ದೂರ ತೀರ ಯಾನವಿಂಗಡಿಸದ

ಉತ್ತರಕನ್ನಡದಲ್ಲಿ ನೋಡಬಹುದಾದ ತಾಣಗಳು

ಉತ್ತರ ಕನ್ನಡ(Uttara Kannada )ಕರ್ನಾಟಕದ ಕರಾವಳಿ(Coastal Karnataka )ಜಿಲ್ಲೆಗಳಲ್ಲಿ ಒಂದು. ಈ ಜಿಲ್ಲೆ ಗೋವಾ(Goa) ರಾಜ್ಯ, ಬೆಳಗಾವಿ,(Belagavi) ಧಾರವಾಡ(Dharwad), ಶಿವಮೊಗ್ಗ(Shivamogga), ಉಡುಪಿ (Udupi)ಜಿಲ್ಲೆಗಳೊಂದಿಗೆ ತನ್ನ ಗಡಿ ಹಂಚಿಕೊಂಡಿದೆ. ಈ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿ. ಇಲ್ಲಿ ಅನೇಕ ಸುಂದರ ಜಲಪಾತಗಳಿವೆ. ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು ನಡು ಮಧ್ಯದಲಿ ಅಡಕೆ ತೆಂಗುಗಳ ಮಡಲು ಉತ್ತರಕನ್ನಡ ಜಿಲ್ಲೆ.

ಅಪ್ಸರಕೊಂಡ (Apsarakonda )

ಅಪ್ಸರಕೊಂಡ ಎಂಬ ಹೆಸರು ಅಪ್ಸರಾ(Apsara) (ದೇವತೆ) ಮತ್ತು ಕೊಂಡ (ಕೊಳ) ದಿಂದ ಬಂದಿದೆ, ಅಂದರೆ ದೇವತೆಗಳ ಕೊಳ.ದೈವಿಕ ದೇವತೆಗಳು ಇಲ್ಲಿ ಸ್ನಾನ ಮಾಡುತ್ತಿದ್ದರು.ಕೊಳವು ಸ್ಪಟಿಕ ಸ್ಪಷ್ಟವಾದ ನೀರಿಗೆ ಹೆಸರುವಾಸಿಯಾಗಿದೆ.

Must visit places in Uttara Kannada

ಕೊಳದ ಕೆಳಭಾಗದಲ್ಲಿರುವ ಕಲ್ಲುಗಳು ಕಣ್ಣಿಗೆ ಸ್ಪಷ್ಟವಾಗಿ ಗೋಚರಿಸುವಷ್ಟು ನೀರು ನಿಚ್ಚಳವಾಗಿದೆ.ಇನ್ನು ಜಲಪಾತವು(Falls) 10 ಮೀಟರ್‌ ಎತ್ತರದಿಂದ ಧುಮ್ಮುಕ್ಕುತ್ತದೆ. ಕೇವಲ 10 ಮೀಟರ್‌ ಎತ್ತರದಿಂದ ಆದರೂ ರಭಸವಾಗಿ ಕೊಳದಲ್ಲಿ ಬೀಳುವ ಆ ದೃಶ್ಯ ಅದ್ಭುತವಾದುದು.

ಯಾಣ (Yana)

ಉತ್ತರ ಕನ್ನಡ ಜಿಲ್ಲೆಯ ಕುಮಟಾ (Kumta) ತಾಲೂಕಿನಲ್ಲಿರುವ ಯಾಣವು ಕಾಡಿನ ಮಧ್ಯೆ ಇರುವ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇದು ಸಹ್ಯಾದ್ರಿ ಬೆಟ್ಟಗಳ ಸಾಲಿನ ಪಶ್ಚಿಮ ಘಟ್ಟದಲ್ಲಿದೆ.ಈ ಶಿಲಾ ಪ್ರರ್ವತವನ್ನು ವೀಕ್ಷಿಸಲು ಸಮೀಪದ ರಸ್ತೆಯಿಂದ 0.5 ಕಿ.ಮೀ. ದೂರ ಕಾಡಿನಲ್ಲಿ ಕ್ರಮಿಸಬೇಕು. ಭೈರವೇಶ್ವರ ಶಿಖರ (Bhairaveshwara Hills)ಮತ್ತು ಮೋಹಿನಿ ಶಿಖರ(Mohini Hills )ಎಂಬ ಬಹೃತ್ ಪರ್ವತ ಶೃಂಗಗಳಿಂದ ಯಾಣವು ಪ್ರಸಿದ್ಧಿಯನ್ನು ಪಡೆದಿದೆ. ಈ ಎರಡು ಬೃಹತ್ ಶಿಲಾ ಬಂಡೆಗಳು ಕಡುಗಪ್ಪು ಬಣ್ಣದ ಸುಣ್ಣದ ಹರಳಿನಿಂದ ನಿರ್ಮಿತವಾಗಿವೆ.

