ವಿಂಗಡಿಸದಸಂಸ್ಕೃತಿ, ಪರಂಪರೆ

ದುಬೈನಲ್ಲಿ ಹಿಂದೂ ಮಂದಿರ ಉದ್ಘಾಟಿಸಿದ ಮೋದಿ

ಯುನೈಟೆಡ್ ಅರಬ್ ಎಮಿರೇಟ್ಸ್ (UAE) ರಾಜಧಾನಿ ಅಬುಧಾಬಿಯಲ್ಲಿ BAPS ಸ್ವಾಮಿನಾರಾಯಣ ಸಂಸ್ಥೆಯಿಂದ ಹೆಸರಿನಲ್ಲಿ ನಿರ್ಮಿಸಲಾದ ಅತಿದೊಡ್ಡ ಹಿಂದೂ ದೇವಾಲಯವು ಲೋಕಾರ್ಪಣೆ ಆಗಿದೆ.

ಇದು ಅಬುಧಾಬಿಯಲ್ಲಿ(Abhu Dhabhi)ನಿರ್ಮಾಣ ಆಗಿರುವ ಮೊದಲ ಹಿಂದೂ ಮಂದಿರ. ಇದರ ಅದ್ಭುತ ಫೋಟೋಗಳು ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ.

BHPS Mandira


ದೇವಾಲಯವನ್ನು ಸಾಂಪ್ರದಾಯಿಕ ಮತ್ತು ಆಧುನಿಕ ವಾಸ್ತುಶಿಲ್ಪದ ಮಿಶ್ರಣದಿಂದ ನಿರ್ಮಿಸಲಾಗಿದೆ, ಇದು ಸಾವಿರಾರು ವರ್ಷಗಳವರೆಗೆ ಅಡೆತಡೆಯಿಲ್ಲದೆ ಉಳಿಯುತ್ತದೆ.

ಯುಎಇಯಲ್ಲಿನ(UAE) ಶಾಖವನ್ನು ತಡೆದುಕೊಳ್ಳಲು, ಇಟಾಲಿಯನ್ ಮಾರ್ಬಲ್(Italian marble) ಮತ್ತು ಮರಳುಗಲ್ಲುಗಳನ್ನು ರಾಜಸ್ಥಾನದಿಂದ(Rajasthan )ತಂದು ನಿರ್ಮಾಣದಲ್ಲಿ ಬಳಸಲಾಯಿತು. ಅತ್ಯಾಧುನಿಕ ತಂತ್ರಜ್ಞಾನ, ವೈಶಿಷ್ಟ್ಯಗಳು ಮತ್ತು ಸಂವೇದಕಗಳನ್ನು ಅಳವಡಿಸಲಾಗಿದೆ.

UAE

ಸುಮಾರು 700 ಕೋಟಿ ವೆಚ್ಚದಲ್ಲಿ 27 ಮಾಡಿ ಎಕರೆ ವಿಸ್ತೀರ್ಣದಲ್ಲಿ ದೇಗುಲ ನಿರ್ಮಾಣ ಆಗಿದೆ. ಯುಎಇಯ 7 ಎಮಿರೇಟ್‌ಗಳನ್ನು(Emirates) ಸಂಕೇತಿಸಲು ಈ ದೇವಾಲಯದಲ್ಲಿ 7 ಗೋಪುರಗಳನ್ನು ಸ್ಥಾಪಿಸಲಾಗಿದೆ.

ದೇವಾಲಯವು 402 ಕಂಬಗಳನ್ನು ಹೊಂದಿದೆ. ದೇವತೆಗಳು, ನವಿಲುಗಳು, ಆನೆಗಳು, ಒಂಟೆಗಳು, ಸೂರ್ಯ ಮತ್ತು ಚಂದ್ರ, ಸಂಗೀತ ವಾದ್ಯಗಳನ್ನು ನುಡಿಸುವ ವಿದ್ಯಾರ್ಥಿಗಳು ಇತ್ಯಾದಿಗಳನ್ನು ಪ್ರತಿ ಕಂಬದಲ್ಲಿ ಕೆತ್ತಲಾಗಿದೆ.

ದೇವಾಲಯದ ಎತ್ತರ 108 ಅಡಿ. 40 ಸಾವಿರ ಘನ ಅಡಿ ಅಮೃತಶಿಲೆ ಮತ್ತು 1.80 ಲಕ್ಷ ಘನ ಅಡಿ ಮರಳುಗಲ್ಲು ನಿರ್ಮಾಣಕ್ಕೆ ಬಳಸಲಾಗಿದೆ. 18 ಲಕ್ಷ ಇಟ್ಟಿಗೆಗಳನ್ನೂ ಬಳಸಲಾಗಿದೆ.


