ಆಹಾರ ವಿಹಾರವಿಂಗಡಿಸದ

ದೋಸೆ ಪ್ರಿಯರ ಅಚ್ಚು ಮೆಚ್ಚಿನ ಜನಪ್ರಿಯ ದೋಸೆಗಳಿವು

ದೋಸೆ(Dosa) ಅದೆಷ್ಟೋ ಜನರ ಮನೆಯಲ್ಲಿ ಬೆಳಗ್ಗಿನ ಉಪಹಾರ(Breakfast ). ವೆರೈಟಿ ವೆರೈಟಿ ದೋಸೆಗಳನ್ನು ಮನೆಯಲ್ಲಿಯೇ ರೆಡಿ ಮಾಡ್ತಾರೆ. ಪ್ರದೇಶಕ್ಕೆ ಅನುಗುಣವಾಗಿ ದೋಸೆಗಳಲ್ಲಿಯೂ ವೈವಿದ್ಯತೆ ಕಾಣಬಹುದು. ಇವತ್ತು ನಾವು ನಿಮಗೆ ಕೆಲವೊಂದು ದೋಸೆಗಳ ಮಾಹಿತಿಯನ್ನು ನೀಡುತ್ತೇವೆ. ನೀವು ಆ ಪ್ರದೇಶಕ್ಕೆ ಹೋದಾಗ ಆ ದೋಸೆಗಳನ್ನು ಮಿಸ್ ಮಾಡದೇ ತಿನ್ನಿ.

ಮಸಾಲ ದೋಸೆ(Masala Dosa)

ಮಸಾಲಾ ದೋಸಾ ಅಥವಾ ಮಸಾಲೆ ದೋಸೆ ಎಂಬುದು ಒಂದು ಪ್ರಸಿದ್ಧ ದಕ್ಷಿಣ ಭಾರತದ ಆಹಾರ(South India). ದೋಸೆಯಲ್ಲಿ ಸ್ವಲ್ಪ ಮಾರ್ಪಾಡು ಮತ್ತು ಇದರ ಉಗಮವು ಮಂಗಳೂರು,ಉಡುಪಿ(Mangalore)(Udupi)ತುಳುವರಿಂದ(Tuluva)ಆಯಿತು.

ಭಾರತದಾದ್ಯಂತ ಉಡುಪಿ ಹೋಟೆಲ್ (ಗಳು)(Udupi Hotels)ನವರು ಇದನ್ನು ಜನಪ್ರಿಯಗೊಳಿಸಿದರು. ಚಟ್ನಿ ಮತ್ತು ಸಾಂಬಾರ್ ನಿಂದ ಬಡಿಸಲಾಗುತ್ತದೆ. ದಕ್ಷಿಣ ಭಾರತದಲ್ಲಷ್ಟೇ ಜನಪ್ರಿಯವಾಗಿಲ್ಲದೆ, ಇದು ದೇಶದ ಇತರ ಭಾಗಗಳಲ್ಲಿಯೂ ಮತ್ತು ಸಾಗರೋತ್ತರದಲ್ಲಿಯೂ ಸಹ ಕಾಣಬಹುದು.

Most famous various of dosa in Karnataka

ದಕ್ಷಿಣ ಭಾರತದಲ್ಲಿ ಮಸಾಲಾ ದೋಸೆಯ ತಯಾರಿ ನಗರದಿಂದ ನಗರಕ್ಕೇ ಬದಲಾಗುತ್ತದೆ. ಮೈಸೂರು ಮಸಾಲ ದೋಸೆ(Mysore Masala Dosa), ಈರುಳ್ಳಿ ಮಸಾಲ ದೋಸೆ(Onion Masala Dosa)ಹೀಗೆ ಇಂದು ಮಸಾಲ ದೋಸೆಯಲ್ಲಿ ನಾನಾ ವಿಭಿನ್ನಗಳು ಬಂದಿವೆ.

ನೀರು ದೋಸೆ(Neer dosa)

ಕರಾವಳಿಯ ಬಹು ಪ್ರಸಿದ್ಧ ಖಾದ್ಯ.ತೆಳುವಾಗಿ ಈ ದೋಸೆ ಮಾಡುವುದೇ ಒಂದು ಕಲೆ ಅಂದರು ತಪ್ಪಿಲ್ಲ. ಕೇವಲ ಅಕ್ಕಿ ಮಾತ್ರ ಸಾಕಾಗುವ ,ಸರಳವಾಗಿ ಮಾಡಬಹುದಾದ ದೋಸೆ. ಕರಾವಳಿ ಭಾಗದಲ್ಲಿ (Coastal Karnataka)ಹಲವು ನಾನ್ ವೆಜ್ ಊಟದ ಖಾದ್ಯಗಳಲ್ಲಿ ಈ ದೋಸೆಗೆ ಸ್ಥಾನವಿದೆ.

