Moreಇವರ ದಾರಿಯೇ ಡಿಫರೆಂಟುಮೋಟಾರ್ ಸೈಕಲ್ ಡೈರಿವಿಂಗಡಿಸದ

“ಕ್ವೀನ್ ಆನ್ ದಿ ವೀಲ್”; ಮಹಿಳಾ ಬೈಕರ್ಸ್ ಗಳಿಗೆ ಮಧ್ಯಪ್ರದೇಶದಿಂದ ವಿಶಿಷ್ಟ ಕೊಡುಗೆ:

ಮಧ್ಯಪ್ರದೇಶ ರಾಜ್ಯವು ಭಾರತದ ಒಂದು ಅದ್ಭುತ ನೈಸರ್ಗಿಕ ಮತ್ತು ಐತಿಹಾಸಿಕ ತಾಣಗಳನ್ನು ಒಳಗೊಂಡಿರುವ ಸುಂದರ ರಾಜ್ಯವಾಗಿದೆ.

ನೀವು ಈ ರಾಜ್ಯವನ್ನು ಅನ್ವೇಷಿಸಿದ್ದರೆ, ನಿಮಗೆ ಈ ರಾಜ್ಯ ಒಂದು ವಿಶಿಷ್ಟ ಅನುಭವವನ್ನು ಖಂಡಿತವಾಗಿ ನೀಡಿರುತ್ತದೆ.

ಇದೀಗ ಮಧ್ಯಪ್ರದೇಶ ಪ್ರವಾಸೋದ್ಯಮವು (Madhya Pradesh Tourism) ಮಧ್ಯಪ್ರದೇಶದ ಸೌಂದರ್ಯ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ವೀಕ್ಷಿಸಲು ಬಯಸುವ ಮಹಿಳಾ ಸಾಹಸಿಗಳಿಗೆ ಒಂದು ವಿಶಿಷ್ಟ ಕೊಡುಗೆಯನ್ನು ಘೋಷಿಸಿದೆ.

ಮಹಿಳೆಯರಿಗೆ ಬೈಕ್ ನಲ್ಲಿ (Bike) ಮಧ್ಯಪ್ರದೇಶದ ಅದ್ಭುತ ತಾಣಗಳನ್ನು ವೀಕ್ಷಿಸಲು ಇದು ಅವಕಾಶವನ್ನು ಒದಗಿಸುತ್ತಿದೆ. ಈ ಉಪಕ್ರಮಕ್ಕೆ ‘ಕ್ವೀನ್ ಆನ್ ದಿ ವೀಲ್’, (Queen On The Wheel) ಎಂಬ ಹೆಸರು ಇಡಲಾಗಿದೆ.

ಬೈಕ್ ನಲ್ಲಿ ಪ್ರಯಾಣಿಸಲು ಬಯಸುವ ಮಹಿಳಾ ಪ್ರವಾಸಿಗರಿಗೆ (Female Tourists) ತಮ್ಮ ಬೈಕ್‌ಗಳಲ್ಲಿ 1,400 ಕಿಮೀಗಿಂತಲೂ ಹೆಚ್ಚು ಕ್ರಮಿಸಲು, ಅದ್ಭುತವಾದ 7-ದಿನಗಳ (7 days) ದೀರ್ಘ ಪ್ರಯಾಣವನ್ನು ಅನುಭವಿಸಲು ಪ್ರವಾಸೋದ್ಯಮ ಇಲಾಖೆ ಅವಕಾಶ ನೀಡಿದೆ.

ಈಗಾಗಲೇ ಮಾ.2 ರಿಂದ ಈ ಉಪಕ್ರಮ ಜಾರಿಯಾಗಿದ್ದು, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ (International Women’s Day) ಮಾ.8 ರವರೆಗೆ ಜಾರಿ ಇರಲಿದೆ.

ರಾಜ್ಯದ ಭವ್ಯವಾದ ಸೌಂದರ್ಯ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ವೀಕ್ಷಿಸುತ್ತಾ, ರಸ್ತೆಯಲ್ಲಿಯೇ ಮನೋರಂಜನೆಯ ಪ್ರಯಾಣದ ಅನುಭವವನ್ನು ಆನಂದಿಸಲು ಇದು ಒಂದು ವಿಶಿಷ್ಟ ವಿಧಾನವಾಗಿದೆ.

ರಾಷ್ಟ್ರದಾದ್ಯಂತ ಅನೇಕ ಸಾಹಸಪ್ರೇಮಿ ಮಹಿಳೆಯರು ಇದರಲ್ಲಿ ಭಾಗವಹಿಸಿದ್ದು, ಅವರಿಗೆ ಜೀವನದಲ್ಲಿಯೇ ಒಂದು ಅಮೋಘ ಅನುಭವವನ್ನು ಇದು ನೀಡುತ್ತಿದೆ.

