ತುಂಬಿದ ಮನೆದೂರ ತೀರ ಯಾನವಿಂಗಡಿಸದ

ಮೈಸೂರಿನಲ್ಲಿ ನಿಮ್ಮ ಕಣ್ಮನ ಸೆಳೆಯುವ ತಾಣಗಳು

ಮೈಸೂರು(Mysore), ಹೆಸರು ಕೇಳಿದಾಗ ಎಲ್ಲರಿಗೂ ಅರಮನೆ(Palace) ,ಮೃಗಾಲಯ,(Zoo)ಚಾಮುಂಡಿ ಬೆಟ್ಟ (Chamundi Hills)ಸೇರಿದಂತೆ ಹಲವು ಸ್ಥಳಗಳು ನೆನಪಾಗುತ್ತದೆ.

ಸಾಂಸ್ಕೃತಿಕ ನಗರಿ,ಅರಮನೆ ನಗರಿ ಅಂತಲೇ ಜನಪ್ರಿಯ ಈ ಜಿಲ್ಲೆ. ರಾಜಮನೆತನಗಳು ಆಳಿದ ಹೆಜ್ಜೆ ಗುರುತುಗಳನ್ನು ಸಾರುವ ಜಿಲ್ಲೆ. ಇಲ್ಲಿ ನೋಡಬಹುದಾದ ತಾಣಗಳ ಮಾಹಿತಿ ಇಲ್ಲಿದೆ.

ಜಗನ್ಮೋಹನ ಅರಮನೆ(Jaganmohan Palace)

ರಾಜಕುಮಾರಿ ಮದುವೆಗಾಗಿ ಮೂರನೇ ಕೃಷ್ಣರಾಜ ಒಡೆಯರ್‌(Krishnaraj Odeyar)ಆಡಳಿತಾವಧಿಯಲ್ಲಿ 1861ರಲ್ಲಿ ಕಟ್ಟಲಾಯಿತು. ಈ ಅರಮನೆಯ ಮುಖ್ಯ ದ್ವಾರದಲ್ಲಿ ಅಪೂರ್ವವಾದ ಕೆತ್ತನೆಗಳಿಂದ ಕೂಡಿದೆ.

ಈ ಅರಮನೆಯಲ್ಲಿ ವಸ್ತು ಸಂಗ್ರಹಾಲಯವು 1915ರಿಂದ ಪ್ರಾರಂಭವಾಯಿತು. ಜಯಚಾಮರಾಜೇಂದ್ರ ಒಡೆಯರ್‌ ಆರ್ಟ್‌‌ ಗ್ಯಾಲರಿ(Jayachamarajendra Art Gallery)ಎಂದು ಹೆಸರಿಡಲಾಗಿದೆ.

Best places to visit in Mysore

ಈ ಗ್ಯಾಲರಿಯಲ್ಲಿ ತಿರುವಂಕೂರಿನ (Tiruvankuru) ರವಿ ವರ್ಮರವರಿಂದ(Ravi Varma) ರಚಿತವಾದ ತೈಲವರ್ಣ ಚಿತ್ರಗಳು ಪ್ರದರ್ಶಿಸಲ್ಪಟ್ಟಿವೆ. ಚೀನಾ(China), ಜಪಾನ್‌ (Japan)ಇತರ ದೇಶಗಳ ಸುಪ್ರಿಸಿದ್ಧ ಚಿತ್ರಕಾರರ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.

ರೈಲ್ವೆ ಮ್ಯೂಸಿಯಂ(Railway Museum)

1979 ರಲ್ಲಿ ಈ ಮೈಸೂರಿನ ರೈಲು ಮ್ಯೂಸಿಯಂ ಪ್ರಾರಂಭವಾಯಿತು. ರಾಜವಂಶಸ್ಥರು ಬಳಸುತ್ತಿದ್ದ ರೈಲ್ವೆ ಎಂಜಿನ್, ಹಳೆಯ ಬೋಗಿಗಳು, ವಿವಿಧ ಮಾದರಿ ಸಿಗ್ನಲ್ ಗಳು ಇಲ್ಲಿವೆ. ಹಲವಾರು ಹಳೆಯ ರೈಲು ಇಂಜಿನ್ ಗಳು, ಬೋಗಿಗಳು, ಹಳೆಯ ಕಾಲದಲ್ಲಿ ಉಪಯೋಗಿಸುತ್ತಿದ್ದ ಇತರೆ ರೈಲು ಸಾಮಗ್ರಿಗಳು ಇಲ್ಲಿವೆ.

