ವಿಂಗಡಿಸದಸಂಸ್ಕೃತಿ, ಪರಂಪರೆಸ್ಫೂರ್ತಿ ಗಾಥೆ

ಮಾರ್ಚ್ 08 ರಂದು ಮಹಿಳಾ ದಿನವನ್ನು ಯಾಕೆ ಆಚರಿಸಲಾಗುತ್ತದೆ..? ಈ ವರ್ಷದ ಥೀಮ್ ಏನು..?

ಹೆಣ್ಣು .. ಆಕೆಯ ಸಹನಾಮಯಿ ,ಮಮತಾಮಯಿ ,ತ್ಯಾಗಮಯಿ .. ಅವಳನ್ನು, ಅವಳ ವಿಶೇಷತೆಗಳನ್ನು ವರ್ಣಿಸುವುದನ್ನು ಪದಗಳು ಸಾಲದು.

ಹೆಣ್ಣಿನ ಸಾಧನೆ,ಅವಳ.ಪರಿಶ್ರಮವನ್ನು ಇಡೀ ಜಗತ್ತು ಕೊಂಡಾಡುವುದು ಅಂತಾರಾಷ್ಟ್ರೀಯ ಮಹಿಳಾ ದಿನದಂದು.

ಅಂದು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗೌರವಿಸಲಾಗುತ್ತದೆ. ಅಷ್ಟಕ್ಕೂ ಮಹಿಳಾ ದಿನಾಚರಣೆ ಹಿಂದಿನ ಮಹತ್ವವೇನು ಅನ್ನೋ ಕುರಿತಾದ ಬರಹ.

ಅಂತರಾಷ್ಟ್ರೀಯ ಮಹಿಳಾ ದಿನದ (International Women’s Day 2024) ಮೂಲವು 20 ನೇ ಶತಮಾನದ ಆರಂಭದಲ್ಲಿದೆ. ಇದು ಉತ್ತರ ಅಮೆರಿಕಾ ಮತ್ತು ಯೂರೋಪ್‌ ಲ್ಲಿನ ಕಾರ್ಮಿಕ ಚಳುವಳಿಗಳಿಂದ ಹುಟ್ಟಿಕೊಂಡಿತು.

ಮೊದಲ ರಾಷ್ಟ್ರೀಯ ಮಹಿಳಾ ದಿನವನ್ನು 1909 ರ ಫೆಬ್ರವರಿ 28 ರಂದು ಯುನೈಟೆಡ್ ಸ್ಟೇಟ್ಸ್‌ನಲ್ಲಿ(United States)ಆಚರಿಸಲಾಯಿತು.

ಇದನ್ನು 1908 ರಲ್ಲಿ ನ್ಯೂಯಾರ್ಕ್‌ನಲ್ಲಿನ(Newyork) ಗಾರ್ಮೆಂಟ್ ಕಾರ್ಮಿಕರ ಮುಷ್ಕರದ ಸ್ಮರಣಾರ್ಥವಾಗಿ ಅಮೇರಿಕಾದ ಸಮಾಜವಾದಿ ಪಕ್ಷ ಆಯೋಜಿಸಿತು. ಅಲ್ಲಿ ಮಹಿಳೆಯರು ಕೆಲಸದ ಪರಿಸ್ಥಿತಿಗಳ ವಿರುದ್ಧ ಪ್ರತಿಭಟಿಸಿದ್ದರು.

ನಂತರ 1910 ರಲ್ಲಿ ಕೋಪನ್ ಹ್ಯಾಗನ್ ನಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ಸಮ್ಮೇಳನದಲ್ಲಿ ಕ್ಲಾರಾ ಜೆಟ್ಕಿನ್ ಅವರು ಅಂತರಾಷ್ಟ್ರೀಯ ಮಹಿಳಾ ದಿನವನ್ನು ಪ್ರಸ್ತಾಪಿಸಿದರು.

