Moreವಿಂಗಡಿಸದಸಂಸ್ಕೃತಿ, ಪರಂಪರೆ

ಮಹಾಶಿವರಾತ್ರಿ ಪ್ರಯುಕ್ತ ಶ್ರೀಶೈಲಂಗೆ ಕರ್ನಾಟಕದಿಂದ ವಿಶೇಷ ಬಸ್; ಇಲ್ಲಿದೆ ಮಾಹಿತಿ

ಮಾರ್ಚ್ 8ರಂದು ಇರುವ ಮಹಾಶಿವರಾತ್ರಿ (Maha Shivaratri) ಅಂಗವಾಗಿ, ಆಂಧ್ರಪ್ರದೇಶದ (Andhra Pradesh) ಶ್ರೀಶೈಲ (Srisailam) ಮಲ್ಲಿಕಾರ್ಜುನ (Mallikarjuna Temple) ಮಹಾ ಕ್ಷೇತ್ರದಲ್ಲಿ ಮಾರ್ಚ್ 1 ರಿಂದ ಬ್ರಹ್ಮರಥೋತ್ಸವ (Brahma Rathotsava) ಆರಂಭವಾಗಿದೆ. ಈ ಕಾರ್ಯಕ್ರಮ ಮಾ.11ರವರೆಗೆ ನಡೆಯಲಿದೆ.

ಇದೊಂದು ಅಮೋಘ ದೈವಿಕ ಕಾರ್ಯಕ್ರಮವಾಗಿದ್ದು, ಇದನ್ನು ಕಣ್ತುಂಬಿಕೊಳ್ಳಲು ಕರ್ನಾಟಕದಿಂದ ಸಾವಿರಾರು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಇಲ್ಲಿಗೆ ಸಾಗುವ ಭಕ್ತರ ಅನುಕೂಲಕ್ಕಾಗಿ ಕರ್ನಾಟಕದಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.

ಈ ಕುರಿತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಬಳ್ಳಾರಿ ವಿಭಾಗ ಮಾಹಿತಿ ನೀಡಿದ್ದು, ಬಳ್ಳಾರಿ ಮತ್ತು ಆಸುಪಾಸಿನ ಗ್ರಾಮದ ಸ್ಥಳೀಯ ಭಕ್ತರಿಗೆ ಮಾ.4ರಿಂದ ಮಾ.10ರವರೆಗೆ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಘೋಷಿಸಿದೆ.

ಈ ವಿಶೇಷ ಬಸ್ (Special Bus) ಸೌಲಭ್ಯವನ್ನು ಶ್ರೀಶೈಲಂಗೆ ತೆರಳುವ ಭಕ್ತರು ಸದುಪಯೋಗ ಪಡೆದುಕೊಳ್ಳಬೇಕೆಂದು ಎಂದು KKRTC ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್‍ಬಾನ್ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.

ಈ ಕುರಿತಾಗಿ ಹೆಚ್ಚಿನ ಮಾಹಿತಿ ಪಡೆಯಲು ಬಳ್ಳಾರಿ-1ನೇ ಘಟಕದ ವ್ಯವಸ್ಥಾಪಕರನ್ನು ಮೊಬೈಲ್ 7760992163,

2ನೇ ಘಟಕದ ವ್ಯವಸ್ಥಾಪಕರನ್ನು ಮೊಬೈಲ್ 7760992164, ಸಿರುಗುಪ್ಪ ಘಟಕದ ವ್ಯವಸ್ಥಾಪಕರನ್ನು ಮೊಬೈಲ್ 7760992165,

ಕುರುಗೋಡು ಘಟಕದ ವ್ಯವಸ್ಥಾಪಕರನ್ನು ಮೊಬೈಲ್ 9606483671 ಸಂಖ್ಯೆ ಮೂಲಕ ಸಂಪರ್ಕಿಸಬಹುದು.

ಶ್ರೀಶೈಲಂನ (Srisailam) ದೇವಾಲಯದಲ್ಲಿ ಈಗಾಗಲೇ ಬ್ರಹ್ಮರಥೋತ್ಸವ ಅದ್ದೂರಿಯಾಗಿ ಆರಂಭಗೊಂಡಿದ್ದು, ದೇವಾಲಯದ ಭಕ್ತರು ನಡೆಸಿಕೊಡಬಹುದಾದ ಸೇವೆಯ ಬಗ್ಗೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಡಿ. ಪೆದ್ದಿರಾಜು ಅವರು ಮಾಹಿತಿ ನೀಡಿದ್ದಾರೆ.

ದೇವಾಲಯದಲ್ಲಿ ಭಕ್ತರಿಗಾಗಿ ಉಚಿತ ದರ್ಶನ ವ್ಯವಸ್ಥೆ ಸಹ ಕಲ್ಪಿಸಲಾಗಿದೆ.

ಶೀಘ್ರ ದರ್ಶನ ಪಡೆಯಲು ರೂ. 200 ಮತ್ತು ಇನ್ನೂ ಶೀಘ್ರ ದರ್ಶನಕ್ಕಾಗಿ ರೂ. 500 ಇದ್ದು, ಬುಕ್ಕಿಂಗ್ ಕೌಂಟರ್‌ ನಲ್ಲಿ ಟಿಕೆಟ್ ಖರೀದಿಸಬಹುದು.

ಈ ಟಿಕೆಟ್ ಗಳನ್ನು ದೇವಾಲಯದ ವೆಬ್ ಸೈಟ್ www.srisailadevasthanam.org ಮೂಲಕ ಸಹ ಖರೀದಿಸಬಹುದು.

ದೇವಾಲಯದಲ್ಲಿ ಮಾರ್ಚ್ 1 ರಿಂದ 5 ರವರೆಗೆ ಶಿವದೀಕ್ಷೆ ಪಡೆದು ಜ್ಯೋತಿರ್ಮುಡಿ ಇರುವ ಭಕ್ತರಿಗೆ ಉಚಿತ ಸ್ಪರ್ಶ ದರ್ಶನಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ.

ನಂತರ ಉಳಿದ ಭಕ್ತರಿಗೆ ಆದ್ಯತೆ ನೀಡಲಾಗುವುದು. ಭಕ್ತರು ದೇವಾಲಯದ ಕಾರ್ಯಕ್ರಮಗಳ ಮತ್ತು ದರ್ಶನದ ಮಾಹಿತಿ ತಿಳಿದು ದೇವಾಲಯಕ್ಕೆ ಭೇಟಿ ನೀಡಬೇಕಾಗಿ ಎಂದು ಮನವಿ ಮಾಡಿಕೊಳ್ಳಲಾಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button