ದೂರ ತೀರ ಯಾನವಿಂಗಡಿಸದ

6 ದಶಕದ ನಂತರ ಬದಲಾದ ಏರ್ ಇಂಡಿಯಾ ಸಿಬ್ಬಂದಿಗಳ ಸಮವಸ್ತ್ರ

ಖಾಸಗಿ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾ (Air India)ತಮ್ಮ ಪೈಲಟ್‌ ಸೇರಿ ಇತರ ಸಿಬ್ಬಂದಿಗೆ ಹೊಸ ವಿನ್ಯಾಸದ ಸಮವಸ್ತ್ರವನ್ನು ಪರಿಚಯಿಸಿದೆ. ವಿಮಾನಯಾನ ಸಂಸ್ಥೆಯು ತನ್ನ 10,000 ಕ್ಕೂ ಹೆಚ್ಚು ಪೈಲಟ್‌,(Pilot )ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಗೆ ಕೆಂಪು, ನೇರಳೆ ಮತ್ತು ಬಂಗಾರ ಬಣ್ಣದ ಬಟ್ಟೆಯನ್ನು ಸಮವಸ್ತ್ರವನ್ನಾಗಿ (uniform )ನೀಡುತ್ತಿದೆ.

AIR INDIA

ಖಾಸಗಿ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಕ್ಯಾಬಿನ್(Air India Cabin)ಮತ್ತು ಕಾಕ್‌ಪಿಟ್ (cockpit)ಸಿಬ್ಬಂದಿಗೆ ಮನೀಶ್ ಮಲ್ಹೋತ್ರಾ (Manish Malhotra)ವಿನ್ಯಾಸಗೊಳಿಸಿದ ಹೊಸ ಸಮವಸ್ತ್ರಗಳ ಸಂಗ್ರಹವನ್ನು ಅನಾವರಣಗೊಳಿಸಿದೆ.

ಏರ್ ಇಂಡಿಯಾದ ಮೊದಲ ಏರ್‌ಬಸ್ A350 ವಿಮಾನದ ಸೇವೆಯಲ್ಲಿ ಹೊಸ ಸಮವಸ್ತ್ರವನ್ನು ಆರಂಭಿಸಿದ್ದು, ಮುಂದಿನ ಕೆಲವು ತಿಂಗಳುಗಳಲ್ಲಿ ಹಂತ ಹಂತವಾಗಿ ಪರಿಚಯಿಸಲಾಗುವುದು ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಹೊಸ ಉಡುಪಿನ ಬಣ್ಣದ ಪ್ಯಾಲೆಟ್ ಆಳವಾದ ಕೆಂಪು, ಬರ್ಗಂಡಿ, ನೇರಳೆ ಮತ್ತು ಚಿನ್ನ ಬಣ್ಣ ವನ್ನು ಒಳಗೊಂಡಿದೆ.

ಪ್ರಸಿದ್ಧ ಫ್ಯಾಷನ್ ಡಿಸೈನರ್ (Fashion Designer)ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಲಿದ್ದಾರೆ ಎಂದು ಏರ್ ಇಂಡಿಯಾ ಸೆಪ್ಟೆಂಬರ್ 2023 ರಲ್ಲಿ ಅಧಿಕೃತವಾಗಿ ಘೋಷಿಸಿತ್ತು. 6 ದಶಕಗಳ ನಂತರ ಏರ್ ಇಂಡಿಯಾ ತನ್ನ ಸಿಬ್ಬಂದಿಗೆ ಸಮವಸ್ತ್ರವನ್ನು ಬದಲಾಯಿಸಲಿದೆ ಎಂದು ಸೆಪ್ಟೆಂಬರ್ 25 ರಂದು ಏರ್ ಇಂಡಿಯಾ ಘೋಷಿಸಿತ್ತು.

ನೀವು ಇದನ್ನು ಇಷ್ಟ ಪಡಬಹುದು:ಹೊಸ ರೂಪದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್‌. ಇನ್ನುಮುಂದೆ ಕಿತ್ತಳೆ ಬಣ್ಣದಲ್ಲಿ ಕಂಗೊಳಿಸಲಿದೆ.

New uniform

ವಾಯುಯಾನ ಇತಿಹಾಸದಲ್ಲೇ ಏರ್‌ ಇಂಡಿಯಾ ತನ್ನ ಸಿಬ್ಬಂದಿಗೆ ಐಷಾರಾಮಿ ಹಾಗೂ ಆಕರ್ಷಕ ಸಮವಸ್ತ್ರಗಳನ್ನು ನೀಡುತ್ತಿದೆ. ಮನಿಶ್‌ ಮಲ್ಹೋತ್ರ ವಿನ್ಯಾಸ ಮಾಡಿರುವ ಉಡುಪುಗಳು ಅತ್ಯಾಕರ್ಷಕ ರೀತಿಯಲ್ಲಿ ವಿಮಾನಯಾನದಲ್ಲಿ ಗಮನ ಸೆಳೆಯಲಿದೆʼ ಎಂದು ಏರ್‌ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಪ್ಟೆಲ್‌ ವಿಲ್ಸನ್‌ ಹೇಳಿದ್ದಾರೆ ಎನ್ನಲಾಗಿತ್ತಿದೆ.