Most famous various of dosa in Karnataka

ಚಟ್ನಿ ,ಪಲ್ಯ,ಸಾಂಬಾರ್,ಬೆಲ್ಲದ ಮಿಶ್ರಣ ಎಲ್ಲವೂದರ ಜೊತೆಗೆ ಇದು ಬೆಸ್ಟ್ ಕಾಂಬಿನೇಷನ್. ನೀರ್ ದೋಸೆ ಕರ್ನಾಟಕ ರಾಜ್ಯದ ದಕ್ಷಿಣ ಭಾಗದ ಅತ್ಯಂತ ಪ್ರಸಿದ್ಧ ಅಡುಗೆಯಾಗಿದೆ.Most famous various of dosa in Karnataka

ನೀರ್ ದೋಸೆ ಯನ್ನು ಹೆಚ್ಚಾಗಿ ಮಂಗಳೂರು( Mangalore)ಉಡುಪಿ (Udupi)ಭಾಗದ ಅಡುಗೆಯಾಗಿ ಗುರುತಿಸಲಾಗಿದೆ. ಆದರೆ ಈ ದೋಸೆ ಕುಂದಾಪುರ(Kundapura)ಮತ್ತು ಮಲೆನಾಡು ಪ್ರದೇಶದಾದ್ಯಂತ ಬಹಳ ಹಳೆಯ ಕಾಲದಿಂದ ಆಚರಣೆಯಲ್ಲಿದೆ. ಮಲೆನಾಡಿನಲ್ಲಿ(Malenad) ಸಾಧಾರಣವಾಗಿ ಇದನ್ನು ” ಬರೀ ಅಕ್ಕಿ ದೋಸೆ ” ಎಂದು ಕುಂದಾಪುರ ಪ್ರದೇಶದಲ್ಲಿ “ತೆಳ್ಳಿನ್ ದೋಸೆ” ಎಂದು ಕರೆಯಲಾಗುತ್ತದೆ.

ಬೆಣ್ಣೆ ದೋಸೆ(Benne Dosa)

ಬೆಣ್ಣೆ ದೋಸೆಯು ಕರ್ನಾಟಕದ ದಾವಣಗೆರೆ (Davangere)ಜಿಲ್ಲೆಯಲ್ಲಿ ಪ್ರಸಿಧ್ಧಿ ಹೊಂದಿದೆ. ದಾವಣಗೆರೆ ಬೆಣ್ಣೆ ದೋಸೆ ಅಥವಾ ಬೆಣ್ಣೆ ದೋಸೆ ಮೂಲವು ಕರ್ನಾಟಕದ ದಾವಣಗೆರೆ ಜಿಲ್ಲೆಯಾಗಿದೆ. ದಾವಣಗೆರೆಯಲ್ಲಿರುವ ಮಂಡಕ್ಕಿ ಭಟ್ಟಿ, ಹಾಗು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಿಗುವ ಬೆಣ್ಣೆ ದಾವಣಗೆರೆಯಲ್ಲಿ ಈ ಉದ್ಯಮ ಬೆಳೆಯುವುದಕ್ಕೆ ಮುಖ್ಯ ಕಾರಣ.

Most famous various of dosa in Karnataka

ಸಾಮಾನ್ಯ ದೋಸೆಯನ್ನು ತಯಾರಿಸುವಾಗ ಹೆಚ್ಚಿನ ಪ್ರಮಾಣದ ಬೆಣ್ಣೆಯನ್ನು ಸೇರಿಸುವ ಮೂಲಕ ಮತ್ತು ತೆಂಗಿನಕಾಯಿಯ ಚಟ್ನಿಯೊಂದಿಗೆ ಈ ಬೆಣ್ಣೆ ದೋಸೆಯನ್ನು ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಅದರ ಹಿಟ್ಟನ್ನು ಅಕ್ಕಿ, ಉದ್ದಿನ ಬೇಳೆ, ಮಂಡಕ್ಕಿ ಇತ್ಯಾದಿಗಳಿಂದ ತಯಾರಿಸಿ ಆ ಮಿಶ್ರಣದಿಂದ ಕಾವಲಿಯಲ್ಲಿ ಬೆಣ್ಣೆ ದೋಸೆ ಮಾಡಲಾಗುತ್ತದೆ.

ನೀವು ಇದನ್ನು ಇಷ್ಟ ಪಡಬಹುದು:ಉತ್ತರ ಕರ್ನಾಟಕಕ್ಕೆ ಹೋದಾಗ ಈ ಖಾದ್ಯಗಳನ್ನು ಒಮ್ಮೆ ಟೇಸ್ಟ್ ಮಾಡಿ.

