ಈ ತಿಂಡಿಗಳ ಜೊತೆಯಲ್ಲಿಯೇ ಇದೆ ಅವುಗಳ ಹುಟ್ಟೂರಿನ ಹೆಸರು
ಜಗತ್ತಿನ ಬೇರೆ ಬೇರೆ ಭಾಗದ ಆಹಾರ ಪ್ರಿಯರ ಮನ ಸೆಳೆದಿರುವ ಹಲವು ಖಾದ್ಯಗಳು ನಮ್ಮ ಕರ್ನಾಟಕದ ಮೂಲದ್ದು ಎನ್ನುವುದು ನಮಗೆ ನಿಜಕ್ಕೂ ಹೆಮ್ಮೆಯ ವಿಚಾರ.
ಅಂತಹ ಕೆಲವು ಖಾದ್ಯಗಳಿಗೆ ಆ ಊರಿನ ಹೆಸರು ಕೂಡ ಜೊತೆ ಜೊತೆಯಲ್ಲಿಯೇ ಸೇರಿಕೊಂಡಿದೆ. ಅಂತಹ ಕೆಲವು ತಿಂಡಿಗಳ ಕುರಿತಾದ ಬರಹ ನಿಮಗಾಗಿ
ಮಂಗಳೂರು ಬನ್ಸ್
ಮಂಗಳೂರು ಬನ್ಸ್ (Mangaluru Buns) ದಕ್ಷಿಣ ಕನ್ನಡದ (Dakshina Kannada) ಜನಪ್ರಿಯ ಬೆಳಗ್ಗಿನ ತಿಂಡಿ ಅಥವಾ ಟೀ ಸಮಯದ ತಿಂಡಿಯಾಗಿದೆ.
ಜಿಲ್ಲೆಯ ಹೋಟೆಲ್ಗಳಲ್ಲಿ ಸರ್ವೇ ಸಾಮಾನ್ಯವಾಗಿ ಸಿಗುವ ಬನ್ಸ್, ಸ್ವಲ್ಪ ಸಿಹಿ ಮಿಶ್ರಿತ ಎಣ್ಣೆಯಲ್ಲಿ ಕರಿದು ಮಾಡುವ ತಿಂಡಿ… ಈ ತಿಂಡಿಯ ರುಚಿಗೆ ಮನಸೋಲಾದ ಮಂದಿಯೇ ಇಲ್ಲ.ಸ್ಥಳಿಯರಿಂದಲೇ ರೆಡಿಯಾಗಿದೆ ಈ ತಿಂಡಿ.
ಹೌದು ಬಾಳೆಹಣ್ಣುಗಳು(Banana )ಸೇಲ್ ಆಗದೇ ಉಳಿದು ಕೊಳೆತು ಹೋಗ್ತಿದ್ವಂತೆ. ಅದಕ್ಕೆ ಅದರಿಂದ ಏನಾದ್ರೂ ತಿಂಡಿ ಮಾಡಬೇಕು ಎಂದು ಈ ಬನ್ಸ್ ರೆಡಿ ಮಾಡಿದ್ರು. ಇದು ಬನ್ ರೀತಿ ಉಬ್ಬಿಕೊಂಡಿದ್ರಿಂದ, ಇದಕ್ಕೆ ಮಂಗಳೂರು ಬನ್ಸ್ ಎಂದು ಹೆಸರಿಡಲಾಯ್ತಂತೆ.
ಧಾರವಾಡ ಪೇಡ(Dharwad Peda)
ಧಾರವಾಡ ಪೇಡ(Dharwad Peda)ಇದು ಧಾರವಾಡದಲ್ಲಿ(Dharwad )ಹುಟ್ಟಿ ಜಗತ್ತಿನೆಲ್ಲೆಡೆ ಪ್ರಸಿದ್ದಿಯನ್ನು ಪಡೆದ ಸಿಹಿ ತಿಂಡಿ..
