ದೂರ ತೀರ ಯಾನವಿಂಗಡಿಸದ

ಟ್ರಿಪ್ ಪ್ಲಾನ್ ಮಾಡ್ತಾ ಇದ್ದೀರಾ..? ರಾಜ್ಯದ ಈ ತಾಣಗಳು ನಿಮ್ಮ ಲಿಸ್ಟ್ ನಲ್ಲಿರಲಿ

ಪ್ರವಾಸ,ಪ್ರಯಾಣ ಅದು ಎಲ್ಲರಿಗೂ ಇಷ್ಟವಾಗುವ ಕೆಲಸವೇ. ಕೆಲವರು ಹವ್ಯಾಸಕ್ಕೆ ಹೋದರೆ ಇನ್ನೂ ಕೆಲವರು ಪ್ರವಾಸವೆ ಬದುಕು ಅನ್ನುವವರು ಇರುತ್ತಾರೆ.

ನಿತ್ಯದ ಜಂಜಾಟದಿಂದ ಮುಕ್ತಿ ಬೇಕು ಅಂದಾಗ ಒಂದೊಳ್ಳೆ ಟ್ರಾವೆಲ್ ಡೆಸ್ಟಿನೇಷನ್ (Travel Destination)ಹುಡುಕುವುದಕ್ಕೆ ಆರಂಭಿಸುತ್ತೇವೆ. ಅಂತಹವರಿಗೆ ನಮ್ಮ ರಾಜ್ಯದಲ್ಲಿ ಪ್ರವಾಸಿಗರನ್ನು ಸೆಳೆಯುವ ತಾಣಗಳ ಕುರಿತಾದ ಬರಹ ಇಲ್ಲಿದೆ.

ಬೆಂಗಳೂರು(Bangalore)

ರಾಜ್ಯದ ರಾಜಧಾನಿ ಬೆಂಗಳೂರು. ಸಿಲಿಕಾನ್‌ ಸಿಟಿ, ಉದ್ಯಾನನಗರಿ ಅಂತೆಲ್ಲ ಕರೆಯಲ್ಪಡುವ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಕೂಡ ಒಂದು.

ಅರೆ..! ನಿತ್ಯ ಟ್ರಾಫಿಕ್ ಕಿರಿ ಕಿರಿ ಹೆಚ್ಚು ಕಾಣೋ ಈ ಸಿಟಿಯಲ್ಲಿ ಅದ್ಯಾವ ತಾಣಗಳನ್ನು ನೋಡಬಹುದು ಅನ್ನೋ ಪ್ರಶ್ನೆಗಳು ನಿಮ್ಮಲ್ಲಿ ಮೂಡುವುದು ಸಹಜ.

Bangalore Palace

ಬೆಂಗಳೂರಿನಲ್ಲಿ ನಿಮಗೆ ನೋಡುವುದಕ್ಕೆ ಸಾಕಷ್ಟು ತಾಣಗಳಿವೆ. ಇಲ್ಲಿ, ಇಸ್ಕಾನ್ ಟೆಂಪಲ್(Iscon Temple), ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ(Bannerghatta National Park), ಕಬ್ಬನ್ ಪಾರ್ಕ್(Cubbon Park),ಬೆಂಗಳೂರು ಪ್ಯಾಲೇಸ್ (Bangalore Palace)ಸೇರಿದಂತೆ ಒಂದು ದಿನದಲ್ಲಿ ಹತ್ತಾರು ಜಾಗಗಳನ್ನೂ ಕಣ್ತುಂಬಿಕೊಳ್ಳಬಹುದು.


ಕೊಡಗು(kodagu)

ಭಾರತದ ಸ್ಕಾಟ್‌ಲ್ಯಾಂಡ್‌ ಎಂದೇ ಕರೆಯಲಾಗುವ ಕೂರ್ಗ್‌,ಕರ್ನಾಟಕದ ಕಾಶ್ಮೀರ(Karnataka Kashmira). ಪ್ರವಾಸಿಗರು ಒಂದೊಳ್ಳೆ ಮನಸಿಗೆ ಮುದ ನೀಡುವ ಜಾಗಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಅಂತಂದ್ರೆ ಕೊಡಗಿಗೆ ಕೂಡ ಹೋಗಿ ಬರಬಹುದು.

ಕರ್ನಾಟಕದ ಅಪ್ರತಿಮ ಗಿರಿಧಾಮವಾಗಿದೆ. ಕಾಫಿಯ ವಾಸನೆ, ಬೆಟ್ಟಗಳು ಮತ್ತು ತೊರೆಗಳ ರಮಣೀಯ ಸೌಂದರ್ಯದಿಂದ ಹೆಸರುವಾಸಿಯಾಗಿದೆ.

