂತಹ ಜ್ಞಾನಲೋಕದ ಬಗ್ಗೆ ನಿಮಗೆ ಹಲವು ಸ್ವಾರಸ್ಯಕರ ಮಾಹಿತಿಗಳನ್ನು ನೀಡ್ತೀವಿ.

ನಳಂದವು (Nalanda) ಜಗತ್ತಿನ ಮೊತ್ತ ಮೊದಲ ವಸತಿ ಸೌಕರ್ಯ ಹೊಂದಿದ್ದ ವಿಶ್ವವಿದ್ಯಾಲಯವಾಗಿತ್ತು, ಅಂದರೆ ವಿದ್ಯಾರ್ಥಿಗಳಿಗೆ ಆ ಕಾಲದಲ್ಲಿಯೇ ಇಲ್ಲಿ ವಸತಿ ಗೃಹಗಳಿದ್ದವು.

ಅಲ್ಲದೇ ಜಗತ್ತಿನ ಅತ್ಯಂತ ಪ್ರಸಿದ್ಧವಾದ ಮತ್ತು ಐತಿಹಾಸಿಕ ವಿಶ್ವವಿದ್ಯಾಲಯಗಳಲ್ಲಿ ನಳಂದವೂ ಒಂದಾಗಿತ್ತು.ನಳಂದ ವಿಶ್ವವಿದ್ಯಾಲಯವು (Nalanda University) ಬಿಹಾರ (Bihar) ರಾಜ್ಯದಲ್ಲಿದೆ.

ಒಂದು ಕಾಲದಲ್ಲಿ ಕಲಿಕೆಯ ಕೇಂದ್ರ ಬಿಂದುವಾಗಿದ್ದ ಈ ವಿಶ್ವವಿದ್ಯಾಲಯವು ಪ್ರಸ್ತುತ ಅವಶೇಷವಾಗಿ ಉಳಿದಿದೆ. ವಿಶ್ವವಿದ್ಯಾಲಯವನ್ನು ಶಕ್ರಾದಿತ್ಯ ಯಾನೆ ಕುಮಾರಗುಪ್ತ ಮಹಾರಾಜನು ಕಟ್ಟಿಸಿದ್ದನು.

ಸುಮಾರು 7 ನೇ ಶತಮಾನಗಳ ಕಾಲ ಈ ವಿಶ್ವವಿದ್ಯಾನಿಲಯವು ಚೀನಾ, ಟಿಬೆಟ್‌ ಮತ್ತು ಕೊರಿಯಾ ಸೇರಿದಂತೆ ಪ್ರಪಂಚದಾದ್ಯಂತ ಸಾವಿರಾರು ವಿದ್ಯಾರ್ಥಿಗಳನ್ನು ಆಕರ್ಷಿಸಿತು.

ಸುಮಾರು 14 ಹೆಕ್ಟೇರ್ ಪ್ರದೇಶದಲ್ಲಿ ನಳಂದವು ಹರಡಿಕೊಂಡಿದೆ. ನಳಂದಾದ ಅವಶೇಷಗಳು, ಕೆಂಪು ಇಟ್ಟಿಗೆಯ ಮಠಗಳು ಮತ್ತು ದೇವಾಲಯಗಳು ಹಳೆಯ ಕಾಲದ ಗತ ವೈಭವವನ್ನು ಹೇಳುತ್ತದೆ.

ಒಂದು ಕಾಲದಲ್ಲಿ 10,000 ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಥಿಗಳನ್ನು ಮತ್ತು 2,000 ಶಿಕ್ಷಕರಿಂದ ಕೂಡಿತ್ತು.ಗೌತಮ ಬುದ್ದ ಧ್ಯಾನ ಮಾಡಿದ ಸ್ಥಳದಲ್ಲಿ ಜ್ಞಾನಪೀಠವಿರುವ ಈ ವಿಶ್ವವಿದ್ಯಾಲಯಕ್ಕೆ ಮೊಘಲರ ಆಡಳಿತದಲ್ಲಿ ಬೆಂಕಿ ಹಚ್ಚಲಾಗಿತ್ತು.

