ವಿಂಗಡಿಸದಸಂಸ್ಕೃತಿ, ಪರಂಪರೆ

ಗಂಡುಕಲೆ ಯಕ್ಷಗಾನ ಕರ್ನಾಟಕದ ಹೆಮ್ಮೆ.

ಕರಾವಳಿಯ ಹೆಮ್ಮೆಯ ಗಂಡು ಕಲೆ ಯಕ್ಷಗಾನ. ತೆಂಕುತಿಟ್ಟು , ಬಡಗು ತಿಟ್ಟು ಯಕ್ಷಗಾನದ ಪ್ರಕಾರಗಳು. ವಿಭಿನ್ನ ವೇಷಧಾರಿ , ಅರ್ಥಧಾರಿಗಳಿಂದ ಯಕ್ಷಗಾನ ಕರುನಾಡಿನ ಶ್ರೀಮಂತ ಸಂಸ್ಕೃತಿಯಾಗಿ ಬೆಳೆದು ಬಂದಿದೆ. ಕರಾವಳಿಯ ಹೆಮ್ಮೆಯ ಗಂಡುಕಲೆ ಇಂದು ಸಾಗರದಾಚೆಗೂ ಕೂಡ ತನ್ನ ಕೀರ್ತಿಯನ್ನು ಹೆಚ್ಚಿಸಿಕೊಂಡಿದೆ.

ರಾಹುಲ್ ಆರ್ ಸುವರ್ಣ

ಕರಾವಳಿಯ ಹೆಮ್ಮೆಯ ಗಂಡುಕಲೆ ಯಕ್ಷಗಾನ. ಕರಾವಳಿಯಾಚೆಗೂ ಯಕ್ಷಗಾನ ಇಂದು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಹೊರ ರಾಜ್ಯ, ಹೊರ ದೇಶಗಳಲ್ಲಿ ಕೂಡ ಯಕ್ಷ ಅಭಿಮಾನಿಗಳು ಇದ್ದಾರೆ ಎನ್ನುವುದು ನಮ್ಮ ಹೆಮ್ಮೆ.

yakshagana

ಯಕ್ಷಗಾನ ಬೆಳೆದು ಬಂದ ಹಾದಿ

ಈ ಪದದ ಮೊದಲ ಉಲ್ಲೇಖವಿರುವುದು ಸಾರ್ಣ ದೇವನ “ಸಂಗೀತ ರತ್ನಾಕರ” ದಲ್ಲಿ . ಕೃಷಯ್1210 ರಲ್ಲಿ”ಜಕ್ಕ” ಎಂದು ಕರೆಯುತ್ತಿದ್ದ ಪದ ಮುಂದೆ ಯಕ್ಕಲಗಾನ ಎಂದು ಕರೆಯಲ್ಪಟ್ಟು ,ಯಕ್ಷಗಾನ ಆಯಿತು. ಕನ್ನಡದ ಪ್ರಾಚೀನ ಕಾವ್ಯಗಳಲ್ಲಿ ಯಕ್ಷಗಾನ ಎಂಬ ಹೆಸರಿನ ಉಲ್ಲೇಖ ಕಂಡುಬರುತ್ತದೆ. ಕನ್ನಡ ನಾಡಿನಲ್ಲೂ ಸುಮಾರು 12ನೆಯ ಶತಮಾನದಲ್ಲಿ ಒಂದು ಗಾನ ಸಂಪ್ರದಾಯ ಯಕ್ಷಗಾನ ಎಂಬ ಹೆಸರಿನಿಂದ ಬಳಕೆಯಲ್ಲಿತ್ತು.

ಕರ್ನಾಟಕದ ಹೆಮ್ಮೆಯ ಕಲೆಗಳ ಸಾಲಿನಲ್ಲಿ ಕರಾವಳಿಯ ಗಂಡುಕಲೆ ಯಕ್ಷಗಾನ ಕೂಡ ಒಂದು. ವಿಭಿನ್ನ ವೇಷ ಭೂಷಣದಿಂದ ಕೂಡಿದ್ದು, ಯಕ್ಷಗಾನ ತನ್ನದೇ ರೀತಿಯ ಹೆಜ್ಜೆಯಿಂದ ಹೊಂದಿಕೊಂಡು, ಭಾಗವತರು, ಮದ್ದಳೆಗಾರರು,ಚಂಡೆಗಾರರು ಹಿಮ್ಮೆಳದಿಂದ ರಂಗಸ್ಥಳಕ್ಕೆ ಜೀವ ತುಂಬುತ್ತಾರೆ.

