ವಿಂಗಡಿಸದಸಂಸ್ಕೃತಿ, ಪರಂಪರೆ

ಈ ತಿಂಗಳ 25,26 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಕರಾವಳಿ ಕಂಬಳ

ಕಂಬಳ , ಈ ಹೆಸರು ಕೇಳಿದ್ರೆ ಸಾಕು.. ಕರಾವಳಿಗರ ಕಿವಿ ಒಮ್ಮೆಲೆ ನೆಟ್ಟಗಾಗುತ್ತದೆ. ಓಹೋ.. ನಮ್ಮೂರ ಕ್ರೀಡೆ ಅಲ್ವಾ ಅಂತ ಒಂದು ಕ್ಷಣ ಯೋಚನೆ ಮಾಡ್ತಾರೆ.. ಕರಾವಳಿ ಬಿಟ್ಟು ಬದುಕಿನ ಅನಿವಾರ್ಯತೆಗಾಗಿ ಬೇರೆ ಕಡೆ ನೆಲೆಸಿರುವವರು ತಮ್ಮ ನೆನಪಿನ ಅಂಗಳಕ್ಕೆ ಜಾರಿ ಬಿಡುತ್ತಾರೆ.. ಕೇವಲ ಕರಾವಳಿಗಷ್ಟೇ ಸಿಮೀತವಾಗಿದ್ದ ಕಂಬಳ, ಈಗ ಎಲ್ಲ ಭಾಗದ ಜನರಿಗೂ ಬಹು ಚಿರಪರಿಚಿತ.. ಅದರಲ್ಲೂ ಕಾಂತಾರ ಸಿನಿಮಾ ಬಂದ ಮೇಲಂತೂ  ಕಂಬಳದ ಬಗ್ಗೆ ಮಾತನಾಡುವವರು, ಕಂಬಳವನ್ನು ನೋಡಬೇಕು ಅಂತ ಬಯಸುವವರ ಸಂಖ್ಯೆ ತುಸು ಜಾಸ್ತಿ ಆಗಿದೆ.

ಕರಾವಳಿಯ ಈ ಜನಪದ ಕ್ರೀಡೆಗೆ 700 ವರ್ಷಗಳ ಇತಿಹಾಸವಿದೆ. ಕಾಲ ಅದೆಷ್ಟೇ ಬದಲಾಗಿ, ನವೀನತೆ ಲಗ್ಗೆ ಇಟ್ಟರೂ ಕರಾವಳಿ ಜನರಿಗೆ ಕಂಬಳದ ಬಗ್ಗೆ ಮೋಹ, ಆ ಆಚರಣೆಯ ಬಗ್ಗೆ ಇರುವ ನಿಷ್ಠೆ ಕೊಂಚ ಕೂಡ ಬದಲಾಗಿಲ್ಲ.. ಆದ್ರೆ ಊರು ಬಿಟ್ಟು ಪರ ಊರಿನಲ್ಲಿರುವ ಈ ಭಾಗದ ಮಂದಿಗೆ ಹಲವು ಬಾರಿ ತಮ್ಮೂರಿನ ಕಂಬಳ ಕೋಣಗಳ ಓಟದ ನೆನಪಾಗದೆ ಇರೋದಕ್ಕೆ ಸಾಧ್ಯವೇ ಇಲ್ಲ ಬಿಡಿ.. ರಾಜ್ಯ ರಾಜಧಾನಿಯಲ್ಲಿ ವಾಸಿಸುತ್ತಿರುವ ಅಂತಹ ಕಂಬಳ ಪ್ರೇಮಿಗಳಿಗೊಂದು ಶುಭ ಸುದ್ದಿ ಸಿಕ್ಕಿದೆ..ಬೆಂಗಳೂರಿನಲ್ಲಿಯೇ ನಡೆಯಲಿದೆ ಕರಾವಳಿ ಕಂಬಳ..

