ವಂಡರ್ ಬಾಕ್ಸ್ವಿಂಗಡಿಸದಸಂಸ್ಕೃತಿ, ಪರಂಪರೆಸ್ಮರಣೀಯ ಜಾಗ

ಕುಪ್ಪಳ್ಳಿಗೆ ಹೋದಾಗ ಈ ಜಾಗಗಳನ್ನು ನೋಡುವುದನ್ನು ಮರೆಯದಿರಿ

ಕುಪ್ಪಳ್ಳಿ(Kuppalli) ಈ ಹೆಸರು ಕೇಳಿದ ತಕ್ಷಣ ನೆನಪಾಗುವುದು ರಾಷ್ಟ್ರಕವಿ , ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ,ಕನ್ನಡದ ಹೆಮ್ಮೆ ಕುವೆಂಪು (Kuvempu)ಅವರ ಮನೆ.

ಹೌದು ಇಲ್ಲಿ ಕವಿ ಕುವೆಂಪು ಬಾಳಿ ಬದುಕಿದ ಅವರ ಜೀವನದ ಹೆಜ್ಜೆ ಗುರುತಿಗಳಿವೆ. ಹಾಗೆ ಕುಪ್ಪಳ್ಳಿ ಹೋದವರು ಕುವೆಂಪು ಅವರ ನೆನಪು ಸಾರುವ ಈ ಜಾಗಗಳಿಗೆ ಹೋಗಿ ಬನ್ನಿ.

ಸಾಹಿತ್ಯಾಸಕ್ತರ ಮನಸೆಳೆಯುವ ಕುಪ್ಪಳ್ಳಿ ಸುತ್ತಮುತ್ತ ಜಾಗಗಳಿವು

ಕವಿ ಮನೆ (Kavi Mane)

ಕರ್ನಾಟಕದ(Karnataka )ಶಿವಮೊಗ್ಗ(Shivamogga )ಜಿಲ್ಲೆಯ ತೀರ್ಥಹಳ್ಳಿ (Theerthahalli)ತಾಲೂಕಿನಲ್ಲಿರುವ ಒಂದು ಹಳ್ಳಿ. ರಾಷ್ಟ್ರಕವಿ ಕುವೆಂಪುರವರು(Kuvempu )ಜನಿಸಿದ ಊರು.

sightseeing in and around Kuppall

ಇಲ್ಲಿ ಕುವೆಂಪು ಅವರ ಮನೆಯನ್ನು ಸ್ಮಾರಕವನ್ನಾಗಿ ಮಾಡಿಡಲಾಗಿದೆ. 150ವರ್ಷಗಳಷ್ಟು ಹಳೆಯದಾದ ಕುವೆಂಪು ಅವರು ಬೆಳೆದ ಮನೆ. ಇಲ್ಲಿ ಕುವೆಂಪು (Kuvempu)ಅವರಿಗೆ ಸಂಬಂಧಿಸಿದ ವಸ್ತುಗಳನ್ನು ನೋಡಬಹುದು.

ಕುವೆಂಪು ಅವರಿಗೆ ಸಿಕ್ಕ ಪ್ರಶಸ್ತಿಗಳು(Awards) ,ಬಾಲ್ಯದಲ್ಲಿ(Childhood days)ಅವರು ಬಳಸಿದ ವಸ್ತುಗಳು ಹೀಗೆ ಅವರ ಜೀವನದ ಮಜಲನ್ನೂ ಮೆಲುಕು ಹಾಕುವ ಮಹತ್ವದ ವಸ್ತುಗಳೆಲ್ಲವೂ ಒಂದೆಡೆ ಇರುವ ತಾಣ

ಕವಿ ಸಮಾಧಿ (Kavi Samadhi)

ಕವಿ ಮನೆಯ ಹಿಮ್ಮಗ್ಗುಲಲ್ಲಿರುವ ಬೆಟ್ಟಕ್ಕೆ(Hills) ಹೋಗುವ ದಾರಿಯುದ್ದಕ್ಕೂ ಅಲ್ಲಲ್ಲಿ ಕಲ್ಲು(Stone )ಮಂಟಪಗಳಿವೆ. ಗುಡ್ಡವನ್ನು ತಲುಪುತ್ತಿದ್ದಂತೆ ಕವಿ ಕುವೆಂಪು ಸಮಾಧಿ ಕಾಣಸಿಗುತ್ತದೆ.

