ದೂರ ತೀರ ಯಾನವಂಡರ್ ಬಾಕ್ಸ್ವಿಂಗಡಿಸದ

ಈ ರೆಸ್ಟೋರೆಂಟ್ ನಲ್ಲಿ ಊಟ ಮಾಡಲು ಬರೋಬ್ಬರಿ ನಾಲ್ಕು ವರ್ಷ ಕಾಯಲೇಬೇಕು

ಹೋಟೆಲ್ ವಿಚಾರವಾಗಿ ನಾವೆಲ್ಲ ಏನ್ ಯೋಚನೆ ಮಾಡುತ್ತೇವೆ ಹೇಳಿ, ದುಡ್ಡು ಕೊಟ್ಟರೆ ಪರವಾಗಿಲ್ಲ ಅಡುಗೆ ರುಚಿಕರವಾಗಿರಬೇಕು ಎಂದುಕೊಳ್ಳುತ್ತೇವೆ.

ಫೇಮಸ್ ಆಗಿರುವ ಹೋಟೆಲ್ ಅಥವಾ ರೆಸ್ಟೋರೆಂಟ್ ಆಗಿದ್ದರೆ ಸಹಜವಾಗಿ ರಶ್ ಇರುತ್ತದೆ, ಹೀಗಾಗಿ ಸ್ವಲ್ಪ ಕಾಯಲೇಬೇಕು. ಆದರೆ ವಿಶ್ವದ ಈ ರೆಸ್ಟೋರೆಂಟ್ ನಲ್ಲಿ ಊಟ ಮಾಡಲು ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಕಾಯಬೇಕಂತೆ.

ಕೆಲ ಶತಮಾನಗಳಷ್ಟು ಹಳೆಯದಾದ ಈ ರೆಸ್ಟೋರೆಂಟ್‌ನಲ್ಲಿ ಆಹಾರ ಸೇವಿಸಲು ಜನರು 4 ವರ್ಷಗಳ ಕಾಲ ಕಾಯಲು ಇದು ಕೂಡ ಒಂದು ಕಾರಣವಾಗಿದೆ.

ನೀವು ಬ್ಯಾಂಕ್ ಟಾವೆರ್ನ್‌ನಲ್ಲಿ (Bank Tarven)ಭೋಜನಕ್ಕೆ ಟೇಬಲ್ ಬುಕ್ ಮಾಡಲು ಬಯಸಿದರೆ, ನಾಲ್ಕು ವರ್ಷಗಳವರೆಗೆ ಕಾಯಲು ಸಿದ್ಧರಾಗಿರಿ. ಏಕೆಂದರೆ ಇಲ್ಲಿರುವ ಎಲ್ಲಾ ಟೇಬಲ್‌ಗಳು ಯಾವಾಗಲೂ ತುಂಬಿರುತ್ತವೆ.

ದುಡ್ಡು ಇದ್ದರೆ ಏನು ಬೇಕಾದರೂ ಕೊಂಡು ತಿನ್ನಬಹುದು. ಆದರೆ ಮಧ್ಯಮವರ್ಗದ ಜನರಿಗೆ ಇಂತಹ ಐಷಾರಾಮಿ ಹೋಟೆಲ್ಗಳಲ್ಲಿ ಕೂತು ತಿನ್ನುವುದು ಕನಸಿನ ಮಾತಾಗಿರುತ್ತದೆ.

ಆದರೆ ನಿಮ್ಮ ಬಳಿ ಎಷ್ಟೇ ದುಡ್ಡು ಇದ್ದರೂ ವಿಶ್ವದ ಈ ಹೋಟೆಲ್ನಲ್ಲಿ ಟೇಬಲ್ ಬುಕ್ ಮಾಡುವುದು ಅಷ್ಟು ಸುಲಭವಲ್ಲ.

ಈ ಐಷಾರಾಮಿ ಹೋಟೆಲ್ ಹೆಸರು ದಿ ಬ್ಯಾಂಕ್ ಟಾವೆರ್ನ್ ರೆಸ್ಟೋರೆಂಟ್(The Bank Tarven Resturant)ಆಗಿದ್ದು, ಇದು ಇರುವುದು ಯುನೈಟೆಡ್ ಕಿಂಗ್‌ಡಮ್‌ನಲ್ಲಿ(United Kingdom).

