ವಿಶ್ವದ ಅತಿ ಎತ್ತರದ ಶಿವ ದೇವಾಲಯ ಭಾರತದ ಉತ್ತರಾಖಂಡ್‌ನ ಈ ಭಾಗದಲ್ಲಿದೆ.
ಪಂಚ ಕೇದಾರಗಳಲ್ಲಿ ಒಂದಾದ ಉತ್ತರಾಖಂಡ್‌ನ (Uttarakhand) ತುಂಗನಾಥ ದೇವಾಲಯವು (Tunganath Temple) 12,073 ಅಡಿ ಎತ್ತರದಲ್ಲಿ ನೆಲೆಗೊಂಡಿದ್ದು, ವಿಶ್ವದ ಅತಿ ಎತ್ತರದ ಶಿವ ದೇವಾಲಯ (World’s highest Shiva Temple) ಇದಾಗಿದೆ.
ಇದು ಉತ್ತರಾಖಂಡ್‌ನ ಚಂದ್ರಶಿಲಾ ಶಿಖರದ ಕೆಳಗೆ, ರುದ್ರಪ್ರಯಾಗ (Rudra Prayag) ಜಿಲ್ಲೆಯ ತುಂಗನಾಥ ಪರ್ವತ ಶ್ರೇಣಿಯಲ್ಲಿದೆ. ಇದು ಪಂಚ ಕೇದಾರಗಳಲ್ಲಿ ಮೂರನೇ ಕೇದಾರ ದೇವಾಲಯವಾಗಿದೆ.
ಈ ತುಂಗನಾಥ ದೇವಾಲಯವನ್ನು 5000 ವರ್ಷಗಳ ಹಿಂದೆ ಪಂಚ ಪಾಂಡವರಲ್ಲಿ ಮಧ್ಯಮನಾದ ಅರ್ಜುನನು ನಿರ್ಮಿಸಿದನು ಎಂದು ನಂಬಲಾಗಿದೆ.
ಇಲ್ಲಿ ಶಿವನ ಮುಖ್ಯ ಆಲಯದ ಜೊತೆಗೆ, ಪಾರ್ವತಿ, ಪಾಂಡವರು, ಕುಂತಿ, ದ್ರೌಪದಿ, ಗಣೇಶ, ಕುಬೇರ, ಡುಂಗ್ರಿ ದೇವಿ ಮತ್ತು ಧಾರುಡಿಯಾ ದೇವಿಗೆ ಅರ್ಪಿತವಾದ ಅನೇಕ ಸಣ್ಣ ದೇವಾಲಯಗಳಿವೆ.
ತುಂಗನಾಥ ದೇವಾಲಯವು ಸಾವಿರ ವರ್ಷಗಳ ಅಸ್ತಿತ್ವವನ್ನು ಹೊಂದಿದೆ, ಅದರ ಸಂಕೀರ್ಣವಾದ ರಚನೆ ಮತ್ತು ವಾಸ್ತುಶಿಲ್ಪದ ವೈಭವದಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ.ಈ ದೇವಾಲಯದಿಂದ ಹಿಮಾಲಯದ ಶಿಖರವು ಅದ್ಭುತವಾಗಿ ಕಾಣುತ್ತದೆ.
ತುಂಗನಾಥ ದೇವಾಲಯಕ್ಕೆ ಡೆಹ್ರಾಡೂನ್ ವಿಮಾನ ನಿಲ್ದಾಣದಿಂದ 232 ಕಿಮೀ ದೂರದಲ್ಲಿದೆ. 215 ಕಿ.ಮೀ. ದೂರದಲ್ಲಿರುವ ರಿಷಿಕೇಶ ರೈಲು ನಿಲ್ದಾಣವು ಹತ್ತಿರದ ರೈಲು ಮಾರ್ಗವಾಗಿದೆ.
ತುಂಗನಾಥ ದೇವಾಲಯಕ್ಕೆ ಚಾರಣದ ಮೂಲಕವೂ ತಲುಪಬಹುದು. ಚೋಪ್ಟಾ ದಿಂದ ಆರಂಭವಾಗುವ ಈ ಚಾರಣವು ದೇವಾಲಯವನ್ನು ತಲುಪಲು 3.5 ಕಿಮೀ ನಡೆಯಬೇಕು.
ಈ ಪ್ರದೇಶವು ಚಳಿಗಾಲದಲ್ಲಿ ಭಾರಿ ಹಿಮಪಾತವನ್ನು ಅನುಭವಿಸುತ್ತದೆ. ಈ ಸಮಯದಲ್ಲಿ ದೇವಾಲಯದ ದರ್ಶನ ಕಷ್ಟ. ಚಳಿಗಾಲದ ಸಂದರ್ಭದಲ್ಲಿ ಶಿವನ ಸಾಂಕೇತಿಕ ರೂಪವನ್ನು 19 ಕಿಮೀ ದೂರದ ಮುಕುನಾಥಕ್ಕೆ ಸ್ಥಳಾಂತರಿಸಲಾಗುತ್ತದೆ.
ಮುಕುನಾಥ ದೇವಾಲಯ (Mukunath Temple) ಚಾರಣವು ಸುಂದರವಾದ ಹಸಿರು ಹುಲ್ಲುಗಾವಲುಗಳು, ಮೋಡಿಮಾಡುವ ರೋಡೋಡೆಂಡ್ರಾನ್ ಪೊದೆಗಳು ಮತ್ತು ಸವಾಲಿನ ಕಲ್ಲಿನ ಭೂಪ್ರದೇಶಗಳನ್ನು ಒಳಗೊಂಡಿದೆ.
ಸಾಮಾನ್ಯವಾಗಿ ಈ ದೇವಾಲಯವನ್ನು ಹಿಮಪಾತದ (Snowfall) ಕಾರಣ ಚಳಿಗಾಲದಲ್ಲಿ ಮುಚ್ಚಲಾಗುತ್ತದೆ. ನಂತರ ಪ್ರಧಾನ ಕೇದಾರನಾಥ ದೇವಾಲಯದ ತೆರೆಯುವಿಕೆಯ ನಂತರ ತೆರೆಯಲಾಗುತ್ತದೆ.
ಈ ವರ್ಷ 2024 ರ ಮೇ 14 ರಂದು ತೆರೆಯಲಾಗುವುದು ಎಂದು ತುಂಗನಾಥ ದೇವಾಲಯದ ಪೋರ್ಟಲ್ ನಲ್ಲಿ ತಿಳಿಸಲಾಗಿದೆ. ತುಂಗನಾಥ ಮಂದಿರಕ್ಕೆ ಭೇಟಿ ನೀಡಲು ಏಪ್ರಿಲ್ ನಿಂದ ಜೂನ್ ವರೆಗೆ ಸೂಕ್ತ ಸಮಯವಾಗಿರುತ್ತದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.