ಈ ತಾಣದ ಸುತ್ತಲೂ ಹಸಿರು ಹಾಸನ್ನು ಬೆಳೆಸಲಾಗಿದೆ. ಇಲ್ಲಿ ದೊಡ್ಡ ವೃತ್ತಾಕಾರದಲ್ಲಿ ವಿಶಿಷ್ಟ ವಿನ್ಯಾಸದಲ್ಲಿ ಜೋಡಿಸಿ ನಿಲ್ಲಿಸಿರುವ ಶಿಲಾಸ್ಮಾರಕಗಳಿವೆ.

ತೇಜಸ್ವಿ ಸ್ಮಾರಕ (Tejaswi Smaraka)

ಕವಿಶೈಲದ (Kavishaila)ತಪ್ಪಲಿನಲ್ಲಿ, ಕುವೆಂಪು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿಯವರ ಸ್ಮಾರಕವಿದೆ(Purna Chandra Tejaswi).

sightseeing in and around Kuppall

ತೇಜಸ್ವಿಯವರ ಅಂತ್ಯ ಸಂಸ್ಕಾರ ಮಾಡಿದ ಈ ಸ್ಥಳದಲ್ಲಿ ಕಲಾವಿದ ಕೆ.ಟಿ.ಶಿವಪ್ರಸಾದರ(k.t.shivaprasadh ಕಲ್ಪನೆ ಕಲಾಕೃತಿಯಾಗಿ ಅರಳಿನಿಂತಿದೆ.

ಶತಮಾನೋತ್ಸವ ಭವನ (Kuvempu Janma Shatamanotsava Bhavan)

ಮಲೆನಾಡ(Malenadu)ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಿತವಾಗಿರುವ ಕಟ್ಟಡವೇ ಶತಮಾನೋತ್ಸವ ಭವನ. ಕವಿಯ ಜನ್ಮಶತಾಬ್ದಿಯ ಸ್ಮಾರಕವಾಗಿ ೨೦೦೪ ರಲ್ಲಿ ಈ ಬಹೂಪಯೊಗಿ ಕಟ್ಟಡವನ್ನು ಕಟ್ಟಲಾಗಿದೆ. ಕಟ್ಟಡದೆದುರಿನ ಇಳಿಜಾರನ್ನು ಬಯಲು ರಂಗವನ್ನಾಗಿ ಮಾಡಲಾಗಿದೆ.

ನೀವು ಇದನ್ನು ಓದಬಹುದು:ಹಂಪಿಯಲ್ಲಿ ನೋಡಬಹುದಾದ ತಾಣಗಳು

ಒಳನಡೆದರೆ ವಿಶಾಲ ತೊಟ್ಟಿ, ಎದುರಿಗೆ ಹೇಮಾಂಗಣ, ನೇಪಥ್ಯ, ದ್ವನಿ ಬೆಳಕಿನ ವ್ಯವಸ್ಥೆ ಹೊಂದಿ ಸಭೆ, ಗೋಷ್ಠಿ, ನಾಟ್ಯ, ನಾಟಕಗಳಿಗೆ(Drama) ಅನುಕೂಲ ಕಲ್ಪಿಸಲಾಗಿದೆ.

ಬಲಭಾಗದ ಚೌಕಿಯ ಅರ್ಧ ಭಾಗದ ಸುಸಜ್ಜಿತ ಗ್ರಂಥಾಲಯವಿದೆ(Library). ವಸತಿಗೆ ಮುಂಚಿತವಾಗಿ ಕದಿರಿಸುವ ಸೌಲಭ್ಯವು ಇದೆ. ಕುವೆಂಪು ತತ್ವ ಆದರ್ಶಗಳನ್ನು ಒಪ್ಪಿ ಮಂತ್ರ ಮಾಂಗಲ್ಯ(Mantra Mangalya)ವಿಧಾನದಲ್ಲಿ ಮದುವೆಯಾಗುವವರಿಗೆ ಹೇಮಾಂಗಣದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಕಲಾನಿಕೇತನ (Kalaniketan)

ತಮಾನೋತ್ಸವ ಭವನದ ಆವರಣದೊಳಗೆ ಸ್ವಲ್ಪ ಮುಂದೆ ಹೋದರೆ ಕಲಾನಿಕೇತನವಿದೆ. ಈ ಹೆಂಚಿನ ಮನೆಯಂಗಳದಲ್ಲಿ ನಿಂತು ಶಿಲ್ಪಕಲಾ ಸಾಕ್ಷಾತ್ಕಾರಗಳಾಗಿ ಕಾನೂರು ಸುಬ್ಬಮ್ಮ (ಕಾನೂರು ಸುಬ್ಬಮ್ಮ ಹೆಗ್ಗಡತಿ ಕಾದಂಬರಿ)(Kanuru Subbamma Heggadithi)ಮತ್ತು ನಾಯಿ ಗುತ್ತಿ (ಮಲೆಗಳಲ್ಲಿ ಮದುಮಗಳು ಕಾದಂಬರಿ)(Malegallli Madumagalu) ನಮ್ಮನ್ನು ಸ್ವಾಗತಿಸುತ್ತಾರೆ.

