Moreದೂರ ತೀರ ಯಾನವಿಂಗಡಿಸದ

ಫ್ರಾನ್ಸ್‌ ನಂತರ ಶ್ರೀಲಂಕಾ ಮತ್ತು ಮಾರಿಷಸ್ ನಲ್ಲೂ UPI ಸೇವೆ ಆರಂಭ

ಫ್ರಾನ್ಸ್ ನಲ್ಲಿ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಪ್ರಾರಂಭವಾದ ಒಂದು ವಾರದಲ್ಲೇ, ಈಗ ಶ್ರೀಲಂಕಾ ಮತ್ತು ಮಾರಿಷಸ್ ಕೂಡಾ ಭಾರತೀಯ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಆರಂಭಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಇಂದು (ಫೆ.12) ರಂದು ಘೋಷಿಸಿದೆ.

ಇಂದು ಭಾರತವು ಶ್ರೀಲಂಕಾ ( Sri Lanka) ಮತ್ತು ಮಾರಿಷಸ್ (Mauritius) ನಲ್ಲಿ UPI ಸೇವೆಗಳನ್ನು ಯಶಸ್ವಿಯಾಗಿ ಆರಂಭಿಸಿತು.

ಇದರೊಂದಿಗೆ ಮಾರಿಷಸ್ ನಲ್ಲಿ ರುಪೇ ಕಾರ್ಡ್ ಸೇವೆಗಳನ್ನು ಸಹ ಪರಿಚಯಿಸಲಾಯಿತು.

ಶ್ರೀಲಂಕಾದಲ್ಲಿ ಮೊದಲ UPI ವಹಿವಾಟನ್ನು ಓರ್ವ ಭಾರತೀಯ ಪ್ರಜೆ ಮಾಡಿದ್ದು ವಿಶೇಷ. ಈ ವರ್ಚುವಲ್ ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನೌತ್ ಮತ್ತು ಶ್ರೀಲಂಕಾದ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಭಾಗವಹಿಸಿದ್ದರು.

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ನ UPI ಸೇವೆಗಳು ಮೊಬೈಲ್ ಫೋನ್ ನ ಮೂಲಕ ಸುಲಭವಾಗಿ ಮತ್ತು ವೇಗವಾಗಿ ಹಣ ಪಾವತಿ ಮಾಡುವ ಸೇವೆಯಾಗಿದೆ.

ರುಪೇ (RuPay) ಕಾರ್ಡ್ ಸೇವೆಯು ATM, ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಹಣ ಪಾವತಿ ಮಾಡುವ ಸೇವೆಯಾಗಿದೆ.

ಈ ಎರಡೂ ಸೇವೆಗಳೂ ಉಭಯ ದೇಶಗಳ ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ಯೋಜನೆಯಾಗಿದೆ.

ಈ ಭಾರತೀಯ ಡಿಜಿಟಲ್ ಪಾವತಿ ವ್ಯವಸ್ಥೆಯು (Indian digital payment system) ಶ್ರೀಲಂಕಾ ಮತ್ತು ಮಾರಿಷಸ್ ದೇಶಗಳಿಗೆ ಭೇಟಿ ನೀಡುವ ಭಾರತೀಯ ಪ್ರಜೆಗಳಿಗೆ ಮತ್ತು ಶ್ರೀಲಂಕಾ ಮತ್ತು ಮಾರಿಷಸ್ ಪ್ರಜೆಗಳು ಭಾರತಕ್ಕೆ ಭೇಟಿ ನೀಡಿದಾಗ ತಮ್ಮ ಹಣಕಾಸು ವಹಿವಾಟನ್ನು ಸುಲಭ ಮಾಡಲು ಯೋಜಿಸಲಾಗಿದೆ.

ಮಾರಿಷಸ್ ಮತ್ತು ಶ್ರೀಲಂಕಾದಲ್ಲಿ UPI ಬಳಸಿ ಪಾವತಿ ಮಾಡುವುದು ಹೇಗೆ?

●UPI ಅಪ್ಲಿಕೇಶನ್ ತೆರೆಯಿರಿ. ಹೋಮ್ ಸ್ಕ್ರೀನ್ ಗೆ ಹೋಗಿ

● ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ. UPI ಇಂಟರ್‌ನ್ಯಾಷನಲ್ ಆಯ್ಕೆಮಾಡಿ.

●ಅಂತರರಾಷ್ಟ್ರೀಯ UPI ಪಾವತಿಗಾಗಿ ಬಳಸಲು ಬಯಸುವ ಬ್ಯಾಂಕ್ ಖಾತೆಯನ್ನು ಸರ್ಕಿಯಗೊಳಿಸಿ.

● ವ್ಯಾಪಾರಿ ಒದಗಿಸಿದ QR ಕೋಡ್ ಅನ್ನು ಸ್ಕ್ಯಾನ್ ಮಾಡಿ.

● ನಂತರ ಹಣದ ಮೊತ್ತವನ್ನು ಒತ್ತಿ, ಪಾವತಿ ಮಾಡಲು ನಿಮ್ಮ UPI ಪಿನ್ ನಂಬರ್ ನಮೂದಿಸಿ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button