ರಾಜ್ಯದಲ್ಲಿ ನೋಡಬಹುದಾದ ಅರಮನೆಗಳು
ಅರಮನೆಗಳು (Palace) ಒಂದು ರಾಜ್ಯದ(Karnataka )ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಹಿಂದಿನ ಕಾಲದ ಆಡಳಿತಗಾರರ ಕಾಲ ನೈಪುಣ್ಯತೆಗೆ ಹಿಡಿದ ಕೈಗನ್ನಡಿ ರೀತಿಯಲ್ಲಿರುತ್ತದೆ.
ಅಂತಹ ಚೆಂದದ ಪುರಾತನ ಅರಮನೆಗಳು(Ancient palaces) ನಮ್ಮಲ್ಲಿಯೂ ಇದೆ. ಅಂತಹ ಕೆಲವು ಅರಮನೆಗಳ ಮಾಹಿತಿ ಇಲ್ಲಿದೆ.
ಅಂಬಾ ವಿಲಾಸ ಅರಮನೆ(Amba Vilas Palace)
ಅಂಬಾ ವಿಲಾಸ್ ಅರಮನೆ ಅಥವಾ ಮೈಸೂರು ಅರಮನೆ(Mysore Palace)ಎಂದೇ ಪ್ರಖ್ಯಾತಿ ಪಡೆದಿದೆ. ಇದು ಮೈಸೂರು ನಗರದಲ್ಲಿರುವ ಅನೇಕ ಅರಮನೆಗಳಲ್ಲಿ ಪ್ರಮುಖವಾಗಿದೆ.
ಈ ಕಾರಣಕ್ಕಾಗಿಯೇ ಮೈಸೂರನ್ನು ‘ಅರಮನೆಗಳ ನಗರ’ (A city of palaces)ಎಂದೇ ಕರೆಯುತ್ತಾರೆ. ಇದು ಹಿಂದಿನ ಮೈಸೂರು ಸಂಸ್ಥಾನದ ಒಡೆಯರ್(Wadiyar)ವಂಶದ ಆಡಳಿತವನ್ನು ನೆನಪಿಸುತ್ತದೆ. ದಸರಾ(Dasara) ಸಂಭ್ರಮವನ್ನು ಇಲ್ಲಿ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ.
ಲೋಟಸ್ ಅರಮನೆ(Lotus Palace)
ಹಂಪಿಯಲ್ಲಿರುವ (Hampi)ಈ ಅರಮನೆಯನ್ನು ಲೋಟಸ್ ಅರಮನೆ, ಕಮಲದ ಅರಮನೆ ಅಥವಾ ಚಿತ್ರಾಂಗಿಣಿ ಮಹಲ್(Chitrangini Mahal)ಎಂದೂ ವಿವಿಧ ಹೆಸರುಗಳಿಂದ ಕರೆಯುತ್ತಾರೆ.ಎರಡು ಅಂತಸ್ತಿನ ರಚನೆಯನ್ನು(Two storey structure) ಹೊಂದಿರುವ, ಈ ಅರಮನೆಯನ್ನು ಕಲ್ಲು ಹಾಗು ಮಣ್ಣಿನಲ್ಲಿ ನಿರ್ಮಾಣ ಮಾಡಿದ್ದಾರೆ.
ಒಂದು ಕಾಲದಲ್ಲಿ ವಿಯನಗರದ (Vijayanagara Empire)ಸಾಮ್ರಾಜ್ಯದ ರಾಜ ಮನೆತನದವರಿಗಾಗಿ ನಿರ್ಮಾಣ ಮಾಡಲಾಗಿತ್ತು. ಕಣ್ತುಂಬಿಕೊಳ್ಳಬಹುದು. ಇಲ್ಲಿ ಒಟ್ಟು 24 ಕಂಬಗಳಿದ್ದು, ಜಲಚರಗಳು, (Delicate carvings)ಸಸ್ಯಗಳ ಸೂಕ್ಷ್ಮವಾದ ಕೆತ್ತನೆಯಿಂದ ಅಲಂಕೃತವಾಗಿದೆ.
ನಾಲ್ಕುನಾಡು ಅರಮನೆ (Nalknad Palace)
ಕೊಡಗು(Kodagu,) ಜಿಲ್ಲೆಯ ಮಡಿಕೇರಿಯ (Madikeri)ತಾಲೂಕಿನಲ್ಲಿದೆ. ಇಕ್ಕೇರಿಯ(Ikkeri) ರಾಜರು ಮಡಿಕೇರಿಯನ್ನು ರಾಜಧಾನಿಯಾಗಿ ಮಾಡಿಕೊಂಡಿದ್ದರು.
