ದೂರ ತೀರ ಯಾನನಡಿಗೆ ನಮ್ಮ ಖುಷಿಗೆವಿಂಗಡಿಸದ

ರಾಜ್ಯದ ಬೆಸ್ಟ್ ಟ್ರೆಕ್ಕಿಂಗ್ ತಾಣಗಳಿವು

ಪ್ರವಾಸ (Traveller)ಪ್ರಿಯರಿಗೆ ಟ್ರೆಕ್ಕಿಂಗ್(Trekking)ಅಂದ್ರೆ ಅದೇನೋ ಇಷ್ಟ. ಅದೆಷ್ಟೇ ಜಾಗಕ್ಕೆ ಸುತ್ತಾಡಿ, ಒಮ್ಮೆ ಆದರೂ ಟ್ರೆಕ್ಕಿಂಗ್ ಗೆ ಹೋಗಬೇಕು ಅಂತ ಮನದಲ್ಲಿ ಆಸೆ ಹೊತ್ತು ಕಾಯುತ್ತಿರುತ್ತಾರೆ. ಅಂತಹವರ ನಮ್ಮ ರಾಜ್ಯದಲ್ಲಿರುವ ಈ ಫೇಮಸ್ ಚಾರಣ ಜಾಗಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಕೆಮ್ಮಣ್ಣುಗುಂಡಿ(Kemmangundi)

ಕರ್ನಾಟಕದ ಕೆಮ್ಮಣ್ಣುಗುಂಡಿ ಪಶ್ಚಿಮ ಘಟ್ಟಗಳ (Western Ghats)ಅದ್ಭುತವಾದ ಲೋಕ . ಕೆಮ್ಮಣ್ಣುಗುಂಡಿಯ ಝಡ್ ಪಾಯಿಂಟ್ಗೆ 3 ಕಿ, ಮೀ ಟ್ರೆಕ್ಕಿಂಗ್‌ ಅನ್ನು ನೀವು ಆನಂದಿಸಬಹುದು.

10 Top Places for Trekking In Karnataka

ಆಳವಾದ ಕಣಿವೆಗಳು, ಕಡಿದಾದ ಬೆಟ್ಟಗಳಿಂದ ಸುತ್ತುವರಿದಿರುವ ಅದ್ಭುತವಾದ ನೋಟವು ಚಾರಣಿಗರಿಗೆ ಬಲು ಇಷ್ಟವಾಗುತ್ತದೆ. ಸಮುದ್ರಮಟ್ಟದಿಂದ(Sea Level)ಸುಮಾರು 1500 ಮೀ ಎತ್ತರದಲ್ಲಿ ನೆಲೆಗೊಂಡಿರುವ ಚಾರಣ ತಾಣ.

ಬಾಬಾ ಬುಡನ್ ಗಿರಿ(Baba Budan giri)

ಕರ್ನಾಟಕದ (Karanataka)ಬಾಬಾ ಬುಡನ್‌ ಗಿರಿ ಚಿಕ್ಕಮಗಳೂರಿನಲ್ಲಿರುವ (Chikmagalur)ಟ್ರೆಕ್ಕಿಂಗ್ ತಾಣ. ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ನೆಲೆಗೊಂಡಿರುವ ಈ ಜಾಗ ಕರ್ನಾಟಕ ಮಂದಿಯ ಫೇವರೆಟ್‌ ಟ್ರೆಕ್ಕಿಂಗ್‌ ತಾಣಗಳಲ್ಲಿ ಈ ಜಾಗ ಕೂಡ ಒಂದು . ಇದನ್ನು ದತ್ತಗಿರಿ (Dattagiri)ಎಂದೇ ಕರೆಯುತ್ತಾರೆ.

10 Top Places for Trekking In Karnataka

ಕುದುರೆಮುಖ(Kudremukh)

ಇದು ಚಾರಣಿಗರ ಪಾಲಿನ ಸ್ವರ್ಗ. ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಕುದುರೆಮುಖದ ಶಿಖರವು ಸಮುದ್ರಮಟ್ಟದಿಂದ ಸುಮಾರು 1894 ಮೀ ಎತ್ತರದಲ್ಲಿ ನೆಲೆಸಿದೆ.

10 Top Places for Trekking In Karnataka

ಅರೇಬಿಯನ್‌ ಸಮುದ್ರದ (Arabian Sea)ಸೊಬಗು ಮೋಡಿ ಮಾಡುತ್ತದೆ. ಕುದುರೆಮುಖ ಶಿಖರದಲ್ಲಿ ಕುದುರೆಮುಖ ನ್ಯಾಷನಲ್‌ ಪಾರ್ಕ್‌ ಕೂಡ ಇದೆ(Kuduremukh National Park). ಇಲ್ಲಿ ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ.