ಕೂರ್ಗ್ ತನ್ನದೇ ಆದ ಶ್ರೀಮಂತ ಇತಿಹಾಸ, ಐಷಾರಾಮಿ, ಸಾಹಸ, ಬಾಯಲ್ಲಿ ನೀರೂರಿಸುವ ಪಾಕಪದ್ಧತಿಗಳಿಂದ ಹೆಸರುವಾಸಿಯಾಗಿದೆ. ಸಂಗಾತಿಗಳು ಮಧುಚಂದ್ರಕ್ಕೆ ಕೂರ್ಗ್‌ನಂತಹ ರೋಮ್ಯಾಂಟಿಕ್‌ ತಾಣವನ್ನು ಆಯ್ಕೆ ಮಾಡಿಕೊಳ್ಳಬಹುದು.

Kodagu


ಕೊಡಗು,ಮಡಿಕೇರಿ ಭಾಗದಲ್ಲಿ ಚುಮು ಚುಮು ಚಳಿ ನೀಡುವ ಆನಂದ ವರ್ಣಿಸುವುದಕ್ಕೆ ಆಸಾಧ್ಯ. ಮಂಜಿನ ನಗರಿಯಲ್ಲಿ ನೀವು ಗೋಲ್ಡನ್ ಟೆಂಪಲ್, ರಾಜ ಸೀಟ್ ಗೆ ಭೇಟಿ ನೀಡಬಹುದು. ಅಲ್ಲದೆ ಇಲ್ಲಿನ ಶ್ರೀಮಂತ ಸಾಂಸ್ಕೃತಿಕ ಚರಿತ್ರೆಗೆ ಕೂಡ ಸಾಕ್ಷಿಯಾಗಬಹುದು.


ಚಿಕ್ಕಮಗಳೂರು( Chikmagalur):
ಜಂಜಾಟಗಳಿಂದ ಮುಕ್ತಿ ಬೇಕು ಅನ್ನೋ ಕಾರಣಕ್ಕೆ ನೀವು ಟ್ರಿಪ್ ಪ್ಲಾನ್ ಮಾಡ್ತಾ ಇದ್ರೆ ಚಿಕ್ಕಮಗಳೂರು ಕಡೆಗೂ ಕೊಂಚ ಕಣ್ಣು ಹಾಯಿಸಿ.
ಕಾಫಿ ನಾಡು ಅಂತಲೇ ಚಿರಪರಿಚಿತ ಊರಲ್ಲಿ ಪ್ರವಾಸಿ ತಾಣಗಳ ಬಹುದೊಡ್ಡ ಪಟ್ಟಿಯೇ ಇದೆ.

ಶೃಂಗೇರಿ(Shringeri) , ಹೊರನಾಡು(Horanadu),ದೇವರಮನೆ(Devaramane )ಅಂತಹ ಧಾರ್ಮಿಕ ಸ್ಥಳಗಳನ್ನು ನೀವು ದರ್ಶನ ಮಾಡಬಹುದು.

ಬಾಬಾ ಬುಡನ್ ಗಿರಿ(Baba Buda giri Hills), ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಮುಳ್ಳಯ್ಯನಗಿರಿ ಪರ್ವತ ದಂತಹ ಪ್ರಸಿದ್ಧ ಪ್ರವಾಸಿ ತಾಣಗಳು ಇಲ್ಲಿವೆ. ಜೊತೆಗೆ ಸಿರಿಮನೆ ಫಾಲ್ಸ್ ,ಹೆಬ್ಬೆ ಫಾಲ್ಸ್ ನಂತಹ ಜಲಪಾತ ಸೊಗಡನ್ನು ಕೂಡ ವೀಕ್ಷಿಸಬಹುದು

Chikmagalur

ಶಿವಮೊಗ್ಗ(Shivamogga)
ಶಿವಮೊಗ್ಗ ನೈಸರ್ಗಿಕ ಸೊಬಗಿನ ತಾಣ. ಮಲೆನಾಡಿನ ಹೆಬ್ಬಾಗಿಲು ಎಂದೇ ಪ್ರಸಿದ್ಧವಾದ ಜಿಲ್ಲೆ ಇದು. ಪಶ್ಚಿಮ ಘಟ್ಟಗಳ ಸಾಲು, ಸುಂದರ ಕಾಡು, ಸಮೃದ್ಧ ಸಸ್ಯವರ್ಗ, ಜಲಪಾತಗಳು ಹೀಗೆ ಶಿವಮೊಗ್ಗದ ಸೊಬಗನ್ನು ಬಣ್ಣಿಸಲು ಸಾಧ್ಯವೇ ಇಲ್ಲ.

ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ವಿಶ್ವ ವಿಖ್ಯಾತ ಜೋಗ ಜಲಪಾತ ಇರುವುದು ಇದೇ ಶಿವಮೊಗ್ಗ ಜಿಲ್ಲೆಯಲ್ಲಿ. ಇದರ ಜೊತೆಗೆ ಕುಪ್ಪಳ್ಳಿ ,ಕವಿಶೈಲ, ಆಗುಂಬೆಯ ಸೊಬಗು, ಸಕ್ರೆಬೈಲು ಆನೆ ಬಿಡಾರಗಳನ್ನು ಕೂಡ ನೋಡಬಹುದು.

ನೀವು ಇದನ್ನು ಇಷ್ಟ ಪಡಬಹುದು:ಬೆಂಗಳೂರಿನಲ್ಲಿ ಇರುವ 5 ರೊಮ್ಯಾಂಟಿಕ್ ತಾಣಗಳು:

Shivamogga

ಉಡುಪಿ (Udupi)
ಉಡುಪಿ ಎಂದಾಗ ನಮಗೆ ನೆನಪಾಗುವುದು ಅಲ್ಲಿನ ಕಡಲ ತೀರ. ತುಳು, ಕೊಂಕಣಿ ಭಾಷಿಗರು. ಕುಂದ ಕನ್ನಡ ಸೇರಿದಂತೆ ಕನ್ನಡದ ಬೇರೆ ಬೇರೆ ಪ್ರಾದೇಶಿಕ ಭಾಷೆ ಮಾತನಾಡುವ ಮಂದಿ.

ಪ್ರವಾಸಿಗರನ್ನು ಆಕರ್ಷಿಸುವ ಬೀಚ್ ,ಧಾರ್ಮಿಕ ಕ್ಷೇತ್ರಗಳು. ಬೀಚ್, ಧಾರ್ಮಿಕ ಕ್ಷೇತ್ರಗಳ ಜೊತೆಗೆ ಉಡುಪಿಯಲ್ಲಿ ನೋಡಲೇಬೇಕಾದ ಕೆಲವು ತಾಣಗಳಿವೆ.

Udupi


ಉಡುಪಿಯು, ಕೃಷ್ಣ ಮಠ(Krishna Mat), ಮಲ್ಪೆ(Malpe) ಕಡಲ ತೀರಗಳಿಂದ ಪ್ರಸಿದ್ದಿ ಪಡೆದುಕೊಂಡಿದೆ. ಬೀಚ್, ಧಾರ್ಮಿಕ ಸ್ಥಳಗಳು ಸೇರಿದಂತೆ ಉಡುಪಿಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಹತ್ತು ಹಲವಾರು ತಾಣಗಳಿವೆ.

ಇಲ್ಲಿ ಧುಮ್ಮಿಕ್ಕಿ ಹರಿಯುವ ಜಲಪಾತಗಳಿವೆ, ಪ್ರಸಿದ್ಧ ವ್ಯಕ್ತಿಗಳ ಹುಟ್ಟೂರಿನಲ್ಲಿ ಅವರ ನೆನಪಿನ ಜೊತೆಗೆ, ಪ್ರವಾಸಿಗರನ್ನು ಆಕರ್ಷಿಸುವ ಸುಂದರ ತಾಣಗಳಿವೆ. ನಿಮಗೆ ಮುದ ನೀಡುವ ದ್ವೀಪಗಳು, ಬಸದಿಗಳು, ಚರ್ಚ್ ಸೇರಿದಂತೆ ಉಡುಪಿಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ.

ಮೈಸೂರು ( Mysore):
ಬೆಂಗಳೂರಿನಿಂದ ಮೈಸೂರಿಗೆ ಸುಮಾರು 143 ಕಿ.ಮೀ ದೂರದಲ್ಲಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನೀವು ನೋಡಬಹುದಾದ ಅನೇಕ ತಾಣಗಳಿವೆ.

ಒಟ್ಟು 3 ದಿನಗಳ ಪ್ರವಾಸವನ್ನು ಮೈಸೂರಿನಲ್ಲಿ ಕೈಗೊಳ್ಳಬಹುದು. ಮೈಸೂರು ತನ್ನ ಶ್ರೀಮಂತ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಗೆ ಹೆಸರುವಾಸಿಯಾಗಿದೆ.

Mysore

ಇಲ್ಲಿ ಮೈಸೂರು ಮೃಗಾಲಯ, ಚಾಮುಂಡೇಶ್ವರಿ ಆಲಯ, ಶ್ರೀರಂಗಪಟ್ಟಣದ ಬಲಮುರಿ ಫಾಲ್ಸ್‌, ಶ್ರೀರಂಗನಾಥಸ್ವಾಮಿ ಆಲಯ, ರಂಗನತಿಟ್ಟು ಪಕ್ಷಿಧಾಮ, ದರಿಯಾ ದೌಲತಾ ಬಾದ್ ಇನ್ನು ಅನೇಕ ತಾಣಗಳನ್ನು ಮೈಸೂರಿನಲ್ಲಿ ನೋಡಬಹುದು.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button