ದೂರ ತೀರ ಯಾನವಿಂಗಡಿಸದ

ಕೊಚ್ಚಿ, ಕೋಲ್ಕತ್ತಾ ಬಳಿಕ ಸಿಲಿಕಾನ್ ಸಿಟಿಯಲ್ಲಿಯೂ ನಮ್ಮ ಯಾತ್ರಿ ಕ್ಯಾಬ್ ಸೇವೆ

ಬೆಂಗಳೂರು(Bangalore )ಮೂಲದ , ಜಸ್ಪೇ ತಂತ್ರಜ್ಞಾನ(Juspay Technology )ಒಡೆತನದ ನಮ್ಮ ಯಾತ್ರಿ(Namma yatri) ಆಟೋ ಸೇವೆಯ ಬಳಿಕ ಬೆಂಗಳೂರಿನಲ್ಲಿ(Bengaluru- )ಕ್ಯಾಬ್ ಸೇವೆಯನ್ನು ಪ್ರಾರಂಭಿಸಲು ನಿರ್ಧರಿಸಿದೆ.

Namma yatri

ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಕ್ಯಾಬ್ ಸೇವೆ ಆರಂಭ ಮಾಡೋದಕ್ಕೂ ಮುನ್ನ ಯಾತ್ರಿ ಮತ್ತು ಯಾತ್ರಿ ಸಾಥಿ ಕ್ಯಾಬ್ ಸೇವೆಯನ್ನು ಚೆನ್ನೈ(Chennai) ಮತ್ತು ಕೋಲ್ಕತ್ತಾದಲ್ಲಿ(Kolkata) ಪ್ರಾರಂಭಿಸಲಾಗಿತ್ತು.

ಬೆಂಗಳೂರಿನಲ್ಲಿ ಯಾವಾಗ ಈ ಸೇವೆ ಆರಂಭ ಆಗುತ್ತದೆ ಎನ್ನುವ ಬಗ್ಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆದರೆ ನಮ್ಮ ಯಾತ್ರಿ ಆಟೋ ಸೇವೆಯಂತೆ ಶೂನ್ಯ ಕಮಿಷನ್(Zero Commission)ಮಾದರಿಯಲ್ಲಿ ಕ್ಯಾಬ್ ಸೇವೆಯನ್ನು ನಡೆಸುವುದಕ್ಕೆ ನಿರ್ಧಾರವನ್ನು ಮಾಡಲಾಗಿದೆ.

ನೀವು ಇದನ್ನೂ ಇಷ್ಟ ಪಡಬಹುದು:ಓಲಾ, ಉಬರ್‌ ಸೇರಿ ಎಲ್ಲಾ ಟ್ಯಾಕ್ಸಿ ಸೇವೆಗೆ ಏಕರೂಪ ದರ ನಿಗದಿ; ಪ್ರತೀ ಕಿ.ಮೀಗೆ ಎಷ್ಟು?

Auto service

ಇಲ್ಲಿ ಗಮನಿಸಬೇಕಾದ ವಿಚಾರ ಏನಂದರೆ, ಕರ್ನಾಟಕ ಸರ್ಕಾರವೇ ಅಗ್ರಿಗೇಟರ್ ಸೇವೆಯನ್ನು ಆರಂಭಿಸುವ ಚಿಂತನೆಯಲ್ಲಿದೆ.

ಸರ್ಕಾರದ ಅಗ್ರಿಗೇಟರ್ ಸೇವೆ(Aggregating Service)ಆರಂಭಕ್ಕೂ ಮುನ್ನ ನಮ್ಮ ಯಾತ್ರಿ ಕ್ಯಾಬ್ ಸೇವೆಯನ್ನು ಆರಂಭಿಸಲು ನಿರ್ಧರಿಸಿದೆ.

ಆ ಮೂಲಕ, ಓಲಾ(ola), ಉಬರ್(Uber) ಮತ್ತು ರಾಪಿಡೋದಂತಹ (Rapido)ಅಗ್ರಿಗೇಟರ್ ಕ್ಷೇತ್ರದ ದೈತ್ಯರಿಗೆ ಸವಾಲನ್ನು ಒಡ್ಡಬಹುದು ಅಂತಲೇ ಹೇಳಲಾಗುತ್ತಿದೆ.

ನಮ್ಮ ಯಾತ್ರಿಯು ಮುಖ್ಯವಾಗಿ ಚಾಲಕರ ಸುರಕ್ಷತೆಯ ದೃಷ್ಟಿಯನ್ನು ಗಮನದಲ್ಲಿಟ್ಟು ಕೊಂಡು ಮತ್ತಷ್ಟು ಸುಧಾರಣೆ ಕ್ರಮಗಳನ್ನು ಜಾರಿಗೆ ತರುವುದಕ್ಕೆ ನಮ್ಮ ಯಾತ್ರಿ ಚಿಂತನೆ ನಡೆಸಿದೆ.

ನಮ್ಮ ಯಾತ್ರಿ ಕ್ಯಾಬ್ ನಲ್ಲಿ ಹಲವು ಸುಧಾರಣೆ ಕ್ರಮಗಳನ್ನು ಜಾರಿಗೆ ತರುವುದಕ್ಕೆ ಯೋಜನೆ ರೂಪಿಸಿರುವ ಕಂಪೆನಿಯು ನಗರದಲ್ಲಿ ಬೇಡಿಕೆ ತಕ್ಕಂತೆ ಚಾಲಕರಿಗೆ ಉಚಿತ ಚಂದದಾರತ್ವದ ಸೌಲಭ್ಯ ಕೂಡ ಒದಗಿಸಲಿದೆ.

Cab service

ಕೋಲ್ಕತಾದ ನಮ್ಮ ಯಾತ್ರಿ ಕ್ಯಾಬ್ ಯೋಜನೆಯು 14 ಲಕ್ಷ ನೋಂದಾಯಿತ ಗ್ರಾಹಕರನ್ನು ಹೊಂದಿದೆ.32,000 ಚಾಲಕರನ್ನು ಹೊಂದಿದ್ದು, ಇಲ್ಲಿಯ ತನಕ ಸುಮಾರು 41ಕೋಟಿ ಸಂಪಾದಿಸಿದೆ.

ಕಳೆದ ವರ್ಷ ಜೂನ್ ನಲ್ಲಿ ಆರಂಭವಾದ ದಿನದಿಂದ ಇಲ್ಲಿಯ ತನಕ ಸುಮಾರು 15ಲಕ್ಷಕ್ಕೂ ಹೆಚ್ಚು ಟ್ರಿಪ್ ಪೂರ್ಣಗೊಳಿಸಿದೆ.

ಕೊಚ್ಚಿಯ ನಮ್ಮ ಯಾತ್ರಿ ಸರ್ವಿಸ್ 2.7 ಲಕ್ಷ ನೋಂದಾಯಿತ ಗ್ರಾಹಕರನ್ನು ಹೊಂದಿದೆ. 8 ಸಾವಿರ ಚಾಲಕರನ್ನು ಹೊಂದಿದ್ದು ,ನವೆಂಬರ್ ತಿಂಗಳ ಈಚೆಗೆ 9 ಕೋಟಿ ಆದಾಯವನ್ನು ಗಳಿಸಿತ್ತು.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button