ತಲೆ ಮರೆಸಿಕೊಳ್ಳಲು ಆಗಿನ ಕಾಲಕ್ಕೆ ದುರ್ಗಮವಾಗಿದ್ದ ಈ ನಾಲ್ಕುನಾಡಿನಲ್ಲಿ ಈ ಭವ್ಯವಾದ ಅರಮನೆಯನ್ನು ನಿರ್ಮಾಣ ಮಾಡಿದರು.ಈ ಅರಮನೆಯು ಮಡಿಕೇರಿಯಿಂದ ಸುಮಾರು 45 ಕಿ.ಮೀ ದೂರದಲ್ಲಿದೆ.
ಲಲಿತ್ ಮಹಲ್(Lalitha Mahal)
ಮೈಸೂರಿನ(Mysore )ಎರಡನೇ ಅತಿ ದೊಡ್ಡ ಅರಮನೆ ಎಂದು ಕೂಡ ಪ್ರಸಿದ್ಧಿಯನ್ನು ಹೊಂದಿದೆ. ಈ ಸುಂದರವಾದ ಅರಮನೆಯು ಮೈಸೂರಿನಿಂದ ಕೇವಲ 11 ಕಿ.ಮೀ ದೂರದಲ್ಲಿದ್ದು, ಮೈಸೂರಿನ ಮಹಾರಾಜರು (Maharajas) ಆಗಿನ ಭಾರತದ ವೈಸ್ ರಾಯ್ ಗಳಿಗಾಗಿ ಮತ್ತು ಅತಿಥಿಗಳಿಗಾಗಿ ಈ ಅರಮನೆಯನ್ನು ನಿರ್ಮಾಣ ಮಾಡಲಾಯಿತು.
ಈ ಅರಮನೆಯಲ್ಲಿ ವೈಸ್ ರಾಯ್ ಕೊಠಡಿ, ಔತಣಕೂಟ ಹಾಗೂ ನೃತ್ಯ ಮಂಟಪವನ್ನು ಕಾಣಬಹುದಾಗಿದೆ. ಇಲ್ಲಿನ ಮೆಟ್ಟಿಲು ಇಟಾಲಿಯನ್ (Italian)ಶೈಲಿಯ ಅಮೃತಶಿಲೆಯ (White Marble)ಕಲ್ಲಿನ ಬಳಕೆಯಿಂದ ನಿರ್ಮಾಣ ಮಾಡಲಾಗಿದೆ.
ಟಿಪ್ಪು ಸುಲ್ತಾನ ಅರಮನೆ (Tipu Sultan Palace)
ಬೆಂಗಳೂರು(Bangalore )ನಗರದಲ್ಲಿದೆ. ನವಾಬ್ ಹೈದಾರಾಲಿ ಖಾನ್ ನ(Haider Ali Khan)ಕಾಲದಲ್ಲಿ ಪ್ರಾರಂಭಗೊಂಡ ಈ ಅರಮನೆಯ ನಿರ್ಮಾಣ, ಟಿಪ್ಪು ಸುಲ್ತಾನರ ಕಾಲದಲ್ಲಿ ಪೂರ್ಣಗೊಂಡಿತು.
ಈ ಸುಂದರವಾದ ಅರಮನೆಯ ಕಟ್ಟಡವು ಸಮಕಾಲೀನ ಇಂಡೋ ಇಸ್ಮಾಮಿಕ್(Indo Islamic)ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಅರಮನೆಯ ಗೋಡೆಗಳು ಮನೋಹರವಾದ ಬಣ್ಣದ ಚಿತ್ರಗಳಿಂದ (Beautiful paintings) ಅಲಂಕೃತವಾಗಿವೆ.
ನೀವು ಇದನ್ನು ಓದಬಹುದು:ರಾಜ್ಯದ ಬೆಸ್ಟ್ ಟ್ರೆಕ್ಕಿಂಗ್ ತಾಣಗಳಿವು
ಜಯಲಕ್ಷ್ಮಿ ವಿಕಾಸ್ ಅರಮನೆ(Jayalakshmi Vilas Palace)
ಮೈಸೂರು (Mysore)ನಗರದಲ್ಲಿದೆ. ಇದು ಮೈಸೂರು ವಿಶ್ವವಿದ್ಯಾನಿಲಯದ(University )ಆವರಣವಾದ ಮಾನಸ ಗಂಗೋತ್ರಿಯ(Manasa Gangotri)ಪರಿಸರದಲ್ಲಿದೆ. 1905 ರಲ್ಲಿ ಕೃಷ್ಣರಾಜ ಒಡೆಯರ್(Krishnaraj Wadiyar)ಅವರ ಅವಧಿಯಲ್ಲಿ ಸ್ಥಾಪನೆ ಮಾಡಲಾಯಿತು.