ಹೌದು, ಇದೇ ತಿಂಗಳ 25 ಮತ್ತು 26ರಂದು ಬೆಂಗಳೂರಿನಲ್ಲಿ ಕಂಬಳ ಕೂಟ ಆಯೋಜನೆಗೊಂಡಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಅದ್ಧೂರಿ ಕಂಬಳೋತ್ಸವ ನಡೆಯಲಿದ್ದು, ಹತ್ತು ಹಲವು ವಿಶೇಷತೆಗಳಿಂದ ಈ ಕಾರ್ಯಕ್ರಮ ನಡೆಯಲಿದೆ.

Coastal karnataka

ಅರಮನೆ ಮೈದಾನದ(Palace ground )55 ಎಕರೆ ಪ್ರದೇಶದಲ್ಲಿ ಕಂಬಳ ನಡೆಯಲಿದೆ. ಕಂಬಳದ (kambala )ಓಟದ ಕೆರೆಯ ಉದ್ದ 155 ಮೀಟರ್‌ ಇರುತ್ತದೆ. ಇಲ್ಲಿ ಬೆಳಗ್ಗೆ ಉದ್ಘಾಟನಾ ಸಮಾರಂಭ ನಡೆಯುತ್ತಿರುವಂತೆಯೇ ಜೋಡಿ ಕೋಣಗಳ ಒಂಟಿ ಓಟ ಆರಂಭವಾಗುತ್ತದೆ. ಅಂದರೆ ಅವುಗಳು ಓಡುವ ವೇಗವನ್ನು ದಾಖಲಿಸಿಕೊಳ್ಳಲಾಗುತ್ತದೆ. ಅದಾದ ಬಳಿಕ ವೇಗದ ಆಧಾರದಲ್ಲಿ ಕೋಣಗಳ ಸಾಲು (ಓಟದ ಸ್ಪರ್ಧೆ) ನಿರ್ಧಾರವಾಗುತ್ತದೆ. ಸಂಜೆಯ ನಂತರ ಜೋಡಿ ಕೋಣಗಳ ಸ್ಪರ್ಧೆ ಆರಂಭವಾಗುತ್ತದೆ.

ಕಂಬಳದ ಆಹ್ವಾನಿತರು, ವಿವಿಐಪಿಗಳಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಇರುತ್ತದೆ. ಕಂಬಳದ ಕರೆಗಳ ಎರಡೂ ಭಾಗದಲ್ಲಿ ಗ್ಯಾಲರಿಗಳನ್ನು ನಿರ್ಮಾಣ ಮಾಡಲಾಗಿದ್ದು, ಇದರಲ್ಲಿ 7000 ಜನ ಕುಳಿತು ವೀಕ್ಷಣೆ ಮಾಡಬಹುದು. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ.

Kambala

ಕಂಬಳದಲ್ಲಿ ಎರಡು ಕರೆಗಳಿರುತ್ತದೆ. ಅದರಲ್ಲಿ ಕೋಣಗಳು ಸ್ಪರ್ಧೆಯಲ್ಲಿ ಓಡುತ್ತವೆ. ಯಾವ ಕರೆಯ ಕೋಣ ಗೆದ್ದಿದೆ ಎನ್ನುವುದನ್ನು ಸೂಚಿಸುವುದಕ್ಕಾಗಿ ಕರೆಗಳಿಗೆ ಪ್ರತ್ಯೇಕ ಹೆಸರು ಇಡಲಾಗುತ್ತದೆ. ಸಾಮಾನ್ಯವಾಗಿ ಕೋಟಿ-ಚೆನ್ನಯ್ಯ, ಕಾಂತಾಬಾರೆ ಬೂದಬಾರೆ ಮೊದಲಾದ ತುಳುನಾಡಿನ ಕಾರಣಿಕ ಸಹೋದರರ ಹೆಸರು ಇಡುವ ವಾಡಿಕೆ ಹೆಚ್ಚು. ಲವ-ಕುಶ, ವೀರೇಂದ್ರ-ಸುರೇಂದ್ರ, ಸತ್ಯ-ಧರ್ಮ ಮೊದಲಾದ ಹೆಸರುಗಳೂ ಇವೆ. ಬೆಂಗಳೂರಿನ ಕಂಬಳಕ್ಕೆ ರಾಜ ವೈಭವ ಇರುವುದರಿಂದ ಇಲ್ಲಿನ ಕರೆಗಳಿಗೆ ರಾಜ-ಮಹಾರಾಜ ಎಂಬ ಹೆಸರು ಇಡಲಾಗಿದೆ.