sightseeing in and around Kuppall

ಮನೆಯ ಗೋಡೆಗಳ ಮೇಲೆ ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಕ್ಯಾಮಾರದಲ್ಲಿ ತೆಗೆದ ಹಕ್ಕಿಚಿತ್ರಗಳನ್ನು(Bird photography), ಕುವೆಂಪು ಕೃತಿಗಳನ್ನಾಧರಿಸಿ ರಚಿಸಿದ ವರ್ಣಚಿತ್ರಗಳನ್ನು ಪ್ರದರ್ಶಿಸಲಾಗಿದೆ..

ಕುವೆಂಪು ಸ್ಮಾರಕ ಅರಣ್ಯ(Kuvempu Reserved Forest)

ಕವಿಮನೆಗೆ(Kavi Mane)ಹೊಂದಿಕೊಂಡ 32೦೦ ಎಕರೆ ಅರಣ್ಯವನ್ನು ಸರ್ಕಾರ ಕುವೆಂಪು ಸ್ಮಾರಕ ಅರಣ್ಯ ಘೋಷಿಸಿದೆ. ಇದನ್ನು ಅರಣ್ಯ ಇಲಾಖೆಯು ಸಂರಕ್ಷಿಸುತ್ತಿದೆ.

ಇಲ್ಲಿ ಪಶ್ಚಿಮಘಟ್ಟಗಳ(Western Ghats)ನಿತ್ಯ ಹರಿದ್ವರ್ಣದ ಕಾಡುಗಳ ಅಪರೂಪದ ಸಸ್ಯ ಮತ್ತು ಪ್ರಾಣಿ ಪ್ರಭೇದಗಳಿವೆ. ಅವುಗಳ ಅಧ್ಯಯನ ಮತ್ತು ಚಾರಣಕ್ಕೆ ಅವಕಾಶವಿರುತ್ತದೆ.

ದೇಸಿ ವಸ್ತು ಸಂಗ್ರಹಾಲಯ(Desi Museum)

ಕವಿಮನೆಯಿಂದ 2 ಕಿ. ಮೀ ದೂರದಲ್ಲಿ ರಾಷ್ಟೀಯ ಹೆದ್ದಾರಿಯ ಪಕ್ಕದಲ್ಲಿ ಮಲೆನಾಡು(Malenad)ಮತ್ತು ಕರಾವಳಿ(Coastal) ಜಿಲ್ಲೆಗಳ ಪಾರಂಪರಿಕ ಜೀವನಕ್ರಮವನ್ನು ಬಿಂಬಿಸುವ ವಸ್ತು ಸಂಗ್ರಹಾಲಯ ಇದೆ.

ಇಲ್ಲಿರುವ ವಸ್ತುಗಳು ಕುವೆಂಪು(Kuvempu)ಚಿತ್ರಿಸಿರುವ ಮಲೆನಾಡಿನ ಜೀವನ ಹಾಗೂ ಸಂಸ್ಕೃತಿಯನ್ನು ಅರಿಯಲು ಸಹಕಾರಿಯಾಗಿದೆ

ಕವಿಶೈಲ (Kavi Shyla)

ರಾಷ್ಟ್ರಕವಿ ಕುವೆಂಪು ಅವರನ್ನು ರೂಪುಗೊಳಿಸಿದ, ಸಾಹಿತ್ಯ ಸೃಷ್ಟಿಗೆ ಪ್ರೇರಕ ಶಕ್ತಿಯಾಗಿದ್ದ ತಾಣವದು. ಕವಿಶೈಲದ(Kavishaila )ನೆತ್ತಿಯ ಮೇಲೆ ಕನ್ನಡದ ಮೇರು ಕವಿ ಕುವೆಂಪು ಸಮಾಧಿ ಇದೆ. ಹಲವು ಸಾಹಿತ್ಯಾಸಕ್ತರಿಗೆ ಕವಿಶೈಲ ಅವರ ಸಾಹಿತ್ಯ ರಚನೆಗೆ ಪ್ರೇರಕ ತಾಣ.

Kavi Shyla

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸಕ್ಕೆ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ( ​​Kannada.Travel ) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button