ವಿಂಗಡಿಸದ

ಬೆಂಗಳೂರಿನಲ್ಲಿ ಇರುವ 5 ರೊಮ್ಯಾಂಟಿಕ್ ತಾಣಗಳು:

ಇನ್ನೇನು ಪ್ರೇಮಿಗಳ ದಿನಕ್ಕೆ ಕೇವಲ ಒಂದು ದಿನ ಬಾಕಿ ಇದೆ. ನೀವು ಬೆಂಗಳೂರಿನ (Bengaluru) ಬಳಿ ಇದ್ದು, ವ್ಯಾಲೆಂಟೈನ್ಸ್ ಡೇ ಎಲ್ಲಿ ಆಚರಿಸುವುದು ಎಂಬ ಪ್ರಶ್ನೆ ಇದ್ದರೆ, ಇಲ್ಲಿದೆ ಉತ್ತರ.

ವ್ಯಾಲೆಂಟೈನ್ಸ್ ಡೇ (Valentine’s Day) ದಿನ ಬೆಂಗಳೂರಿನ ಸುತ್ತಮುತ್ತ ಈ ಸ್ಥಳಗಳಲ್ಲಿ ನಿಮ್ಮ ಸಂಗಾತಿಯೊಂದಿಗೆ ಒಳ್ಳೆಯ ಸಮಯವನ್ನು ಯಾವುದೇ ನಿರ್ಬಂಧವಿಲ್ಲದೇ ಆಚರಿಸಬಹುದು.

ಬೆಂಗಳೂರಿನ 5 ರೊಮ್ಯಾಂಟಿಕ್ ತಾಣಗಳ (Romantic Destinations) ಮಾಹಿತಿ ಇಲ್ಲಿದೆ.

1.ನಂದಿ ಬೆಟ್ಟ: ( Nandi Hills)

“ನಂದಿ ಬೆಟ್ಟ” ಬೆಂಗಳೂರಿನ ಜನಪ್ರಿಯ ರೊಮ್ಯಾಂಟಿಕ್ ತಾಣಗಳಲ್ಲಿ ಒಂದು. ಇದು ಬೆಂಗಳೂರು ನಗರದಿಂದ ಸುಮಾರು 60 ಕಿ.ಮೀ ದೂರವಿದೆ. ನಂದಿ ಬೆಟ್ಟ ಪ್ರವಾಸಿಗರ ನೆಚ್ಚಿನ ಸೂರ್ಯೋದಯ ತಾಣವಾಗಿದೆ.

ಪ್ಯಾರಾಗ್ಲೈಡಿಂಗ್ ಮತ್ತು ಟ್ರೆಕ್ಕಿಂಗ್ ನಂತಹ ಸಾಹಸ ಚಟುವಟಿಕೆಗೂ ಇದು ಉತ್ತಮ ತಾಣ. ನಿಮ್ಮ ಸಂಗಾತಿಯೊಂದಿಗೆ ಈ ಬೆಟ್ಟದಲ್ಲಿ ಸುಂದರ ಸಮಯವನ್ನು ಸಮ್ಮೋಹಕ ಸೂರ್ಯೋದಯದೊಂದಿಗೆ, ತಂಪಾದ ತಂಗಾಳಿಯೊಂದಿಗೆ ಕಳೆಯಿರಿ.

2. ಲಾಲ್ ಬಾಗ್ ಬೊಟಾನಿಕಲ್ ಗಾರ್ಡನ್: (Lalbagh Botanical Garden)

ನೀವು ನಿಮ್ಮ ಸಂಗಾತಿಯೊಂದಿಗೆ ಜೊತೆಯಾಗಿ ನಡೆಯಲು, ಮರಗಳ ಕೆಳಗೆ ಕುಳಿತು ಮಾತನಾಡುತ್ತಾ ಸಮಯ ಕಳೆಯಲು ಅಥವಾ ಒಟ್ಟಿಗೆ ಸೆಲ್ಫಿ ತೆಗೆದುಕೊಂಡು ಆನಂದದಿಂದ ಕಳೆಯಲು ಚಂದದ ತಾಣ ಇದು.

