Moreವಿಂಗಡಿಸದ

ಭಾರತೀಯರಿಗೆ ವೀಸಾ ಮುಕ್ತ ಪ್ರವೇಶ ಘೋಷಿಸಿದ “ಇರಾನ್”; ಷರತ್ತುಗಳು ಅನ್ವಯ

“ಇರಾನ್” (Iran) ಈಗ ಭಾರತೀಯರಿಗೆ ವೀಸಾ ಮುಕ್ತ ಪ್ರವೇಶ ಘೋಷಿಸಿದ ಶ್ರೀಲಂಕಾ, ಥೈಲ್ಯಾಂಡ್‌ ದೇಶಗಳ ಪಟ್ಟಿ ಸೇರಿದೆ.

ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಿಂದ, ಇರಾನ್ ಸರ್ಕಾರವು (Iranian government) ಫೆ.4 ರಿಂದ ಭಾರತೀಯ ಪ್ರವಾಸಿಗರಿಗೆ ವೀಸಾ-ಮುಕ್ತ ( Visa Free) ಪ್ರವೇಶವನ್ನು ಘೋಷಿಸಿದೆ.

ಈ ಕುರಿತು ನಹಲಿಯ ಇರಾನ್ ರಾಯಭಾರ ಕಚೇರಿಯಲ್ಲಿ ಮಂಗಳವಾರ ಹೊರಡಿಸಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ನಾಲ್ಕು ಷರತ್ತುಗಳಿಗೆ ಒಳಪಟ್ಟಂತೆ ಈ ವೀಸಾ-ಮುಕ್ತ ನೀತಿಯನ್ನು ಜಾರಿಗೊಳಿಸಲಾಗಿದೆ ಇರಾನ್ ರಾಯಭಾರ ಕಚೇರಿ ತಿಳಿಸಿದೆ.

ಭಾರತೀಯ ಪ್ರವಾಸಿಗರು (Indian Tourists) ಈಗ ವೀಸಾ ಇಲ್ಲದೆ ಗರಿಷ್ಠ 15 ದಿನಗಳವರೆಗೆ ಇರಾನ್‌ನಲ್ಲಿ ವಾಸಿಸಬಹುದು. ವೀಸಾ ಮುಕ್ತ ಪ್ರವೇಶವನ್ನು ಬಯಸುವ ಭಾರತೀಯ ಪ್ರವಾಸಿಗರು ಖಡ್ಡಾಯವಾಗಿ ನಾಲ್ಕು ರೀತಿಯ ಷರತ್ತುಗಳನ್ನು ಪಾಲಿಸಬೇಕು.

ಇರಾನ್‌ಗೆ ವೀಸಾ-ಮುಕ್ತವಾಗಿ ಪ್ರಯಾಣಿಸಲು ಪಾಲಿಸಬೇಕಾದ ನಾಲ್ಕು ಷರತ್ತುಗಳು (4 Conditions) ಇಲ್ಲಿವೆ:

●ಸಾಮಾನ್ಯ ಪಾಸ್ ಪೋರ್ಟ್ (passport) ಹೊಂದಿರುವ ಭಾರತೀಯನು ಪ್ರತೀ ಆರು ತಿಂಗಳಿಗೊಮ್ಮೆ ದೇಶವನ್ನು ಪ್ರವೇಶಿಸಲು ಅನುಮತಿಸಲಾಗಿದೆ.

ಗರಿಷ್ಠ 15 ದಿನಗಳ ಕಾಲ ಅಲ್ಲೇ ಉಳಿಯುವ ಅವಕಾಶ ನೀಡಲಾಗಿದೆ. ಈ 15 ದಿನದ ಅವಧಿಯನ್ನು ಯಾವುದೇ ಸಂದರ್ಭದಲ್ಲೂ ವಿಸ್ತರಿಸುವಂತಿಲ್ಲ.

●ವೀಸಾ ಮುಕ್ತ ನೀತಿಯು ಪ್ರವಾಸೋದ್ಯಮ ಉದ್ದೇಶದಿಂದ ಇರಾನ್ ಗೆ ಭೇಟಿ ನೀಡುವ ಭಾರತೀಯರಿಗೆ ಮಾತ್ರ ಅನ್ವಯಿಸುತ್ತದೆ.

● ಭಾರತೀಯ ಪ್ರವಾಸಿಗರು 15 ದಿನಗಳಿಗಿಂತ ಹೆಚ್ಚು ಕಾಲ ಉಳಿಯಲು ಬಯಸಿದರೆ ಅಥವಾ ಆರು ತಿಂಗಳ ಅವಧಿಯಲ್ಲಿ ಹೆಚ್ಚು ನಮೂದುಗಳನ್ನು ಮಾಡಲು ಬಯಸಿದರೆ ಅವರು ಭಾರತದಲ್ಲಿ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ (Islamic Republic Of Iran) ಆಯಾ ಪ್ರಾತಿನಿಧ್ಯಗಳ ಮೂಲಕ ಅಗತ್ಯ ವೀಸಾಗಳನ್ನು ಪಡೆಯಬೇಕು.

● ಇದಲ್ಲದೆ, ಈ ಅನುಮೋದನೆಯಲ್ಲಿ ನಿರ್ದಿಷ್ಟಪಡಿಸಿದ ವೀಸಾ ವಿನಾಯಿತಿಯು ವಾಯು ಗಡಿಗಳ ಮೂಲಕ ಇರಾನ್‌ಗೆ ಪ್ರವೇಶಿಸುವ ಭಾರತೀಯ ಪ್ರಜೆಗಳಿಗೆ ಮಾತ್ರ ಅನ್ವಯಿಸುತ್ತದೆ.

ಇರಾನ್ ಸರ್ಕಾರದ ಈ ನಿರ್ಧಾರವು ಇರಾನ್ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಭಾರತದಿಂದ ಇರಾನ್‌ಗೆ ಹೆಚ್ಚಿನ ಪ್ರವಾಸಿಗರ ಒಳಹರಿವಿಗೆ ಕಾರಣವಾಗುತ್ತದೆ.

ಇರಾನ್ ಮತ್ತು ಭಾರತದ ನಡುವಿನ ಪ್ರಯಾಣವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದ್ದು, ಎರಡು ರಾಷ್ಟ್ರಗಳ ನಡುವೆ ನಿಕಟ ಸಂಬಂಧವನ್ನು ಬೆಳೆಸುತ್ತದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button