ಈ ಕಲ್ಪನೆಯು ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟಿತು. 1911 ರಲ್ಲಿ ಹಲವಾರು ಯುರೋಪಿಯನ್(European )ರಾಷ್ಟ್ರಗಳಲ್ಲಿ ಮೊದಲ ಆಚರಣೆಗೆ ಕಾರಣವಾಯಿತು. ಅಂದಿನಿಂದ ಜಗತ್ತಿನಾದ್ಯಂತ ಮಹಿಳಾ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು..

ಮೊದಲು ಮಹಿಳಾ ದಿನಾಚರಣೆ ಬಗ್ಗೆ ಮಾಹಿತಿ ನೀಡಿದ್ದ ಕ್ಲಾರಾ ಝೆಟ್ಕಿನ್ ಯಾವುದೇ ದಿನವನ್ನು ನಿಗದಿಪಡಿಸಿರಲಿಲ್ಲ.

1917ರವರೆಗೂ ಮಹಿಳಾ ದಿನಾಚರಣೆಗೆ ಯಾವುದೇ ದಿನ ಸೀಮಿತವಾಗಿರಲಿಲ್ಲ. 1917ರಲ್ಲಿ ರಷ್ಯಾದ ಮಹಿಳೆಯರು ಆಹಾರ ಮತ್ತು ಶಾಂತಿಗಾಗಿ 4 ದಿನಗಳ ಕಾಲ ಪ್ರತಿಭಟನೆ ನಡೆಸಿದರು. ಆಗಿನ ಸರ್ಕಾರ ಪದತ್ಯಾಗ ಮಾಡಿತು.

ಮಧ್ಯಂತರ ಸರ್ಕಾರವು ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿತು. ರಷ್ಯಾದಲ್ಲಿ ಬಳಸಲಾಗುವ ಜೂಲಿಯನ್ ಕ್ಯಾಲೆಂಡರ್ ಪ್ರಕಾರ ರಷ್ಯಾದ ಮಹಿಳೆಯರು ಪ್ರತಿಭಟನೆಯನ್ನು ಪ್ರಾರಂಭಿಸಿದ ದಿನ ಫೆ. 23. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಈ ದಿನವು ಮಾರ್ಚ್ 8 ಆಗಿತ್ತು. ಹಾಗಾಗಿ ಅಂದಿನಿಂದ ಈ ದಿನದಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಯಿತು.

ಪ್ರತಿವರ್ಷ ಮಹಿಳಾ ದಿನಾಚರಣೆಯನ್ನು ಒಂದೊಂದು ವಿಭಿನ್ನ ಥೀಮ್ ನಲ್ಲಿ ಆಚರಿಸಲಾಗುತ್ತದೆ. ಈ ವರ್ಷವೂ ಅದೇ ರೀತಿ ಆಚರಣೆ ಮಾಡಲಾಗುತ್ತಿದೆ.ವಿಶ್ವಸಂಸ್ಥೆಯ 2024 ರ ಧ್ಯೇಯವಾಕ್ಯ ‘ Invest in Women: Accelerate Progress’ ಎಂಬುದಾಗಿದೆ.

ಆದರೆ ಈ ವರ್ಷದ ಅಭಿಯಾನದ ಥೀಮ್ ‘ಇನ್‌ಸ್ಪೈರ್ ಇನ್‌ಕ್ಲೂಷನ್’ ಆಗಿದೆ. ಇದು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ವೈವಿಧ್ಯತೆ ಮತ್ತು ಸಬಲೀಕರಣದ ಮಹತ್ವವನ್ನು ಎತ್ತಿ ತೋರಿಸುತ್ತದೆ.

ಈ ಅಭಿಯಾನದ ಮೂಲಕ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಲಿಂಗ ಸಮಾನತೆಯತ್ತ ಪ್ರಗತಿಯನ್ನು ವೇಗಗೊಳಿಸಲು ಮಹಿಳಾ ಶಿಕ್ಷಣ, ಆರೋಗ್ಯ, ಆರ್ಥಿಕ ಸಬಲೀಕರಣ ಮತ್ತು ನಾಯಕತ್ವದ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡುವ ನಿರ್ಣಾಯಕ ಪಾತ್ರವನ್ನು ಒತ್ತಿಹೇಳುತ್ತದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button