ನಳಂದ ವಿಶ್ವವಿದ್ಯಾಲಯದ ಮಹಡಿಯಲ್ಲಿದ್ದ ಗ್ರಂಥಾಲಯವು ಎಷ್ಟು ದೊಡ್ಡದಿತ್ತೆಂದರೆ, ಮೊಘಲರು ಅಲ್ಲಿ ಬೆಂಕಿ ಹಚ್ಚಿದ ಮೂರು ತಿಂಗಳವರೆಗೂ ಆ ಸ್ಥಳವು ಉರಿಯುತ್ತಿತ್ತು ಎನ್ನುತ್ತದೆ ಇತಿಹಾಸ. ಸ್ಥಳದಿಂದ ಸಂತರನ್ನು ಹೊರಗೆ ಕಳಿಸಿ, ಮಠಗಳನ್ನು ನಾಶಮಾಡಿದ್ದರು ಎನ್ನುತ್ತದೆ ಇತಿಹಾಸದ ಪುಟಗಳು.

ವಿವಿಯ ಸಂಕೀರ್ಣವು ಕೆಂಪು ಇಟ್ಟಿಗೆಗಳಿಂದ ಕಟ್ಟಲ್ಪಟ್ಟಿದ್ದು ಮತ್ತು ಅದರ ಇಸ್ಲಾಂ ದಾಳಿಕೋರರಿಂದ ದಾಳಿಗೊಂಡಾಗ ಇದರ ಭಗ್ನಾವಶೇಷ 14 ಎಕರೆಗಳಷ್ಟು ಸ್ಥಳವನ್ನು ಆಕ್ರಮಿಸಿತ್ತು.

ನಳಂದ ವಿಶ್ವವಿದ್ಯಾನಿಲಯವು ಬೌದ್ಧರ ಕಾಲದಲ್ಲಿ ಸ್ಥಾಪನೆಯಾಗಿದ್ದು. ನಳಂದ ವಿಶ್ವವಿದ್ಯಾನಿಲಯವನ್ನು 5 ನೇ ಶತಮಾನದಲ್ಲಿ ಸ್ಥಾಪಿಸಲಾಯಿತು. ಸುಮಾರು 700 ವರ್ಷಗಳ ಕಾಲ ಪ್ರವರ್ಧಮಾನದಲ್ಲಿತ್ತು.ಇದರ ಅವನತಿಯು ಪಾಲಾ ಅವಧಿಯ ಕೊನೆಯಲ್ಲಿ ಪ್ರಾರಂಭವಾಯಿತು.

2006 ರಲ್ಲಿ, ಸಿಂಗಾಪುರ್, ಚೀನಾ, ಭಾರತ ಮತ್ತು ಜಪಾನ್ ಸೇರಿದಂತೆ ಹಲವಾರು ರಾಷ್ಟ್ರಗಳು ಪ್ರಾಚೀನ ಸ್ಥಳವನ್ನು ಪುನಃಸ್ಥಾಪಿಸಲು ಮತ್ತು ನಳಂದಾ ಅಂತರಾಷ್ಟ್ರೀಯ ವಿಶ್ವವಿದ್ಯಾಲಯವಾಗಿ (Nalanda International University) ಪುನರುಜ್ಜೀವನಗೊಳಿಸುವ ಯೋಜನೆಯನ್ನು ಘೋಷಿಸಿದವು.

ಭಾರತದ ಸಂಸತ್ತು 2010 ರಲ್ಲಿ ನಳಂದಾ ವಿಶ್ವವಿದ್ಯಾನಿಲಯ ಕಾಯಿದೆಯನ್ನು ಅಂಗೀಕರಿಸಿತು ಮತ್ತು ಸೆಪ್ಟೆಂಬರ್ 2014 ರಲ್ಲಿ ಮೊದಲ ಬ್ಯಾಚ್ ವಿದ್ಯಾರ್ಥಿಗಳು ದಾಖಲಾದರು. ಪುನಾರಂಭವಾಗಿದೆ.

ನಳಂದ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ (New Campus) ಅನ್ನು 456 ಎಕರೆಯಲ್ಲಿ ನಿರ್ಮಿಸಲಾಗಿದೆ. ವಿಶ್ವವಿದ್ಯಾನಿಲಯದ ಮೆಟ್ಟಿಲುಗಳು ಮತ್ತು ಕಟ್ಟಡಗಳ ವಾಸ್ತುಶಿಲ್ಪವನ್ನು ಹಳೆಯ ನಳಂದಾ ವಿಶ್ವವಿದ್ಯಾನಿಲಯದ (Old Nalanda University) ರೀತಿಯಲ್ಲೇ ಪುನರ್‌ ನಿರ್ಮಾಣ ಮಾಡಲಾಗಿದೆ. (Reconstructed)

ಮುಖ್ಯ ದ್ವಾರದಲ್ಲಿ ಮಳೆನೀರು ಕೊಯ್ಲು ಮತ್ತು ಆಕರ್ಷಕ ಬೆಳಕಿನ ವ್ಯವಸ್ಥೆಗಳನ್ನು ಮಾಡಲಾಗಿದೆ, ಇದು ಆಧುನಿಕ ಶೈಲಿಯ ಭವ್ಯವಾದ ನೋಟವನ್ನು ನೀಡುತ್ತದೆ.

