ಆಹಾರ ವಿಹಾರನಮ್ ತಿಂಡಿ ರೆಸಿಪಿನಮ್ಮೂರ ತಿಂಡಿವಿಂಗಡಿಸದ

ಉತ್ತರ ಕರ್ನಾಟಕಕ್ಕೆ ಹೋದಾಗ ಈ ಖಾದ್ಯಗಳನ್ನು ಒಮ್ಮೆ ಟೇಸ್ಟ್ ಮಾಡಿ.

ನಮ್ಮ ದೇಶದಲ್ಲಿ ವಿವಿಧ ಭಾಗಗಳಲ್ಲಿ ಒಬ್ಬೊಬ್ಬರದು ಒಂದೊಂದು ಸಂಸ್ಕೃತಿ ಆಚಾರ ವಿಚಾರ ಅದೇ ರೀತಿ ಆಹಾರ(Food) ಪದ್ಧತಿಯೂ ಇದೆ. ಅದೇ ರೀತಿ ನಮ್ಮ ಕರ್ನಾಟಕದಲ್ಲೂ (Karnataka)ಕೂಡ ಉತ್ತರ ಕರ್ನಾಟಕದ ಭಾಗದಲ್ಲಿ ಒಂದು ಬಗೆಯ ಆಹಾರ ಪದ್ಧತಿ ಆದರೆ ದಕ್ಷಿಣ(South)ಕಡೆ ಮತ್ತೊಂದು ಬಗೆಯ ಆಹಾರ ಪದ್ಧತಿ ಇರುತ್ತದೆ.

ಉತ್ತರ ಕರ್ನಾಟಕದ(North Karnataka)ಹಲವು ಭಾಗಗಳಲ್ಲಿ ಜೋಳದ ರೊಟ್ಟಿಗೆ ವಿಶೇಷ ಗೌರವವಿದೆ. ಇದರ ಜೊತೆಗೆ ಇನ್ನೂ ಕೆಲವು ಆಹಾರ ಖಾದ್ಯಗಳಿವೆ. ನೀವು ಉತ್ತರ ಕರ್ನಾಟಕ ಕಡೆ ಹೋದಾಗ ಈ ಫುಡ್ ಗಳನ್ನೂ ಮಿಸ್ ಮಾಡದೇ ಟ್ರೈ ಮಾಡಿ.

ಜೋಳದ ರೊಟ್ಟಿ(Jowar Roti )

ಜೋಳದ ರೊಟ್ಟಿ ಅಥವಾ ಭಕ್ಕರಿ ಇಲ್ಲಿಯ ವಿಶೇಷ. ಜೋಳ ಬೀಸಿದ ಹಿಟ್ಟನ್ನು ಕಲಸಿ ಅದರ ಉಂಡೆಗಳನ್ನು ತೆಳ್ಳಗೆ ತಟ್ಟಿ ಹಂಚಿನ ಮೇಲೆ ಬೇಯಿಸಲಾಗುತ್ತದೆ. ಬೇಯುವಾಗ ಒದ್ದೆಬಟ್ಟೆಯಿಂದ ರೊಟ್ಟಿಯನ್ನು ಅಮುಕುತ್ತಾರೆ.

Jowar Roti North Karnataka must eat foods

ಎಣ್ಣೆಗಾಯಿ(Ennegayi)

ಎಣ್ಣೆಗಾಯಿ(Ennegayi) ಅಥವಾ ತುಂಬುಗಾಯಿ ಒಂದು ಬಗೆಯ ಪಲ್ಯದ ಹೆಸರು. ಚಿಕ್ಕ ಬದನೇಕಾಯಿಗಳನ್ನು ಕೊಯ್ದು ಅವುಗಳಲ್ಲಿ ವಿಶೇಷ ಮಸಾಲೆಪುಡಿಯನ್ನು ತುಂಬಿಸಿ ಎಣ್ಣೆಯಲ್ಲಿ ಹುರಿಯುತ್ತಾರೆ. ತುಂಬಿಸಲು ಬೇಕಾದ ಮಸಾಲೆಯನ್ನು ಕಡಲೇಕಾಯಿ (ಶೇಂಗಾ)(Peanuts),ಎಳ್ಳು, ಶುಂಠಿ, ಬೆಳ್ಳುಳ್ಳಿ, ಉಪ್ಪು, ಒಣಮೆಣಸಿನಕಾಯಿ ಇತ್ಯಾದಿ ಅನೇಕ ಪದಾರ್ಥಗಳನ್ನು ಬಳಸಿ ತಯಾರಿಸುತ್ತಾರೆ.

Ennegayi North Karnataka must eat foods

ಕಾಳುಪಲ್ಯ (Kalu Palya)
ಮೊಳಕೆ (Sprouted) ಬರಿಸಿದ ಕಾಳನ್ನು ಬೇಯಿಸಿ ಒಗ್ಗರಣೆ ಹಾಕಿದ ಪಲ್ಯ. ಕಡಲೆಕಾಳು, (Chickpea)ಮಡಕೆಕಾಳು ಇತ್ಯಾದಿ ಅನೇಕಬಗೆಯ ಕಾಳುಗಳಿಂದ ತಯಾರಿಸುತ್ತಾರೆ.