ಬ್ಯಾಂಕ್ ಟಾವೆರ್ನ್ ಪ್ರಪಂಚದಾದ್ಯಂತದ ದೀರ್ಘ ಕಾಯುವ ಪಟ್ಟಿಯನ್ನು ಹೊಂದಿದೆ . ಭಾನುವಾರ(Sunday) ನೀವೇನಾದರೂ ಇಲ್ಲಿ ಊಟಬೇಕೆಂದುಕೊಂಡಿದ್ದರೆ ನಾಲ್ಕು ವರ್ಷಗಳ ಕಾಲ ಮುಂಚೆಯೇ ಬುಕ್ ಮಾಡಿರಬೇಕು.

ಈ ರೆಸ್ಟೋರೆಂಟ್ ನಲ್ಲಿರುವ ಒಂಬತ್ತು ಟೇಬಲ್ಗಳು ಯಾವಾಗಲೂ ತುಂಬಿರುತ್ತದೆ. ಕ್ರಿ.ಶ 1800ರಲ್ಲಿ ನಿರ್ಮಿಸಲಾದ ಹಳೆಯದಾದ ಈ ರೆಸ್ಟೋರೆಂಟ್‌ ನೋಡುವುದಕ್ಕೆ ಸಣ್ಣದಾಗಿದ್ದು, ಲಂಡನ್‌ನಿಂದ(Londan )ಎರಡೂವರೆ ಗಂಟೆಗಳ ದೂರವಿರುವ ಬ್ರಿಸ್ಟಲ್‌ನಲ್ಲಿದೆ(Bristal).

ಈ ರೆಸ್ಟೋರೆಂಟ್ ನಲ್ಲಿ ರುಚಿ ರುಚಿಯಾದ ಆಹಾರಗಳು ಲಭ್ಯವಿದ್ದು, ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ಊಟವು ಲಭ್ಯವಿರುತ್ತದೆ.

ಭಾನುವಾರದ ವಿಶೇಷ ಮೆನುವಿನಲ್ಲಿ ವಿಶೇಷ ಖಾದ್ಯಗಳಾದ ಗ್ರೀಕ್ ಸ್ಕ್ವಿಡ್ ಬಾಲ್‌ಗಳು, ಮೇಪಲ್ ಸಿರಪ್ ಗ್ರೇಸ್ ಮತ್ತು ಬೆಲ್ಲಿ ಪೋರ್ಕ್ ಸೇರಿದಂತೆ ರಾಸ್ಪೆರಿ ಮೊಸರು ಪನ್ನಾ ಕೋಟಾ ಮತ್ತು ಗೂಸ್ಟೆರಿ ಸ್ಪಾಂಜ್ ಜೊತೆಗೆ ಸ್ಟ್ರಾಬೆರಿ ಮತ್ತು ಬಿಳಿ ಚಾಕೊಲೇಟ್ ಹೀಗೆ ಸಿಹಿತಿಂಡಿಗಳು ದೊರೆಯುತ್ತವೆ.

ಈ ಐಷಾರಾಮಿ ರೆಸ್ಟೋರೆಂಟ್ ನಲ್ಲಿ ಎರಡು ಹೊತ್ತಿನ ಊಟದ ಬೆಲೆ 2320 ರೂ. ಆಗಿದ್ದು, ಮೂರು ಹೊತ್ತಿನ ಊಟದ ಬೆಲೆಯೂ 2850 ರೂ.ಯಿದ್ದು ದುಬಾರಿಯಾಗಿದೆ.

ಬ್ಯಾಂಕ್ ಟ್ಯಾವರ್ನ್ ನ ಸಂಡೇ ರೋಸ್ಟ್ ಮಿಲ್ 2019 ರಲ್ಲಿ ಬ್ರಿಸ್ಟಲ್ ನ ಅಬ್ಸರ್ವರ್ ಮಾಸಿಕ ಆಹಾರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅದಲ್ಲದೇ, 2018 ರಲ್ಲಿ ಬ್ರಿಸ್ಟಲ್ ಗುಡ್ ಫುಡ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button