ದೂರ ತೀರ ಯಾನವಿಂಗಡಿಸದ

ಬೆಂಗಳೂರು ನಗರದಲ್ಲಿ ನೋಡಬಹುದಾದ ಕೆಲ ತಾಣಗಳು

ಬೆಂಗಳೂರು(Bangalore) ಕರ್ನಾಟಕ(Karnataka) ರಾಜ್ಯದ ದೊಡ್ಡ ನಗರ. ಕ್ರಿ.ಶ.1537ರಲ್ಲಿ ನಾಡಪ್ರಭು ಕೆಂಪೇಗೌಡರಿಂದ(Kemepgowda) ನಿರ್ಮಾಣವಾಯಿತು. ಇದು ದಕ್ಷಿಣ ಪ್ರಸ್ಥಭೂಮಿಯ ಮೇಲಿದ್ದು, ಕರ್ನಾಟಕದ ಆಗ್ನೇಯ ದಿಕ್ಕಿನಲ್ಲಿದೆ. 

ಜಗತ್ತಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ(Information Technology) ಮಹತ್ತರವಾದ ಕಾಣಿಕೆ ನೀಡುತ್ತಾ ಬಂದಿರುವ ಕಾರಣ ಬೆಂಗಳೂರು ವಿಶ್ವಾದ್ಯಂತ ಭಾರತದ ‘ಸಿಲಿಕಾನ್ ವ್ಯಾಲಿ’ (Silicon Valley)ಎಂದೇ ಪ್ರಸಿದ್ಧ.

ಲಾಲ್ ಬಾಗ್’ಗಳಂತಹ ದೊಡ್ಡ ಉದ್ಯಾನವನಗಳನ್ನು ಹೊಂದಿರುವ ಈ ನಗರವು ‘ಉದ್ಯಾನ ನಗರಿ’(Garden City) ಎಂದೂ ಪ್ರಸಿದ್ಧ. ರಾಜ್ಯ ರಾಜಧಾನಿಯಲ್ಲಿ ನೀವು ಒಂದು ದಿನದಲ್ಲಿ ನೋಡಬಹುದಾದ ಕೆಲ ತಾಣಗಳ ಮಾಹಿತಿ ಇಲ್ಲಿದೆ.

ಬನ್ನೇರುಘಟ್ಟ(Bannerghatta)

ಬನ್ನೇರುಘಟ್ಟದ ಅರಣ್ಯ ಪ್ರದೇಶದ ಮುಖ್ಯ ಆಕರ್ಷಣೆಯೇ ಅಲ್ಲಿರುವ ಹುಲಿ(Tiger) ಮತ್ತು ಸಿಂಹಗಳು(Lion). 25 ಸಾವಿರ ಎಕರೆ ಪ್ರದೇಶದಷ್ಟು ವಿಸ್ತಾರ ಹೊಂದಿರುವ ಈ ಮೀಸಲು ಪ್ರದೇಶ ಹುಲಿ, ಸಿಂಹ, ಚಿರತೆ, ಕಾಡುಕೋಣ, ಜಿಂಕೆ, ಕರಡಿಗಳು, ಪಕ್ಷಿಗಳು ಮತ್ತು ವಿವಿಧ ಜಾತಿಯ ಚಿಟ್ಟೆಗಳ ನೆಲೆಯಾಗಿದೆ.

ಈ ಉದ್ಯಾನವನದ ಮುಖ್ಯ ಆಕರ್ಷಣೆ ಎಂದರೆ ದೇಶದಲ್ಲೇ ಮೊಟ್ಟ ಮೊದಲನೇಯದಾದ ಚಿಟ್ಟೆಗೆಂದೇ (Butterfly)ಇರುವ ಉದ್ಯಾನವನ(Park).

ಚಿಟ್ಟೆಗಳ ಆಕರ್ಷಣೆಗೆಂದೇ ಈ ಪ್ರದೇಶದಲ್ಲಿ ವಿಶಿಷ್ಟ ಉಷ್ಣವಲಯದ ಪರಿಸರ ರೂಪುಗೊಳ್ಳಲೆಂದು ವಿವಿಧ ಜಾತಿಯ ಸಸ್ಯಗಳನ್ನು ನೆಡಲಾಗಿದೆ. ಸುಮಾರು 20 ರೀತಿಯ ವಿವಿಧ ಜಾತಿಯ ಚಿಟ್ಟೆಗಳನ್ನು ಇಲ್ಲಿ ನಾವು ಕಾಣಬಹುದು.

ದೊಡ್ಡ ಆಲದ ಮರ(Dodda Alada Mara)

ದೊಡ್ಡ ಆಲದ ಮರ ಬೆಂಗಳೂರಿನಿಂದ 28 ಕಿ.ಮೀ. ದೂರವಿರುವ . ಬೆಂಗಳೂರು ದಕ್ಷಿಣ (Bangalore South)ತಾಲ್ಲೂಕಿನ ಕೇತೋಹಳ್ಳಿ(Kethohalli) 3 ಎಕರೆಯಲ್ಲಿ ಇಡೀ ಭಾರತದ ಪುರಾತನ ಆಲದ ಮರಗಳಲ್ಲೇ ನಾಲ್ಕನೆಯ ಸ್ಥಾನ ಹೊಂದಿರುವ ಪುರಾತನ ಆಲದ ಮರವಾಗಿದೆ.

