ಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದ

ಆಗ್ರಾದಲ್ಲಿ ತಲೆ ಎತ್ತಿದೆ ತಾಜ್ ಮಹಲ್ ಹೋಲುವ ಮತ್ತೊಂದು ಮಹಲ್

ತಾಜ್‌ ಮಹಲ್(Taj Mahal) ವಿಶ್ವದ 7 ಅದ್ಬುತಗಳ ಪೈಕಿ ಒಂದು. ಮೊಘಲ್(Mughal) ಸಾಮ್ರಾಜ್ಯದ ಅಧಿಪತಿ ಶಹಜಹಾನ್(Shaha Jahan) ತಮ್ಮ ನೆಚ್ಚಿನ ಮಡದಿ ಮುಮ್ತಾಜ್(Mumtaz) ಸಮಾಧಿಯ ಮೇಲೆ ಬಿಳಿ ಅಮೃತಶಿಲೆಯಲ್ಲಿ ತಾಜ್ ಮಹಲ್ ನಿರ್ಮಾಣ ಮಾಡಲಾಗಿದೆ.ತಾಜ್‌ ಮಹಲ್‌ ನಿರ್ಮಾಣ ಮಾಡಲು ಸುಮಾರು 22 ವರ್ಷಗಳ ಕಾಲ ಬೇಕಾಯ್ತು. ಈ ತಾಜ್ ಮಹಲ್ ಮಾದರಿಯಲ್ಲೇ ಮತ್ತೊಂದು ಬಿಳಿ ಬಣ್ಣದ ಅದ್ಭುತ ಕಟ್ಟಡ ಆಗ್ರಾದಲ್ಲೇ (Agra)ನಿರ್ಮಾಣವಾಗುತ್ತಿದೆ. ಈ ಕಟ್ಟಡದ ನಿರ್ಮಾಣಕ್ಕೆ ಸುಮಾರು 104 ವರ್ಷ ಬೇಕಾಯ್ತು .

ತಾಜ್ ಮಹಲ್ ಸಮೀಪದಲ್ಲೇ ಹೊಸ ಬಿಳಿ ಅಮೃತಶಿಲೆಯಲ್ಲಿ(White Marbles) ಸೋಮಿ ಬಾಗ್‌ ನಿರ್ಮಾಣವಾಗುತ್ತಿದೆ(Soami Bhag). ಸೋಮಿ ಬಾಗ್‌ ಸಹ ತಾಜ್ ಮಹಲ್ ನಂತೆಯೇ ನಿರ್ಮಿಸಲಾಗಿದೆ.ಈಗಾಗಲೇ ಪ್ರವಾಸಿಗರು(Tourist)ಇಲ್ಲಿಗೆ ಭೇಟಿ ನೀಡುತ್ತಿದ್ದು ಅಲ್ಲಿನ ಸೊಗಸಾದ ಕರಕುಶಲತೆಗೆ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಉತ್ತರ ಪ್ರದೇಶದ(Uttar Pradesh) ಆಗ್ರಾ ಜಿಲ್ಲೆಯ ತಾಜ್‌ ಮಹಲ್‌ಗೆ 12 ಕಿ. ಮೀ. ದೂರದಲ್ಲಿ ದಯಾಳ್ ಬಾಗ್ ಪ್ರದೇಶದಲ್ಲಿ(Dayalbhag Area) ಸೋಮಿ ಬಾಗ್ ಕಾಲೋನಿ(Soami Bhag Colony) ಇದೆ. ಈ ಕಾಲೋನಿಯಲ್ಲೇ ಸೋಮಿ ಬಾಗ್ ಕಟ್ಟಡ ತಲೆ ಎತ್ತಿದೆ. 1904ರಲ್ಲಿ ಇಲ್ಲಿ ಕೇವಲ ಅಮೃತ ಶಿಲೆಯ ಸಮಾಧಿ ಮಾತ್ರ ಇತ್ತು. ಅಂದಿನಿಂದ ಇಂದಿನವರೆಗೆ ಈ ಸಮಾಧಿ ಸ್ಥಳದ ಸುತ್ತಲೂ ಬೃಹತ್ ಕಟ್ಟಡದ ನಿರ್ಮಾಣ ಆಗುತ್ತಲೇ ಇದೆ.