North Karnataka must eat foods

ಗೋಧಿ ಹುಗ್ಗಿ (Godi Huggi)

ಕುಟ್ಟಿದ ಗೋಧಿಯನ್ನು(Godi Huggi) ಹಾಲಿನಲ್ಲಿ ಬೇಯಿಸಿ, ಬೆಲ್ಲ ಮತ್ತು ತುಪ್ಪ ಬೆರೆಸಿ ಮಾಡುವ ವಿಶೇಷ ಸಿಹಿತಿಂಡಿ.ಗೋದಿ ಹುಗ್ಗಿಯು ಹೆಚ್ಚಾಗಿ ಉತ್ತರ ಕರ‍್ನಾಟಕದ ಬಾಗದಲ್ಲಿ ಮಾಡುವ ಒಂದು ಸಿಹಿ ಅಡುಗೆ. ಹಬ್ಬ ಇಲ್ಲವೇ ಮನೆಯ ಯಾವುದೇ ಸಂತೋಶಕೂಟಕ್ಕೂ ಮಾಡುವ ಹುಗ್ಗಿ ಇದು.

North Karnataka must eat foods

ಗಿರ್ಮಿಟ್ (Girmit)

ಉತ್ತರ ಕರ್ನಾಟಕದ(Mandakki Girmit) ಅತ್ಯಂತ ಜನಪ್ರಿಯ ಖಾದ್ಯಗಳಲ್ಲಿ ಒಂದು ಮಂಡಕ್ಕಿ ಗಿರ್ಮಿಟ್. ಇದನ್ನು ಮುಂಜಾನೆಯ ಉಪಹಾರವಾಗಿ ಅಥವಾ ಸಾಯಂಕಾಲದ ತಿಂಡಿಯನ್ನಾಗಿಯೂ ಸವಿಯಬಹುದು. ಈ ರುಚಿಗೆ ಮನಸೋಲದ ಮಂದಿಯೇ ಇಲ್ಲ.

North Karnataka must eat foods

ನೀವು ಇದನ್ನೂ ಇಷ್ಟ ಪಡಬಹುದು: ಬಾಗಲಕೋಟೆ ಜಿಲ್ಲೆಯಲ್ಲಿ ನೋಡಬಹುದಾದ ತಾಣಗಳು

ಶೇಂಗಾ ಹೋಳಿಗೆ(Shenga Holige)

ಶೇಂಗಾ ಹೋಳಿಗೆ (Shenga Holige)ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಮಾಡುವ ಒಂದು ಸಿಹಿ ತಿಂಡಿಯಾಗಿದೆ. ಒಬ್ಬಟ್ಟು ಮಾಡುವ ರೀತಿಯಲ್ಲಿಯೇ ಈ ಹೋಳಿಗೆಯನ್ನು ಮಾಡಲಾಗುತ್ತದೆ, ಉತ್ತರ ಕರ್ನಾಟಕದಲ್ಲಿ ಇದನ್ನು ಹೆಚ್ಚಾಗಿ ಹಬ್ಬ,ಮದುವೆ,ಸಿಮಂತ ಸಮಯದಲ್ಲಿ ಮಾಡುತ್ತಾರೆ.

North Karnataka must eat foods

ರಂಜಕ (Chutney)
ಕೆಂಪು ಮೆಣಸಿನಕಾಯಿಯನ್ನು(Chill) ಉಪ್ಪು ಮತ್ತು ಇನ್ನೂ ಹಲವು ಮಸಾಲೆಪದಾರ್ಥಗಳೊಂದಿಗೆ ರುಬ್ಬಿ ತಯಾರಿಸಿದ ಚಟ್ನಿ. ಖಾರ ಇಷ್ಟ ಪಡುವವರಿಗೆ ಈ ಚಟ್ನಿ ಸಖತ್ ಇಷ್ಟ ಆಗುತ್ತದೆ. ಬಿಸಿ ಬಿಸಿ ಅನ್ನ,ದೋಸೆ ಜೊತೆಗೆ ಬೆಸ್ಟ್ ಕಾಂಬಿನೇಷನ್.

ಎಳ್ಳುಪುಡಿ (Ellu Podi)
ಎಳ್ಳು(Ellu) ಮತ್ತಿತರ ಮಸಾಲೆಪದಾರ್ಥಗಳನ್ನು ಹುರಿದು ಪುಡಿ ಮಾಡಿ ತಯಾರಿಸಿದ ಚಟ್ನಿಪುಡಿ. ಇದನ್ನು ದೋಸೆ , ಅನ್ನ, ಇಡ್ಲಿ ಜೊತೆ ತಿನ್ನಬಹುದು.ಉತ್ತರ ಕರ್ನಾಟಕಕ್ಕೆ ಹೋದಾಗ ಈ ಖಾದ್ಯಗಳನ್ನು ಒಮ್ಮೆ ಟೇಸ್ಟ್ ಮಾಡಿ.

North Karnataka must eat foods

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.


Related Articles

Leave a Reply

Your email address will not be published. Required fields are marked *

Back to top button