ಇದು ಆಕರ್ಷಣೀಯ ಪ್ರವಾಸಿ ಸ್ಥಳಗಳು, ಅರಣ್ಯ ಮತ್ತು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುವ ಅವಕಾಶವನ್ನು ಬೈಕ್ ನ ಮೂಲಕ ನೋಡುವ ಅವಕಾಶ ಈ ಉಪಕ್ರಮ ನೀಡುತ್ತಿದೆ.

7 ದಿನಗಳ ಬೈಕ್ ಸವಾರಿ ಪ್ರವಾಸದ ಸಂಪೂರ್ಣ ಮಾಹಿತಿ:

ಕ್ವೀನ್ ಆನ್ ದಿ ವೀಲ್‌ನ 7-ದಿನ/6-ರಾತ್ರಿಯ ರೋಮಾಂಚಕ ಬೈಕ್ ರೈಡ್ (Bike Ride) ಮಾರ್ಚ್ 2 ರಂದು ಭೋಪಾಲ್‌ನಿಂದ ಪ್ರಾರಂಭವಾಗಿದೆ.

250 ಕಿಮೀ ಪ್ರಯಾಣವು ಚಂದೇರಿ ಕೋಟೆ, ಪ್ರಾಣಪುರ ಗ್ರಾಮ ಮತ್ತು ಸಾಂಚಿ ಸ್ತೂಪವನ್ನು ಒಳಗೊಂಡಿದೆ ಎಂದು ಸಿಎಸಿ ಆಲ್‌ರೌಂಡರ್ ವರದಿ ತಿಳಿಸಿದೆ.

ಮಾ.3 ರಂದು ಬೈಕರ್ಸ್ ಚಂದೇರಿಯಿಂದ ಕುನೊ ಮತ್ತು ಗ್ವಾಲಿಯರ್‌ಗೆ ತಲುಪುತ್ತಾರೆ. ಕೊನೋದಲ್ಲಿ ಅರಣ್ಯ ಉತ್ಸವವನ್ನು ಕಂಡು ನಂತರ ಗ್ವಾಲಿಯರ್ ಗೆ ಪ್ರಯಾಣಿಸಿದ್ದಾರೆ. ಅಲ್ಲಿ ಅವರು ಬುಡಕಟ್ಟು ಮಹಿಳೆಯರೊಂದಿಗೆ ಸಂವಹನಕ್ಕೆ ಸಹ ಅವಕಾಶ ಇದೆ.

3 ನೇ ದಿನವಾದ ಇಂದು ಮಾ.4ರಂದು ಗ್ವಾಲಿಯರ್‌ನಿಂದ ಸೋನಗಿರಿ ಮೂಲಕ ಓರ್ಚಾಗೆ ಹೋಗಿ ಪ್ರವಾಸಿಗರು ಮಿಟಾವೊಲಿ ಮತ್ತು ಪಡವ್ಲಿಯನ್ನು ಅನ್ವೇಷಿಸುತ್ತಾರೆ.

ನಾಳೆ ಮಾ.5 ರಂದು ಓರ್ಚಾದಿಂದ ಖಜುರಾಹೊಗೆ ಬೈಕ್ ಸವಾರರು ಪ್ರಯಾಣಿಸುತ್ತಾರೆ. ಈ 180 ಕಿ.ಮೀ ಪ್ರಯಾಣದಲ್ಲಿ ಅವರು ಲಾಡ್‌ಪುರ ಗ್ರಾಮಾಂತರ ಗ್ರಾಮಕ್ಕೆ ಭೇಟಿ ನೀಡುತ್ತಾರೆ.

ಅಲ್ಲಿ ಬೆಟ್ವಾ ನದಿಯಲ್ಲಿ ಆಟ ಆಡುವುದು ಮತ್ತು ರಾಮರಾಜನ್ ದೇವಾಲಯಕ್ಕೆ ಭೇಟಿ ನೀಡುವ ಕಾರ್ಯಕ್ರಮ ಇರುತ್ತದೆ.

ಮಾ.6 ರಂದು ಸಮುದ್ರ ವೀಕ್ಷಣೆಯ ಜೊತೆಗೆ ದೇವಾಲಯಗಳು, ಆದಿವರ್ಟ್ ಬುಡಕಟ್ಟು ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುತ್ತಾರೆ ಮತ್ತು ಗ್ರಾಮೀಣ ಅನುಭವವನ್ನು ಸವಿಯುತ್ತಾರೆ.

ಮಾ.7 ರಂದು 170 ಕಿಮೀ ದೂರವನ್ನು ಕ್ರಮಿಸುವ ಮೂಲಕ ಭೋಪಾಲ್‌ಗೆ ಹಿಂತಿರುಗುತ್ತಾರೆ.

ಕೊನೆಯ ದಿನ ಮಾ.8 ರಂದು ಅಂತರಾಷ್ಟ್ರೀಯ ಮಹಿಳಾ ದಿನದಂದು ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭದೊಂದಿಗೆ ಈ ಯೋಜನೆಯು ಮುಕ್ತಾಯಗೊಳ್ಳುತ್ತದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button