Coastal karnataka art

ಯಕ್ಷಗಾನದ ವಿಶೇಷತೆ

ಯಕ್ಷಗಾನದ ಆದಿಕವಿ ಪಾರ್ತಿಸುಬ್ಬ. ಇತ್ತೀಚಿನ ದಿನಗಳಲ್ಲಿ ಹೊರರಾಜ್ಯ, ರಾಷ್ಟ್ರಗಳಲ್ಲೂ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಹಿಂದೆ ರಾತ್ರಿ ಶುರುವಾದರೆ ಮುಂಜಾನೆವರೆಗೂ ರಂಗಸ್ಥಳದಲ್ಲಿ ಗೆಜ್ಜೆ ಸದ್ದು ಕೇಳುತ್ತಲೇ ಇತ್ತು, ಆದರೆ ಈಗ ಕಾಲಮಿತಿಗೆ ಒಳಪಟ್ಟಿದೆ. ಹಾಗೂ ಹಿಂದೆ ದೊಂದಿ ಬೆಳಕಿನಲ್ಲಿ ಪ್ರಸಂಗ ಯಶಸ್ವಿಯಾಗುತ್ತಿದ್ದವು, ಆದರೆ ಈ ದಿನಗಳಲ್ಲಿ ಜಗಮಗಿಸುವ ಬಣ್ಣ ಬಣ್ಣದ ಲೈಟ್ ಗಳಿಂದ ರಂಗಸ್ಥಳದಲ್ಲಿ ನಡೆಯುವ ಸನ್ನಿವೇಶಗಳೆ ಕಾಣದಂತಾಗುತ್ತಿದೆ. ಪೌರಾಣಿಕ ಪ್ರಸಂಗಗಳನ್ನು ಒತ್ತು ಕೊಡುತ್ತಿದ್ದ ಕಲಾವಿದರು ಈಗ ಸಿನಿಮೀಯ ಚಿತ್ರಣಗಳನ್ನು ರಂಗಸ್ಥಳಕ್ಕೆ ಹಸ್ತಾಂತರಿಸಲು ಪ್ರಯತ್ನಿಸುವುದರ ಮೂಲಕ ಸಂಪ್ರದಾಯದ ಹೊಸ್ತಿಲು ದಾಟಿ ಕಾಲಿಡುತ್ತಿದ್ದಾರೆ.

ನೀವು ಇದನ್ನು ಇಷ್ಟ ಪಡುಬಹುದು: ‘ಮೊನ್ ಪಾ ‘ ಎಂಬ ವಿಶಿಷ್ಟ ಜನಾಂಗದ ಕಥೆ

speciality of yakshagana

ಹೆಣ್ಣು ಮಕ್ಕಳಿಗೂ ಒಲಿದ ಕಲೆ

ಯಕ್ಷಗಾನ ಎಂಬುದು ಗಂಡುಮಕ್ಕಳ ಕಲೆ ಎಂಬ ಮಾತಿದೆ, ಆದರೆ ಇಂದು ಯಕ್ಷಗಾನ ಹೆಣ್ಣು ಮಕ್ಕಳ ಕಲೆ ಕೂಡ ಹೌದು . ಹೆಣ್ಣುಮಕ್ಕಳು ಹೆಂಗಸರು ಯಕ್ಷಗಾನ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡುತ್ತಿದ್ದಾರೆ. ಮನಸ್ಸಿದ್ದರೆ ಮಾರ್ಗ, ಬಂದ ಅವಮಾನ ಅಪಮಾನ ಗಳತ್ತ ಹೆಚ್ಚು ಆಸಕ್ತಿ ತೋರದೆ ಮತ್ತೆ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ಮೀಸೆ ತಿರುವುವವರ ಮುಂದೆ ಸವಾಲಾಗಿ ನಿಂತಿದ್ದಾರೆ. ಯಕ್ಷಗಾನದಲ್ಲಿ ಸಾಧಿಸಿದವರು ಹಲವರಿದ್ದಾರೆ, ರಾಜ್ಯಪ್ರಶಸ್ತಿ, ರಾಷ್ಟ್ರಪ್ರಶಸ್ತಿ ಪಡೆದುಕೊಂಡವರ ಸಾಲಿನಲ್ಲಿ ನಮ್ಮ ಯಕ್ಷಗಾನ ಕಲಾವಿದರ ಹೆಸರುಗಳು ಇನ್ನು ಯಾರೇ ಬಂದರೂ ಅಳಿಸಲಾಗದಷ್ಟು ಅಚ್ಚಾಗಿ ಕೂತುಬಿಟ್ಟಿವೆ.

