ವಿಂಗಡಿಸದ

ಭಾರತೀಯ ನೌಕಾಪಡೆ ಮೆಸ್ ಗೆ ಹೊಸ ಡ್ರೆಸ್ ಕೋಡ್

ಭಾರತೀಯ ನೌಕಾ ಪಡೆ(Indian Navy) ಸದ್ಯ ತನ್ನ ಸಿಬ್ಬಂದಿಗಳ ಸಮವಸ್ತ್ರದಲ್ಲಿ(Uniform) ಭಾರಿ ಬದಲಾವಣೆಯನ್ನು ತರುವುದಕ್ಕೆ ಮುಂದಾಗಿದೆ. ನೌಕಾಸೇನೆ ಅಧಿಕಾರಿಗಳಿಗೆ ಭಾರತೀಯ ವಸ್ತ್ರನೀತಿ ಜಾರಿಗೆ ತಂದಿದೆ.

ಇದೀಗ ನೌಕಾಸೇನೆ ಕುರ್ತಾ(Kurta) ಪೈಜಾಮ(Payjama )ಧರಿಸಲು ಅವಕಾಶ ನೀಡಿದೆ. ನೌಕಾಸೇನೆಗೆ ಭಾರತೀಯ ಸಂಪ್ರದಾಯ(Indian Tradition)ಉಡುಪು ಪರಿಚಯಿಸಿದೆ.

ನೌಕಾ ಸೇನಾ ಅಧಿಕಾರಿಗಳು ತಮ್ಮ ನೌಕಾ ಮೆಸ್‌ಗಳಲ್ಲಿ ಕುರ್ತಾ ಪೈಜಾಮಾ ಧರಿಸಲು ಅಧಿಕಾರ ನೀಡಲಾಗಿದೆ. ನೌಕಾಪಡೆ ಮೆಸ್ ಆವರಣದಲ್ಲಿ ಕುರ್ತಾ ಪೈಜಾಮ ಅದರ ಮೇಲೆ ತೋಳಿಲ್ಲದ ಜಾಕೆಟ್, ಫಾರ್ಮಲ್ ಶೂ ಅಥವಾ ಸ್ಯಾಂಡಲ್ಸ್ ಧರಿಸಲು ಅನುಮತಿ ನೀಡಲಾಗಿದೆ.

ಮಿಲಿಟರಿ ಸಂಪ್ರದಾಯಗಳಲ್ಲಿ ಭಾರತೀಯ ಸಂಪ್ರದಾಯ ತರುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಸ್ಥಳೀಯ ವಸ್ತ್ರ, ಸಂಪ್ರದಾಯ, ಪದ್ಧತಿಗಳಿಗೆ ಆದ್ಯತೆ ನೀಡಿ ಬ್ರಿಟಿಷರ ಕಾಲದ ಸಂಪ್ರದಾಯಕ್ಕೆ ಬ್ರೇಕ್ ಹಾಕಲು ಸರ್ಕಾರ ನಿರ್ಧರಿಸಿದೆ.

ನೀವು ಇದನ್ನು ಇಷ್ಟ ಪಡಬಹುದು:6 ದಶಕದ ನಂತರ ಬದಲಾದ ಏರ್ ಇಂಡಿಯಾ ಸಿಬ್ಬಂದಿಗಳ ಸಮವಸ್ತ್ರ

ನೌಕಾಪಡೆಯ ಕುರ್ತಾ ಪೈಜಾಮ ಡ್ರೇಸ್ ಕೋಡ್ ಕುರಿತು ಮಾರ್ಗಸೂಚಿ ನೀಡಿದೆ. ಎಲ್ಲಾ ಕಮಾಂಡರ್ ಹಾಗೂ ಇತರ ಅಧಿಕಾರಿಗಳು ಕುರ್ತಾ ಪೈಜಾಮ ಧರಿಸುವಾಗ ಕೆಲ ನಿಯಮಗಳನ್ನು ಪಾಲಿಸಬೇಕು.

ನೌಕಾಪಡೆ ಅಡ್ಮಿರಲ್ ಆರ್ ಹರಿ ಕುಮಾರ್ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.

