ದೂರ ತೀರ ಯಾನವಿಂಗಡಿಸದ

ಭಾರೀ ಮಳೆ ಸೂಚನೆ; ಮೇ 18-20ರವರೆಗೆ ಊಟಿ ಪ್ರವಾಸ ಮುಂದೂಡಿ

ನೀವು ಊಟಿಗೆ(Ooty)ಈ ವೀಕೆಂಡ್ ನಲ್ಲಿ(Weekend )ಪ್ರವಾಸ(Trip )ಹೋಗಬೇಕು ಎಂದೇನಾದರೂ ಪ್ಲಾನ್ ಮಾಡ್ತಾ ಇದ್ದೀರಾ? ಹಾಗಿದ್ರೆ ನಿಮ್ಮ ಪ್ರವಾಸ ಮುಂದೂಡುವುದು ಒಳಿತು. ಕಾರಣ ಇಲ್ಲಿದೆ.

ಮುಂದಿನ ಮೂರು ದಿನಗಳ ಕಾಲ (Next 3 days)ಆರೆಂಜ್ ಅಲರ್ಟ್ ನೀಡಲಾಗಿರುವುದರಿಂದ ಪ್ರವಾಸಿಗರು ನೀಲಗಿರಿಗೆ (Nilagiri)ಭೇಟಿ ನೀಡದಂತೆ ಸೂಚಿಸಲಾಗಿದೆ. ಊಟಿ(Ooty) ಕೂಡ ಆರೆಂಜ್ ಅಲರ್ಟ್‌ನಲ್ಲಿದ್ದು, (Orange Alert)ಪ್ರವಾಸಿಗರು ಈ ಪ್ರದೇಶಕ್ಕೆ ಪ್ರಯಾಣಿಸದಂತೆ ಜಿಲ್ಲಾಧಿಕಾರಿ (DC)ಅರುಣಾ (Aruna)ಸೂಚಿಸಿದ್ದಾರೆ.

IMD(India Metrological Department)ನಾಳೆ, ಮೇ 18 ರಿಂದ ನೀಲಗಿರಿ ಜಿಲ್ಲೆಯಲ್ಲಿ ಭಾರೀ ಮಳೆಯ(Heavy Rain Forecast) ಮುನ್ಸೂಚನೆ ನೀಡಿದೆ. ಗಿರಿಧಾಮದಲ್ಲಿ(Hill station )ಭಾರೀ ಮಳೆಯಾಗುವ ಸಾಧ್ಯತೆಯಿಂದಾಗಿ ಭೂಕುಸಿತದ ಸಾಧ್ಯತೆಯನ್ನು ಹವಾಮಾನ ಸಂಸ್ಥೆ ಎಚ್ಚರಿಸಿದೆ.

Very heavy rain forecast Avoid visiting Ooty from May 18-20

ನೀವು ಇದನ್ನೂ ಇಷ್ಟ ಪಡಬಹುದು:ಊಟಿ, ಕೊಡಕೈನಾಲ್ ಹೋಗಲು ಇ- ಪಾಸ್ ಕಡ್ಡಾಯ

ನೀಲಗಿರಿ ಜಿಲ್ಲಾಧಿಕಾರಿ ಎಂ ಅರುಣಾ ಸುದ್ದಿಗಾರರೊಂದಿಗೆ ಮಾತನಾಡಿ, ”ನೀಲಗಿರಿ ಜಿಲ್ಲೆಯ ಊಟಿ ಮತ್ತು ಇತರ ಸ್ಥಳಗಳಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಹಾಗಾಗಿ ನಾಳೆಯಿಂದ 3 ದಿನಗಳ ಕಾಲ, ಮೇ(May )18, ಮೇ 19,ಮೇ 20 ಮಳೆಯಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮತ್ತು ಪ್ರವಾಸಿಗರು(Tourist) ಊಟಿಗೆ ಬರುವುದನ್ನು ತಪ್ಪಿಸುವಂತೆ ಸೂಚಿಸಲಾಗಿದೆ

ಭಾರೀ ಮಳೆಯ ಸಂದರ್ಭದಲ್ಲಿ ಪ್ರವಾಸಿಗರನ್ನು ರಕ್ಷಿಸಲು ಸುರಕ್ಷತಾ ಕ್ರಮಗಳು(Resuce Operation)ಜಾರಿಯಲ್ಲಿವೆ ಎಂದು ಅವರು ಭರವಸೆ ನೀಡಿದರು.

