Moreವಿಂಗಡಿಸದ

2 ದಶಕಗಳ ಮರುಸ್ಥಾಪನೆಯ ನಂತರ ಈಜಿಪ್ಟ್ ನ ಈ ತಾಣ ಸಾರ್ವಜನಿಕರಿಗೆ ತೆರೆಯಲ್ಪಟ್ಟಿದೆ.

ಎರಡು ದಶಕಗಳಿಗೂ ಹೆಚ್ಚು ಕಾಲದ ಪುನಃಸ್ಥಾಪನಾ ಕಾರ್ಯದ ನಂತರ, ಈಜಿಪ್ಟ್ ನ (Egypt) ಲಕ್ಸಾರ್‌ನಲ್ಲಿ (Luxor) ಅಮುನ್‌ನ 18 ನೇ ರಾಜವಂಶದ (1550-1292 BC) ಮಹಾನ್ ಲೇಖಕ ನೆಫರ್‌ಹೋಟೆಪ್‌ನ ಸಮಾಧಿಯನ್ನು (Tomb of Neferhotep) ಭಾನುವಾರ ಫೆ.12 ರಂದು ಸಾರ್ವಜನಿಕ ಅಧಿಕೃತವಾಗಿ ತೆರೆಯಲಾಯಿತು.

ಅಹ್ರಾಮ್ ಆನ್‌ಲೈನ್ ಪ್ರಕಾರ, ಲಕ್ಸಾರ್‌ನ ಪಶ್ಚಿಮ ತೀರದಲ್ಲಿರುವ ಅಲ್-ಖೋಖಾ ಪ್ರದೇಶದಲ್ಲಿ ನೆಲೆಗೊಂಡಿರುವ ಸಮಾಧಿಯನ್ನು ಸುಪ್ರೀಂ ಕೌನ್ಸಿಲ್ ಆಫ್ ಆಂಟಿಕ್ವಿಟೀಸ್‌ನ ಪ್ರಧಾನ ಕಾರ್ಯದರ್ಶಿ ಮೊಸ್ತಫಾ ವಜಿರಿ ಮತ್ತು ಅರ್ಜೆಂಟೀನಾದ ರಾಯಭಾರಿ ಗೊಂಜಾಲೊ ಉರ್ರಿಯೊಲಾಬಿಟಿಯಾ ಅವರು ಉದ್ಘಾಟಿಸಿದರು.

“ಲಕ್ಷಾರ್ ನಲ್ಲಿರುವ ಸಮಾಧಿಯ ಉದ್ಘಾಟನೆಯು ಪಶ್ಚಿಮ ದಂಡೆಯಲ್ಲಿರುವ ಗಮನಾರ್ಹ ಪ್ರವಾಸಿ ತಾಣವಾಗಿ ಪರಿಚಯಿಸಲ್ಪಡುತ್ತದೆ. ವಿಶೇಷವಾಗಿ ಚಳಿಗಾಲದ ಸಮಯದಲ್ಲಿ ಈ ತಾಣಕ್ಕೆ ಪ್ರವಾಸಿಗರ ಆಗಮನ ಹೆಚ್ಚಾಗಲಿದೆ” ಎಂದು ವಜಿರಿ ಅವರು ತಿಳಿಸಿದರು.

ಸಮಾಧಿಯ ಮರುಸ್ಥಾಪನಾ (Restoration) ಕಾರ್ಯವು 2000 ರಲ್ಲಿ ಪ್ರಾರಂಭವಾಯಿತು. ಅರ್ಜೆಂಟೀನಾದ ಬ್ಯೂನಸ್ ಐರಿಸ್ ವಿಶ್ವವಿದ್ಯಾನಿಲಯದ ಒಂದು ಮಿಷನ್ ಈ ಸಮಾಧಿಯ ಶಿಲಾಶಾಸನ ಮತ್ತು ಪುರಾತತ್ತ್ವ ಶಾಸ್ತ್ರವನ್ನು ಅಧ್ಯಯನ ಮಾಡುವ ಜವಾಬ್ದಾರಿಯನ್ನು ಹೊಂದಿತ್ತು.

ಜರ್ಮನ್ ಪುರಾತತ್ತ್ವ ಶಾಸ್ತ್ರದ ತಂಡವು ಗೋಡೆಯ ವರ್ಣಚಿತ್ರಗಳ ಸಂರಕ್ಷಣೆ ಮತ್ತು ಸ್ವಚ್ಛಗೊಳಿಸುವಿಕೆಯನ್ನು ನಡೆಸಿತು.

ಈಜಿಪ್ಟ್‌ನ ಪ್ರಾಚೀನ ವಸ್ತುಗಳ ನಿರ್ದೇಶಕ ಮೊಹಮದ್ ಅಬ್ದೆಲ್-ಬಾಡಿಯಾ ಅವರು ನೆಫರ್‌ಹೋಟೆಪ್ ಅವರು ಹಿರಿಯ ರಾಜನೀತಿಜ್ಞರಾಗಿದ್ದರು, “ಅಮುನ್‌ನ ಬರಹಗಾರ” ಸೇರಿದಂತೆ ಹಲವಾರು ಅಧಿಕೃತ ಬಿರುದುಗಳನ್ನು ಹೊಂದಿದ್ದರು.

ಈಜಿಪ್ಟ್‌ನ ಹೊಸದಾಗಿ ಪುನಃಸ್ಥಾಪಿಸಲಾದ ಲಕ್ಸಾರ್ ಸಮಾಧಿಯ ಮಹತ್ವವನ್ನು ಅದರ ವೀಕ್ಷಣೆಗಳು ಮತ್ತು ಶಾಸನಗಳ ಮೂಲಕ ಅರ್ಥಮಾಡಿಕೊಳ್ಳಬಹುದು ಎಂದು ಅಬ್ದೆಲ್-ಬಡಿ ಹೇಳಿದರು.

ಸಮಾಧಿಯು ಸ್ಮಶಾನದ ಮಾಲೀಕ ಮತ್ತು ಅಮುನ್ ದೇವರಿಗೆ ಗಾಯಕರಾಗಿದ್ದ ಅವರ ಪತ್ನಿ ಮೆರಿಟಮುನ್ ಅವರ ಪ್ರತಿಮೆಯನ್ನು ಸಹ ಹೊಂದಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button