ನೀವು ಇದನ್ನು ಓದಬಹುದು:ಮಳೆಗಾಲದಲ್ಲಿ ತಯಾರಾಗುವ ಹಲಸಿನ ಹಣ್ಣಿನ ವಿಶೇಷ ಖಾದ್ಯಗಳು.

ರಾಮದೇವರ ಬೆಟ್ಟ(Ramadevara Hills)

ರಾಮನಗರ(Ramanagar)ಸಿಟಿಯಲ್ಲಿಯೇ ಬೆಂಗಳೂರು(Bangalore)ಮೈಸೂರು (Mysore)ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ರಾಮದೇವರ ಬೆಟ್ಟ ಬೆಂಗಳೂರಿನಿಂದ 50 ಕಿಲೋಮೀಟರ್ ದೂರದಲ್ಲಿದೆ.

10 Top Places for Trekking In Karnataka

ರಾಮ (Rama)ವನವಾಸದ ಸಂದರ್ಭದಲ್ಲಿ ಸೀತಾಮಾತೆಯ (Sita Mata)ಜೊತೆಯಲ್ಲಿ ಇಲ್ಲಿ ನೆಲೆಸಿದ್ದರು ಎಂದು ಹೇಳಲಾಗುತ್ತದೆ. ಒಂದು ದಿನದ ಪ್ರವಾಸಕ್ಕೆ ಈ ತಾಣ ಬಲು ಸೂಕ್ತವಾದ ಜಾಗವಾಗಿದೆ. ಟ್ರೆಕ್ಕಿಂಗ್ ಮಾಡುವವರು ಬಂಡೆಗಳ ಮೇಲೆ ಹತ್ತಿ ಟ್ರೆಕ್ಕಿಂಗ್ ಮಾಡಬಹುದು.

ಗಡಾಯಿ ಕಲ್ಲು(GadaiKallu)

ದಕ್ಷಿಣ ಕನ್ನಡ (Dakshina Kannada)ಜಿಲ್ಲೆಯ ಬೆಳ್ತಂಗಡಿ (Belthangady)ತಾಲೂಕಿನ ಪ್ರಮುಖ ಆಕರ್ಷಣೆ ‘ಗಡಾಯಿ ಕಲ್ಲು’ . ಚಾರಣ ಪ್ರಿಯರಿಗಂತೂ ಅಚ್ಚುಮೆಚ್ಚಿನ ತಾಣ. ಸ್ಥಳೀಯರು ಜಮಲಾಬಾದ್(Jamalabadh Fort)ಕೋಟೆಯೆಂದು ಕರೆಯುತ್ತಾರೆ.

10 Top Places for Trekking In Karnataka

1200 ಅಡಿ ಎತ್ತರದಲ್ಲಿರುವ ಈ ಗಡಾಯಿಕಲ್ಲು ಏಕಶಿಲಾ ಪರ್ವತವಾಗಿದೆ. ಸಮುದ್ರ ಮಟ್ಟದಿಂದ ಸುಮಾರು 1788 ಅಡಿ ಎತ್ತರದಲ್ಲಿರುವ ಗಡಾಯಿಕಲ್ಲಿನ ನರಸಿಂಹಗಡ(Narasinhagarh)ಕೋಟೆ ನೋಡಬೇಕೆಂದರೆ ಬರೋಬರಿ 2,800 ಮೆಟ್ಟಿಲುಗಳನ್ನು ಹತ್ತಬೇಕಾಗಿದೆ. ಮೆಟ್ಟಿಲುಗಳನ್ನು ಹತ್ತಿ ಹೋಗುವುದೇ ಒಂದು ಸಾಹಸ

ಸ್ಕಂದಗಿರಿ(Skandagiri Hills)

ಚಿಕ್ಕಬಳ್ಳಾಪುರ(Chikballapura)ತಾಲೂಕಿನ ಕಳವಾರ(Kalavara)ಗ್ರಾಮದ ಬಳಿಯಿದೆ. ಸ್ಕಂದಗಿರಿ ಬೆಟ್ಟ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿದ್ದು, ಸಮುದ್ರ ಮಟ್ಟದಿಂದ 1350 ಮೀಟರ್‌ ಗಳ ಎತ್ತರದಲ್ಲಿದೆ. ಬೆಂಗಳೂರಿನಿಂದ ಕೇವಲ 65 ಕಿಲೋ ಮೀಟರ್‌ ದೂರದಲ್ಲಿದೆ.

10 Top Places for Trekking In Karnataka

ಕೊಡಚಾದ್ರಿ(Kodachadri)
ಕರ್ನಾಟಕದ(Karnataka) ಜನಪ್ರಿಯ ಟ್ರೆಕ್ಕಿಂಗ್ ಸ್ಥಳಗಳಲ್ಲಿ ಕೊಡಚಾದ್ರಿ(Kodachadri) ಮರೆಯುವಂತಿಲ್ಲ. ಪಶ್ಚಿಮಘಟ್ಟಗಳಲ್ಲಿ(Western Ghats) ನೆಲೆಸಿರುವ ಈ ಕೊಡಚಾದ್ರಿ ಸಮುದ್ರಮಟ್ಟದಿಂದ ಸುಮಾರು 4411 ಅಡಿ ಎತ್ತರದಲ್ಲಿದೆ.