ಕೊಡಕೈನಾಲ್‌ ಮತ್ತು ಊಟಿ ಗಿರಿಧಾಮಕ್ಕೆ ತೆರಳಲು ಇ-ಪಾಸ್‌ ಕಡ್ಡಾಯ

ಪರಿಸರ ಸಂರಕ್ಷಣೆ ದೃಷ್ಟಿಯಿಂದ ತಮಿಳುನಾಡಿನ(Tamilnadu)ಪ್ರಸಿದ್ಧ ಪ್ರವಾಸಿ ತಾಣಗಳಾದ ಕೊಡಕೈನಾಲ್‌(Kodaikanal )ಮತ್ತು ಊಟಿ (Ooty)ಗಿರಿಧಾಮಕ್ಕೆ ತೆರಳಲು ಇ-ಪಾಸ್‌ (E pass)ಕಡ್ಡಾಯಗೊಳಿಸಬೇಕೆಂದು ಮದ್ರಾಸ್‌ ಹೈಕೋರ್ಟ್‌(Madras High Court)ಮಹತ್ವದ ಆದೇಶ ನೀಡಿತ್ತು. ಈ ಆದೇಶ ಮೇ 7ರಿಂದ ಜೂನ್‌ 30ರ ಅವಧಿಗೆ ಸೀಮಿತವಾಗಿರಲಿದೆ.

ಪಾಸ್‌ ಕುರಿತು ನಿಯಮಾವಳಿ ರೂಪಿಸಿ ತಮಿಳುನಾಡು ಸರ್ಕಾರವು ರಾಷ್ಟ್ರಮಟ್ಟದ ಸುದ್ದಿಮಾಧ್ಯಮಗಳಲ್ಲಿ ಬೃಹತ್‌ ಜಾಹೀರಾತು(Advertisement )ನೀಡುವ ಮೂಲಕ ಪ್ರಚುರಪಡಿಸಬೇಕೆಂದೂ ಹೈಕೋರ್ಟ್‌ ನಿರ್ದೇಶಿಸಿತ್ತು. ಇ ಪಾಸ್‌ ಇಲ್ಲದ ವಾಹನಗಳಿಗೆ ಗಿರಿಧಾಮಗಳಿಗೆ ಭೇಟಿಗೆ ಅವಕಾಶ ನೀಡಬಾರದು.

ಆದರೆ ಪಾಸ್‌ಗಳ ವಿತರಣೆಗೆ ಯಾವುದೇ ನಿಯಂತ್ರಣ ಇರದು. ಇ ಪಾಸ್‌ ನಿಯಮ ಸ್ಥಳೀಯರಿಗೆ ಅನ್ವಯಿಸದು ಎಂದು ಕೋರ್ಟ್‌ ಸ್ಪಷ್ಟಪಡಿಸಿತ್ತು.

Very heavy rain forecast Avoid visiting Ooty from May 18-20

ಊಟಿಗೆ ನಿತ್ಯ 1000- 1300 ವಾಹನಗಳು ಆಗಮಿಸುತ್ತವೆ. ಮೇ ಮೊದಲ ವಾರದಿಂದ ಜೂನ್‌ ಅಂತ್ಯದ ವೇಳೆಗೆ ನಿತ್ಯ 20000ಕ್ಕೂ ಹೆಚ್ಚು ವಾಹನಗಳಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಇಷ್ಟು ವಾಹನಗಳ ಹೊರೆ ತಡೆಯುವ ಸಾಮರ್ಥ್ಯ ಗಿರಿಧಾಮಗಳ ರಸ್ತೆಗಳಿಗೆ ಇಲ್ಲ.

ಇದರಿಂದ ಸ್ಥಳೀಯರ ಸಂಚಾರಕ್ಕೆ, ಕಾಡುಪ್ರಾಣಿಗಳ ಸಂಚಾರಕ್ಕೆ ಅಡ್ಡಿಯಾಗುತ್ತದೆ, ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಬೆಂಗಳೂರಿನ ಐಐಎಂ(Bangalore IIM)ಮತ್ತು ಮದ್ರಾಸ್‌ನ ಐಐಟಿ (Madras IIT)ಜಂಟಿ ಅಧ್ಯಯನ ತಂಡ ಇತ್ತೀಚೆಗೆ ಮಾಹಿತಿ ನೀಡಿತ್ತು. ಹೀಗಾಗಿ ಅವುಗಳ ಅಧ್ಯಯನಕ್ಕೆ ಪೂರಕವಾಗಿ ಇನ್ನಷ್ಟು ಅಗತ್ಯ ಮಾಹಿತಿ ದೊರಕಿಸುವ ನಿಟ್ಟಿನಲ್ಲಿ ಇ ಪಾಸ್‌ ವ್ಯವಸ್ಥೆ ಜಾರಿಗೆ ಹೈಕೋರ್ಟ್‌ ಆದೇಶಿಸಿತ್ತು.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button