ದೂರ ತೀರ ಯಾನವಿಂಗಡಿಸದ

ಯಾದಗಿರಿಯಲ್ಲಿ ನೋಡಬಹುದಾದ ಜಾಗಗಳು

ಯಾದಗಿರಿಯ (Yadagiri)ಕೆಲವು ಪ್ರದೇಶವನ್ನು “ಯಾದವ”(Yadava) ಎಂಬ ರಾಜವಂಶದವರು ಆಳುತ್ತಿದ್ದರಂತೆ . “ಯಾದವರ” ಈ ವಂಶವನ್ನು ಕೆಲವು ಕಡೆ ಯದುವಂಶ ಎಂದು ಕೂಡಾ ಕೆಲವು ಕಡೆ ಉಲ್ಲೆಖಿಸಲಾಗಿದೆ

ಯಾದಗಿರಿ, ಕ್ರಿ. ಪೂ 1343 ರಿಂದ 1425 ವರೆಗೆ ಯಾದವರ ರಾಜಧಾನಿಯಾಗಿತ್ತು. ಆಕಾಲದ ಪ್ರಮುಖರಾದ ಸಂತವರು, ಚಾಲುಕ್ಯರು(Chalukya), ರಾಷ್ಟ್ರಕೂಟರು(Rashtrakuta), ಆದಿಲ್ ಶಾಹಿಗಳು(Adil shahi), ನಿಜಾಮ್ ಶಾಹಿಗಳು (Nijam Shahi)ಯಾದಗಿರಿಯನ್ನ ಆಳಿದ್ದಾರೆ.

ಯಾದಗಿರಿಯಲ್ಲಿ ಒಂದು ಭವ್ಯ ವಾದ ಗುಡ್ಡ ಯಾದಗಿರಿಯ ಹೃದಯ ಭಾಗದಲ್ಲಿದೆ ಇದನ್ನು ಬೆಟ್ಟವೆಂತಲು ಕರೆಯಬಹುದಾಗಿದೆ. ಯಾದವರು ಆಳುತ್ತಿದ್ದ ಈ ನಾಡಿಗೆ ಬೆಟ್ಟ(Hills) ಅಂದರೆ ಗಿರಿ ಸೇರಿರುವದರಿಂದ ಇದನ್ನು ಮುಂದೆ ಯಾದಗಿರಿ ಎಂದು ಕರೆಯಲಾಯಿತು . ಯಾದವನ ಗಿರಿ’, ಯಾದವ ಗಿರಿ’,ಯಾದಗಿರಿ’, ಯಾದ್ಗೀರ್’ ಎಂದು ಸರಳೀಕೃತಗೊಂಡಿದೆ. ಹೀಗೆ ಹಲವು ನಾಮಗಳಿಂದ ಕರೆಯಲಾಗುತ್ತಿದೆ.

ಯಾದಗಿರಿ ಕೋಟೆ (Yadagiri Fort)