Best places to visit in Mysore

ಸೆಂಟ್ ಫಿಲೋಮಿನಾಸ್ ಚರ್ಚ್(St.Philomena Church)

ಈ ಚರ್ಚು(Church) ದೇಶದ ಅತ್ಯಂತ ಪುರಾತನ ಮತ್ತು ಅತ್ಯಂತ ಆಕರ್ಷಕ ಚರ್ಚುಗಳಲ್ಲಿ ಒಂದಾಗಿದೆ. ಒಳಗಿನ ಮುಖ್ಯ ಒಳಾಂಗಣದಲ್ಲಿ ಸಂತ ಫಿಲೋಮಿನಾರ ಮೂರ್ತಿಯಿದೆ. ಬಹಳ ಆಕರ್ಷಕವಾದ ಹೊರಗಿನ ಸೂಕ್ಷ್ಮ ಕೆತ್ತನೆಗಳು, ಎತ್ತರದ ಅವಳಿ ಶೃಂಗಗಳು, ಹಲವಾರು ಕಡೆ ಬಳಸಲಾಗಿರುವ ಬಣ್ಣದ ಗಾಜುಗಳು ಇವೆ.

Best places to visit in Mysore

ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ (Srikanteshwara Temple)

ಕರ್ನಾಟಕದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರುವ ಇದು ಊರಿನ ಪೂರ್ವದ ಅಂಚಿನಲ್ಲಿ ಕಪಿಲಾ(Kapil) ಮತ್ತು ಗುಂಡ್ಲುಹೊಳೆಯ (ಕೌಂಡಿನ್ಯ ನದಿ) (Koundinya)ತಟದಲ್ಲಿದೆ. ನಂಜನಗೂಡಿನ(Nanjangud)ಈ ದೇಗುಲ ಸಾಕಷ್ಟು ಮಹಿಮೆಯನ್ನು ಕೂಡ ಹೊಂದಿದೆ.

Best places to visit in Mysore

ಅಂಬಾವಿಲಾಸ ಅರಮನೆ(Ambavilas Palace)

1897ರಲ್ಲಿ ಕಟ್ಟಲಾರಂಭಿಸಿ 1912ರಲ್ಲಿ ಮುಕ್ತಾಯಗೊಳಿಸಲಾದ ಈ ಅರಮನೆಗೆ ಅಂಬಾವಿಲಾಸ ಅರಮನೆ ಎಂದೂ ಹೆಸರು. ಈ ಅರಮನೆಯು ಗುಮ್ಮಟಗಳು, ಕಮಾನುಗಳು, ಗೋಪುರಗಳಿಂದ ಕೂಡಿದ್ದು ಇಂಡೋ ಸಾರ್ಸೆನಿಕ್‌ (Indo Sarsenic)ಶೈಲಿಯಲ್ಲಿದೆ.

Best places to visit in Mysore

ಅರಮನೆಯ ಹೊರಭಿತ್ತಿಗಳಲ್ಲಿ ಹಕ್ಕಿಗಳು, ಪ್ರಾಣಿಗಳು ಹಾಗೂ ಇತರ ಕೆತ್ತನೆ ಇದೆ. ಒಳಭಾಗದ ಮುಚ್ಚಿಗೆಯಲ್ಲಿ ಕೆತ್ತನೆ ಇದೆ. ಅರಮನೆಯ ಪ್ರವೇಶವಾದಂತೆ ಬೊಂಬೆ ತೊಟ್ಟಿಲು ಮೊದಲು ಕಾಣಸಿಗುತ್ತದೆ.

