ವಿಂಗಡಿಸದಸಂಸ್ಕೃತಿ, ಪರಂಪರೆ

ಅಯೋಧ್ಯೆಯಲ್ಲಿ ಮೊಬೈಲ್ ಬಳಕೆಗೆ ನಿಷೇಧ

ಪವಿತ್ರ ಚಾರ್ ಧಾಮ್ ಯಾತ್ರೆಯಲ್ಲಿ(Char dham Yatra)ಮೊಬೈಲ್ ಬಳಕೆಗೆ(Mobile) ನಿಷೇಧ ಹೇರಿದ ಬೆನ್ನಲ್ಲೇ ಅಯೋಧ್ಯೆಯ(Ayodhya)ರಾಮ (Rama)ಮಂದಿರದಲ್ಲಿಯೂ ಫೋನ್ ಬಳಸದಂತೆ (Restricted)ಆಡಳಿತ ಮಂಡಳಿ ಆದೇಶ ಹೊರಡಿಸಿದೆ.

ಜನಸಾಮಾನ್ಯರು ಮಾತ್ರವಲ್ಲದೆ ವಿಐಪಿಗಳೂ(VIP )ಕೂಡ ದೇವಾಲಯದ ಆವರಣದಲ್ಲಿ ಮೊಬೈಲ್‌ ಫೋನ್‌ ಬಳಸುವಂತಿಲ್ಲ ಎಂದು ಹೇಳಲಾಗಿದೆ. ಈ ನಿಯಮ ಕಳೆದ ಶನಿವಾರದಿಂದಲೇ ಜಾರಿ ಬಂದಿದೆ.

ಶನಿವಾರ ನಡೆದ ರಾಮಮಂದಿರ(Ram Mandir)ಟ್ರಸ್ಟ್ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

Ayodhya Mobile Phone Ban at Ram Janmabhoomi Temple

ದೇವಸ್ಥಾನದಲ್ಲಿ(Temple) ಸಾರ್ವಜನಿಕರು(Public)ಮೊಬೈಲ್ ಕೊಂಡೊಯ್ಯುವುದನ್ನು ಈಗಾಗಲೇ ನಿಷೇಧಿಸಲಾಗಿತ್ತು ಆದರೆ ಈಗ ವಿಐಪಿಗಳು ಮತ್ತು ವಿವಿಐಪಿಗಳು ಮೊಬೈಲ್ ಫೋನ್ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ.

 ಶತಮಾನದ ಕನಸು ,ದಶಕಗಳ ಹೋರಾಟ ಸಾಕಾರಗೊಂಡ ಬಳಿಕ ಅಯೋಧ್ಯೆಯಲ್ಲಿ ರಾಮ(Rama)ನೆಲೆ ನಿಂತಿದ್ದ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ.

ಈ ಕಾರಣದಿಂದ ಭದ್ರತೆಯನ್ನು(Security Purpose)ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಟ್ರಸ್ಟ್ ಟ್ರಸ್ಟಿ ಅನಿಲ್ ಮಿಶ್ರಾ(Anil Mishra )ಹೇಳಿದ್ದಾರೆ. ಎಲ್ಲಾ ಸಂದರ್ಶಕರು ಈ ವ್ಯವಸ್ಥೆಯನ್ನು ಅನುಸರಿಸಲು ಮತ್ತು ಯಾರಿಗೂ ಯಾವುದೇ ಅನಾನುಕೂಲತೆ ಉಂಟಾಗದಂತೆ ಸಹಕರಿಸಲು ವಿನಂತಿಸಲಾಗಿದೆ.

ನೀವು ಇದನ್ನು ಓದಬಹುದು: ಕೇವಲ 11 ದಿನದಲ್ಲಿ ಅಯೋಧ್ಯೆಗೆ 25 ಲಕ್ಷ ಭಕ್ತರು

ರಾಮ ಮಂದಿರಕ್ಕೆ ಬರುವ ಭಕ್ತರ(Devotees )ಮೊಬೈಲ್‌ಗಳನ್ನು(Mobile )ಇಡಲು ಸೂಕ್ತ ವ್ಯವಸ್ಥೆ ಇದೆ ಎಂದು ಮಿಶ್ರಾ ಹೇಳಿದರು. ಜನರು ತಮ್ಮ ಮೊಬೈಲ್ ಜೊತೆಗೆ ಇತರ ಬೆಲೆಬಾಳುವ ವಸ್ತುಗಳನ್ನು(Valuable Items)ಇಟ್ಟುಕೊಳ್ಳಬಹುದು.

ಇಂತಹ ಪರಿಸ್ಥಿತಿಯಲ್ಲಿ ಜನರು ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ದೇವಸ್ಥಾನದ ಆವರಣದಲ್ಲಿ ಸುವ್ಯವಸ್ಥೆ ಕಾಪಾಡಲು ಟ್ರಸ್ಟ್‌ಗೆ ಸಹಕರಿಸಬೇಕು. ಭಕ್ತರು ಲಾಕರ್ ಸೌಲಭ್ಯ ಪಡೆದು ತಮ್ಮ ಮೊಬೈಲ್ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಅದರಲ್ಲಿಟ್ಟು ದರ್ಶನ ಪಡೆಯಬಹುದಾಗಿದೆ.

ಭಕ್ತರು ತಮ್ಮೊಂದಿಗೆ ಕನಿಷ್ಠ ಸಾಮಾನುಗಳನ್ನು(Less Items) ಕೊಂಡೊಯ್ಯುವಂತೆ ಟ್ರಸ್ಟ್ ಮನವಿ ಮಾಡಿದೆ.

Ayodhya Mobile Phone Ban at Ram Janmabhoomi Temple

ನೀವು ಹೆಚ್ಚು ಲಗೇಜ್(Luggage)ಕೊಂಡೊಯ್ದರೆ ತಪಾಸಣೆ (Checking)ಮತ್ತು ಸ್ಕ್ಯಾನಿಂಗ್(Scaning) ಸಮಯ ತೆಗೆದುಕೊಳ್ಳುತ್ತದೆ ಮತ್ತು ಇತರರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಅಂತಹ ಪರಿಸ್ಥಿತಿಯಲ್ಲಿ, ನೀವು ಹೋಟೆಲ್‌ನಲ್ಲಿ (Hotel)ಉಳಿದುಕೊಂಡಿದ್ದರೆ, ದೇವಾಲಯವನ್ನು ತಲುಪುವ ಮೊದಲು ನಿಮ್ಮ ಹೆಚ್ಚಿನ ವಸ್ತುಗಳನ್ನು ಅಲ್ಲಿಯೇ ಬಿಡಲು ಪ್ರಯತ್ನಿಸಿ ಎಂದು ಹೇಳಿದ್ದಾರೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button