ಬೆಳಗಾವಿಯ(Belgavi )ರಾಮದುರ್ಗ(Ramadurga )ತಾಲೂಕಿನಿಂದ ಕುಟುಂಬವೊಂದು ದಾವಣಗೆರೆ ವಲಸೆ ಬಂದಿತ್ತು. ಈ ಕುಟುಂಬದ ಚೆನ್ನಮ್ಮ(Chennamma)ಎಂಬ ಮಹಿಳೆ ತನ್ನ ಮಕ್ಕಳ ಜೊತೆ ದೋಸೆ, ಚಟ್ನಿ, ಆಲೂಗಡ್ಡೆ ಪಲ್ಯ ತಯಾರಿ ಮಾರಾಟ ಮಾಡಲು ಆರಂಭಿಸಿದರು.1938 ರ ಹೊತ್ತಿಗೆ ಚೆನ್ನಮ್ಮ ಅವರ ಮಕ್ಕಳಾದ ಶಾಂತಪ್ಪ ಮತ್ತು ಮಹದೇವಪ್ಪ ಅವರು ಅಕ್ಕಿ ಹಿಟ್ಟಿನ ದೋಸೆ ಮಾಡಲು ಶುರು ಮಾಡಿದರು. ಬೆಣ್ಣೆ ಬೆರೆಸಿದ ಬಿಸಿ ಬಿಸಿ ದೋಸೆಗೆ ದಾಲ್ ಸಾಥ್ ಕೊಡ್ತಿತ್ತು. ಮುಂದೆ ಇದೇ ಬೆಣ್ಣೆ ದೋಸೆ ಜಗತ್ಪ್ರಸಿದ್ಧವಾಯಿತು.

ರವಾ ದೋಸೆ(Rava Dosa)

ರವಾ ದೋಸೆಗಳನ್ನು ಕೂಡ ಒಂದು ವಿಧದ ದೋಸೆ. ಬಹುತೇಕರ ಮನೆಗಳಲ್ಲಿಯೂ ಈ ದೋಸೆಗೆ ಖಾಯಂ ಸ್ಥಾನ. ರವಾ ದೋಸೆಯ ವಿಧಗಳಲ್ಲಿ ಈರುಳ್ಳಿ ರವಾ ದೋಸೆ, ರವಾ ಮಸಾಲೆ ದೋಸೆ ಮತ್ತು ರವಾ ಸಾದಾ ದೋಸೆ ಸೇರಿವೆ. ಅವುಗಳನ್ನು ಸಾಗು ,ಚಟ್ನಿ ಜೊತೆ ತಿನ್ನಬಹುದು.

Most famous various of dosa in Karnataka

ರಾಗಿ ದೋಸೆ(Ragi Dosa)

ದಕ್ಷಿಣ ಭಾರತದಲ್ಲಿ(South India)ರಾಗಿ ದೋಸೆ ಫೇಮಸ್(Famous). ರಾಗಿಯಿಂದ ಮಾಡಿದ ರುಚಿಕರವಾದ ತೆಳುವಾದ ಕ್ರೆಪ್ಸ್ ಸಖತ್ ಇಷ್ಟವಾಗುತ್ತದೆ. ರಾಗಿ ದೋಸೆಯನ್ನು ಧಾನ್ಯಗಳಿಂದ ತಯಾರಿಸಲಾಗುತ್ತದದೆ.

Most famous various of dosa in Karnataka

ಗೋಧಿ ದೋಸೆ(Wheat Dosa)

ಗೋಧಿ ಹಿಟ್ಟಿನಿಂದ ತಯಾರಿಸಿದ ಆರೋಗ್ಯಕರ ದಿಢೀರ್ ದೋಸೆ ಉತ್ತಮವಾಗಿದೆ. . ಇತರ ಸಾಂಪ್ರದಾಯಿಕ ದಕ್ಷಿಣ ಭಾರತದ(South India)ದೋಸೆ ಪಾಕವಿಧಾನಕ್ಕಿಂತ ಇದು ಭಿನ್ನವಾಗಿದೆ, ಗೋಧಿ ದೋಸೆ ಮಾಡುವ ವಿಧಾನ ಜನಪ್ರಿಯ ರವಾ ದೋಸೆ ವಿಧಾನಕ್ಕೆ ಹೋಲುತ್ತದೆ, ಅದು ಒಂದೇ ವಿನ್ಯಾಸ ಮತ್ತು ಗರಿಗರಿಯಾದ ಮಟ್ಟವನ್ನು ಹೊಂದಿರುತ್ತದೆ. ಗೋಧಿ ದೋಸೆಯಲ್ಲಿ ಗೋಧಿ ಪ್ರಮುಖ ಪಾತ್ರ ವಹಿಸುತ್ತದೆ.

Most famous various of dosa in Karnataka

(ಇದು ಕೆಲವೇ ಕೆಲವು ಜನಪ್ರಿಯ ದೋಸೆಗಳ ಮಾಹಿತಿ.. ಬಹುತೇಕರ ಮನೆಯಲ್ಲಿ ಮಾಡುವ ದೋಸೆಗಳು. ಹೋಟೆಲ್ ಗಳಲ್ಲಿ ಇನ್ನು ಹಲವು ಬಗೆಯ ದೋಸೆಗಳನ್ನು ತಯಾರಿಸುತ್ತಾರೆ. ನೀವು ಕೂಡ ನಿಮ್ಮ.ಕಡೆಗಳಲ್ಲಿ ಮಾಡುವ ವಿಶೇಷ ಖಾದ್ಯಗಳ ಬಗ್ಗೆ ನಮಗೆ ಬರೆದು ಕಳುಹಿಸಿ. ನಾವು ಅದನ್ನು ಪ್ರಕಟಿಸುತ್ತೇವೆ.)

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button