ಈ ಸುಂದರವಾದ ಕಟ್ಟಡವನ್ನು ಮೊದಲು ರಾಜಕುಮಾರಿ ಮ್ಯಾನ್ಷನ್(Princess Mansion) ಎಂದು ಸಹ ಕರೆಯುತ್ತಾರೆ. ಇಲ್ಲಿ 125 ಕೊಠಡಿಗಳು, 3೦೦ ಕಿಟಕಿಗಳು, 247 ಸೊಗಸಾಗಿ ಕೆತ್ತಿದ ಬಾಗಿಲುಗಳನ್ನು (Beautifully carved doors)ಒಳಗೊಂಡ ಭವ್ಯವಾದ ಅರಮನೆ ಇದಾಗಿದೆ.
ಜಗನ್ಮೋಹನ ಅರಮನೆ(Jaganmohan Palace)
ಮೈಸೂರಿನಲ್ಲಿರುವ(Mysore) ಅರಮನೆಗಳಲ್ಲಿ ಜಗನ್ಮೋಹನ್ ಅರಮನೆಯು ಒಂದು. ಈ ಕಟ್ಟಡವನ್ನು ಮೈಸೂರಿನ ಅರಸರು 1861 ರಲ್ಲಿ ನಿರ್ಮಾಣ ಮಾಡಿದರು. ಇಲ್ಲೊಂದು ಬೃಹತ್ ಕಲ್ಯಾಣ ಮಂಟಪವಿದೆ(Welfare hall).
ಈ ಮಂಟಪವನ್ನು ದರ್ಬಾರ್ ಹಾಲ್ ಎಂದೇ ಕರೆಯಲಾಗುತ್ತಿತ್ತು. ಇಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು( Nalwadi Krishnaraj Odeyar)ತಮ್ಮ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದ ಸ್ಥಳವೆಂದು ಜನಪ್ರಿಯವಾಗಿದೆ.
ಶಿವಪ್ಪ ನಾಯಕ ಅರಮನೆ(Shivappa Nayaka palace)
ಕೆಳದಿ ನಾಯಕ( Keladi) ರಾಜವಂಶದ 17 ನೇ ಶತಮಾನದ ಜನಪ್ರಿಯ ರಾಜ ಶಿವಪ್ಪ ನಾಯಕನ(Shivappa Nayak) ಹೆಸರಿನ ಶಿವಪ್ಪ ನಾಯಕ ಅರಮನೆಯು ಶಿವಮೊಗ್ಗ ನಗರದಲ್ಲಿದೆ.
ಈಗ ಸರ್ಕಾರಿ ವಸ್ತುಸಂಗ್ರಹಾಲಯದ(Government museum) ಸ್ಥಳವಾಗಿದೆ.
ಸೂರಾಲು ಅರಮನೆ(Sural palace)
600 ವರ್ಷಗಳ ಇತಿಹಾಸವಿರುವ ಸೂರಾಲು ಅರಮನೆ ಕರ್ನಾಟಕದಲ್ಲಿ (Karnataka)ಉಳಿದಿರುವ ಏಕೈಕ ಮಣ್ಣಿನ ಅರಮನೆ.
ಆಗಿನ ಕಾಲದಲ್ಲಿ ಜೈನ ಅರಸರು(Jain) ನಿರ್ಮಿಸಿದ್ದ ಅರಮನೆಗಳಲ್ಲಿ ಇಂದಿಗೂ ಉಳಿದಿರುವ ಅರಮನೆ ಸೂರಾಲಿನ ಈ ಚಂದದ ಅರಮನೆ ಮಾತ್ರ. ಇದು ಉಡುಪಿ(Udupi) ಜಿಲ್ಲೆಯ ಮಂದಾರ್ತಿ(Mandarti )ಸಮೀಪದ ಕೊಕ್ಕರ್ಣೆಯಲ್ಲಿದೆ(Kokkarne).
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.