ಮ್ಯಾಜಿಕ್ ತಾಣಗಳುವಿಂಗಡಿಸದವಿಸ್ಮಯ ವಿಶ್ವ

ಈ ಗ್ರಾಮದಲ್ಲಿ ಅವಳಿಗಳೇ ವಿಶೇಷ

ದೇಶದ ನಾನಾ ಭಾಗಗಳು ಒಂದಲ್ಲಾ ಒಂದು ರೀತಿಯ ವಿಶೇಷತೆಗಳನ್ನು ಹೊಂದಿರುತ್ತವೆ, ಕೆಲವೊಂದು ಸಾಮಾನ್ಯವಾಗಿರುತ್ತದೆ ಇನ್ನು ಕೆಲವೊಂದು ತೀರಾ ಭಿನ್ನ ಎನ್ನುವ ಹಾಗೆ ಇರುತ್ತದೆ.

ಅದೇ ರೀತಿ ಭಾರತದಲ್ಲೂ ಒಂದು ಗ್ರಾಮವಿದೆ ಅಲ್ಲಿಯೂ ಒಂದು ವಿಶೇಷತೆ ಇದೆ, ಇಲ್ಲಿನ ಈ ವಿಶೇಷತೆ ಆಗಿದ್ದು ಅವಳಿಗಳು ಈ ಗ್ರಾಮದಲ್ಲಿ ಹೆಚ್ಚು . ಈ ಕಾರಣಕ್ಕಾಗಿ ಈ ಗ್ರಾಮಕ್ಕೆ ವಿಶೇಷವಾದ ಹೆಸರೂ ಬಂದಿದೆ.

Twins Village

ಅವಳಿಗಳು ಹೆಚ್ಚಾಗಿ ಒಂದೋ ಎರಡೋ ಜೋಡಿಗಳು ನಮಗೆ ಕಣ್ಣ ಮುಂದೆ ನೋಡ ಸಿಗುತ್ತಾರೆ. ಆದರೆ ಊರಿಗೆ ಊರೆ ಅತೀ ಹೆಚ್ಚು ಅವಳಿಗಳು ಇರುವುದನ್ನು ನೋಡಿದ್ದೀರಾ.

ಕೇರಳ ರಾಜ್ಯದ (kerala ) ಮಲಪ್ಪುರದ ಕೊಡಿನಿ( kodinhi )ಅತೀ ಹೆಚ್ಚು ಸಂಖ್ಯೆಯ ಅವಳಿಗಳಿದ್ದಾರೆ. ಈ ಗ್ರಾಮವನ್ನು ‘ಅವಳಿ ಗ್ರಾಮ’ ಎಂದು (Twin Town). ಈ ಗ್ರಾಮವು ಪ್ರಸ್ತುತ 400 ಕೂ ಜೋಡಿ ಅವಳಿಗಳನ್ನು ಹೊಂದಿದೆ. ಇಲ್ಲಿ ಅತೀ ಹೆಚ್ಚು ಅವಳಿ ಮಕ್ಕಳು ಜನಿಸಲು ಕಾರಣ ಈ ಪ್ರದೇಶದಲ್ಲಿನ ನೀರಿನಲ್ಲಿ ಇರುವ ರಾಸಾಯನಿಕಗಳು ಎನ್ನುತ್ತಾರೆ ವಿಜ್ಞಾನಿಗಳು.

Kodinhi

ಪ್ರಪಂಚದ ಉಳಿದ ಭಾಗಗಳಲ್ಲಿ ಸರಾಸರಿ ದಾಖಲೆಯು 1000 ಹೆರಿಗೆಗೆ 6 ಅವಳಿಗಳು ಜನಿಸಿದರೆ, ಈ ಗ್ರಾಮದಲ್ಲಿ ಪ್ರತಿ 1000 ಹೆರಿಗೆಗೆ 42 ಅವಳಿ ಮಕ್ಕಳು ಜನಿಸುತ್ತಾರಂತೆ ಇದು ವಿಶ್ವದಲ್ಲೇ ಅತೀ ಹೆಚ್ಚು ಅವಳಿಗಳನ್ನು ಪಡೆದಿರುವ ಗ್ರಾಮ ಎಂದು ಪ್ರಸಿದ್ಧಿಯನ್ನೂ ಪಡೆದಿದೆ.

ನೀವು ಇದನ್ನು ಇಷ್ಟ ಪಡಬಹುದು:ಶಬರಿಮಲೆಗೆ ಹುಬ್ಬಳ್ಳಿಯಿಂದ ಬೆಂಗಳೂರು ಮಾರ್ಗವಾಗಿ 2 ವಿಶೇಷ ರೈಲು ಆರಂಭ; ಇಲ್ಲಿದೆ ವಿವರ

1940 ರಿಂದ ಅವಳಿಗಳ ಜನನ:

ಕೊಡಿನ್ಹಿಯಲ್ಲಿ ಅವಳಿ ಜನನದ ವಿದ್ಯಮಾನವು 1940 ರ ದಶಕದಲ್ಲಿ ಮೊದಲ ಬಾರಿಗೆ ಗಮನಕ್ಕೆ ಬಂದಿತು, ಆದರೆ 1990 ರ ದಶಕದ ಅಂತ್ಯದಲ್ಲಿ ಅವಳಿ ಜನನಗಳ ಸಂಖ್ಯೆಯು ಹೆಚ್ಚಾಗಲು ಆರಂಭವಾಯಿತು ಅಂದಿನಿಂದ ಇಂದಿನವರೆಗೆ ಜನನ ಪ್ರಮಾಣ ಹೆಚ್ಚುತ್ತಲೇ ಇದೆ .

Twins

150 ಕಿಮೀ ದೂರದಲ್ಲಿರುವ ಈ ಗ್ರಾಮದಲ್ಲಿ ಸುಮಾರು 2,000 ಕುಟುಂಬಗಳು ವಾಸವಾಗಿವೆ. 2017ರ ಲೆಕ್ಕಾಚಾರದ ಪ್ರಕಾರ ಈ ಕುಟುಂಬಗಳಲ್ಲಿ ಕನಿಷ್ಠ 400ಕ್ಕೂ ಹೆಚ್ಚು ಅವಳಿಗಳು ಇದ್ದಾರೆ ಎಂದು ಹೇಳಲಾಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button