ವಿಂಗಡಿಸದ

ವಿಯೆಟ್ನಾಂಗೆ “ವಿಶ್ವದ ಪ್ರಮುಖ ಪರಂಪರೆಯ ತಾಣ 2023” ಪ್ರಶಸ್ತಿ

ವಿಶ್ವದ ಅತಿದೊಡ್ಡ ಗುಹೆಗಳಿಂದ ಹಿಡಿದು ಪ್ರವಾಸಿಗರಿಗೆ ಅತ್ಯುತ್ತಮ ಪ್ರವಾಸದ ಅನುಭವ ನೀಡುವ “ವಿಯೆಟ್ನಾಂ” (Vietnam) ಅದರ ಇತಿಹಾಸ, ಸಂಸ್ಕೃತಿ, ಪಾಕಪದ್ಧತಿ, ನೈಸರ್ಗಿಕ ಭೂದೃಶ್ಯಗಳಿಗೆ ಹೆಸರುವಾಸಿಯಾಗಿದೆ.

ಅಗ್ಗದ ಬಜೆಟ್ ನಲ್ಲಿ ಹಲವಾರು ಸುಂದರ ಅನುಭವಗಳನ್ನು ನೀಡುವ “ವಿಯೆಟ್ನಾಂ” ಜಾಗತಿಕ ಪ್ರವಾಸೋದ್ಯಮ ವಲಯದಲ್ಲಿ ಸಾಧಿಸಿದ ಸಾಧನೆಗಾಗಿ 2023ನೇ ವರ್ಷದ “ವಿಶ್ವದ ಪ್ರಮುಖ ಪರಂಪರೆಯ ತಾಣ” (‘World’s Leading Heritage Destination 2023’) ಎಂಬ ಪ್ರತಿಷ್ಠಿತ ಪ್ರಶಸ್ತಿ ಪಡೆದಿದೆ.

ಪ್ರವಾಸಿಗರ ಸ್ವರ್ಗ ಎಂದೇ ಪ್ರಸಿದ್ಧವಾದ ವಿಯೆಟ್ನಾಂ ನೀಲಿ ಸಮುದ್ರ, ಸಣ್ಣ ಪರ್ವತಗಳು, ಕಾಡುಗಳು, ದ್ವೀಪಗಳ ನೈಸರ್ಗಿಕ ಭೂದೃಶ್ಯಗಳಂತಹ ಅಮೋಘ ರತ್ನಗಳನ್ನು ಒಳಗೊಂಡ ಪುಟ್ಟ ದೇಶ “ವಿಯೆಟ್ನಾಂ”

ವಿಯೆಟ್ನಾಂಗೆ ಭಾರತೀಯರು (Indian) ಅತಿಹೆಚ್ಚು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಅದೇ ಕಾರಣದಿಂದಲೇ ಇತ್ತೀಚಿಗೆ ವಿಯೆಟ್ನಾಂ ಭಾರತೀಯ ಪ್ರವಾಸಿಗರಿಗೆ ವೀಸಾ-ಮುಕ್ತ (Visa free) ಪ್ರವೇಶವನ್ನು ಘೋಷಿಸಿದೆ.

2023 ರಲ್ಲಿ ಭಾರತೀಯರು ಅತಿ ಹೆಚ್ಚು ಗೂಗಲ್ ಸರ್ಚ್ ಮಾಡಿದ ಪ್ರವಾಸಿ ತಾಣ “ವಿಯೆಟ್ನಾಂ”.

ವಿಯೆಟ್ನಾಂ ಪ್ರವಾಸೋದ್ಯಮ ಕ್ಷೇತ್ರವನ್ನು ಡಿಜಿಟಲೀಕರಣಗೊಳಿಸುವಲ್ಲಿ ಗಮನವನ್ನು ಕೇಂದ್ರೀಕರಿಸುವ ಮೂಲಕ ಪ್ರವಾಸಿ ಕ್ಷೇತ್ರದಲ್ಲಿ ಕ್ರಾಂತಿಯನ್ನು ಉಂಟು ಮಾಡುವ ಗುರಿ ಹೊಂದಿದೆ.

ಈಗಾಗಲೇ ಅಗ್ಗದ ಪ್ರವಾಸಿ ತಾಣವಾಗಿ ದೇಶ-ವಿದೇಶಗಳಿಂದ ಕೋಟ್ಯಂತರ ಜನರನ್ನು ತನ್ನತ್ತ ಸೆಳೆಯುತ್ತಿರುವ ವಿಯೆಟ್ನಾಂಗೆ ದೊರಕಿರುವ ಈ ಪುರಸ್ಕಾರವು ಜಾಗತಿಕ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಯೆಟ್ನಾಂನ ಸ್ಥಾನವನ್ನು ಮತ್ತಷ್ಟು ಎತ್ತರಕ್ಕೆ ಏರಲು ಸಹಾಯ ಮಾಡುತ್ತದೆ.

ದೇಶವು ತನ್ನ ಆಕರ್ಷಣೆಯನ್ನು ಉತ್ತೇಜಿಸುವ ಮೂಲಕ 2030 ರ ವೇಳೆಗೆ ಪ್ರವಾಸೋದ್ಯಮವನ್ನು ಪ್ರಮುಖ, ಪರಿಸರ ಸಮರ್ಥನೀಯ, ಆರ್ಥಿಕವಾಗಿ ಅಭಿವೃದ್ಧಿಗೊಳಿಸುವ ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಿದೆ.

ಅದರ ನೈಸರ್ಗಿಕ ಭೂದೃಶ್ಯಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮತ್ತು ಜವಾಬ್ದಾರಿಯುತ ಪ್ರಯಾಣದ ಅಭ್ಯಾಸಗಳನ್ನು ಉತ್ತೇಜಿಸುವ ಪ್ರಯತ್ನಗಳನ್ನು ಗಮನಿಸಿದರೆ ವಿಯೆಟ್ನಾಂ ಸುಸ್ಥಿರ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ತನ್ನ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button