ವಂಡರ್ ಬಾಕ್ಸ್ವಿಂಗಡಿಸದಸಂಸ್ಕೃತಿ, ಪರಂಪರೆ

ನಮ್ಮ ದೇಶದಲ್ಲಿದೆ ಏಷ್ಯಾದ ಅತಿದೊಡ್ಡ ಮಹಿಳಾ ಮಾರುಕಟ್ಟೆ

ಸಾಂಪ್ರದಾಯಿಕ (Traditional) ಧಿರಿಸು ಧರಿಸಿದ ಸಾವಿರಾರು ಮಹಿಳೆಯರು ಇಲ್ಲಿ ಯಾವ ಪುರುಷರಿಗೂ ಕಡಿಮೆ ಇಲ್ಲ ಎನ್ನುವಂತೆ ತಮ್ಮ ಅಂಗಡಿಗಳನ್ನು ಸಂಬಾಳಿಸ್ತಾರೆ. ಇಲ್ಲಿ ಒಂದಲ್ಲ ,ಎರಡಲ್ಲ ಬರೋಬ್ಬರಿ 5000 ಸಾವಿರ ಮಹಿಳೆಯರು ವ್ಯಾಪಾರ ನಡೆಸುತ್ತಾರೆ.

ಇದು ಏಷ್ಯಾದ ಅತಿದೊಡ್ಡ ಮಹಿಳಾ ಮಾರುಕಟ್ಟೆ ಎನ್ನುವ ಹೆಗ್ಗಳಿಕೆಯನ್ನು ಹೊಂದಿರುವ ಮಣಿಪುರದ ಮಹಿಳಾ ಮಾರುಕಟ್ಟೆಯ ವಸ್ತು ಸ್ಥಿತಿ.

ಈ ಮಾರುಕಟ್ಟೆ ಮಣಿಪುರ (Manipur)ರಾಜ್ಯದ ಇಮಾ(Ima) ಕೈತಾಲ್(Kaithal)ನಲ್ಲಿದೆ . ಇಲ್ಲಿ ವಿವಾಹಿತ ಮಹಿಳೆಯರು ಮಾತ್ರ ವ್ಯಾಪಾರ ನಡೆಸುವುದಕ್ಕೆ ಅವಕಾಶ. ಈ ಮಾರುಕಟ್ಟೆ ಹುಟ್ಟಿಕೊಳ್ಳಲು ಹಲವು ಕಾರಣಗಳಿವೆ.

ಇಮಾ ಬಜಾರ್‌ನ ಅಡಿಪಾಯವನ್ನು 16 ನೇ ಶತಮಾನದಲ್ಲಿ ಹಾಕಲಾಯಿತು. ಆ ಸಮಯದಲ್ಲಿ ಮಣಿಪುರವನ್ನು ಲುಲುಪ್ ಕಾಬಾ ಆಳುತ್ತಿದ್ದನು.

ಬಂಧಿತ ಕಾರ್ಮಿಕರಿಗೆ ಆತ ಕೆಲಸ ನೀಡಿದ್ದ. ಒತ್ತಾಯ ಪೂರ್ವಕವಾಗಿ ಈ ಮಾರುಕಟ್ಟೆಯಲ್ಲಿ ಬಂಧಿತ ಕಾರ್ಮಿಕರು ಕೆಲಸ ಮಾಡಬೇಕಾಗಿತ್ತು.

ಪುರುಷರು ಸೈನ್ಯ ಮತ್ತು ಇತರ ಕೆಲಸ ಮಾಡಲು ಮನೆಯಿಂದ ಹೊರಗೆ ಹೋಗ್ಬೇಕಿತ್ತು. ಹಾಗಾಗಿ ಅವರು ಮನೆಗಳಿಂದ ದೂರ ಇರುತ್ತಿದ್ದರು. ಗಂಡಸರು ಮನೆಯಿಂದ ದೂರವಿದ್ದ ಕಾರಣ ಎಲ್ಲ ಜವಾಬ್ದಾರಿ ಮಹಿಳೆಯರ ಹೆಗಲೇರಿತ್ತು.

ಈ ಸಂದರ್ಭದಲ್ಲಿ ಮಹಿಳೆಯರು ಧೈರ್ಯ ಕಳೆದುಕೊಳ್ಳಲಿಲ್ಲ. ಬಲವಂತದ ಕಾರ್ಮಿಕ ವ್ಯವಸ್ಥೆಯನ್ನು ಅವರು ವಿರೋಧಿಸಿದ್ರು.

