ವಿಂಗಡಿಸದಸಂಸ್ಕೃತಿ, ಪರಂಪರೆ

ಗುಜರಾತಿನಲ್ಲಿ ನೋಡಬಹುದಾದ ತಾಣಗಳು

ಗುಜರಾತ್ (Gujarat)ವಿಶಿಷ್ಟವಾದ ಸಂಸ್ಕೃತಿ, ಪ್ರವಾಸಿ ತಾಣಗಳಿಗೆ ಹೆಸರುವಾಸಿ ಆಗಿರುವ ರಾಜ್ಯ. ಗುಜರಾತ್ ಪ್ರವಾಸ ನಿಮಗೆ ಹೊಸ ಅನುಭೂತಿಯನ್ನು ನೀಡುತ್ತದೆ. ಉದ್ಯಮಕ್ಕೂ (Business)ಗುಜರಾತ್ ಪ್ರಸಿದ್ಧ. ಈ ರಾಜ್ಯದಲ್ಲಿ ನೋಡಬಹುದಾದ ತಾಣಗಳು.

ಅಹಮದಾಬಾದ್ (Ahmedabad)

ಗಾಂಧಿ ನಗರದಿಂದ(Gandhi Nagar)ಸುಮಾರು 29 ಕಿ.ಮೀ, ಕಿ.ಮೀ ದೂರದಲ್ಲಿದೆ. ಅಹಮದಾಬಾದ್ ಗುಜರಾತ್ ನ ಅತಿದೊಡ್ಡ ನಗರ ಹಿಂದಿನ ರಾಜಧಾನಿಯಾಗಿದೆ. ಈ ತಾಣವನ್ನು ಗಾಂಧಿಯ ನಾಡು ಎನ್ನುತ್ತಾರೆ.

ಇಲ್ಲಿಗೆ ಭೇಟಿ ನೀಡಲು ಅತ್ಯುತ್ತಮವಾದ ಸಮಯ ಅಕ್ಟೋಬರ್ (October)ತಿಂಗಳಿನಿಂದ ಫೆಬ್ರವರಿ(February). ಸಬರಮತಿ ಆಶ್ರಮ(Sabarmati), ಸ್ವಾಮಿ ನಾರಾಯಣ ಅಕ್ಷರಧಾಮ(Swaminarayan Akshardham)

BEST Places to Visit in Gujarat

ಜಾಮಾ ಮಸೀದಿ(Jama Masjid),ಸಬರಮತಿ ರಿವರ್ ಫ್ರಂಟ್(Sabarmati River Front), ಭದ್ರಾ ಕೋಟೆ(Bhadra Fort), ಇಸ್ಕಾನ್ ರಾಧಾಕೃಷ್ಣ ದೇವಾಲಯ(Iscon Radhakrishna Temple), ಸೈನ್ಸ್ ಸಿಟಿ (Science City)ನೋಡಬಹುದು.

ಗಿರ್ ರಾಷ್ಟ್ರೀಯ ಉದ್ಯಾನವನ(Gir National Wildlife sanctuary)

ಸಾಕಷ್ಟು ಸಂಖ್ಯೆಯ ವನ್ಯಜೀವಿಗಳು ಇಲ್ಲಿ ನೆಲೆ ಕಂಡುಕೊಂಡಿವೆ. ಸಿಂಹಗಳಿಗೂ(Lion) ಗಿರ್ ನ್ಯಾಷನಲ್ ಪಾರ್ಕ್‌(National park)ಪ್ರಸಿದ್ಧಿ. ಪ್ರಪಂಚದ ಜನಪ್ರಿಯ ಏಷ್ಯಾಟಿಕ್ ಸಿಂಹಗಳ ಏಕೈಕ ನೈಸರ್ಗಿಕ ಆವಾಸಸ್ಥಾನ ಗಿರ್ ಎಂದು ಖ್ಯಾತಿ ಗಳಿಸಿದೆ.

