ದೂರ ತೀರ ಯಾನವಿಂಗಡಿಸದ

ಮಿಜೋರಾಂನಲ್ಲಿ ನೋಡಬಹುದಾದ ತಾಣಗಳು

ನಿತ್ಯಹರಿದ್ವರ್ಣ ಬೆಟ್ಟಗಳು ಮತ್ತು ದಟ್ಟವಾದ ಬಿದಿರಿನ ಕಾಡುಗಳಿಗೆ ಹೆಸರುವಾಸಿಯಾದ ಮಿಜೋರಾಂ (Mizoram)ಈಶಾನ್ಯ ಭಾರತದ(North East)ದಕ್ಷಿಣದ ತುದಿಯಲ್ಲಿದೆ.

ನೀಲಿ ಪರ್ವತಗಳ ನಾಡು ಎಂದು ಕರೆಯಲ್ಪಡುವ ಈ ಬೆಟ್ಟಗಳು ಹರಿಯುವ ನದಿಗಳು ಮತ್ತು ಎತ್ತರದ ಹೊಳೆಯುವ ಜಲಪಾತಗಳಿಂದ ದಾಟಿದೆ.

ಸಾಂಗ್‌ಬರ್ಡ್ ಆಫ್ ಇಂಡಿಯಾ(Song Bird of India)ಎಂದು ಕರೆಯಲ್ಪಡುವ ಈಶಾನ್ಯ ರಾಜ್ಯ ‘ಮಿಜೋರಾಂ’. ಇದು ಭಾರತದ ಅತ್ಯಂತ ಚಿಕ್ಕ ರಾಜ್ಯಗಳಲ್ಲಿ ಒಂದಾಗಿದ್ದು, ಪ್ರವಾಸಿಗರಿಗೆ ಆಕರ್ಷಕ ತಾಣ. ಇಲ್ಲಿ ನೋಡಬಹುದಾದ ಆಕರ್ಷಕ ಸ್ಥಳಗಳು ಇಲ್ಲಿವೆ.

ಮಣಿಪುರದ ಆಕರ್ಷಕ ಸ್ಥಳಗಳು

ಟಮ್ ಸರೋವರ(Tam Lake)

ಟಮ್ ಸರೋವರವು ಮೀನು(Fish )ಮತ್ತು ಸೀಗಡಿಗಳಿಗೆ(Prawns )ಹೆಸರುವಾಸಿಯಾಗಿದೆ ಒಂದು ಆದರ್ಶ ಪಿಕ್ನಿಕ್ ತಾಣವಾಗಿದೆ ಮತ್ತು ದೋಣಿಗಳಲ್ಲಿ ಸವಾರಿ ಮಾಡುವ ಸೌಲಭ್ಯವು ಅದನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ.

Tam Lake Mizoram

ಐಜ್ವಾಲ್‌ನಿಂದ (Jwal)ಸುಮಾರು 85 ಕಿಮೀ ದೂರದಲ್ಲಿದ್ದು ಸುಂದರ ನೋಟವನ್ನು ನೀಡುತ್ತದೆ. 

ಐಜ್ವಾಲ್(Aizawl)

ರಾಜಧಾನಿ(Capital) ಐಜ್ವಾಲ್‌ಗೆ ಹೋಗಿ. ಇದು ತನ್ನ ಅಪೂರ್ವವಾದ ಸೌಂದರ್ಯದಿಂದ ಮೈದುಂಬಿಕೊಂಡಿದೆ. ಸಮುದ್ರಮಟ್ಟದಿಂದ ಸುಮಾರು 1,131 ಮೀಟರ್‌ ಎತ್ತರದಲ್ಲಿದ್ದು, ಮುಗಿಲೆತ್ತರದ ಬೆಟ್ಟಗಳಿಂದ ಆವೃತವಾಗಿದೆ.

ಐಜ್ವಾಲ್‌ ನಿಮಗೆ ಮಿಜೋರಾಂನ ಸಂಪೂರ್ಣವಾದ ರಸದೌತಣವನ್ನು ಉಡುಗೊರೆಯಾಗಿ ನೀಡುತ್ತದೆ. ಇಲ್ಲಿ ವರ್ಣರಂಜಿಯ ಮಾರುಕಟ್ಟೆಗಳು(Markets), ಸ್ವಾದಿಷ್ಟವಾದ ಆಹಾರಗಳು(Food), ಭವ್ಯವಾದ ಹೋಟೆಲ್‌ಗಳನ್ನು ಅನ್ವೇಷಿಸಬಹುದು.

