ಕಾರು ಟೂರುದೂರ ತೀರ ಯಾನವಿಂಗಡಿಸದ

ಹಿಮಾಚಲ ಪ್ರದೇಶದಲ್ಲಿ ನೋಡಬಹುದಾದ ತಾಣಗಳು

ಹಿಮಾಚಲ ಪ್ರದೇಶವು(Himachal Pradesh)ಅದ್ಭುತವಾದ ಪ್ರವಾಸಿ ತಾಣಗಳನ್ನು ಹೊಂದಿರುವ ರಾಜ್ಯ. ಇಲ್ಲಿನ ವಾತಾವರಣವು ಯಾವಾಗಲೂ ಶಾಂತ ಮತ್ತು ಆರಾಮದಾಯಕ.

ಹಿಮದಿಂದ ಕೂಡಿರುವ ನಿಮ್ಮ ಮನಸಿಗೆ ಅತೀವ ಆನಂದ ನೀಡುವ ಪರ್ವತಗಳು ಇಲ್ಲಿವೆ. ಹಾಗಾದರೆ ಹಿಮಾಚಲ ಪ್ರದೇಶದ ಪ್ರವಾಸದಲ್ಲಿ ನೀವು ಯಾವುದೆಲ್ಲ ತಾಣಗಳನ್ನು ನೋಡಬಹುದು ಎನ್ನುವ ಮಾಹಿತಿ ಇಲ್ಲಿದೆ.

ಕಸೋಲ್ (Kasol)

ಕಸೊಲ್‌ ಹಿಮಾಚಲ ಪ್ರದೇಶದಲ್ಲಿನ ಕುಲು (Kulu)ಜಿಲ್ಲೆಯಲ್ಲಿರುವ ಒಂದು ಸುಂದರವಾದ ಗ್ರಾಮ. ಕುಲ್ಲುವಿನಿಂದ ಸುಮಾರು 42 ಕಿ.ಮೀ ದೂರದಲ್ಲಿ ಈ ಗ್ರಾಮವಿದೆ. ಈ ತಾಣವು ಸಮುದ್ರ ಮಟ್ಟದಿಂದ ಸುಮಾರು 1680 ಮೀ ಎತ್ತರದಲ್ಲಿ ನೆಲೆಸಿದೆ.

Must visit places in Himachal Pradesh

ಖಿರ್ ಗಂಗಾ(Khir Ganga)

ಈ ಗ್ರಾಮವು ಮಾರ್ಚ್(March) ತಿಂಗಳಿನಿಂದ ಅಕ್ಟೋಬರ್‌(October )ತಿಂಗಳ ಸುಮಾರು ವರ್ಷದ 7 ತಿಂಗಳು ತೆರೆದಿರುತ್ತದೆ. .ಕೇವಲ ಕಾಲ್ನಿಡಿಗೆಯಲ್ಲಿ ಮಾತ್ರ ಈ ಖಿರ್ ಗಂಗಾಗೆ ಪ್ರವೇಶಿಸಬಹುದು. ಇಲ್ಲಿ ಕಿರಿದಾದ ಬಂಡೆಗಳ ನಡುವೆ ಜಲಪಾತಗಳು ಧರೆಗೆ ಬೀಳುವುದನ್ನು ಕಣ್ಣಾರೆ ಕಾಣಬಹುದು.

Must visit places in Himachal Pradesh

ಪಾರ್ವತಿ ಕಣಿವೆ ( Parvati Valley)

ಪಾರ್ವತಿ ಕಣಿವೆಯಲ್ಲಿ ನೆಲೆಸಿರುವ ಒಂದು ವಿಲಕ್ಷಣವಾದ ಹಳ್ಳಿ ಎಂದರೆ ಅದು ತೋಶ್(Tosh). ಇದು ಸುಮಾರು 2,400 ಮೀಟರ್‌ ಎತ್ತರದಲ್ಲಿ ಪಾರ್ವತಿ ಕಣಿವೆಯ ನದಿಯ ಬಲದಂಡೆಯಲ್ಲಿ ಆವೃತ್ತವಾಗಿದೆ.

Must visit places in Himachal Pradesh

ಇಲ್ಲಿನ ಹಳ್ಳಿಯಲ್ಲಿರುವ ಮರದ ಮನೆಗಳು ಪರ್ವತ ಜನರ ವಾಸ್ತುಶಿಲ್ಪದ ಅತ್ಯುತ್ತುಮವಾದ ಉದಾಹರಣೆಯಾಗಿದೆ.

ಗುಲಾಬ್ (Gulaba)

ಮನಾಲಿ (Manali)ಸಮೀಪ ಇರುವ ಮತ್ತು ಭೇಟಿ ನೀಡಲು ಸೂಕ್ತವಾದ ಸುಂದರ ತಾಣಗಳಲ್ಲಿ ಗುಲಾಬಾ ಕೂಡಾ ಒಂದು. ನವೆಂಬರ್‌ನಿಂದ(November )ಮೇ (May)ತಿಂಗಳ ಅವಧಿಯಲ್ಲಿ ಭೇಟಿ ನೀಡಲು ಸೂಕ್ತವಾದ ಸ್ಥಳವಿದು.

