ನಮ್ಮ ಮೆಟ್ರೋ (Namma Metro)ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಗುಡ್ ನ್ಯೂಸ್ ನೀಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಫೆ.4ರಂದು ಬೆಳಿಗ್ಗೆ 4.30ರಿಂದು ಎಲ್ಲಾ ನಾಲ್ಕು ಟರ್ಮಿನಲ್ ಗಳಿಂದ ಮೆಟ್ರೋ ರೈಲು ಕಾರ್ಯಾಚರಣೆ ಆರಂಭಿಸಲಿದೆ.
ವಿಶ್ವಕ್ಯಾನ್ಸರ್ ದಿನದ( world cancer)ಪ್ರಯುಕ್ತ ಕ್ಯಾನ್ವಾಕ್ ಮತ್ತು ಮ್ಯಾರಥಾನ್ ಆಯೋಜನೆ ಮಾಡಿದ್ದು, ಈ ಕಾರ್ಯಕ್ರಮದಲ್ಲಿ ನಗರದ ಸಾಕಷ್ಟು ಜನ ಸಾರ್ವಜನಿಕರು ಭಾಗಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಸಾರ್ವಜನಿಕರ ಸುಗಮ ಪ್ರಯಾಣಕ್ಕಾಗಿ ಬೆಳಿಗ್ಗೆ 4.30 ಕ್ಕೆ ಮೆಟ್ರೋ ಸೇವೆ ಆರಂಭ ಮಾಡಲಾಗುತ್ತಿದೆ.
ನೀವು ಇದನ್ನೂ ಓದಬಹುದು:ಮೊದಲ ಪ್ರಯಾಣ ಆರಂಭಿಸಿದ ವಿಶ್ವದ ಅತಿ ದೊಡ್ಡ ಕ್ರೂಸ್ ಹಡಗು
ಸಾಮಾನ್ಯವಾಗಿ ಭಾನುವಾರದಂದು ಬೆಳಗ್ಗೆ 7 ಗಂಟೆಗೆ ಬಿಎಂಆರ್‌ಸಿಎಲ್ ಮೆಟ್ರೋ ಸೇವೆ ಆರಂಭವಾಗುತ್ತಿತ್ತು. ಸದ್ಯ ಫೆಬ್ರವರಿ 4 ರಂದು ಎರಡುವರೆ ಗಂಟೆ ಮುಂಚಿತವಾಗಿ ಮೆಟ್ರೋ ಸೇವೆ ಆರಂಭವಾಗಲಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.