Aizawl Mizoram

ಅಲ್ಲದೆ, ಸಾಹಸ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ದೇವಾಲಯಗಳಿಗೆ (Temples)ಭೇಟಿ ನೀಡಲು ಇಲ್ಲಿ ಸಾಕಷ್ಟು ಅವಕಾಶಗಳಿವೆ.

ನೀವು ಇದನ್ನು ಓದಬಹುದು:ನಾಗಾಲ್ಯಾಂಡ್ ನಲ್ಲಿ ನೋಡಬಹುದಾದ ತಾಣಗಳು

ದಂಪಾ(Dampa)

ದಂಪಾ ವನ್ಯಜೀವಿ ಅಭಯಾರಣ್ಯವಿದೆ(Dampa Wildlife sanctuary). ಇದು ಮಿಜೋರಾಂನ ಜನಪ್ರಿಯ ತಾಣಗಳಲ್ಲಿ ಒಂದಾಗಿದ್ದು, ಮಲಬಾರ್ ಪೈಡ್, ಹಾರ್ನ್‌ಬಿಲ್‌ಗಳು, ಕ್ರೆಸ್ಟೆಡ್‌ ಸರ್ಪ ಹದ್ದುಗಳು, ಪಾರಿವಾಳಗಳನ್ನು ನೋಡಬಹುದು.

Dampa Mizoram

ಇದರಲ್ಲಿ ದಂಪಾ ವನ್ಯಜೀವಿ ಅಭಯಾರಣ್ಯ, ಲೆಂಗ್‌ಟೆಂಗ್‌ ವನ್ಯಜೀವಿ ಅಭಯಾರಣ್ಯ, ಸಾಜಾ ವನ್ಯಜೀವಿ ಅಭಯಾರಣ್ಯಗಳಲ್ಲಿ ಅಪರೂಪ ಜಾತಿಯ ಮೃಗಗಳನ್ನು ನೀವು ನೋಡಬಹುದು..

ಬಕ್ತಾಂಗ್ ವಿಲೇಜ್(Baktawng Village)

 ಇಲ್ಲಿ ನೀವು ವಿಶ್ವದ ಅತಿದೊಡ್ಡ ಕುಟುಂಬ ನೋಡಬಹುದು. ಈ ಹಳ್ಳಿಯಲ್ಲಿ ಜಿಯೋನಾ ಚಾನಾ ಎಂಬುವವರಿಗೆ 39 ಹೆಂಡತಿಯರು, 91 ಮಕ್ಕಳು, 33 ಮೊಮ್ಮಕ್ಕಳು ಮತ್ತು 14 ಮರಿ ಮಕ್ಕಳಿದ್ದು, ವಿಶ್ವದಲ್ಲೇ ಅತಿದೊಡ್ಡ ಕುಟುಂಬ ಹೊಂದಿರುವುದಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆ (Gunniess World Record) ಸೃಷ್ಟಿಯಾಗಿದೆ.

Must visit places in Mizoram

ಸೆರ್ಚಿಪ್(Serchhip)

ಸೆರ್ಚಿಪ್ ಭಾರತದಲ್ಲಿ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಜಿಲ್ಲೆ ನಿಮಗೆ ಅನನ್ಯ ಮತ್ತು ರೋಮಾಂಚಕ ಅನುಭವ ನೀಡುವ ಸ್ಥಳವಾಗಿದೆ.

ಈ ಸಣ್ಣ ಪಟ್ಟಣಕ್ಕೆ ಹೋದರೆ ಥೇಟ್ ಹಳ್ಳಿಯ ಅನುಭವ ಪಡೆದುಕೊಂಡು ಬರಬಹುದು. ನೀಹ್ಲೋಹ್(Neihloh) ಮತ್ತು ಬುವಾಂಗ್ಪುರಿಗಳು(Buganpuri)ಇಲ್ಲಿ ಭೇಟಿ ನೀಡಬಹುದಾದ ಕೆಲವು ಜನಪ್ರಿಯ ಹಳ್ಳಿಗಳು.