ಮೇಟಿ ಮಹಿಳೆಯರು ಧೈರ್ಯ ಕಳೆದುಕೊಳ್ಳಲಿಲ್ಲ. ಬಲಪಡಿಸಿದರು. ಈ ಮಹಿಳೆಯರು ಸ್ವಂತ ವ್ಯಾಪಾರದ ಪಟ್ಟು ಕಲಿತು ಮಾರುಕಟ್ಟೆ ಶುರು ಮಾಡಿದರು. ಅ ಸಮಯದಲ್ಲಿ ಬ್ರಿಟಿಷರ ದೌರ್ಜನ್ಯ ಉತ್ತುಂಗದಲ್ಲಿತ್ತು.

ಬ್ರಿಟಿಷ್ ಸರ್ಕಾರದ ನೀತಿಗಳು ಇಮಾ ಮಾರುಕಟ್ಟೆಯ ಮೇಲೆಯೂ ಪರಿಣಾಮ ಬೀರುವುದಕ್ಕೆ ಆರಂಭಿಸಿತ್ತು. ಆದ್ರೆ ಮಾರುಕಟ್ಟೆಯಲ್ಲಿರುವ ಮಹಿಳೆಯರು ಬ್ರಿಟಿಷ್ ನೀತಿಯನ್ನು ವಿರೋಧಿಸಿದ್ರು.

ಕೈತಾಲ್‌ನ ಮಹಿಳೆಯರು ಬ್ರಿಟಿಷರ ಆಡಳಿತ (British Administration) ಸಿಬ್ಬಂದಿ ಜೊತೆ ಧೈರ್ಯದಿಂದ ಹೋರಾಡಿದರು. ಬ್ರಿಟಿಷರ ದಮನಕಾರಿ ನೀತಿಗಳ ವಿರುದ್ಧ ಪ್ರತಿಭಟನೆ, ಪ್ರದರ್ಶನ ಮತ್ತು ಮೆರವಣಿಗೆ ನಡೆಯಿತು.

ಇಮಾ ಬಜಾರ್‌ನ ಮಹಿಳೆಯರು ಮಾತೃಶಕ್ತಿಯ ಶಕ್ತಿಯನ್ನು ಜಗತ್ತಿಗೆ ತೋರಿಸಿದ್ರು. ಮಹಿಳೆಯರ ಹೋರಾಟ (Fight) ನೋಡಿಯೇ ಇದಕ್ಕೆ ಇಮಾ ಎಂಬ ಹೆಸರು ಬಂದಿದೆ.

ಇಮಾ ಅಂದ್ರೆ ಮಣಿಪುರಿ ಭಾಷೆಯಲ್ಲಿ ತಾಯಿ (Mother) ಕೈತಾಲ್ ಎಂದರೆ ಮಾರುಕಟ್ಟೆ. ಆದ್ದರಿಂದ ಈ ಮಾರುಕಟ್ಟೆಯ ಸಂಪೂರ್ಣ ಅರ್ಥವೆಂದರೆ ತಾಯಿಯ ಮಾರುಕಟ್ಟೆ.

ಮಹಿಳೆಯರಿಂದ ಪ್ರಾರಂಭವಾದ ಈ ಮಾರುಕಟ್ಟೆ ಇಂದಿಗೂ ಇಡೀ ಜಗತ್ತಿನಲ್ಲಿ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರತ್ಯೇಕ ಗುರುತಾಗಿ ಉಳಿದಿದೆ.

ಈ ಮಾರುಕಟ್ಟೆಯಲ್ಲಿ ಬರೀ ಅಲಂಕಾರಿಕ ವಸ್ತುಗಳಿಲ್ಲ. ಮೀನು, ತರಕಾರಿ, ಮಸಾಲೆ ಪದಾರ್ಥ, ಹಣ್ಣು, ಸ್ಥಳೀಯ ಚಾಟ್ ಸೇರಿದಂತೆ ಎಲ್ಲ ಬಗೆಯ ವಸ್ತುಗಳನ್ನು ನೀಡು ಖರೀದಿ ಮಾಡಬಹುದು.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button