ದೂರ ತೀರ ಯಾನಮ್ಯಾಜಿಕ್ ತಾಣಗಳುವಿಂಗಡಿಸದ

ಕರ್ನಾಟಕದ ಮೂರು ಪಕ್ಷಿ ಸಂರಕ್ಷಿತ ಪ್ರದೇಶಗಳು ‘ರಾಮ್ಸರ್‌ ವೆಟ್‌ಲ್ಯಾಂಡ್‌’ ಪಟ್ಟಿಗೆ ಸೇರ್ಪಡೆ

ದೇಶದ ಐದು ತಾಣಗಳನ್ನು ಹೊಸದಾಗಿ “ರಾಮ್ಸರ್ ವೆಟ್ ಲ್ಯಾಂಡ್” (Ramsar Wetland tag) ಪಟ್ಟಿಗೆ ಸೇರಿಸಲಾಗಿದೆ. ಇವುಗಳಲ್ಲಿ ಕರ್ನಾಟಕದ ಮೂರು ಪಕ್ಷಿ ಸಂರಕ್ಷಿತ ಪ್ರದೇಶಗಳು ಮಾನ್ಯತೆ ಪಡೆದಿರುವುದು ವಿಶೇಷ.

ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ, ಗದಗ ಜಿಲ್ಲೆಯ ಮಾಗಡಿ ಕೆರೆ ಹಾಗೂ ವಿಜಯನಗರ ಜಿಲ್ಲೆಯ ಅಂಕಸಮುದ್ರ ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕರ್ನಾಟಕದ ತಾಣಗಳಾಗಿವೆ.

ಈ ಮೂರು ಪ್ರದೇಶಗಳ ಸೇರ್ಪಡೆಯು ಕರ್ನಾಟಕದ ರಾಮ್ಸರ್ ತಾಣಗಳ (Ramsar site) ಪಟ್ಟಿಯನ್ನು ನಾಲ್ಕಕ್ಕೆ ಏರಿಸಿದೆ. ರಂಗನತಿಟ್ಟು ಪಕ್ಷಿಧಾಮವನ್ನು 2022 ರಲ್ಲಿ ಈ ಪಟ್ಟಿಗೆ ಸೇರಿಸಿದ್ದು, ಪಟ್ಟಿಯಲ್ಲಿ ಸೇರ್ಪಡೆಗೊಂಡ ಮೊದಲ ತಾಣ ಇದಾಗಿದೆ.

ಈ ಕುರಿತು ಬುಧವಾರ ಅಧಿಕೃತ ಪ್ರಕಟಣೆ ನೀಡಿದ ರಾಮ್ಸರ್ ಸಮಾವೇಶದ ಪ್ರಧಾನ ಕಾರ್ಯದರ್ಶಿ ಡಾ. ಮುಸೊಂಡಾ ಮುಂಬಾ ಅವರು ಕರ್ನಾಟಕದ ಮೂರು ತಾಣಗಳ ಹೊರತಾಗಿ, ತಮಿಳುನಾಡಿನ ಎರಡು ತಾಣಗಳನ್ನು ಸಹ ಈ ಪಟ್ಟಿಗೆ ಸೇರಿಸಿದೆ.

ತಮಿಳುನಾಡಿನ ಕರೈವೆಟ್ಟಿ ಪಕ್ಷಿಧಾಮ ಮತ್ತು ಲಾಂಗವುಡ್ ಶೋಲಾ ಮೀಸಲು ಅರಣ್ಯ ಇವು ರಾಮ್ಸರ್ ಜೌಗು ಪ್ರದೇಶ ಪಟ್ಟಿಗೆ ಸೇರಿದ ಹೊಸ ಪ್ರದೇಶಗಳಾಗಿವೆ.

ಈ ಮೊದಲು ಭಾರತದಲ್ಲಿ 75 ತಾಣಗಳನ್ನು ರಾಮ್ಸರ್‌ ಜೌಗು ಪ್ರದೇಶಗಳ ಪಟ್ಟಿಗೆ ಸೇರಿಸಲಾಗಿತ್ತು. ಸದ್ಯ ಆ ಸಂಖ್ಯೆ 80ಕ್ಕೆ ಏರಿಕೆಯಾಗಿದೆ.

ಉತ್ತರ ಕನ್ನಡದ ಅಘನಾಶಿನಿ ನದಿಯು (Aghanashini River) ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಪಶ್ಚಿಮಾಭಿಮುಖವಾಗಿ ಅರಬ್ಬೀ ಸಮುದ್ರದ ಕಡೆಗೆ ಹರಿಯುತ್ತದೆ. ಇದು 4,800 ಹೆಕ್ಟೇರ್ ಗಳಷ್ಟು ಹಬ್ಬಿದೆ. ಹಾಗೂ 66ಕ್ಕೂ ಹೆಚ್ಚು ಜಲಪಕ್ಷಿಗಳಿಗೆ ಆಶ್ರಯ ತಾಣವಾಗಿದೆ.

ಗದಗ (Gadag) ಜಿಲ್ಲೆಯ ಮಾಗಡಿ ಕೆರೆ ಪಕ್ಷಿಧಾಮ (Magadi Kere Conservation Reserve) ಅಪಾರವಾದ ಜಲಪಕ್ಷಿಗಳಿಗೆ ನೆಲೆಯಾಗಿದೆ.

ಬಾರ್-ಹೆಡೆಡ್ ಗೂಸ್‌ ಸೇರಿದಂತೆ ಸುಮಾರು 10 ಸಾವಿರ ವಿದೇಶಿ ಪಕ್ಷಿಗಳಿಗೆ ಚಳಿಗಾಲದಲ್ಲಿ ಆಶ್ರಯ ನೀಡುತ್ತದೆ. ಈ ತಾಣಕ್ಕೆ ಪ್ರಮುಖ ಪಕ್ಷಿ ಪ್ರದೇಶ (IBA) ಸ್ಥಾನ ನೀಡಲಾಗಿದೆ.

ಮೂರನೇ ತಾಣವಾದ ವಿಜಯನಗರ (Vijayanagara) ಜಿಲ್ಲೆಯ ಅಂಕಸಮುದ್ರ ಪಕ್ಷಿ ಸಂರಕ್ಷಣಾ ಮೀಸಲು (Ankasamudra Bird Conservation Reserve) ತಾಣವು ನೂರಾರು ಸಸ್ಯ, ಸಸ್ತನಿಗಳು, ಪಕ್ಷಿಗಳು ವಿವಿಧ ಜೈವ ವೈವಿಧ್ಯತೆಯನ್ನು ಹೊಂದಿರುವ ವಿಶಿಷ್ಟ ಜಲಪ್ರದೇಶವಾಗಿದೆ.

ಈ ಮೂರು ತಾಣಗಳಿಗೆ ರಾಮ್ಸರ್‌ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದಕ್ಕೆ ಜೀವ ವೈವಿಧ್ಯ ಸಂಶೋಧಕ ಮಂಜುನಾಥ ನಾಯಕ್‌ ಖುಷಿ ವ್ಯಕ್ತಪಡಿಸುತ್ತಿದ್ದಾರೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button