ನೀವು ಇದನ್ನು ಓದಬಹುದು:ಜಮ್ಮು ಕಾಶ್ಮೀರ ನೋಡಬಹುದಾದ ತಾಣಗಳು

Agra

ರಾಜಸ್ಥಾನದ (Rajasthan)ಮಕ್ರಾನಾದಿಂದ (Makran)ತರಿಸಿದ ಬಿಳಿ ಅಮೃತಶಿಲೆಯಲ್ಲೇ ಸೋಮಿ ಬಾಗ್ ಅನ್ನು ನಿರ್ಮಿಸಲಾಗಿದೆ. ಕಟ್ಟಡವು ಸುಮಾರು 193 ಅಡಿ ಎತ್ತರವಿದ್ದು, 52 ಸ್ತಂಭಗಳ ಮೇಲೆ ನಿಂತಿದೆ. ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಇದು ಒಂದಾಗಿದೆ. ಶಿಖರವು 31.4 ಅಡಿ ಇದ್ದು, ಇದಕ್ಕೆ ಚಿನ್ನದ (Gold)ಲೇಪನ ಮಾಡಲಾಗಿದೆ.

ಬಿಳಿ ಬಣ್ಣದ ಅಮೃತ ಶಿಲೆಗಳನ್ನು ಅಲಹಬಾದ್(Alahabadh) ಶೈಲಿಯ ವಾಸ್ತು ಶಿಲ್ಪ ತಜ್ಞರು ಶತಮಾನಗಳ ಕಾಲ ಶ್ರಮ ವಹಿಸಿ ಈ ಅದ್ಭುತ ಕಟ್ಟಡವನ್ನ ನಿರ್ಮಿಸಿದ್ದಾರೆ. ಕಳೆದ ಒಂದು ಶತಮಾನದಲ್ಲಿ ಈ ಕಟ್ಟಡ ಹಲವು ಸವಾಲುಗಳನ್ನ ಎದುರಿಸಿದೆ. ಕಾರ್ಮಿಕರ ಕೊರತೆ, ಕಟ್ಟಡ ನಿರ್ಮಾಣ ಸಾಮಗ್ರಿಗಳ ಕೊರತೆ, ಹಣದ ಹರಿವಿಗೆ ತಡೆ.. ಹೀಗೆ ಹಲವು ಸಮಸ್ಯೆ, ಸವಾಲುಗಳ ನಡುವೆಯೂ ಹಂತ ಹಂತವಾಗಿ ಸಾಗಿದ ನಿರ್ಮಾಣ ಕಾರ್ಯ ಇದೀಗ ಮುಕ್ತಾಯಗೊಂಡಿದೆ.

Soani Mahal

ಭವ್ಯ ಕಟ್ಟಡವಾದ ಸೋಮಿ ಬಾಗ್ ಒಳಗೆ ಪರಮ ಪುರುಷ ಪೂರ್ಣ ಧಾನಿ ಸ್ವಾಮಿ ಮಹರಾಜ್ ಅವರ ಸಮಾಧಿ ಇದೆ. ಇವರು ‘ರಾಧಾಸೋಮಿ’(Radhasoami) ಪಂಗಡದ ಸಂಸ್ಥಾಪಕರು. ಇದೊಂದು ಆಧ್ಯಾತ್ಮಿಕ ಪಂಗಡ. ಈ ಪಂಗಡವು ಕೋಟ್ಯಂತರ ಅನುಯಾಯಿಗಳನ್ನು ವಿಶ್ವಾದ್ಯಂತ ಒಳಗೊಂಡಿದೆ .ವಿಶ್ವಾದ್ಯಂತ ಇರುವ ರಾಧಾಸೋಮಿ ಅನುಯಾಯಿಗಳು ಹಾಗೂ ಭಕ್ತರು ನಿರಂತರವಾಗಿ ಧನ ಸಹಾಯ ಮಾಡುತ್ತಾ ಬಂದಿದ್ದಾರೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.


Related Articles

Leave a Reply

Your email address will not be published. Required fields are marked *

Back to top button