ಇಲ್ಲಿ 19 ಮತ್ತು 20ನೇ ಶತಮಾನದ ಪಾರಂಪರಿಕ ಬೊಂಬೆಗಳನ್ನು ಪ್ರದರ್ಶನಕ್ಕಿಡಲಾಗಿದೆ. ಅಪೂರ್ವವಾದ ಕೆತ್ತನೆಯಿರುವ ಕಂಬಗಳಿಂದ ಕೂಡಿದ ವಿಶಾಲವಾದ ಹಾಲ್‌ಗಳು, ದರ್ಬಾರ್‌ಹಾಲ್‌, ಕಲ್ಯಾಣ ಮಂಟಪಗಳು, ಆಯುಧಾಗಾರಗಳಿವೆ.

ನೀವು ಇದನ್ನು ಇಷ್ಟ ಪಡಬಹುದು:ಸಕ್ಕರೆ ನಾಡು ಮಂಡ್ಯದಲ್ಲಿ ನೋಡಬಹುದಾದ ತಾಣಗಳು

ಈ ಅರಮನೆಯು ನಾಲ್ಕು ಪ್ರವೇಶದ್ವಾರಗಳನ್ನು ಹೊಂದಿದೆ. ಮುಖ್ಯ ದ್ವಾರವನ್ನು ಪೂರ್ವಕ್ಕೆ “ಜಯಾ ಮಾರ್ಥಂಡ”(Jaya Marthanda) ಎಂದು ಕರೆಯಲಾಗುತ್ತದೆ, ಉತ್ತರದಲ್ಲಿ “ಜಯರಾಮಾ”, (Jayarama)ದಕ್ಷಿಣಕ್ಕೆ “ಬಲರಾಮ” (Balarama)ಮತ್ತು “ವರಾಹ”(Varaha )ಪಶ್ಚಿಮಕ್ಕೆ.

ಚಾಮರಾಜೇಂದ್ರ ಮೃಗಾಲಯ(Chamarajendra Zoo)

1892 ನಲ್ಲಿ ಉದ್ಘಾಟನೆಯಾದ ಈ ಮೃಗಾಲಯ 245 ಎಕರೆ ಇದ್ದು ಸಾವಿರಕ್ಕೂ ಹೆಚ್ಚು ಪ್ರಾಣಿಗಳನ್ನು ಹೊಂದಿದೆ. ಈ ಮೃಗಾಲಯ 1892 ರಲ್ಲಿ ಉದ್ಘಾಟನೆಗೊಂಡರೂ, ಸಾರ್ವಜನಿಕರಿಗೆ ಲಭ್ಯವಾದದ್ದು 1902 ರಲ್ಲಿ . ಮೃಗಾಲಯದಲ್ಲಿ ನಾನಾ ರೀತಿಯ ನಾನಾ ದೇಶದ ಪ್ರಾಣಿಗಳಿದ್ದು ಮಕ್ಕಳಿಂದ ವಯಸ್ಕರರಿಗೂ ಹಾಗೂ ಎಲ್ಲರಿಗೂ ಆಕರ್ಷಣೀಯ ಸ್ಥಳವಾಗಿರುತ್ತದೆ.

Best places to visit in Mysore

ಚಾಮುಂಡಿ ಬೆಟ್ಟ(Chamundi Hills)

ಚಾಮುಂಡಿ ದೇವಿಯ ಹೆಸರಿನಿಂದ ಕರೆಯಲ್ಪಡುವ ಚಾಮುಂಡೇಶ್ವರಿ (Chamundeshwari Hills)ದೇವಾಲಯವು ಈ ಬೆಟ್ಟದ ಮೇಲೆ ಕುಳಿತಿದೆ. ಈ ಬೆಟ್ಟವು ಅದರ ಶಿಖರಕ್ಕೆ ಹೋಗಲು 1008 ಪ್ರಾಚೀನ ಕಲ್ಲಿನ ಮೆಟ್ಟಿಲುಗಳನ್ನು ಹೊಂದಿದೆ. ಶಿಖರಕ್ಕೆ ಸರಿಸುಮಾರು ಅರ್ಧದಷ್ಟು ದೂರದಲ್ಲಿ ಶಿವನ (Shiva)ವಾಹನ ನಂದಿಯ(Nandi) ಪ್ರತಿಮೆ ಇದೆ.