Girls in yakshagana

ಯಕ್ಷಗಾನದಲ್ಲಿ ತೆಂಕು ಮತ್ತು ಬಡಗು ಎರಡು ಪ್ರಕಾರ. ಯಕ್ಷಗಾನ ಮೇಳಗಳು ಸೇವೆಗಳ ರೂಪದಲ್ಲಿ ಭಕ್ತಾದಿಗಳ ಮನೆಯಲ್ಲಿ ಪ್ರಸಂಗವನ್ನು ಮಾಡಿ ತೋರಿಸುತ್ತವೆ. ಮಾರಣಕಟ್ಟೆ, ಕಟೀಲು,ಮಂದಾರ್ತಿ, ಸಾಲಿಗ್ರಾಮ, ಪಾವಂಜೆ ಮೇಳಗಳು ಕರಾವಳಿಯ ಭಾಗದಲ್ಲಿ ತನ್ನದೇ ಆದ ಅಭಿಮಾನಿ ಬಳಗಗಳನ್ನು ಹೊಂದಿದೆ. ಇದಲ್ಲದೆ ಕೆಲವು ಸಂಸ್ಥೆಗಳು ಕೂಡ ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಗುರುಕುಲ ಪದ್ಧತಿಯಲ್ಲಿ ಯಕ್ಷಗಾನ ತರಬೇತಿಯನ್ನು ಕೂಡ ಉಚಿತವಾಗಿ ನೀಡುತ್ತಾ ಬರುವುದರೊಂದಿಗೆ ಯಕ್ಷಗಾನದ ಉಳಿವಿಗೆ ಕಾರಣವಾಗಿ ನಿಸ್ವಾರ್ಥ ಸೇವೆಯನ್ನು ಮೆರೆದಿವೆ. ಅದರಲ್ಲಿ ಉಡುಪಿಯ ನಮ್ಮ ಹೆಮ್ಮೆಯ ಯಕ್ಷಗಾನ ಕೇಂದ್ರ ಕೂಡ ಒಂದು. ಕುಣಿತ ಇಲ್ಲದೆಯೂ ಭಾಗವತರು ಹಾಡಿ, ಅರ್ಥಧಾರಿಗಳು ಹಿಮ್ಮೇಳದವರೊಂದಿಗೆ ಕೂತು ಮಾತಾಡುವುದಕ್ಕೆ ತಾಳ ಮದ್ದಳೆ ಎನ್ನಲಾಗುತ್ತದೆ.

