ವಿಂಗಡಿಸದಸ್ಮರಣೀಯ ಜಾಗ

ಕರ್ನಾಟಕದ ಹೂವಿನ ಕುಂಡ ಗುಂಡ್ಲುಪೇಟೆ

ಗುಂಡ್ಲುಪೇಟೆ ಕರ್ನಾಟಕ ಮತ್ತು ಕೇರಳದ ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆಯಲ್ಲಿರುವ ಪಟ್ಟಣ. ಇಲ್ಲಿನ ರಸ್ತೆಯ ಇಕ್ಕೆಲಗಳಲ್ಲಿ ಕಂಡು ಬರುವ ಹೂದೋಟ ಪ್ರವಾಸಿಗರು ಹಾಗೂ ಛಾಯಾಗ್ರಹಕರ ಪ್ರಮುಖ ಆಕರ್ಷಣೆ. ಕರ್ನಾಟಕದ ಹೂವಿನಕುಂಡ ಎಂದು ಕರೆಯುವ ಗುಂಡ್ಲುಪೇಟೆ ಎನ್ನುವ ಚೆಂದದ ಊರಿನ ಕುರಿತಾದ ಬರಹವಿದು.

ರಿಯಾನ

ಕರ್ನಾಟಕದ ಹೂವಿನ ಕುಂಡ ಎಂದೇ ಕರೆಯಲ್ಪಡುವ ಗುಂಡ್ಲುಪೇಟೆಯು ಚಾಮರಾಜನಗರ ಜಿಲ್ಲೆಯಲ್ಲಿದೆ. ಇದು ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿ ಪಟ್ಟಣವಾಗಿದ್ದು ರಾಜಧಾನಿ ಬೆಂಗಳೂರಿನಿಂದ 200 ಕಿಲೋಮೀಟರ್ ದೂರದಲ್ಲಿದೆ.

Gundlupete

ಮೈಸೂರು- ಊಟಿ ಹೆದ್ದಾರಿಯಿಂದ 56 ಕಿಲೋಮೀಟರ್ ಇರುವ ಇದು ಊಟಿ, ವಯನಾಡು ಅಥವಾ ಕೋಝಿಕ್ಕೋಡ್ ಸಾಗುವ ಕರ್ನಾಟಕದ ಕೊನೆಯ ಪಟ್ಟಣವಾಗಿದೆ. ಇಲ್ಲಿನ ನೈಸರ್ಗಿಕ ಸೌಂದರ್ಯ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ.ಇಲ್ಲಿನ ಸುಂದರವಾದ ಹೂವಿನ ತೋಟಗಳು ಪ್ರವಾಸಿಗರಿಂದ ಹಿಡಿದು ಛಾಯಾಗ್ರಾಹಕರವರೆಗೆ ಎಲ್ಲರನ್ನು ಸೆಳೆಯುತ್ತದೆ. ಇಲ್ಲಿಗೆ ಜೂನ್ ಮತ್ತು ಸೆಪ್ಟೆಂಬರ್ ನಡುವೆ ಭೇಟಿ ನೀಡುವುದು ಉತ್ತಮ .

ಹಳದಿ ಬಣ್ಣದಿಂದ ಕಂಗೊಳಿಸುವ ಸೂರ್ಯಕಾಂತಿಯು ಕಣ್ಣಿಗೆ ಮುದವನ್ನು ನೀಡುತ್ತದೆ. ಹಿಂದೆ ‘ವಿಜಯಪುರ’ ಎಂದು ಕರೆಯಲ್ಪಡುವ ಗುಂಡ್ಲುಪೇಟೆಯು ವಿಜಯನಾರಾಯಣ ಅಭಯಾರಣ್ಯಕ್ಕೆ ಸಮೀಪದಲ್ಲಿರುವುದರಿಂದ ಈ ಹೆಸರು ಬಂದಿತು.

