Moreಇವರ ದಾರಿಯೇ ಡಿಫರೆಂಟುಕಾಡಿನ ಕತೆಗಳುವಿಂಗಡಿಸದಸ್ಫೂರ್ತಿ ಗಾಥೆ

“ದಕ್ಷಿಣ ಭಾರತದ ನೀರಿನ ಗಾಂಧಿ” ಎಂದೇ ಪ್ರಸಿದ್ಧರಾದ ಗದಗಿನ “ಅಯ್ಯಪ್ಪ ಮಸಗಿ” ಅವರ ಸ್ಫೂರ್ತಿ ಕಥೆ

World Water Day 2024; ಇಂದು ವಿಶ್ವ ಜಲ ದಿನ. ನೀರು ಇಲ್ಲದ ಬದುಕು ಊಹಿಸಲೂ ಅಸಾಧ್ಯ. ಪ್ರತೀ ಜೀವ ಸಂಕುಲದ ಜೀವನದ ಆಧಾರವೇ ನೀರು. ಆದರೆ ಈಗಿನ ಪರಿಸ್ಥಿತಿ ನೀರಿಗಾಗಿ ಪರದಾಡುವ ಅನಿವಾರ್ಯತೆ ಉಂಟಾಗಿದೆ.

ಈಗಿನ ಬರ ಪರಿಸ್ಥಿತಿಯಲ್ಲಿ (Drought), ಒಂದೊಂದು ಹನಿ ನೀರೂ ಎಷ್ಟು ಅಮೂಲ್ಯ ಎಂಬ ಅರಿವು ಮೂಡಲೇಬೇಕಿದೆ.

ನೀರಿನ ಅಭಾವ (Scarcity of Water) ಹೀಗೆ ಮುಂದುವರೆದರೆ ಜಗತ್ತಿನಲ್ಲಿ ಬದುಕುವುದೇ ಕಷ್ಟವಾಗಿ ಬಿಡುತ್ತದೆ.

ಆದ್ದರಿಂದ ಪ್ರತೀ ಮನುಷ್ಯನು ನೀರಿನ ಮಹತ್ವದ (Importance Of Water) ಕುರಿತು ಅರಿಯಲೇಬೇಕು. ಅವುಗಳನ್ನು ಮಿತವಾಗಿ ಬಳಸಿ ಮುಂದಿನ ಪೀಳಿಗೆಯನ್ನು ಈ ಜಗತ್ತನ್ನು ರಕ್ಷಿಸಬೇಕು.

ಈ ವಿಶ್ವ ಜಲ ದಿನದಂದು ಜನರಿಗೆ ಸಂರಕ್ಷಣೆಯ ಕುರಿತು ಪ್ರೇರಣೆ ನೀಡುವ ಉದ್ದೇಶದಿಂದ, ಜೀವಜಲ ಉಳಿಸಲು ಶ್ರಮಿಸಿದ ಒಬ್ಬ ಕನ್ನಡಿಗನ ಪರಿಚಯ ಇಲ್ಲಿದೆ.

ಈ ಜಗತ್ತಿನಲ್ಲಿ ನೀರಿನ ಸಂರಕ್ಷಣೆಗಾಗಿ (Water Conservation) ನಿಸ್ವಾರ್ಥದಿಂದ ಶ್ರಮಿಸಿದವರು ಹಲವಾರು ಮಂದಿ ಇದ್ದಾರೆ.

ಅವರಲ್ಲಿ ದಕ್ಷಿಣ ಭಾರತದ ನೀರಿನ ಗಾಂಧಿ (South India’s Water Gandhi) ಎಂದು ಪ್ರಸಿದ್ಧರಾದ “ಅಯ್ಯಪ್ಪ ಮಸಗಿ” (Ayyappa Masagi) ಕೂಡಾ ಪ್ರಮುಖರು.

ಅಯ್ಯಪ್ಪ ಮಸಗಿ ಗದಗ ಜಿಲ್ಲೆಯ (Gadag District) ನಾಗರಾಳ (Nagarala) ಗ್ರಾಮದ ಬಡ ರೈತ ಕುಟುಂಬದಲ್ಲಿ ಜನಿಸಿದವರು.