ಅದೆಷ್ಟರ ಮಟ್ಟಿಗೆ ಪೇಡ ಫೇಮಸ್ ಅಂತಾದ್ರೆ ಧಾರವಾಡವನ್ನು ಪೇಡಾ ನಗರಿ ಎಂದು ಕರೆಯುವ ಮಟ್ಟಿಗೆ.ಕರುನಾಡಿನ ಈ ತಿಂಡಿಗೆ ಸರಿ ಸುಮಾರು 170ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ.
ಠಾಕೂರ ಪೇಡಾ” ಎಂದು ಮೊದಲು ಕರೆಯಲ್ಪಡುತ್ತಿದ್ದ ಧಾರವಾಡದ ಪೇಡಕ್ಕೆ ಸುಮಾರು ಒಂದೂವರೆ ಶತಮಾನದಷ್ಟು ಸುದೀರ್ಘ ಇತಿಹಾಸವಿದೆ.
ಬೇರೆ ಪೇಡಾಗಳಿಗೆ ಹೋಲಿಸಿದರೆ ಇದು ತೀರ ಭಿನ್ನ. ಆದರೆ ತನ್ನದೇ ಆದ ವಿಶಿಷ್ಠ ರುಚಿ ಮತ್ತು ಗುಣಕ್ಕೆ ಹೆಸರುಗಳಿಸಿದೆ.
ಶತಮಾನಗಳ ಹಿಂದೆ ಉತ್ತರ ಭಾರತದ ಲಖ್ನೋ(Lucknow )ನಗರದಿಂದ ವಲಸೆಬಂದ ‘ಥಾಕೂರ್ ಪರಿವಾರ’, ಜೀವನೋಪಾಯಕ್ಕಾಗಿ ಪಾರಂಪರಿಕವಾಗಿ ಚಾಲ್ತಿಯಲ್ಲಿದ್ದ ‘ಪೇಡಾ’ ತಯಾರಿಕೆಯನ್ನು ಧಾರವಾಡದಲ್ಲೂ ಮುಂದುವರೆಸಿದರು.
ಮೊದಲು ‘ಥಾಕೂರ್ ಫೇಡ’ ಎಂದು ಹೇಳಿ ಮಾರುತ್ತಿದ್ದ ಸಿಹಿತಿನಿಸು, ಕಾಲಕ್ರಮೇಣದಲ್ಲಿ ‘ಧಾರವಾಡ್ ಪೇಡ’ ಎಂಬ ಹೆಸರಿನಿಂದ ಜನಪ್ರಿಯಗೊಂಡಿತು.
ಮೈಸೂರು ಪಾಕ್(Mysore Pak)
ಮೈಸೂರು ಪಾಕ್ ಜನ್ಮ ತಾಳಿದ್ದು ಮೈಸೂರಿನ ಅರಮನೆಯ(Mysore Palace) ಪಾಕಶಾಲೆಯಲ್ಲಿ ಎಂದರೆ ಅಚ್ಚರಿಯಾಗಬಹುದು. ಅದು ಹೇಗೆ ಜನ್ಮ ತಾಳಿತು ಎಂಬುವುದು ಕೂಡ ಕುತೂಹಲಕಾರಿಯೇ;
ಇಷ್ಟಕ್ಕೂ ಮೈಸೂರ್ ಪಾಕ್ ನಂತಹ ಸಿಹಿ ತಿನಿಸನ್ನು ತಯಾರು ಮಾಡಿದವರು ಮೈಸೂರು ಅರಮನೆಯ ಪಾಕಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಕಾಕಾಸುರ ಮಾದಪ್ಪನವರು.
ನೀವು ಇದನ್ನೂ ಇಷ್ಟ ಪಡಬಹುದು:ಕರ್ನಾಟಕದ ಕೆಲವು ವೈವಿಧ್ಯಮಯ ಆಹಾರ ಪದ್ಧತಿಗಳಿವು
ಮೈಸೂರನ್ನು ಪ್ರತಿನಿಧಿಸುವ ಮೈಸೂರ್ ಪಾಕ್ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಿದೆ. ವಿಶ್ವದ ಸ್ಟ್ರೀಟ್ ಪುಡ್ನಲ್ಲಿ 14ನೇ ಸ್ಥಾನ ಪಡೆದಿಡೆ.