ಸಿಂಹಗಳೊಂದಿಗೆ ಹುಲಿ,(Tiger)ಅಪರೂಪದ ಏಷ್ಯಾಟಿಕ್ ಕಾಡು ಕತ್ತೆಗಳು, ಹೈನಾಗಳು, ನರಿಗಳು ಸೇರಿದಂತೆ ಸಾಕಷ್ಟು ಪ್ರಾಣಿಗಳು ಹಾಗೂ ವಿವಿಧ ಜಾತಿಯ ಪಕ್ಷಿಗಳನ್ನು ಇಲ್ಲಿ ನೋಡಬಹುದು.

BEST Places to Visit in Gujarat

ರಜಾಕಾಲದ ಸುಂದರ ಅನುಭವವನ್ನು ಪಡೆಯುವುದಕ್ಕೆ ಗಿರ್ ರಾಷ್ಟ್ರೀಯ ಉದ್ಯಾನವನ ಕೂಡಾ ಹೇಳಿ ಮಾಡಿಸಿದಂತಹ ತಾಣ ಕೂಡಾ ಹೌದು. ನವೆಂಬರ್‌ನಿಂದ(November )ಮಾರ್ಚ್(March) ಇಲ್ಲಿಗೆ ಭೇಟಿ ನೀಡಲು ಉತ್ತಮವಾದ ಸಮಯ.

ಸೋಮನಾಥ ದೇವಸ್ಥಾನ(Somnath Temple)

ಶಿವನ(Shiva) ಹನ್ನೆರಡು ಜ್ಯೋತಿರ್ಲಿಂಗ (Jyotirlinga)ದೇವಾಲಯಗಳಲ್ಲಿ ಸೋಮನಾಥ ದೇವಸ್ಥಾನ ಮೊದಲನೆಯದು ಎಂದು ಹೇಳಲಾಗುತ್ತದೆ. ಪ್ರಭಾಸ್ ಪಟಾನ್‌ನಲ್ಲಿರುವ(Patana) ಭವ್ಯ ದೇವಾಲಯ ಇದು.

BEST Places to Visit in Gujarat

ಹಿಂದೂ ಧರ್ಮೀಯರ ಪವಿತ್ರವಾದ ಯಾತ್ರಾ ಸ್ಥಳಗಳಲ್ಲಿ ಒಂದಾಗಿ ಈ ದೇವಸ್ಥಾನ ಗುರುತಿಸಿಕೊಂಡಿದೆ.

ಸಬರಮತಿ ಮ್ಯೂಸಿಯಂ ಮತ್ತು ಆಶ್ರಮ,ಗುಜರಾತ್ (Sabaramati Ashram and Musem, Gujarat)

ಆಶ್ರಮ ಮತ್ತು ಬಾಪುಗಿದ್ದ(Baapu )ನಂಟಿನ ಬಗ್ಗೆ ಎಲ್ಲರಿಗೂ ಗೊತ್ತಿರುವ ಸಂಗತಿ. ನಿಮಗೆ ಇಂದಿಗೂ ಕೂಡ ಸಬರಮತಿ ಆಶ್ರಮ ಗಾಂಧೀಜಿಯ(Gandhiji )ನೆನಪುಗಳನ್ನು ಸ್ಮರಿಸುವಂತೆ ಇದೆ.

BEST Places to Visit in Gujarat

ಸಬರಮತಿ ಮ್ಯೂಸಿಯಂ ಹಾಗೂ ಆಶ್ರಮ ಇರುವುದು ಗುಜರಾತ್ ರಾಜ್ಯದಲ್ಲಿ. ಗುಜರಾತ್ ರಾಜ್ಯದ ಅಹಮದಬಾದ್ ನ ಸಬರಮತಿ ಪ್ರದೇಶದಲ್ಲಿ , ಸಬರಮತಿ ನದಿ ದಂಡೆಯ ಮೇಲೆ ಈ ಆಶ್ರಮವಿದೆ.