Places to see in Yadagiri

ಕರ್ನಾಟಕದ ಅತಿದೊಡ್ಡ ಕೋಟೆಗಳಲ್ಲಿ ಒಂದಾಗಿದೆ. ಯಾದಗಿರಿ ಕೋಟೆಯನ್ನು 850 ಮೀಟರ್ ಉದ್ದ, 500 ಮೀಟರ್ ಅಗಲ ಮತ್ತು 100 ಮೀಟರ್ ಎತ್ತರ ಇರುವ ದೊಡ್ಡದಾದ ಏಕಶಿಲಾ ಬಂಡೆಯ ಮೇಲೆ ನಿರ್ಮಿಸಲಾಗಿದೆ. ಕಾಲಾಂತರದಲ್ಲಿ ಯಾದಗಿರಿ ಕೋಟೆ ಬಹಮನಿ ಸುಲ್ತಾನರು, ಆದಿಲ್ ಶಾಹಿ, ಯಾದವ ರಾಜರು, ಕಲ್ಯಾಣ ಚಾಲುಕ್ಯರು, ಹೈದರಾಬಾದ್ ನಿಜಾಮರು (Hyderbadh Nijam)ಮತ್ತು ಚೋಳ ರಾಜವಂಶದ ಆಳ್ವಿಕೆಯಲ್ಲಿತ್ತು. ಯಾದಗಿರಿ ಕೋಟೆ ದೊಡ್ಡ ವಿಸ್ತಾರವನ್ನು ಹೊಂದಿದ್ದು ತುಪಾಕಿ, ನೀರಿನ ಮೂಲಗಳೊಂದಿಗೆ ಸ್ವಾವಲಂಬಿಯಾಗಿದೆ ಮತ್ತು ದೀರ್ಘ ಕಾಲ ಶತ್ರುಗಳನ್ನು ತಡೆಹಿಡಿಯಲು ಬೇಕಾದಷ್ಟು ಶಸ್ತ್ರಾಸ್ತ್ರ, ಆಹಾರ ಶೇಖರಣಾ ಸೌಲಭ್ಯಗಳನ್ನು ಹೊಂದಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಯಾದಗಿರಿ ಕೋಟೆ ಶತ್ರುಗಳಿಗೆ ಅಭೇದ್ಯವಾಗಿತ್ತು.

ಶೋರಾಪುರ ಕೋಟೆ: (Shorapura Fort)

Places to see in Yadagiri

ಶೋರಾಪುರದ ಕೊನೆಯ ಆಡಳಿತಗಾರ ರಾಜ ವೆಂಕಟಪ್ಪ ನಾಯಕನು(Venkatappa Fort)ತನ್ನ ಪ್ರದೇಶದ ಆಂತರಿಕ ವ್ಯವಹಾರಗಳಲ್ಲಿ ಬ್ರಿಟಿಷರ ಹಸ್ತಕ್ಷೇಪವನ್ನು ತಪ್ಪಿಸಲು ಬ್ರಿಟಿಷರ ವಿರುದ್ಧ ಹೋರಾಡಿದ ಸಮಯದಲ್ಲಿ ಕಟ್ಟಿಸಿದನು. ನಾಯಕರು ಶೋರಪುರ ನಗರದಲ್ಲಿ ಎರಡು ಅರಮನೆಗಳು ಮತ್ತು ವಾಗಿನಗರದಲ್ಲಿ ಒಂದು ಕೋಟೆಯನ್ನು ನಿರ್ಮಿಸಿದ್ದರು.

ವನದುರ್ಗ ಕೋಟೆ(Vanadurga Fort)

Places to see in Yadagiri

ಬೃಹತ್ ಪ್ರವೇಶ ದ್ವಾರಗಳು, ಅರ್ಧ ಚಂದ್ರನ ಆಕಾರದ ಗೋಡೆಗಳು, ದೇವನಾಗರಿ ಲಿಪಿಯಲ್ಲಿ(Devrnagari Lipi)ಸಂಸ್ಕೃತ ಶಾಸನಗಳು ಮತ್ತು ಇತರ ವೈಶಿಷ್ಟ್ಯಗಳೊಂದಿಗೆ ವನದುರ್ಗ ಕೋಟೆ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದು ಶೋರಾಪುರದಿಂದ 24 ಕಿ.ಮೀ ದೂರದಲ್ಲಿರುವ ಐತಿಹಾಸಿಕ ಕೋಟೆಯಾಗಿದೆ. ವನದುರ್ಗ ಕೋಟೆಯನ್ನು ಪಿಡ್ಡ ನಾಯಕನು ತನ್ನ ರಾಣಿ ವೆಂಕಮ್ಮಾ೦ಬಳಿಗಾಗಿ ನಿರ್ಮಿಸಿದ್ದನು. ರಾಜ