ನೀವು ಇದನ್ನು ಇಷ್ಟ ಪಡಬಹುದು:ಗಂಡುಕಲೆ ಯಕ್ಷಗಾನ ಕರ್ನಾಟಕದ ಹೆಮ್ಮೆ.

Kambala track

ಕರಾವಳಿಯ ಕಂಬಳಕ್ಕೂ ಮೈಸೂರು ಮಹಾರಾಜರಿಗೂ ಸಂಬಂಧವಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ನಡೆದ ಅರಸು ಕಂಬಳಕ್ಕೆ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಒಮ್ಮೆ ಆಗಮಿಸಿದ್ದರು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರೆಗಳಿಗೆ ರಾಜ-ಮಹಾರಾಜ ಎಂಬ ಹೆಸರು ಇಡಲಾಗಿದೆ. ಮತ್ತು ಸಾಂಸ್ಕೃತಿಕ ವೇದಿಕೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹೆಸರು ಇಡಲಾಗಿದೆ.

 ಈ ಕಾರ್ಯಕ್ರಮದ ವಿಶೇಷವೇನೆಂದರೆ ಕೋಣಗಳಿಗೆ ಕುಡಿಯಲು ಕೊಡುವ ನೀರನ್ನು ಕೂಡಾ ಕರಾವಳಿಯಿಂದಲೇ ತರಲಾಗುತ್ತದೆ ಅಂತೆ. ಆಹಾರ ಮತ್ತು ನೀರಿನ ಎಲ್ಲ ವಿಚಾರಗಳನ್ನು ಕೋಣಗಳ ಯಜಮಾನರೇ ತೀರ್ಮಾನ ಮಾಡುತ್ತಾರೆ. ನೀರು ಬದಲಾದರೆ ಕೋಣಗಳ ಆರೋಗ್ಯ ಏರುಪೇರು ಆಗಬಹುದು ಎಂಬ ಕಾರಣಕ್ಕಾಗಿ ಅಲ್ಲಿಂದಲೇ ನೀರು ತರಲಾಗುತ್ತಿದೆ .

Bangalore

ಬಾಲಿವುಡ್‌ ಸಿನಿಮಾ ತಾರೆಯರು, ರಾಜ್ಯದ ಗಣ್ಯಾತಿಗಣ್ಯರು, ಜನಪ್ರತಿನಿಧಿಗಳು, ಸ್ಯಾಂಡಲ್‌ವುಡ್‌ ನಟ-ನಟಿಯರು ಸೇರಿದಂತೆ ನಾಡಿನಾದ್ಯಂತ ಸುಮಾರು 8 ಲಕ್ಷ ಜನರು ಸೇರುವ ನಿರೀಕ್ಷೆಯಿದ್ದು, 200 ಜೋಡಿ ಕೋಣಗಳು ಭಾಗವಹಿಸಲಿವೆ ಎನ್ನಲಾಗುತ್ತಿದೆ. ನವೆಂಬರ್‌ 25ರ ಶನಿವಾರ ಬೆಳಗ್ಗೆ 10.30ಕ್ಕೆ ಕಂಬಳ ಆರಂಭವಾಗಲಿದ್ದು, ಭಾನುವಾರ ಸಂಜೆಯವರೆಗೂ ಮುಂದುವರಿಯಲಿದೆ. ನಡುವೆ ಕಂಬಳದ ಓಟವಲ್ಲದೆ, ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರ ಮೇಳಗಳು ನಡೆಯಲಿವೆ. ನೀವು ಕೂಡ ಬಿಡುವು ಮಾಡಿಕೊಂಡು ಶನಿವಾರ,ಭಾನುವಾರ ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳಕ್ಕೆ ಒಮ್ಮೆ ಭೇಟಿ ಕೊಡಿ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button