ಸಿಬ್ಬಂದಿಯು ತೊಡಲಿರುವ ಹೊಸ ಸಮವಸ್ತ್ರವು ಈ ವಿಮಾನಯಾನ ಸಂಸ್ಥೆಗೆ ಹೊಸ ಗುರುತು ನೀಡಲಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಕ್ಯಾಬಿನ್‌ನ ಮಹಿಳಾ ಸಿಬ್ಬಂದಿಯು ಭಾರತೀಯ ಪರಂಪರೆಯ ವಾಸ್ತುಶೈಲಿಯನ್ನು (ಜರೋಖಾ) ಮತ್ತು ವಿಸ್ಟಾ (ಹೊಸ ಏರ್ ಇಂಡಿಯಾ ಲೋಗೋ ಐಕಾನ್) ನೆನಪಿಸುವ ಸಂಕೀರ್ಣ ಮಾದರಿಗಳೊಂದಿಗೆ ಒಂಬ್ರೆ ಸೀರೆಯನ್ನು ಹೊಂದಿದ್ದು, ಆರಾಮದಾಯಕವಾದ ಕುಪ್ಪಸ ಮತ್ತು ಬ್ಲೇಜರ್‌ನೊಂದಿಗೆ ವಿನ್ಯಾಸಗೊಳಿಸಲಾಗಿದೆ ಎಂದು ಏರ್‌ ಇಂಡಿಯಾ ಹೇಳಿದೆ.

Pilot

ಭಾರತದ ವೈವಿಧ್ಯಮಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಸಾರವನ್ನು ಸೆರೆಹಿಡಿಯುವ ಸಮವಸ್ತ್ರಗಳನ್ನು ವಿನ್ಯಾಸಗೊಳಿಸುವುದು ತನ್ನ ಗುರಿಯಾಗಿತ್ತು. ಅದಕ್ಕೆ ಲೇಟೆಸ್ಟ್‌ ಟಚ್‌ ನೀಡುವ ಮೂಲಕ ಆಧುನಿಕ ನೋಟ ಸಿಗುವಂತೆ ಮಾಡಲಾಗಿದೆ.

ಈ ಉಡುಪಿನ ಬಣ್ಣವು ಸಿಬ್ಬಂದಿಗೆ ಹೆಮ್ಮೆಯಂಟು ಮಾಡಲಿದೆ. ಅಲ್ಲದೆ ಈ ಉಡುಪು ಭಾರತದ ಉಷ್ಣತೆಗೂ ಹೊಂದಿಕೊಳ್ಳಲಿದೆʼ ಎಂದು ಮನೀಶ್‌ ಮಲ್ಹೋತ್ರಾ ಹೇಳಿದ್ದಾರೆ.

ಏರ್‌ ಇಂಡಿಯಾದ ಪ್ರಕಾರ ಇತ್ತೀಚೆಗೆ ಅನಾವರಣಗೊಂಡ ಸಮವಸ್ತ್ರ ವಿನ್ಯಾಸವು ಕ್ಯಾಬಿನ್‌ ಸಿಬ್ಬಂದಿ ಹಾಗೂ ಏರ್‌ಲೈನ್‌ ಇನ್‌ಫ್ಲೈಟ್‌ ಸೇವೆಗಳ ತಂಡದ ಸಹಭಾಗಿತ್ವದ ಪ್ರಯತ್ನದಿಂದ ಸಾಧ್ಯವಾಗಿದೆ.

ಸಮವಸ್ತ್ರ ಮಾತ್ರವಲ್ಲ ಅದಕ್ಕೆ ಹೊಂದುವ ಚಪ್ಪಲಿಯನ್ನು ಕೂಡ ವಿನ್ಯಾಸ ಮಾಡಿದ್ದಾರೆ ಮನೀಶ್‌ ಮಲ್ಹೋತ್ರಾ. ಮಹಿಳಾ ಸಿಬ್ಬಂದಿಗೆ ಕಪ್ಪು ಹಾಗೂ ಕಡುಕೆಂಪು ಬಣ್ಣದ ಡ್ಯುಯಲ್-ಟೋನ್ ಬ್ಲಾಕ್ ಹೀಲ್ಸ್ ವಿನ್ಯಾಸ ಮಾಡಿದ್ದರೆ, ಪುರುಷರು ಕಪ್ಪು ಬ್ರೋಗ್ಸ್ ಅನ್ನು ಧರಿಸುತ್ತಾರೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button