10 Top Places for Trekking In Karnataka

ಚಾರಣದ ಹಾದಿಯಲ್ಲಿ ಮೂಕಾಂಬಿಕ ವನ್ಯಜೀವಿ ಅಭಯಾರಣ್ಯವಿದೆ(Mookambika Wildlife Sanctuary).

ಮುಳ್ಳಯ್ಯನಗಿರಿ(Mullayanagiri Peak)

ಸಮುದ್ರಮಟ್ಟದಿಂದ(Sea Level) 1930 ಮೀಟರ್ ಎತ್ತರದಲ್ಲಿರುವ ಮುಳ್ಳಯ್ಯನಗಿರಿಯ (Mullayanagiri Peak)ಟ್ರೆಕ್ಕಿಂಗ್‌ ಮಾಡುವುದು ರೋಮಾಂಚಕವಾದ ಅನುಭವವನ್ನು ಉಂಟು ಮಾಡುತ್ತದೆ.

10 Top Places for Trekking In Karnataka

ಚಿಕ್ಕಮಗಳೂರಿನಿಂದ(Chikkamagalur) ಕೇವಲ 45 ಮೀಟರ್‌ ದೂರದಲ್ಲಿರುವ ಈ ಅದ್ಭುತವಾದ (Must Trek)ಪರ್ವತದ ಟ್ರೆಕ್ಕಿಂಗ್‌ ಚಾರಣಿಗರನ್ನು ಚಿರಸ್ಮರಣೀಯ ಅನುಭವವನ್ನು ಉಂಟು ಮಾಡುತ್ತದೆ.

ಸಾವನದುರ್ಗ ಬೆಟ್ಟ(Savandurga Hills)

ಸಾವನದುರ್ಗ ಬೆಟ್ಟಗಳ ನಡುವೆ ಟ್ರೆಕ್ಕಿಂಗ್‌ ನ ಅನುಭವ ಹಿತವಾಗಿರುತ್ತದೆ. ಇದು ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿದೆ. ನಿಮಗೆ ತಿಳಿದಿರಲಿ, ಇಡೀ ಏಷ್ಯಾದ(Asia) ಅತಿದೊಡ್ಡ ಏಕಶಿಲೆಯ ಬೆಟ್ಟಗಳಲ್ಲಿ ಸಾವನದುರ್ಗ ಬೆಟ್ಟವು ಒಂದಾಗಿದೆ.

10 Top Places for Trekking In Karnataka

ಸಮುದ್ರಮಟ್ಟದಿಂದ ಸುಮಾರು(Sea Level) 1226 ಮೀ ಎತ್ತರದಲ್ಲಿರುವ ಈ ಅದ್ಭುತ ಬೆಟ್ಟವು ಕಡಿದಾದ ಇಳಿಜಾರನ್ನು ಹೊಂದಿದೆ.

ಕುಮಾರ ಪರ್ವತ (Kumara Parvatha)

ಸಮುದ್ರ ಮಟ್ಟದಿಂದ (Sea Level)1712 ಮೀಟರ್ ಎತ್ತರದಲ್ಲಿರುವ ಈ ಪರ್ವತ, ಸುಬ್ರಹ್ಮಣ್ಯ ದೇವಸ್ಥಾನದಿಂದ(Subramanya Temple)13 ಕಿ.ಮೀ ದೂರದಲ್ಲಿದೆ.

‌ಇದು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೊಡಗಿನ (Kodagu)ಗಡಿಯಲ್ಲಿದೆ. ಸುಬ್ರಹ್ಮಣ್ಯದಿಂದ(Subrahmanya) ಹೊರಟರೆ 4-5 ಕಿ.ಮೀ.ವ್ಯಾಪ್ತಿಯಲ್ಲಿ ಒಂದು ದಟ್ಟವಾದ ಅರಣ್ಯ ಸಿಗುತ್ತದೆ.

ಪುಷ್ಪಗಿರಿ ಚಾರಣ(Pushpagiri Trekking)ಎಂದೂ ಕರೆಯಲ್ಪಡುವ ಕುಮಾರ ಪರ್ವತ ಚಾರಣದಲ್ಲಿ ತಳಹಂತದಿಂದ ಶಿಖರದ ವರೆಗೆ ಒಟ್ಟು 25-28 ಕಿ.ಮೀ ನಡೆಯಬೇಕಾಗುತ್ತದೆ. ಮತ್ತು ಸಾಮಾನ್ಯವಾಗಿ ಎರಡು ದಿನಗಳ ಅವಧಿಯಲ್ಲಿ ಪೂರ್ಣಗೊಳ್ಳುತ್ತದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button