ವಿಶ್ವದ ಮೊದಲ ಕಪ್ಪು ಹುಲಿ ಸಫಾರಿ ಆರಂಭಿಸಲು ಸಜ್ಜಾಗಿದೆ ಒಡಿಶಾ;
ಸಿಮಿಲಿಪಾಲ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಾತ್ರ ಕಂಡು ಬರುವ ಮೆಲನಿಸ್ಟಿಕ್ ಹುಲಿಗಳನ್ನು (ಕಪ್ಪು ಹುಲಿ) ವೀಕ್ಷಿಸಲು ಪ್ರವಾಸಿಗರಿಗೆ ಯೋಗ್ಯವಾಗುವಂತೆ ಒಡಿಶಾ ಸರ್ಕಾರ “ವಿಶ್ವದ ಮೊದಲ ಮೆಲನಿಸ್ಟಿಕ್ ಹುಲಿ ಸಫಾರಿ”ಯನ್ನು ಸ್ಥಾಪಿಸುವುದಾಗಿ ಘೋಷಿಸಿದೆ.
ಮೆಲನಿಸ್ಟಿಕ್ ಹುಲಿಗಳು (Melanistic Tigers) ತಮ್ಮ ದಟ್ಟವಾದ ಕಪ್ಪು ಪಟ್ಟಿಗಳಿಂದಾಗಿ ಸಾಮಾನ್ಯ ಹುಲಿಗಳಿಗಿಂತ ಭಿನ್ನವಾಗಿದೆ.
ಇವು ಒಡಿಶಾದ ಸಿಮಿಲಿಪಾಲ್ ಟೈಗರ್ ರಿಸರ್ವ್ ನಲ್ಲಿ (similipal tiger reserve) ಮಾತ್ರ ಕಂಡು ಬರುವ ಹುಲಿಗಳಾಗಿವೆ.
ಈ ಅಪರೂಪದ ಹುಲಿಗಳನ್ನು ನೋಡಬಯಸುವ ಪ್ರವಾಸಿಗರಿಗೆ ಅನುಕೂಲವಾಗಲು ಮತ್ತು ಒಡಿಶಾ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಿಂದ ಕಪ್ಪು ಹುಲಿ ಸಫಾರಿಯನ್ನು (Black Tiger Safari) ಆಯೋಜಿಸಲು ಸರ್ಕಾರ ಮುಂದಾಗಿದೆ.
ಇತ್ತೀಚಿಗೆ ಒಡಿಶಾ (Odisha) ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಈ ವಿಶಿಷ್ಟ ಸಫಾರಿಯನ್ನು ಮಯೂರ್ಭಂಜ್ ಜಿಲ್ಲೆಯ ಬರಿಪಾಡಾ ಬಳಿ ಸ್ಥಾಪಿಸಲಾಗುವುದು ಎಂದು X ಖಾತೆಯಲ್ಲಿ ಅಧಿಕೃತವಾಗಿ ಘೋಷಿಸಿದರು.
ಪ್ರಸ್ತಾವಿತ ಸಫಾರಿ ಸ್ಥಳವು ಬರಿಪಾಡಾ ಬಳಿ 200 ಹೆಕ್ಟೇರ್ ನಷ್ಟು ವ್ಯಾಪಿಸಿದ್ದು, ರಾಷ್ಟ್ರೀಯ ಹೆದ್ದಾರಿ-18 ರ ಪಕ್ಕದಲ್ಲಿ ಆಯಕಟ್ಟಿನ ಸ್ಥಳದಲ್ಲಿದೆ.
ಈ ಪ್ರದೇಶದ ಹೊರಗೆ, 100 ಹೆಕ್ಟೇರ್ಗಳನ್ನು ಪ್ರದರ್ಶನ ವಲಯಕ್ಕೆ ಮೀಸಲಿಡಲಾಗುತ್ತದೆ.
ಉಳಿದ ಸ್ಥಳವನ್ನು ಪಶು ವೈದ್ಯಕೀಯ ಸೌಲಭ್ಯಗಳು, ರಕ್ಷಣಾ ಕೇಂದ್ರ, ಸಿಬ್ಬಂದಿ ಸೌಕರ್ಯಗಳು ಮತ್ತು ಸಂದರ್ಶಕರ ಸೇವೆಗಳು ಸೇರಿದಂತೆ ಅಗತ್ಯ ಮೂಲಸೌಕರ್ಯಕ್ಕಾಗಿ ಬಳಸಿಕೊಳ್ಳಲಾಗುತ್ತದೆ.
2,750 ಚದರ ಕಿ.ಮೀ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಸಿಮಿಲಿಪಾಲ್ ಹುಲಿ ಸಂರಕ್ಷಿತ ಪ್ರದೇಶವು ರಾಜ್ಯದ ಶ್ರೀಮಂತ ಜೀವವೈವಿಧ್ಯತೆಕ್ಕೆ ಸಾಕ್ಷಿಯಾಗಿದೆ. ಇದರ ವಿಸ್ತೀರ್ಣದಲ್ಲಿ 12 ನದಿಗಳು ಹರಿಯುತ್ತವೆ.
50 ಕ್ಕೂ ಹೆಚ್ಚು ಸಸ್ತನಿ ಜಾತಿಗಳು, 300 ಏವಿಯನ್ ಜಾತಿಗಳು, 60 ಸರೀಸೃಪ ಪ್ರಭೇದಗಳು ಮತ್ತು ಹೆಚ್ಚಿನ ವಿವಿಧ ಜಾತಿಯ ಜೀವಿಗಳಿಗೆ ಸಂರಕ್ಷಣೆಯನ್ನು ಒದಗಿಸುವ ತಾಣ ಇದಾಗಿದೆ.
ಒಡಿಶಾದ ಈ ವಿಶಿಷ್ಟ ಯೋಜನೆಯು ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸುವುದಲ್ಲದೇ, ಬೇರೆ ರಾಜ್ಯಗಳಿಗೂ ಸಹ ಜೀವ ವೈವಿಧ್ಯತೆಯನ್ನು ಸಂರಕ್ಷಿಸಲು ಮಾದರಿಯಾಗಲಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.