ಕೇವಲ 11 ದಿನದಲ್ಲಿ ಅಯೋಧ್ಯೆಗೆ 25 ಲಕ್ಷ ಭಕ್ತರು
ಅಯೋಧ್ಯೆಯಲ್ಲಿ(Ayodhye )ಜನವರಿ 22 ರಂದು ಬಾಲಕರಾಮ ವಿರಾಜಮಾನನಾಗಿದ್ದಾನೆ. ಈ ಮೂಲಕ ಕೋಟ್ಯಂತರ ಹಿಂದೂ ಭಕ್ತರ ದಶಕಗಳ ಕಾಯುವಿಕೆ ಕೊನೆಗೊಂಡಿದೆ.
ರಾಮ ಮಂದಿರ(Ram Mandir) ಉದ್ಘಾಟನೆಯಾದ ಮಾರನೆಯ ದಿನದಿಂದ ದೇವ ನಗರಿ ಪ್ರವಾಸಿಗರಿಗೆ ಮುಕ್ತವಾಗಿತ್ತು. ಆ ಬಳಿಯ ರಾಮನೂರಿತ್ತ ಧಾವಿಸಿ ಬರುತ್ತಿದ್ದು, ನಿತ್ಯ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಮರ್ಯಾದಾ ಪುರುಷೋತ್ತಮ ನೋಡಲು ಆಗಮಿಸುತ್ತಿದ್ದಾರೆ.
ರಾಮ ಮಂದಿರ ಉದ್ಘಾಟನೆಯಾದ ವಾರದೊಳಗೆ ಸರಿ ಸುಮಾರು 20 ಲಕ್ಷ ಜನ ಭೇಟಿ ನೀಡಿದರು ಅಂತ ಇತ್ತೀಚೆಗಷ್ಟೇ ವರದಿಯಾಗಿತ್ತು. ಇದೀಗ ಆ ಸಂಖ್ಯೆ 25 ಲಕ್ಷದ ಗಡಿ ದಾಟಿದೆ.
ʻಪ್ರಾಣ ಪ್ರತಿಷ್ಠಾʼ ಕಾರ್ಯ ನಡೆದು ಹನ್ನೊಂದು ದಿನ ಕಳೆದಿವೆ. 11 ದಿನಗಳಲ್ಲಿ ಸುಮಾರು 25 ಲಕ್ಷ ಭಕ್ತರು ರಾಮಜನ್ಮಭೂಮಿಗೆ ಭೇಟಿ ನೀಡಿದ್ದಾರಂತೆ. ಅಲ್ಲದೆ, ದೇವಾಲಯದಲ್ಲಿ ಸಂಗ್ರಹವಾಗಿರುವ ಕಾಣಿಕೆ ಮೌಲ್ಯ ಕೂಡ ಕೋಟಿ ದಾಟಿದೆ.
ನೀವು ಇದನ್ನು ಇಷ್ಟ ಪಡಬಹುದು:ಅಯೋಧ್ಯೆಗೆ ಭೇಟಿ ನೀಡುವ ಪ್ರವಾಸಿಗರಿಗಾಗಿ “ದಿವ್ಯ ಅಯೋಧ್ಯಾ” ಆಪ್ ಬಿಡುಗಡೆ;
ಕಾಣಿಕೆಗಳು ಮತ್ತು ಕಾಣಿಕೆಗಳ ಮೌಲ್ಯ ₹ 11 ಕೋಟಿ ದಾಟಿದೆ ಎನ್ನಲಾಗುತ್ತಿದೆ. ಸುಮಾರು 8 ಕೋಟಿ ರೂ.ಗಳ ಗಣನೀಯ ಭಾಗವು ಗರ್ಭಗುಡಿಗೆ ಹೋಗುವ ದರ್ಶನ ಮಾರ್ಗದಲ್ಲಿ ಆಯಕಟ್ಟಿನ ರೀತಿಯಲ್ಲಿ ಇರಿಸಲಾದ ದೇಣಿಗೆ ಪೆಟ್ಟಿಗೆಗಳಲ್ಲಿ ಹಣ ಸಂಗ್ರಹವಾಗಿದೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ ಹೇಳಿದೆ. ಇದಲ್ಲದೆ ಆನ್‌ಲೈನ್‌ನಲ್ಲಿ ಪೂಜೆ ಸಲ್ಲಿಕೆ ರೂಪದಲ್ಲಿ ರೂ 3.50 ಕೋಟಿಗಳನ್ನು ಸಂಗ್ರಹಿಸಲಾಗಿದೆ.
ಮುಂದಿನ ದಿನಗಳಲ್ಲಿ ಅಯೋಧ್ಯೆಯು ಜಗತ್ತಿನ ನಂ .1 ಪ್ರವಾಸಿ ತಾಣದ ಪಟ್ಟಿಗೆ ಸೇರಲಿದೆ ಅಂತಲೇ ಬಿಂಬಿತವಾಗುತ್ತಿದ್ದೆ. ತಿರುಪತಿ ತಿಮ್ಮಪ್ಪನಿಗೆ ಮೀರಿಸಿ ಅಯೋಧ್ಯೆಯಲ್ಲಿ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಬಹುದು ಎನ್ನಲಾಗುತ್ತಿದೆ. ಅಲ್ಲದೆ ವರ್ಷದ ಅಂತ್ಯಕ್ಕೆ 5 ಕೋಟಿ ದಾಟಬಹುದು ಎಂದು ಅಂದಾಜಿಸಲಾಗಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.