Serchhip Mizoram

ಲುಂಗ್ಲೆ(Lunglei)

ಲುಂಗ್ಲೆ ತನ್ನ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಚಾರಣ(Trekking), ಪಕ್ಷಿ ವೀಕ್ಷಣೆ ಮತ್ತು ಸಾಹಸ ಕ್ರೀಡೆಗಳನ್ನು ಆನಂದಿಸಲು ಪ್ರವಾಸಿಗರು ಆಗಾಗ್ಗೆ ಲುಂಗ್ಲೆಗೆ ಬರುತ್ತಾರೆ.

Lunglei Mizoram

ಈ ಪಟ್ಟಣವು ಮಿಜೋರಾಂ ರಾಜ್ಯದ ದಕ್ಷಿಣ ಭಾಗದಲ್ಲಿದೆ. ಈ ಪ್ರದೇಶವು ವಿಶಿಷ್ಟ ಪ್ರವಾಸಿ ಆಕರ್ಷಣೆಯನ್ನು ಹೊಂದಿದ್ದು, ನೈಸರ್ಗಿಕ ಸೌಂದರ್ಯ, ತಂಪಾದ ಹವಾಮಾನ, ರಮಣೀಯ ನೋಟ ಇದನ್ನು ಜನಪ್ರಿಯ ಪ್ರವಾಸಿ ತಾಣವಾಗಿ ರೂಪಿಸಿವೆ.

ಫಾಂಗ್‌ಪುಯಿ ನ್ಯಾಷನಲ್ ಪಾರ್ಕ್ (Phawngpui National park)

ಫಾಂಗ್‌ಪುಯಿ ಬ್ಲೂ ಮೌಂಟೇನ್ ನ್ಯಾಷನಲ್ ಪಾರ್ಕ್(Phawngpui Blue Mountain National park)ಅಥವಾ ಸರಳವಾಗಿ ಫಾಂಗ್‌ಪುಯಿ ನ್ಯಾಷನಲ್ ಪಾರ್ಕ್ ಎಂದು ಕರೆಯಲ್ಪಡುವ ಈ ಸಂರಕ್ಷಿತ ಅರಣ್ಯ ಮಿಜೋರಾಂನಲ್ಲಿದೆ.

Phawngpui National Park

ಈ ಉಷ್ಣವಲಯದ ಕಾಡುಗಳಲ್ಲಿ ಹಲವಾರು ಅಪರೂಪದ ಪ್ರಾಣಿಗಳಾದ ಏಷ್ಯಾಟಿಕ್ ಕಪ್ಪು ಕರಡಿ ಮತ್ತು ಕಪ್ಪು ಹದ್ದಿನಂತಹ ಹಲವಾರು ಜಾತಿಯ ಪಕ್ಷಿಗಳಿವೆ. ಅರಣ್ಯದ ನೈಸರ್ಗಿಕ ಸೌಂದರ್ಯ ಇದರ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಚಂಪೈ ಬೆಟ್ಟ(Champhai Hills)

ಮಿಜೋರಾಂನ ಸರಳವಾದ ಪಟ್ಟಣ ಚಂಪೈ ಸುಂದರವಾದ ಬೆಟ್ಟಗಳನ್ನು ಹೊಂದಿರುವುದರ ಜೊತೆಗೆ ಹಲವಾರು ಪ್ರವಾಸಿ ಆಕರ್ಷಣೆಯನ್ನು ಹೊಂದಿದೆ.

Champhai Hills Mizoram

ಇವುಗಳಲ್ಲಿ ಕುಂಗಾವ್ರಿ ಪುಕ್ (Kungavri Puk)ಎಂಬ ಗುಹೆ(Cave), ಟಿಯಾವ್ ಲುಯಿ(Tiyavi Luyi)ಎಂಬ ನದಿ, ರಿಹ್ ದಿಲ್ ಸರೋವರ(Ridhil) ಲಿಯಾಂಚಿಯಾರಿ ಲುಂಗ್ಲೆನ್ ಟ್ಯಾಂಗ್ ಮತ್ತು ಇನ್ನೂ ಕೆಲವು ಸೇರಿವೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸಕ್ಕೆ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ( ​​Kannada.Travel ) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button