ವಿಂಗಡಿಸದಸಂಸ್ಕೃತಿ, ಪರಂಪರೆ

ಶಬರಿಮಲೆ ಭಕ್ತರಿಗಾಗಿ ವಿಶೇಷ ವಂದೇ ಭಾರತ್ ರೈಲು ಆರಂಭ; ಇಲ್ಲಿದೆ ಸಂಪೂರ್ಣ ಮಾಹಿತಿ

ಶಬರಿಮಲೆಗೆ ಹೊರಡುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ಭಕ್ತರ ಅನುಕೂಲಕ್ಕಾಗಿ ದಕ್ಷಿಣ ರೈಲ್ವೆ ಇಲಾಖೆಯು ವಿಶೇಷ ವಂದೇ ಭಾರತ ರೈಲು ಸೇವೆಯನ್ನು ಆರಂಭಿಸಿದೆ.

ಉಜ್ವಲಾ ವಿ.ಯು.

ನವೆಂಬರ್ 17 ರಿಂದ ಶಬರಿಮಲೆಯಲ್ಲಿ ಮಂಡಲ-ಮಕರವಿಳಕ್ಕು ಋತುವು (Mandala-Makaravilakku Season) ಪ್ರಾರಂಭಗೊಂಡಿದೆ. ಡಿಸೆಂಬರ್ 27 ರಂದು ಮಂಡಲ ಪೂಜೆಯ ನಂತರ ದೇವಾಲಯವು ಸ್ವಲ್ಪ ಸಮಯದವರೆಗೆ ಮುಚ್ಚಲ್ಪಡುತ್ತದೆ.

ನಂತರ ಮಕರವಿಳಕ್ಕು ಋತುವಿಗಾಗಿ ಡಿಸೆಂಬರ್ 30 ರಂದು ಮತ್ತೆ ತೆರೆಯುತ್ತದೆ. ಪ್ರಸಿದ್ಧ ಮಕರವಿಳಕ್ಕು ಜನವರಿ 15, 2024 ರಂದು ನಡೆಯಲಿದೆ.

ಈ ಸಂದರ್ಭದಲ್ಲಿ ಬರುವ ಭಕ್ತರ ಸಂಖ್ಯೆ ಅಧಿಕ. ಈಗಾಗಲೇ ಶಬರಿಮಲೆಯಲ್ಲಿ (Sabarimala) ಅತಿ ಹೆಚ್ಚು ಜನ ಭಕ್ತರು ದಿನೇ ದಿನೇ ಭೇಟಿ ನೀಡುತ್ತಿದ್ದು, ಅವರ ಅನುಕೂಲಕ್ಕಾಗಿ ಈ ಉಪಕ್ರಮವನ್ನು ಜಾರಿಗೆ ತಂದಿದೆ.

ದಕ್ಷಿಣ ರೈಲ್ವೇಯು (South Railway) ಚೆನ್ನೈ ಮತ್ತು ಕೊಟ್ಟಾಯಂ ನಡುವೆ ವಿಶೇಷ ವಂದೇ ಭಾರತ್ ರೈಲು (Vande Bharath Special Train) ಸೇವೆಯನ್ನು ಮತ್ತು ಕಾಚೆಗುಡಾ ಮತ್ತು ಕೊಲ್ಲಂ ನಡುವೆ ವಿಶೇಷ ದರದ ರೈಲುಗಳು ಕಾರ್ಯ ನಿರ್ವಹಿಸುತ್ತಿವೆ.ಈ ವಿಶೇಷ ವಂದೇ ಭಾರತ ರೈಲು ನಿನ್ನೆ (ಡಿ.15)ಯಿಂದ ಆರಂಭಗೊಂಡಿದೆ.

ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ – ಕೊಟ್ಟಾಯಂ ವಂದೇ ಭಾರತ್ ಶಬರಿ ವಂದೇ ಭಾರತ್ ವಿಶೇಷ ರೈಲು (ಸಂಖ್ಯೆ 06151): ಇದು ಡಿಸೆಂಬರ್ 15, 17, 22, ಮತ್ತು 24 ರಂದು ಬೆಳಿಗ್ಗೆ 4.30 ಕ್ಕೆ ಚೆನ್ನೈನಿಂದ ಹೊರಟು, ಅದೇ ದಿನ ಸಂಜೆ 4.15 ಕ್ಕೆ ಕೊಟ್ಟಾಯಂ (Kottayam) ತಲುಪಲಿದೆ.

ಕೊಟ್ಟಾಯಂ – ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ವಂದೇ ಭಾರತ್ ಶಬರಿ ವಂದೇ ಭಾರತ ರೈಲು (ಸಂಖ್ಯೆ 06152): ಡಿಸೆಂಬರ್ 16, 18, 23 ಮತ್ತು 25 ರಂದು ಬೆಳಿಗ್ಗೆ 4.40 ಕ್ಕೆ ಕೊಟ್ಟಾಯಂ ನಿಲ್ದಾಣದಿಂದ ಹೊರಟು ಅದೇ ದಿನ ಸಂಜೆ 5.15 ಕ್ಕೆ ಚೆನ್ನೈ (Chennai) ತಲುಪಲಿದೆ.

ಇದು ಪೆರಂಬೂರ್, ಕಟ್ಪಾಡಿ, ಸೇಲಂ, ಈರೋಡ್, ತಿರುಪ್ಪೂರ್, ಪೊದನೂರು, ಪಾಲಕ್ಕಾಡ್, ತ್ರಿಶೂರ್, ಆಲುವಾ ಮತ್ತು ಎರ್ನಾಕುಲಂ ಉತ್ತರದಂತಹ 10 ನಿಲ್ದಾಣಗಳನ್ನು ಹೊಂದಿದೆ.

ವಂದೇ ಭಾರತ್ 8 ಬೋಗಿಗಳನ್ನು ಹೊಂದಿದೆ. ಕೇರಳದಲ್ಲಿ ಇದು ಮೂರನೇ ವಂದೇ ಭಾರತ್ ರೈಲು ಆಗಿದ್ದು, ಈಗಾಗಲೇ ಕಾಸರಗೋಡು- ತಿರುವನಂತಪುರಂ ಮಾರ್ಗದಲ್ಲಿ ಇಂತಹ ಎರಡು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳು ಸಂಚರಿಸುತ್ತಿವೆ.

ಇದಲ್ಲದೇ ಕ್ರಿಸ್‌ಮಸ್ ರಜೆಯ ಸಂದರ್ಭದಲ್ಲಿಯೂ ಚೆನ್ನೈ-ಕೊಯಮತ್ತೂರು-ಚೆನ್ನೈ ಮಾರ್ಗದಲ್ಲಿ ಮತ್ತೊಂದು ವಂದೇ ಭಾರತ್ ವಿಶೇಷ ರೈಲು ಆರಂಭಿಸುವ ನಿರೀಕ್ಷೆ ಇದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button