400 ವರ್ಷಗಳಷ್ಟು ವಯಸ್ಸಾಗಿರುವ ಈ ವಿರಳ ಆಲದ ಮರಕ್ಕೆ ಇಡೀ ಭಾರತದ ಪುರಾತನ ಆಲದ (Banyan tree) ನಾಲ್ಕನೆಯ ಸ್ಥಾನ.

Dodda Alada Mara

ಟಿಪ್ಪು ಸುಲ್ತಾನ್‌ ಅರಮನೆ(Tipu Sultan Summer Palace)

ನವಾಬ್‌ ಹೈದರ್‌ (Haidar)ಕಾಲದಲ್ಲಿ ಪ್ರಾರಂಭಗೊಂಡು 1791 ರಲ್ಲಿ ಟಿಪ್ಪು ಸುಲ್ತಾನ್‌ನ ಕಾಲದಲ್ಲಿ ಪೂರ್ಣಗೊಂಡ ಈ ಅರಮನೆ ಎರಡಂತಸ್ತಿನ ಈ ಕಟ್ಟಡವನ್ನು ಸಮಕಾಲೀನ ಇಂ ಡೋ ಇಸ್ಲಾಮಿಕ್‌(Indo Islamic) ಶೈಲಿಯಲ್ಲಿ ನಿರ್ಮಿಸಲಾಗಿದೆ.

ಕಲ್ಲಿನ ಪೀಠಗಳ ಮೇಲೆ ಮರದ ಕಂಬಗಳನ್ನು ಅಳವಡಿಸಲಾಗಿದ್ದು ಈ ಕಂಬಗಳ ನಡುವೆ ಇರುವ ಇಂಡೋ-ಇಸ್ಲಾಮಿಕ್ (Indo Islamic) ‌ ಶೈಲಿಯ ಕಮಾನುಗಳು ಮನಸೂರೆಗೊಳ್ಳುತ್ತವೆ.

Tippu Sultan Summer Palace

ನೀವು ಇದನ್ನು ಓದಬಹುದು :ಕೊಡಗು ಜಿಲ್ಲೆಯಲ್ಲಿ ನೋಡಬಹುದಾದ ತಾಣಗಳು

ಲಾಲ್‌ಬಾಗ್‌(Lal Bhag)

ಲಾಲ್‌ಬಾಗ್‌ ಭಾರತದ ಅತ್ಯಂತ ಹಳೆಯ ಸಸ್ಯೋದ್ಯಾನಗಳಲ್ಲಿ(Botanical Garden) ಒಂದು . ಗಾಜಿನ ಮನೆಗಳು ಮತ್ತು ಅಲಂಕಾರಿಕ ಹೂವುಗಳು ಉದ್ಯಾನವನದ ಸೌಂದರ್ಯವನ್ನು ಹೆಚ್ಚಿಸಿದೆ.ಸುಮಾರು 240 ಎಕರೆ ಪ್ರದೇಶದಲ್ಲಿ ಹರಡಿರುವ ಉದ್ಯಾನವನ.

ಲಾಲ್‌ಬಾಗ್ (Lal Bhag) ಬೊಟಾನಿಕಲ್ ಗಾರ್ಡನ್‌ನ ಅದ್ಭುತ ಸಸ್ಯಗಳ ಹೊರತಾಗಿ 3000 ವರ್ಷಗಳಷ್ಟು ಹಳೆಯ ಬಂಡೆಯನ್ನು ನೋಡಬಹುದು.

Lal Bhag

ವಿಧಾನಸೌಧ(Vidhana Soudha)

ನಗರದ ಹೆಗ್ಗುರುತುಗಳಲ್ಲಿ ಒಂದಾಗಿರುವ ವಿಧಾನಸೌಧ, ಇಡೀ ದೇಶದಲ್ಲೇ ಅತಿ ದೊಡ್ಡ ಶಾಸಕಾಂಗ ಕಟ್ಟಡವಾಗಿದೆ(Legislature). ಬೆಂಗಳೂರು ನಗರದಲ್ಲಿ ಭೇಟಿ ನೀಡುವ ಪ್ರಮುಖ ಪ್ರವಾಸಿ ಸ್ಥಳ.

ನಾಲ್ಕು ಮಹಡಿಗಳಲ್ಲಿ ನಾಲ್ಕು ವಿಭಿನ್ನ ಪ್ರವೇಶದ್ವಾರಗಳನ್ನು ಹೊಂದಿರುವ ಈ ಸುಂದರವಾದ ಕಟ್ಟಡ ನವ-ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿರುವ ಈ ಕಟ್ಟಡವು ಇಂಡೋ-ಸಾರ್ಸೆನಿಕ್, ದ್ರಾವಿಡ ಮತ್ತು ರಾಜಸ್ಥಾನಿ ವಿನ್ಯಾಸಗಳ ಹಲವಾರು ಅಂಶಗಳನ್ನು ಹೊಂದಿದೆ.

Vidhana Soudha

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button