ಬೆಳಗಾವಿ ಕುಂದಾ(Belegavi Kunda)
ಊರಿನ ಜೊತೆ ಜೊತೆಯಲ್ಲಿಯೇ ಹೆಸರು ಬೆಸೆದುಕೊಂಡು ಬಂದಿರುವ ಮತ್ತೊಂದು ಖಾದ್ಯ ಅಂದ್ರೆ ಅದು ಬೆಳಗಾವಿ ಕುಂದಾ. ಅಲ್ಲಿನ ಸ್ಪೆಷಲ್ ಕುಂದಾದ ಕಾರಣಕ್ಕಾಗಿಯೆ ಬೆಳಗಾವಿಯನ್ನು ಕುಂದಾ ನಗರಿ ಎಂದು ಕರೆಯುತ್ತಾರೆ.
ದಾವಣಗೆರೆ ಬೆಣ್ಣೆ ದೋಸೆ(Davangere benne dosa)
ದಾವಣಗೆರೆ ಬೆಣ್ಣೆ ದೋಸೆಯು ಕರ್ನಾಟಕದ ದಾವಣಗೆರೆ ಜಿಲ್ಲೆಯಲ್ಲಿ ಪ್ರಸಿಧ್ಧಿ ಹೊಂದಿದೆ. ದಾವಣಗೆರೆ ಬೆಣ್ಣೆ ದೋಸೆ ಅಥವಾ ಬೆಣ್ಣೆ ದೋಸೆ ಒಂದು ರೀತಿಯ ದೋಸೆಯಾಗಿದ್ದು ಅದರ ಮೂಲವು ಕರ್ನಾಟಕದ ದಾವಣಗೆರೆ ಜಿಲ್ಲೆಯಾಗಿದೆ.
ಬೆಳಗಾವಿಯ ರಾಮದುರ್ಗ ತಾಲೂಕಿನಿಂದ ಕುಟುಂಬವೊಂದು ದಾವಣಗೆರೆ ವಲಸೆ ಬಂದಿತ್ತು. ಈ ಕುಟುಂಬದ ಚೆನ್ನಮ್ಮ ಎಂಬ ಮಹಿಳೆ ತನ್ನ ಮಕ್ಕಳ ಜೊತೆ ದೋಸೆ, ಚಟ್ನಿ, ಆಲೂಗಡ್ಡೆ ಪಲ್ಯ ತಯಾರಿ ಮಾರಾಟ ಮಾಡಲು ಆರಂಭಿಸಿದರು.
ಮೊದಲು ಚೆನ್ನಮ್ಮ ರಾಗಿ ಹಿಟ್ಟಿನ ದೋಸೆ ಮಾಡುತ್ತಿದ್ದರು. 1938 ರ ಹೊತ್ತಿಗೆ ಚೆನ್ನಮ್ಮ ಅವರ ಮಕ್ಕಳಾದ ಶಾಂತಪ್ಪ ಮತ್ತು ಮಹದೇವಪ್ಪ ಅವರು ಅಕ್ಕಿ ಹಿಟ್ಟಿನ ದೋಸೆ ಮಾಡಲು ಶುರು ಮಾಡಿದರು. ಬೆಣ್ಣೆ ಬೆರೆಸಿದ ಬಿಸಿ ಬಿಸಿ ದೋಸೆಗೆ ದಾಲ್ ಸಾಥ್ ಕೊಡ್ತಿತ್ತು. ಮುಂದೆ ಇದೇ ಬೆಣ್ಣೆ ದೋಸೆ ಜಗತ್ಪ್ರಸಿದ್ಧವಾಯಿತು.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.