ನೀವು ಇದನ್ನು ಇಷ್ಟ ಪಡಬಹುದು:ಶರಣರ ನಾಡಿನಲ್ಲಿ ನೋಡಬಹುದಾದ ಜಾಗಗಳಿವು

ವೆಂಕಟಪ್ಪ ನಾಯಕ ಕೋಟೆ ಮತ್ತು ಅರಮನೆ: (Venkatappa nayak and Palace)

Places to see in Yadagiri

ಯಾದಗಿರಿಯಿಂದ 52 ಕಿ.ಮೀ ದೂರದಲ್ಲಿಇರುವ ಶೋರಾಪುರ ಪಟ್ಟಣದಲ್ಲಿ ಇರುವ ರಾಜ ವೆಂಕಟಪ್ಪ ಕೋಟೆ ಮತ್ತು ಅರಮನೆ ನಾಯಕ ರಾಜವಂಶದ ಕೊನೆಯ ಪ್ರಮುಖ ಆಡಳಿತಗಾರನ ಭದ್ರಕೋಟೆಯಾಗಿತ್ತು.

ಬೋನಾಳ ಪಕ್ಷಿಧಾಮ: (Bonal Bird Sanctuary)

Places to see in Yadagiri

ಬೋನಾಳ ಕರ್ನಾಟಕದ ಎರಡನೇ ಅತಿದೊಡ್ಡ ಪಕ್ಷಿಧಾಮವಾಗಿದೆ (ಮೈಸೂರು ಬಳಿಯ ರಂಗನತಿಟ್ಟು ಅತ್ಯಂತ ದೊಡ್ಡದಾಗಿದೆ) ಶೋರಪುರ ನಗರದ ಬಳಿ ಬೋನಾಳ ಪಕ್ಷಿಧಾಮವಿದೆ. ಬೋನಾಳ ಸರೋವರವನ್ನು ಬ್ರಿಟಿಷ್ ಯುಗದಲ್ಲಿ ಹೈದರಾಬಾದ್ ನಿಜಾಮರ ಧನಸಹಾಯದೊಂದಿಗೆ ಮನರಂಜನಾ ಸೌಲಭ್ಯವಾಗಿ ಅಭಿವೃದ್ಧಿಪಡಿಸಲಾಯಿತು. ಬ್ರಿಟಿಷ್ ಅಧಿಕಾರಿಗಳು ಬರೆದ ಕೆಲವು ಆತ್ಮಚರಿತ್ರೆಗಳಲ್ಲಿ ಬೋನಾಳ ಸರೋವರವನ್ನು ಉಲ್ಲೇಖಿಸಲಾಗಿದೆ. ಇತರ ಆಕರ್ಷಣೆಗಳು.

ಮಲಗಿರುವ ಬುದ್ಧನ ಬೆಟ್ಟ: ( Sleeping Hills Of Buddha)

Places to see in Yadagiri

ಬೋನಾಳ ಪಕ್ಷಿಧಾಮದಿಂದ 45 ಕಿ.ಮೀ ಮತ್ತು ಯಾದಗಿರಿ ನಗರದಿಂದ 40 ಕಿ.ಮೀ ದೂರದಲ್ಲಿ ಮಲಗಿರುವ ಬುದ್ಧನ ಬೆಟ್ಟ ಇದೆ. ಮಲಗಿರುವ ಬುದ್ಧನ ಬೆಟ್ಟವು 4 ಸಣ್ಣ ಬೆಟ್ಟಗಳ ಗುಂಪಾಗಿದ್ದು, ದೂರದಿಂದ ನೋಡಿದಾಗ ಮಲಗುವ ಬುದ್ಧನ ಆಕಾರವನ್ನು ಹೋಲುತ್ತದೆ. ಯಾದಗಿರಿಗೆ ಬರುವ ಬಹುತೇಕ ಪ್ರವಾಸಿಗರು ಮಲಗಿರುವ ಬುದ್ಧನ ಬೆಟ್ಟಕ್ಕೆ ತಪ್ಪದೆ ಭೇಟಿ ನೀಡುತ್ತಾರೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button