ನೀವು ಇದನ್ನೂ ಇಷ್ಟ ಪಡಬಹುದು:ಯುಎಇಯಲ್ಲಿ ಹಿಂದೂ ದೇಗುಲ; ಮಂದಿರ ಉದ್ಘಾಟಿಸಲಿದ್ದಾರೆ ಮೋದಿ

ಈ ಮಂದಿರವನ್ನು ಫೆಬ್ರವರಿ 14 ರ ಸಂಜೆ 6 ಗಂಟೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ(Narendra Modi) ಉದ್ಘಾಟನೆ (Inaugrated)ಮಾಡಿದರು. ಹಿಂದೂ ದೇಗುಲ ಲೋಕಾರ್ಪಣೆಯ ಹಲವು ಧಾರ್ಮಿಕ ವಿಧಿ ವಿಧಾನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡರು. ಆರತಿ ವಿಧಿವಿಧಾನವನ್ನು ಪೂರ್ಣಗೊಳಿಸಿದರು. ದೇವರ ಪಾದಾರವಿಂದಗಳಿಗೆ ಪುಷ್ಪಸಮರ್ಪಿಸಿದರು.

Swami Narayana

ದೇವಾಲಯವನ್ನು ಪ್ರವೇಶಿಸುವ ಮುನ್ನ ಪ್ರಧಾನಿ ಮೋದಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಈ ವೇಳೆ, ಭಾರತೀಯ ಸಮುದಾಯದ ಜನರು ಭಾರೀ ಸಂಖ್ಯೆಯಲ್ಲಿ ನೆರೆದಿದ್ದರು.
ಅಬುಧಾಬಿಯಲ್ಲಿ ಬೋಚಾಸನವಾಸಿ ಅಕ್ಷರ ಪುರುಷೋತ್ತಮ ಸಂಸ್ಥಾ (BAPS) ಮಂದಿರವನ್ನು ನಿರ್ಮಿಸಲಾಗಿದ್ದು, ಇದು ಯುಎಇ ಮೊದಲ ಹಿಂದು ದೇವಾಲಯ ಎನಿಸಿದೆ.

ರಾಜಸ್ಥಾನದ ಮಕ್ರಾನ ಗ್ರಾಮದ ಶಿಲ್ಪಿಗಳು, ಕುಶಲಕರ್ಮಿಗಳು ಯುಎಇ ಹಿಂದು ದೇವಾಲಯದ ವಾಸ್ತುಶಿಲ್ಪಕ್ಕೆ, ಮೂರ್ತಿಗಳ ಕೆತ್ತನೆಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ.

ಕಳೆದ ಐದು ವರ್ಷದಲ್ಲಿ ಇವರು ರಾಮ, ಕೃಷ್ಣನ ಮೂರ್ತಿಗಳು, ದೇವಾಲಯದ ಕಂಬಗಳು, ಶಿಖರಗಳು, ಕಲಾಕೃತಿಗಳನ್ನು ಕೆತ್ತುವ ಮೂಲಕ ದೇವಸ್ಥಾನದ ಸೌಂದರ್ಯವನ್ನು ಹೆಚ್ಚಿಸಿದ್ದಾರೆ.

2019ರಲ್ಲಿ ದೇವಾಲಯ ನಿರ್ಮಾಣ ಆರಂಭವಾಗಿದ್ದು, ಇಷ್ಟೂ ವರ್ಷಗಳಲ್ಲಿ ರಾಜಸ್ಥಾನದ ಕಲಾವಿದರು ಅವಿರತವಾಗಿ ಶ್ರಮಿಸಿ, ಶಿಲ್ಪಕಲೆಯ ಮೆರುಗನ್ನು ಹೆಚ್ಚಿಸಿದ್ದಾರೆ.

ಹಿಂದು ದೇವಾಲಯ ನಿರ್ಮಾಣದ ಕುರಿತು ಪ್ರಸ್ತಾಪ ಮಾಡಿದ್ದನ್ನು ನರೇಂದ್ರ ಮೋದಿ ಫೆಬ್ರವರಿ 13ರಂದು ಸ್ಮರಿಸಿ ಮಾತನಾಡಿದ್ದರು. “2015ರಲ್ಲಿ ನಾನು ಯುಎಇಗೆ ಭೇಟಿ ನೀಡಿದ್ದೆ.

ಆಗ, ಹಿಂದೂ ದೇವಾಲಯ ನಿರ್ಮಾಣ ಪ್ರಸ್ತಾಪವನ್ನು ಯುಇಎ ಅಧ್ಯಕ್ಷರ ಮುಂದಿಟ್ಟಾಗ, ಮರುಕ್ಷಣವೇ ಅವರು ಒಪ್ಪಿಗೆ ಸೂಚಿಸಿದರು. ಪರಿಣಾಮ, ಅಬುಧಾಬಿಯ 27 ಎಕರೆ ಭೂಮಿಯಲ್ಲಿ ಈಗ ದೇವಾಲಯ ನಿರ್ಮಾಣವಾಗಿದೆ. ಅದನ್ನು ಉದ್ಘಾಟಿಸುವ ಸೌಭಾಗ್ಯ ನನಗೆ ದೊರೆತಿದೆ” ಎಂದಿದ್ದರು.

Narendra Modi

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button