ನೀವು ಇದನ್ನೂ ಇಷ್ಟ ಪಡಬಹುದು:ಉತ್ತರಪ್ರದೇಶದಲ್ಲಿ ನೋಡಬಹುದಾದ ತಾಣಗಳು

ಸಬರಮತಿ ಆಶ್ರಮ ಗಾಂಧಿ ಮತ್ತು ಕಸ್ತೂರ್ಬಾ ಗಾಂಧಿ 12 ವರ್ಷಗಳ ಕಾಲ ವಾಸವಿದ್ದ ಜಾಗ. ಈ ಆಶ್ರಮದಲ್ಲಿ ಗಾಂಧಿ ಸ್ಮಾರಕ್ ಸಂಗ್ರಹಾಲಯ ಎನ್ನುವ ವಸ್ತು ಸಂಗ್ರಹಾಲಯ ಇದೆ.

ಚಂಪನೇರ್ ಪಾವಗಡ ಪುರಾತತ್ವ ಉದ್ಯಾನ(The Champaner-Pavagadh Archaeological Park)

ಈ ತಾಣವು 8 ರಿಂದ 14 ನೇ ಶತಮಾನದವರೆಗಿನ ಅನೇಕ ಕುರುಹುಗಳು, ಕೋಟೆಗಳು(Fort), ಅರಮನೆಗಳು(Palace), ಧಾರ್ಮಿಕ ಕಟ್ಟಡಗಳು, ವಸತಿ ಆವರಣಗಳು, ಕೃಷಿ ರಚನೆಗಳು ಮತ್ತು ನೀರಿನ ಸ್ಥಾಪನೆಗಳ ಅವಶೇಷಗಳನ್ನು ಹೊಂದಿರುವ ಕಾರಣ ಈ ಉದ್ಯಾನವನ್ನು 2004 ರಲ್ಲಿ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಯಿತು(World Heritage Site)

BEST Places to Visit in Gujarat

ಪಾವಗಡ ಬೆಟ್ಟದ(Pavagadh Hills)ಮೇಲಿರುವ ಕಾಳಿಕಾಮಾತಾ(Kalikamata) ದೇವಾಲಯವು ಒಂದು ಪ್ರಮುಖ ದೇವಾಲಯವೆಂದು ಪರಿಗಣಿಸಲ್ಪಟ್ಟಿದೆ ಮತ್ತು ಇಲ್ಲಿಗೆ ಪ್ರತೀವರ್ಷ ಅನೇಕ ಭಕ್ತರು ಭೇಟಿ ನೀಡುತ್ತಾರೆ.

ರಾಣಿ ಕಿ ವಾವ್ (Rani Ki Vav)

ಇದು ಗುಜರಾತ್ ನ ಪಟಾನ್(patana) ನಗರದಲ್ಲಿರುವ ಅತ್ಯಂತ ವಿಶಿಷ್ಟ ಮೆಟ್ಟಿಲುಬಾವಿಯ ಸಂಕೀರ್ಣವಾಗಿದೆ. ಸರಸ್ವತಿ ನದಿಯ ದಡದಲ್ಲಿರುವ (Saraswati River)ಇದು, 11 ನೇ ಶತಮಾನದಲ್ಲಿ ರಾಜನ ನೆನಪಿನ ಸ್ಮಾರಕವಾಗಿ ನಿರ್ಮಿಸಲಾಯಿತು.

BEST Places to Visit in Gujarat

ಧೋಲವೀರ (Dholavira)

ಧೋಲಾವೀರಾ ಗುಜರಾತ್‍ನ ಕಚ್(Kutch) ಜಿಲ್ಲೆಯಲ್ಲಿದೆ. ಈ ತಾಣವು ಪ್ರಾಚೀನ ಸಿಂಧೂತಟದ ನಾಗರೀಕತೆಯ ಅವಶೇಷಗಳನ್ನು ಹೊಂದಿದೆ. ಇದು ಐದು ಅತಿ ದೊಡ್ಡ ಹರಪ್ಪ ತಾಣಗಳಲ್ಲಿ ಒಂದೆನಿಸಿದೆ ಹಾಗೂ ಸಿಂಧೂತಟದ ನಾಗರೀಕತೆಗೆ ಸೇರಿದ ಭಾರತದಲ್ಲಿನ ಅತ್ಯಂತ ಪ್ರಮುಖ ಪುರಾತತ್ವ ತಾಣಗಳಲ್ಲಿ ಒಂದು.

BEST Places to Visit in Gujarat

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button