ನೂತನ ವಸ್ತ್ರ ಸಂಹಿತೆಯನ್ನು ನ್ಯಾಷನಲ್ ಸಿವಿಲ್ ಡ್ರೆಸ್(National Civil Dress) ಎಂದು ಅಂಗೀಕರಿಸಲಾಗಿದೆ. ಕುರ್ತಾ ಪೈಜಾಮ ಕಡು ಬಣ್ಣದಿಂದ ಕೂಡಿರಬೇಕು.

ಮೊಣಕಾಲಿನ ವರೆಗೆ ಉದ್ದವಿರಬೇಕು. ಇದರ ಪೈಜಮಾ ಹೊಂದಿಕೆಯಾಗಬೇಕು. ತೋಳುಗಳಲ್ಲಿ ಕಫ್ ಇರಬೇಕು. ಪ್ಯಾಂಟ್‌ ಎಲಾಸ್ಟಿಕ್(Elastic Waist Band) ಒಳಗೊಂಡಿರಬೇಕು, ಜೊತೆಗೆ ಸೈಡು ಜೇಬುಗಳು ಇರಬೇಕು.

New dress code

ಇದಕ್ಕೆ ಹೊಂದಿಕೆಯಾಗುವ ನೇರ ಕಟ್ ವೇಸ್ಟ್ ಕೋಟ್(waistcoast) ಅಥವಾ ಜಾಕೆಟ್(Jacket) ಬಳಸಬಹುದು ಎಂದು ಮಾರ್ಗಸೂಚಿ ಹೊರಡಿಸಲಾಗಿದೆ.

ಈ ಡ್ರೆಸ್ ಕೋಡ್ ನೌಕಾ ಪಡೆ ಮೆಸ್, ಅನೌಪಚಾರಿಕ ಅಥವಾ ಸಾಂದರ್ಭಿಕ ಕೂಟಗಳಲ್ಲೆ ಹಾಗೂ ಸಂಸ್ಥೆಗಳಲ್ಲಿ ಮಾತ್ರ ಅನ್ವಯವಾಗಲಿದೆ.

ಆದರೆ ಯುದ್ಧನೌಕೆ, ಜಲಾಂತರ್ಗಾಮಿ ನೌಕೆಯಲ್ಲಿ ಈ ವಸ್ತ್ರಸಂಹಿತೆ ಅನ್ವಯವಾಗುವುದಿಲ್ಲ ಎಂದು ನೌಕಾಪಡೆ ಸ್ಫಷ್ಪಪಡಿಸಿದೆ.

ಬ್ರಿಟಿಷ್ ರೂಪಿಸಿದ ನಿಯಮದ ಪ್ರಾಕರ ನೌಕಾಪಡೆ ಮೆಸ್, ಭಾರತೀಯ ಸೇನೆ, ವಾಯುಸೇನೆ ಮೆಸ್‌ಗಳಲ್ಲೂ ಕುರ್ತಾ ಪೈಜಾಮ ಧರಿಸುವುದು ನಿಷೇಧಿಸಲಾಗಿತ್ತು. ಇದೀಗ ನೌಕಾಪಡೆಯಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ.

Navy mess unifrom

ಈ ಹೊಸ ವಿನ್ಯಾಸವು ಭಾರತದ ನೌಕಾಪಡೆಯ ಪರಂಪರೆಯನ್ನು ಪ್ರತಿಬಿಂಬಿಸಲಿದೆ. ಅದರಲ್ಲಿ ಪ್ರಮುಖವಾಗಿ ಚಿನ್ನಲೇಪಿತ ನೌಕಾಪಡೆಯ ಗುಂಡಿ, ಅಷ್ಟಕೋನ, ಖಡ್ಗಗಳು ಮತ್ತು ದೂರದರ್ಶಕವನ್ನು ಹೊಂದಿದೆ.

ಇವುಗಳು ನೌಕಾಪಡೆಯು ಹೊಸ ಸವಾಲುಗಳು ಮತ್ತು ಸಾಹಸಗಳಿಗೆ ತನ್ನನ್ನು ಅಣಿಗೊಳಿಸುತ್ತಿರುವುದನ್ನು ಸಂಕೇತಿಸುತ್ತದೆ ಎಂದು ಹೇಳಲಾಗಿದೆ.ಕಳೆದ ವರ್ಷವೇ ಈ ಬಗ್ಗೆ ಘೋಷಣೆ ಮಾಡಲಾಗಿತ್ತು, ಇದೀಗ ಅಧಿಕೃತವಾಗಿ ಜಾರಿಗೆ ಬಂದಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button