ನೀವು ಇದನ್ನು ಇಷ್ಟ ಪಡಬಹುದು:ಕೇರಳದ ಸೊಬಗು ಮುನ್ನಾರ್ ಇಕೋ ಪಾಯಿಂಟ್

ಪ್ರಸಿದ್ಧ ಬಂಡೀಪುರ ಉದ್ಯಾನವನವು ಇಲ್ಲಿಂದ 17 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿನ ಪ್ರಾಥಮಿಕ ಉತ್ಪನ್ನಗಳೆಂದರೆ ಜೋಳ,ರಾಗಿ, ಅರಿಶಿನ ,ಈರುಳ್ಳಿ ಮತ್ತು ಬಾಳೆ. ಈ ಪ್ರದೇಶದ ವಿಶಿಷ್ಟ ಸಸ್ಯವರ್ಗ ಮುಳ್ಳಿನ ಕಾಡು. ಇದು ಬಂಡೀಪುರ ರಾಷ್ಟ್ರೀಯ ಉದ್ಯಾವನದ ಪಕ್ಕದ ಕಾಡಿನಲ್ಲಿ ಕಂಡುಬರುತ್ತದೆ. ಈ ಪಟ್ಟಣದ ಅತ್ಯಂತ ಗಮನಾರ್ಹ ವೈಶಿಷ್ಟ್ಯವೆಂದರೆ ಇಲ್ಲಿನ ಹೂಗಳ ಕೃಷಿ.

ರಸ್ತೆಯ ಇಕ್ಕೆಲಗಳಲ್ಲಿ ಆಕರ್ಷಿಸುವ ಹೂದೋಟ

ರಸ್ತೆಯ ಎರಡು ಬದಿಯಲ್ಲಿ ಸ್ವಾಗತಿಸುವ ಹೂದೋಟಗಳೇ ಹೆಚ್ಚು ಆಕರ್ಷಕ. ಛಾಯಾಗ್ರಹಕರು ಮತ್ತು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಇಲ್ಲಿ ಸೇರುತ್ತಾರೆ .ಇಲ್ಲಿ ತಂಪಾದ ಸೂರ್ಯಕಾಂತಿ ಹಾಗೂ ಚೆಂಡು ಹೂ (ಮಾರಿಗೋಲ್ಡ್) ಬಹಳ ಪ್ರಮಾಣದಲ್ಲಿದೆ.

Onam flower

ಓಣಂ ಋತುವಿನಲ್ಲಿ ಕೇರಳಕ್ಕೆ ತರಕಾರಿಗಳು ಮತ್ತು ಹೂವುಗಳನ್ನು ಪೂರೈಸುವ ಮುಖ್ಯ ಕೇಂದ್ರವಾಗಿದೆ ಗುಂಡ್ಲುಪೇಟೆ. ಗೋಪಾಲಸ್ವಾಮಿ ಬೆಟ್ಟಗಳು ಶಿವದೇವಾಲಯ, ಮಂಚಳ್ಳಿ ಗುಹೆ ದೇವಾಲಯ, ನರಸಮಂಗಲ ಶಿವದೇವಾಲಯ, ಪಾರ್ವತಿ ಬೆಟ್ಟಗಳು, ತೆರಕನಬಿ ಮತ್ತು ತ್ರಿಯಂಬಕಪುರ ದೇವಾಲಯಗಳು ಇಲ್ಲಿ ನೋಡಬೇಕಾದ ಇತರ ಪ್ರಮುಖ ಆಕರ್ಷಣ ತಾಣಗಳು.

Gopal swami betta

ನೀವು ಕೂಡ ಕೇರಳ ಮತ್ತು ಕರ್ನಾಟಕದ ಗಡಿ ಜಿಲ್ಲೆಯಾಗಿರುವ ಚಾಮರಾಜನಗರ ಜಿಲ್ಲೆಯಲ್ಲಿರುವ ಈ ಚೆಂದದ ಊರಿಗೆ ಒಮ್ಮೆ ಭೇಟಿ ನೀಡಿ. ಪ್ರಕೃತಿಯ ಸವಿಯನ್ನು ಸವಿಯಲು ಇಷ್ಟ ಪಡುವವರಿಗೆ ಮತ್ತು ಫೋಟೋಗ್ರಫಿ ಇಷ್ಟ ಪಡುವವರಿಗೆ ಕೂಡ ಈ ಊರು ಉತ್ತಮ ಸ್ಥಳ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada. Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button