Must visit places in Himachal Pradesh

ಮನಾಲಿಯಿಂದ ಸುಮಾರು 27 ಕಿಮೀ ಮತ್ತು ರೋಹ್ಟಾಂಗ್(Rohtang) ಪಾಸ್‌ನಿಂದ ಸುಮಾರು 25 ಕಿಮೀ ದೂರದಲ್ಲಿದೆ ಗುಲಾಬಾ ಇದೆ.

ನೀವು ಇದನ್ನು ಓದಬಹುದು:ಭಾರತದ ಅತ್ಯಂತ ಸುಂದರವಾದ ಕಣಿವೆಗಳು

ಧರ್ಮಶಾಲಾ (Dharamshala)

ಧರ್ಮಶಾಲಾ ಭಾರತದ ಹಿಮಾಚಲ ಪ್ರದೇಶದ ಎರಡನೇ ಚಳಿಗಾಲದ ರಾಜಧಾನಿಯಾಗಿದೆ.ಪಟ್ಟಣವು 1,457 ಮೀಟರ್ ಎತ್ತರದಲ್ಲಿ ಹಿಮಾಲಯದ ಧೌಲಾಧರ್ ಶ್ರೇಣಿಯ ನೆರಳಿನಲ್ಲಿ ಕಂಗ್ರಾ ಕಣಿವೆಯಲ್ಲಿದೆ(Kangra Valley)

Must visit places in Himachal Pradesh

ಹಿಮಾಚಲ ಪ್ರದೇಶದ ಧರ್ಮಶಾಲಾ(Dharamshala) ಸಾಹಸಿಗಳಿಗೆ, ಶಾಂತಿ ಬಯಸುವವರಿಗೆ ಹೇಳಿ ಮಾಡಿಸಿದ ಹಾಗೆ ಇದೆ. ಹಿಮಾಲಯದ ಧೌಲಾಧರ್‌ ಶ್ರೇಣಿಯಲ್ಲಿರುವ ಈ ಸುಂದರವಾದ ಬೆಟ್ಟದ ಪಟ್ಟಣ ಆಹ್ಲಾದಕರವಾದ ಹವಾಮಾನವನ್ನು ಹೊಂದಿದೆ.

ಡಾಲ್ಹೌಸಿ(Dalhousie)

ಡಾಲ್ಹೌಸಿ (Dalhousie) ಭಾರತದ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಚಂಬಾ ಪಟ್ಟಣದ ಸಮೀಪವಿರುವ ಒಂದು ಗಿರಿಧಾಮವಾಗಿದೆ . ಇದು ಐದು ಬೆಟ್ಟಗಳ ಮೇಲೆ ನೆಲೆಗೊಂಡಿದೆ ಮತ್ತು ಸಮುದ್ರ ಮಟ್ಟದಿಂದ 1,970 ಮೀ ಎತ್ತರದಲ್ಲಿದೆ.

Must visit places in Himachal Pradesh

ಇದು ಹಿಮಾಚಲ ಪ್ರದೇಶ ರಾಜ್ಯದ ಒಂದು ಸುಂದರ ಪ್ರವಾಸಿ ತಾಣವಾಗಿದೆ. ಅಲ್ಲದೇ ಈ ಪ್ರದೇಶವು ಅತ್ಯಂತ ಜನಪ್ರಿಯ ಛಂಬಲ್‌ ಅರಣ್ಯ ಪ್ರದೇಶದ (Chambal Forest)ಪ್ರವೇಶದ್ವಾರವೂ ಆಗಿದೆ . ಕತ್ಲೋಗ್‌, ಪೋರ್ಟರೇಯನ್‌, ತೆಹ್ರಾ, ಬಕ್ರೋಟಾ ಹಾಗೂ ಬಾಲುನ್ ಎಂಬ ಐದು ಬೆಟ್ಟಗಳ ಮೇಲೆ ನೆಲೆಸಿರುವ ಅತಿ ಸುಂದರ ಗಿರಿಧಾಮ ಈ ಪ್ರದೇಶವಾಗಿದೆ.

ಬಿರ್ (Bir)

ಹಿಮಾಚಲ ಪ್ರದೇಶದ (Himachal Pradesh) ಅತ್ಯಂತ ಅದ್ಭುತವಾದ ಸ್ಥಳಗಳಲ್ಲಿ ಈ ಬಿರ್ ದೌಲಾಧರ್‌ ಕೂಡ ಒಂದಾಗಿದೆ. ಈ ರಮಣೀಯವಾದ ಸ್ಥಳವು ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದ್ದು, ನೀವು ಸಾಹಸವನ್ನು ಇಷ್ಟ ಪಡುವವರಾಗಿದ್ದರೆ ಬೀರ್‌ ಅತ್ಯುತ್ತಮವಾದ ಆಯ್ಕೆಯಾಗಿದೆ.

Must visit places in Himachal Pradesh

ಸಂಗೀತ ಉತ್ಸವಕ್ಕೆ (Music Festival) ಪಾಲ್ಗೊಂಡ ನಂತರ ನೀವು ಸಾಹಸಮಯ ಚಟುವಟಿಕೆಗಳನ್ನು ಕೈಗೊಳ್ಳಬಹುದು. ಹಾಗೆಯೇ ಪ್ಯಾರಾಗ್ಲೈಡಿಂಗ್‌ ಗೆ ಈ ತಾಣವು ಹೆಚ್ಚು ಹೆಸರುವಾಸಿಯಾಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button