ಇದಲ್ಲದೇ ನಳಂದ ವಿಶ್ವವಿದ್ಯಾಲಯದ ಕಟ್ಟಡವನ್ನು ಹವಾಮಾನ ಸ್ನೇಹಿಯಾಗಿ ನಿರ್ಮಾಣ ಮಾಡಲಾಗಿದೆ. ಅಲ್ಲಿ ಬೇಸಿಗೆಯಲ್ಲಿ ತಂಪು ಮತ್ತು ಶೀತದಲ್ಲಿ ಶಾಖದ ಅನುಭವವಾಗಲಿದೆ.

ಈ ಕಟ್ಟಡದ ಸುತ್ತಲೂ ಸ್ಪುಟವಾದ ನೀಲಿ ನೀರು ಗೋಚರಿಸುತ್ತದೆ. ಹೊಸ ವಿಶ್ವವಿದ್ಯಾನಿಲಯ ಈ ಐತಿಹಾಸಿಕ ಸ್ಥಳದಿಂದ 12 ಕಿಮೀ ದೂರದಲ್ಲಿದೆ. ಇದು ದೊಡ್ಡ ಇಂಗಾಲದ ಹೆಜ್ಜೆಗುರುತು-ಮುಕ್ತ ನೆಟ್-ಶೂನ್ಯ ಕ್ಯಾಂಪಸ್ ಆಗಿದೆ.

ನಳಂದದಲ್ಲಿ ಕಲಿಸಲಾದ ವಿಷಯಗಳಲ್ಲಿ ಬೌದ್ಧ ಧರ್ಮಗ್ರಂಥಗಳು, ತತ್ವಶಾಸ್ತ್ರ, ದೇವತಾಶಾಸ್ತ್ರ, ಆಧ್ಯಾತ್ಮಿಕತೆ, ತರ್ಕಶಾಸ್ತ್ರ, ವ್ಯಾಕರಣ, ಖಗೋಳಶಾಸ್ತ್ರ ಮತ್ತು ವೈದ್ಯಕೀಯವನ್ನು ಒಳಗೊಂಡಿತ್ತು.

ವಿಶ್ವವಿದ್ಯಾನಿಲಯವು ಕನೌಜ್‌ನ ಚಕ್ರವರ್ತಿ ಹರ್ಷವರ್ಧನ ಮತ್ತು ಹಲವಾರು ಪಾಲ ರಾಜರಿಂದ ರಾಜ ಪ್ರೋತ್ಸಾಹವನ್ನು ಪಡೆಯಿತು.

ವಿಶ್ವವಿದ್ಯಾನಿಲಯದ ಬಗ್ಗೆ ವಿವರವಾದ ಖಾತೆಗಳನ್ನು ಬರೆದ ಚೀನೀ ಪ್ರಯಾಣಿಕರಾದ ಹ್ಯೂಯೆನ್ ತ್ಸಾಂಗ್ ಮತ್ತು ಐ ತ್ಸಿಂಗ್ ಸೇರಿದಂತೆ ವಿದೇಶದಿಂದ ಅನೇಕ ಸಂದರ್ಶಕರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದರು ಮತ್ತು ಅಧ್ಯಯನ ಮಾಡಿದರು.

ನಶಿನಿ ಹೋಗಿದ್ದ 5 ನೇ ಶತಮಾನದಲ್ಲಿ ಸ್ಥಾಪಿತವಾದ ಪ್ರಾಚೀನ ಕಾಲದ ಉನ್ನತ ವ್ಯಾಸಂಗ ಕೇಂದ್ರ ನಳಂದಾ ವಿಶ್ವವಿದ್ಯಾಲಯದ ಗತ ವೈಭವ ಮರಳುವಂತೆ ಮಾಡಲಾಗಿದೆ. ದಶಕಗಳಿಂದ ನಳಂದ ಮತ್ತೆ ಜ್ಞಾನ ದೇಗುಲವಾಗಿ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button