ಇವರು ಸಣ್ಣ ವಯಸ್ಸಿನಿಂದಲೇ ನೀರಿನ ಕೊರತೆಯಿಂದಾಗಿ ತಾಯಿ ಅನುಭವಿಸಿದ ಕಷ್ಟ ನೋಡಿ ಬೆಳೆದವರು. ತಂದೆ – ತಾಯಿ ಓದಿರದಿದ್ದರೂ, ಕಡು ಬಡತನದಲ್ಲೂ ಮಗನನ್ನು ಚೆನ್ನಾಗಿ ಓಡಿಸಲು ತಾಯಿ ತನ್ನೆಲ್ಲ ಒಡವೆಗಳನ್ನೆಲ್ಲ ಮಾರಿಕೊಂಡರು.

ಕೊನೆಗೆ ಅವರು ಇಂಜಿನಿಯರಿಂಗ್‌ ಪದವಿಯನ್ನೂ ಪಡೆದುಕೊಂಡರು.ಒಳ್ಳೆಯ ಅಂಕಗಳಿಂದ ಪಾಸಾದ ಅವರಿಗೆ ಪ್ರತಿಷ್ಠಿತ ಎಲ್‌ ಆ್ಯಂಡ್‌ ಟಿ ಕಂಪನಿಯಲ್ಲಿ ಉದ್ಯೋಗ ದೊರಕಿತು.

ಲಕ್ಷ ಲಕ್ಷ ಸಂಬಳವೂ ಕೈಸೇರಿತು. ಆದರೆ ಅಯ್ಯಪ್ಪ ಅವರಿಗೆ ಅದರಲ್ಲಿ ತೃಪ್ತಿ ಇಲ್ಲ.

ದೇಹ ಇಲ್ಲಿ ದುಡಿಯುತ್ತಿದ್ದರೂ, ಮನ್ನಸ್ಸೆಲ್ಲಾ ತಂದೆ-ತಾಯಿಯ ಇರುವ ಊರಿನ ಕಡೆ. ಅವರು ನೀರಿಗಾಗಿ ಪರದಾಡುತ್ತಿದ್ದ ನೆನಪುಗಳೇ ಅವರನ್ನು ಕಾಡುತ್ತಿತ್ತು.

ಅಂತಿಮವಾಗಿ, ಒಂದು ದಿಟ್ಟ ನಿರ್ಧಾರ ಕೈಗೊಂಡ ಅಯ್ಯಪ್ಪ ಅವರು 2002ರಲ್ಲಿ ತನ್ನ ಕೆಲಸಕ್ಕೆ ರಾಜೀನಾಮೆ ಬರೆದು, ಹುಟ್ಟೂರಿಗೆ ಮರಳಿದರು.

ಹಿಂದಿನಿಂದಲೂ ನೀರಿಗಾಗಿ ತಂದೆ ಉಪಯೋಗಿಸುತ್ತಿದ್ದ ಉಪಕ್ರಮಗಳನ್ನು ಅವಲೋಕಿಸುತ್ತಿದ್ದ ಇವರು, ಮಳೆನೀರು ಕೊಯ್ಲನ್ನು (Rainwater harvesting) ಕುರಿತು ಆಳವಾಗಿ ಅಧ್ಯಯನ ಮಾಡಿದರು.

ಭಾರತದ ನೀರಿನ ಕೊರತೆಯ ಸಮಸ್ಯೆಗೆ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ “ ವಾಟರ್ ಲಿಟರಸಿ ಫೌಂಡೇಶನ್” (Water Literacy Foundation) ಎಂಬ ಸಂಸ್ಥೆ ಸ್ಥಾಪಿಸಿದರು.

ನನ್ನ ಜಮೀನಿನಲ್ಲೇ ಪ್ರಯೋಗಾಲಯವನ್ನು (Lab) ನಿರ್ಮಿಸಿ, ನೀರು ಉಳಿಸುವ ಕುರಿತು 100ಕ್ಕೂ ಹೆಚ್ಚು ಪದ್ಧತಿಗಳನ್ನು ಆವಿಷ್ಕರಿಸಿದ್ದಾರೆ.