ಉದ್ಯಾನದ ಒಳಗಿನ ಸುಂದರವಾದ ಸರೋವರವು ಈ ಸ್ಥಳದ ಸೌಂದರ್ಯವನ್ನು ಇನ್ನು ಹೆಚ್ಚಿಸುತ್ತದೆ. 1,854 ಕ್ಕೂ ಹೆಚ್ಚು ಜಾತಿಯ ಸಸ್ಯಗಳು ಇಲ್ಲಿವೆ.

ತೆರೆಯುವ ಸಮಯ: ಬೆಳಿಗ್ಗೆ 6:00 ರಿಂದ ಸಂಜೆ 7:00 ರವರೆಗೆ.

3. ಕಬ್ಬನ್ ಪಾರ್ಕ್: ( Cubbon Park)

ಕಬ್ಬನ್ ಪಾರ್ಕ್ ಬೆಂಗಳೂರಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. 300 ಎಕರೆ ವ್ಯಾಪಿಸಿರುವ ಈ ಉದ್ಯಾನದಲ್ಲಿ 6000 ಕ್ಕೂ ಹೆಚ್ಚು ಮರಗಳಿವೆ. ನಿಮ್ಮ ಸಂಗಾತಿಯೊಂದಿಗೆ ನೀವು ಇಲ್ಲಿ ನೈಸರ್ಗಿಕ ಸೌಂದರ್ಯವನ್ನು ಆನಂದಿಸಬಹುದು.

ತೆರೆಯುವ ಸಮಯವು ಬೆಳಿಗ್ಗೆ 6:00 ರಿಂದ ಸಂಜೆ 6:00 ರವರೆಗೆ. ಪ್ರತಿ ಸೋಮವಾರ ಉದ್ಯಾನವನ್ನು ಮುಚ್ಚಲಾಗುತ್ತದೆ.

4. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ: (Bannerghatta national park)

ಬೆಂಗಳೂರಿನಿಂದ 22 ಕಿಮೀ ದೂರದಲ್ಲಿರುವ ಈ ಉದ್ಯಾನವು ವನ್ಯಜೀವಿಪ್ರಿಯರಿಗೆ ಉತ್ತಮ ಸ್ಥಳ. ಇಲ್ಲಿ ನೀವು ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ, ವಿವಿಧ ಬಗೆಯ ವನ್ಯಜೀವಿಗಳನ್ನು ವೀಕ್ಷಿಸಬಹುದು. ಉದ್ಯಾನವನವು ಬಹಳಷ್ಟು ಆಕರ್ಷಣೆಗಳನ್ನು ಒಳಗೊಂಡಿದೆ.

ಸುಂದರವಾದ ಚಿಟ್ಟೆ ಪಾರ್ಕ್, ಅಕ್ವೇರಿಯಂ, ಮೊಸಳೆ ಫಾರ್ಮ್, ಸ್ನೇಕ್ ಪಾರ್ಕ್, ವಸ್ತುಸಂಗ್ರಹಾಲಯ, ಮೃಗಾಲಯ, ಮತ್ತು ಇಲ್ಲಿ ಸಫಾರಿಯನ್ನು ಸಹ ಆನಂದಿಸಬಹುದು.

5. ಸ್ಯಾಂಕಿ ಟ್ಯಾಂಕ್: (Sankey Tank)

ಸ್ಯಾಂಕಿ ಟ್ಯಾಂಕ್ ಮಲ್ಲೇಶ್ವರಂ ಬಳಿ ಇರುವ ಕೃತಕ ಮಾನವ ನಿರ್ಮಿತ ಕೆರೆಯಾಗಿದೆ. ಇಲ್ಲಿ ನಿಮ್ಮ ಸಂಗಾತಿಯೊಂದಿಗೆ ಸಾಲು ದೋಣಿಗಳು, ಪೆಡಲ್ ದೋಣಿಗಳು ಮತ್ತು ಮೋಟಾರು ದೋಣಿಗಳಲ್ಲಿ ದೋಣಿ ಸವಾರಿಯನ್ನು ಆನಂದಿಸಬಹುದು. ತೆರೆಯುವ ಸಮಯ: ಬೆಳಿಗ್ಗೆ 6:00 ರಿಂದ ರಾತ್ರಿ 8:00 ರವರೆಗೆ

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button