Styles

ಯಕ್ಷಗಾನದಲ್ಲಿ ಪ್ರಮುಖವಾಗಿ ಎರಡು ಪ್ರಕಾರ

ಯಕ್ಷಗಾನದಲ್ಲಿ ಪ್ರಮುಖವಾಗಿ ಎರಡು ಪ್ರಕಾರಗಳಿವೆ . ಅವು ತೆಂಕು ,ಬಡಗು

ತೆಂಕು
ಸಾಮಾನ್ಯವಾಗಿ ತೆಂಕುತಿಟ್ಟು ದಕ್ಷಿಣ ಕನ್ನಡ, ಕಾಸರಗೋಡು, ಬೆಳ್ತಂಗಡಿ, ಮೂಡಬಿದ್ರೆ, ಬಂಟವಾಳ, ಪುತ್ತೂರು ಜಿಲ್ಲೆಗಳಲ್ಲಿ ಕಂಡುಬರುತ್ತದೆ. ತೆಂಕತಿಟ್ಟು ಬಡಗಿಗಿಂತ ವಿಭಿನ್ನವಾಗಿದೆ. ಭಾಗವತರ ಹಾಡುಗಾರಿಕೆ ಶೈಲಿ, ಅದಕ್ಕೆ ತಕ್ಕದಾದ ಹೆಜ್ಜೆ ಮತ್ತು ಚಂಡೆವಾದನದಲ್ಲಿ ಇರುವ ವಿಭಿನ್ನತೆಗಳನ್ನು ಕಾಣಬಹುದು. ಬಡಗಿನಲ್ಲಿ ಮದ್ದಳೆಗಾರರು ಪ್ರೇಕ್ಷಕರಿಗೆ ಮುಖ ಹಾಕಿ ಕೂತರೆ, ತೆಂಕಿನ ಮದ್ದಳೆಗಾರರು ಭಾಗವತರ ಬದಿಗೆ ತಿರುಗಿ ಕೂರುತ್ತಾರೆ. ವೇಷಭೂಷಣದಲ್ಲಿ ನೋಡುವುದಾದರೆ ಬಡಗಿನ ವೇಷಭೂಷಣಗಳಿಗಿಂತ ತೆಂಕಿನ ವೇಷಭೂಷಣಗಳು ಕಡಿಮೆ ಭಾರದಾಗಿದ್ದು, ನೋಡಲು ಆಕರ್ಷಣಿಯವಾಗಿದೆ. ಹಿಮ್ಮೇಳದಲ್ಲಿ ಭಾಗವತರು ತಾಳದ ಹಿಡಿತಕ್ಕೆ ಜಾಗಟೆಯನ್ನು ಬಳಸುವುದಲ್ಲದೆ ಚೆಂಡೆಯನ್ನು ನಿಂತುಕೊಂಡೇ ಬಾರಿಸಲಾಗುತ್ತದೆ.

thenku

ಬಡಗು
ಇದು ಸಾಮಾನ್ಯವಾಗಿ ಉಡುಪಿ, ಕುಂದಾಪುರ, ಶಿವಮೊಗ್ಗ,ಉತ್ತರ ಕನ್ನಡದಲ್ಲಿ ಪ್ರಚಲಿತದಲ್ಲಿದೆ. ಬಡಗಿನ ವೇಷಭೂಷಣ ವೈವಿಧ್ಯತೆಯಿಂದ ಕೂಡಿದ್ದು, ಮುಖವರ್ಣಿಕೆಯು ಹೆಚ್ಚು ಆಕರ್ಷಣೀಯ. ತೆಂಕುತಿಟ್ಟುನಲ್ಲಿ ಹೆಜ್ಜೆಗಳ ಮಧ್ಯೆ ಗಿರ್ಕಿ ಹಾಕಿದರೆ ಇಲ್ಲಿ ಮಂಡಿ ಹಾಕಲಾಗುತ್ತದೆ.ಇಲ್ಲಿ ಭಾಗವತರ ಹಾಡುಗಾರಿ

ಕೆಯ ಶೈಲಿ ತೆಂಕಿಗಿಂತ ವಿಭಿನ್ನವಾಗಿರುವುದರೊಂದಿಗೆ ಚಂಡೆಗಾರರು ಬಲಭಾಗದಲ್ಲಿ ಕೂತು ರಂಗಸ್ಥಳಕ್ಕೆ ಮೆರುಗು ತರುತ್ತಾರೆ.

Badagu

ಯುವಪೀಳಿಗೆ ಚಲನಚಿತ್ರಗಳಿಗೆ ಮಾರುಹೋಗುವ ಪ್ರಸ್ತುತ ಸಂದರ್ಭದಲ್ಲಿ ಕಲೆಗಳಲ್ಲಿ ಆಸಕ್ತಿ ಮೂಡಿಸುವಂತೆ ಮಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಮನೆಯವರೆ ದಿನವಿಡೀ ಟಿವಿಗಳ ಮುಂದೆ ಬೆನ್ನೂರಿದ್ದರೆ ಮಕ್ಕಳಾದರೂ ಎಲ್ಲಿ ಆಸಕ್ತಿ ತೋರಿಯಾರು. ಇಂದು ಯಕ್ಷಗಾನ ಉಳಿಸಬೇಕಾದ ಅಗತ್ಯವಿದೆ. ಯಕ್ಷ ಕಲಾವಿದರು ,ಕಲೆಯನ್ನು ನಾವು ಗೌರವಿಸಬೇಕಿದೆ. ಯಕ್ಷಗಾನ ಎಂಬುದು ಕೇವಲ ಕಲೆಯಲ್ಲ, ನಮ್ಮ ಸಂಸ್ಕೃತಿಯ ಪ್ರತೀಕ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.


Related Articles

Leave a Reply

Your email address will not be published. Required fields are marked *

Back to top button