ಈ ದೇವಾಲಯವು ಚತುಷ್ಕೋನ ರಚನೆಯನ್ನು ಹೊಂದಿದೆ. ಬಲಗೈಯಲ್ಲಿ ಖಡ್ಗ ಮತ್ತು ಎಡಗೈಯಲ್ಲಿ ನಾಗರಹಾವನ್ನು ಹೊಂದಿರುವ ಮಹಿಷಾಸುರನ ಪ್ರತಿಮೆಯು ಇಲ್ಲಿನ ಪ್ರಮುಖ ಲಕ್ಷಣವಾಗಿದೆ.

Best places to visit in Mysore

ಮೈಸೂರಿನ ಒಡೆಯರ ಆಳ್ವಿಕೆಯಲ್ಲಿ, ವಿಜಯದಶಮಿ(Vijayadashami) (ದಸರಾದ ಹತ್ತನೇ ದಿನ) ಮೆರವಣಿಗೆಯ ಸಮಯದಲ್ಲಿ ಮಹಾರಾಜರು ಆನೆಯ ಮೇಲೆ ಚಿನ್ನದ ಅಂಬಾರಿಯಲ್ಲಿ ಕುಳಿತಿದ್ದರು.

ಸ್ವಾತಂತ್ರ್ಯಾನಂತರ, ಮಹಾರಾಜರ ಬದಲಿಗೆ ಚಾಮುಂಡೇಶ್ವರಿಯ ವಿಗ್ರಹವನ್ನು ಸ್ಥಾಪಿಸಲಾಯಿತು, ಹಾಗೂ ದಸರಾವನ್ನು ರಾಜ್ಯ ಉತ್ಸವವನ್ನಾಗಿ ಮಾಡಲಾಯಿತು.

ಚಾಮುಂಡಿ ಬೆಟ್ಟಗಳ ಶಿಖರದಿಂದ, ಮೈಸೂರು ಅರಮನೆ, ಕಾರಂಜಿ ಸರೋವರ ಮತ್ತು ಹಲವಾರು ಸಣ್ಣ ದೇವಾಲಯಗಳು ಗೋಚರಿಸುತ್ತವೆ

ಲಲಿತ ಮಹಲ್(Lalitha Mahal)

ಮೈಸೂರಿನ ಅರಮನೆಗಳಲ್ಲಿ ಒಂದು. ಇದು ಮೈಸೂರಿನ ಎರಡನೇ ಅತಿದೊಡ್ಡ ಅರಮನೆ. ಇದು ಭಾರತ ದೇಶದ ಕರ್ನಾಟಕ ರಾಜ್ಯದಲ್ಲಿನ ಮೈಸೂರು ಎಂಬ ನಗರದ ಪೂರ್ವ ದಿಕ್ಕಿನಲ್ಲಿ ಈ ಮಹಲ್ ಕಂಡು ಬರುತ್ತದೆ. ಇದು ಚಾಮುಂಡಿ ಬೆಟ್ಟಕ್ಕೆ ಹೋಗುವ ದಾರಿಯ ಎಡ ಭಾಗದಲ್ಲಿ ಗೋಚರಿಸುತ್ತದೆ.

Best places to visit in Mysore

(ಒಂದು ಜಿಲ್ಲೆಯಲ್ಲಿ ನೂರಾರು ಪ್ರವಾಸಿ ತಾಣಗಳು ಇರುತ್ತವೆ. ಅದರಲ್ಲಿ ಕೆಲವು ತಾಣಗಳ ಬಗ್ಗೆ ನಿಮಗೆ ನೀಡಿದ್ದೇವೆ . ನಿಮ್ಮ ಜಿಲ್ಲೆಯಲ್ಲಿ ಅಂತಹ ಅಪರೂಪ ಜಾಗದ ಬಗ್ಗೆ ನಿಮಗೆ ಗೊತ್ತಿದ್ದಲ್ಲಿ ಬರೆದು ಕಳುಹಿಸಿ. ನಾವು ಅದನ್ನು ಪ್ರಕಟಿಸುತ್ತೇವೆ.)

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button