ಈ ಆವಿಷ್ಕಾರದಿಂದಾಗಿ ಸುಮಾರು 900ಕ್ಕೂ ಹೆಚ್ಚು ಕೆರೆಗಳು (ponds), ಲಕ್ಷಕ್ಕೂ ಹೆಚ್ಚಿನ ಬೋರ್‌ವೆಲ್‌ಗಳಿಗೆ (Borewell) ಜೀವಜಲ ನೀಡಿದ್ದಾರೆ ಅಯ್ಯಪ್ಪ ಮಸಗಿ ಅವರು. ಮರುಭೂಮಿಯಂತಹ ಪ್ರದೇಶದಲ್ಲೂ ನೀರಿನ ಅಭಾವ ನೀಗಿಸಿದ್ದಾರೆ.

6777 ಕೋಟಿ ಲೀಟರ್‌ ನೀರನ್ನು ಬಳಸಿ ಅದರಿಂದ 40,000ದಷ್ಟು ಗಿಡಮರಗಳನ್ನು ಬೆಳೆಸಿದ್ದಾರೆ.

ಭಾರತದಲ್ಲಿ ಅತಿ ಹೆಚ್ಚು ಕೆರೆಗಳ ನಿರ್ಮಾಣ ಮತ್ತು ಕೊಳವೆ ಬಾವಿ ಮರುಪೂರಣ ದಾಖಲೆಗಾಗಿ “ಲಿಮ್ಕಾ ಬುಕ್‌ ಆಫ್‌ ರೆಕಾಡ್ಸ್‌” ನಲ್ಲಿ ಸ್ಥಾನ ಪಡೆದಿದ್ದಾರೆ.

ನೀರು ಸಾಕ್ಷರತಾ ಪ್ರತಿಷ್ಠಾನ (Water Literacy Foundation) ಸ್ಥಾಪಕ ಅಧ್ಯಕ್ಷರಾಗಿ ಪ್ರಸ್ತುತ ಭಾರತದಾದ್ಯಂತ ಹಳ್ಳಿಗಳಲ್ಲಿ ನೀರಿನ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುತ್ತಾರೆ.

ನೀರಿನ ನಿರ್ವಹಣೆಗಾಗಿ (Water Management) ಭೌತಿಕ ರಚನೆಗಳ (physical structures) ನಿರ್ಮಾಣದ ಜೊತೆಗೆ ಅವರ ವಿಧಾನಗಳು ಬರಗಾಲದ ಪರಿಣಾಮವನ್ನು ಕಡಿಮೆ ಮಾಡಲು ಮತ್ತು ಸುಸ್ಥಿರ ನೀರಿನ ಮೂಲಗಳನ್ನು ಸುರಕ್ಷಿತಗೊಳಿಸಲು ರೈತರಿಗೆ ಸಹಾಯ ಮಾಡಿದೆ.

ಅವರ ಈ ಲಾಭರಹಿತ ಕೆಲಸದಿಂದಾಗಿ ಅವರು ದಕ್ಷಿಣ ಭಾರತದ ವಾಟರ್ ಮ್ಯಾಜಿಶಿಯನ್ (Water Magician), ವಾಟರ್ ಗಾಂಧಿ (Water Gandhi) ಮತ್ತು ವಾಟರ್ ಡಾಕ್ಟರ್ (Water Doctor) ಎಂದು ಬಿರುದು ಪಡೆದುಕೊಂಡಿದ್ದಾರೆ.

ನೀರಿನ ಸಂರಕ್ಷಣೆಯ ಅನಿವಾರ್ಯತೆ ಉಂಟಾಗಿರುವ ಈ ಕಾಲದಲ್ಲಿ ಇಂತಹವರೇ ನಮಗೆ ಸ್ಫೂರ್ತಿ. ಇವರನ್ನು ನಮ್ಮ ಪ್ರೇರಣೆಯಾಗಿ ಪಡೆದು “ಜೀವಜಲ ರಕ್ಷಿಸಿ, ಜಗತ್ತನ್ನು ಕಾಪಾಡೋಣ”.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button