Must visit places in Uttara Kannada

ಮಿರ್ಜಾನ್ ಕೋಟೆ (Mirzan Fort)

ಮಿರ್ಜಾನ್ ಕೋಟೆಯು ಉತ್ತರಕನ್ನಡದ ಕುಮಟಾ ತಾಲೂಕಿನ ಮಿರ್ಜಾನ್ ಗ್ರಾಮದಲ್ಲಿದೆ. ಗೋಕರ್ಣದಿಂದ (Gokarna)ಸುಮಾರು 23 ಕಿಮಿ ದೂರದಲ್ಲಿರುವ ಮಿರ್ಜಾನ್ ಕೋಟೆ, ಕುಮಟಾ ಪಟ್ಟಣದಿಂದ 10.5 ಕಿಮಿ ದೂರದಲ್ಲಿದೆ. ನಾವು ಕಾಣಬಹುದಾದ ಉತ್ತಮ ಸ್ಥಿತಿಯಲ್ಲಿರುವ ಕೋಟೆಗಳಲ್ಲಿ ಇದು ಕೂಡಾ ಒಂದಾಗಿದೆ. ಇದು ಅಘನಾಶಿನಿ ನದಿಯ ತಟದಲ್ಲಿದ್ದು ಅದರಾಚೆಗೆ ಅರಬ್ಬೀ ಸಮುದ್ರವನ್ನು ಹೊಂದಿದೆ. ಈ ಕೋಟೆಯಲ್ಲಿ ಸುಮಾರು 11.5 ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಈ ಕೋಟೆಯಿದ್ದು ನೋಡಲು ತುಂಬಾ ಆಕರ್ಷಕವಾಗಿದೆ.

Must visit places in Uttara Kannada

ಈ ಕೋಟೆಯು ಕರಾವಳಿ ಪ್ರದೇಶದಲ್ಲಿ ಕಂಡುಬರುವ ಜಂಬಿಟ್ಟಿಗೆ ಕಲ್ಲಿನಿಂದ (ಲ್ಯಾಟರೈಟ್) ನಿರ್ಮಾಣವಾಗಿದ್ದು ಇಂದಿಗೂ ಅದರ ಗೋಡೆಗಳು ಗಟ್ಟಿಯಾಗಿವೆ. ಇದರಲ್ಲಿ ಒಂದು ಮುಖ್ಯ ದ್ವಾರಗಳಿದ್ದು ಮೂರು ಉಪ ದ್ವಾರಗಳು ಕಂಡುಬರುತ್ತವೆ. ಕೋಟೆಯ(Fort )ಸುತ್ತ ತಗ್ಗು ಪ್ರದೇಶವಿದ್ದು ಹಲವಾರು ಗುಪ್ತದ್ವಾರಗಳನ್ನು ಹೊಂದಿದೆ. ಅದಲ್ಲದೇ ಇಲ್ಲಿ ಹಲವಾರು ಕಂದಕಗಳು, ದರ್ಬಾರ ಹಾಲ್(Darbar Hall), ರಾಣಿಯ ಸಿಂಹಾಸನ, ಪಾಕಶಾಲೆ, ಮಾರುಕಟ್ಟೆ ದೇವಸ್ಥಾನ, ಮಸಿದಿಯಂತಹ(Masjid) ಅವಶೇಷಗಳು ಮತ್ತು ಈ ಕೋಟೆಯಲ್ಲಿ 9 ಭಾವಿಗಳನ್ನು ನಾವು ಕಾಣಬಹುದಾಗಿದೆ.

ಅದಲ್ಲದೇ ಕೋಟೆಯ ಧ್ವಜ ಸ್ತಂಭ, ಕಾವಲು ಗೋಪುರ ಅಲ್ಲಿಂದ ಕಾಣುವ ಅಘನಾಶಿನಿ ನದಿ ನೋಡುಗರ ಗಮನವನ್ನು ಸೆಳೆಯುತ್ತದೆ.

ಗೋಕರ್ಣ (Gokarna)

ಗೋಕರ್ಣ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಡಲತೀರದ ಒಂದು ಊರು. ಭೂಕೈಲಾಸ ,ಪರಶುರಾಮ(Parashurama) ಭೂಮಿ ಎಂಬ ಐತಿಹ್ಯಗಳನ್ನು ಹೊಂದಿರುವ ಈ ಪ್ರದೇಶ ವಾಯವ್ಯ ದಿಕ್ಕಿನಲ್ಲಿದೆ. ಕಾರವಾರದಿಂದ(Karwar) ಸುಮಾರು 65 ಕಿ.ಮಿ. ದೂರದಲ್ಲಿದೆ.ಗೋಕರ್ಣ ಮಹಾಬಲೇಶ್ವರ ದೇವಸ್ಥಾನ(Mahabaleshwar), ಕ್ರಿ.ಶ. 4ನೇ ಶತಮಾನದ ಹಿಂದೂ ದೇವಾಲಯವಾಗಿದ್ದು, ಇದನ್ನು ಶಾಸ್ತ್ರೀಯ ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ.

Must visit places in Uttara Kannada

ನೀವು ಇದನ್ನು ಇಷ್ಟ ಪಡಬಹುದು:ಹುಬ್ಬಳ್ಳಿ ಧಾರವಾಡದಲ್ಲಿ ನೋಡಬಹುದಾದ ತಾಣಗಳು

ಈ ದೇವಾಲಯವು ಕರ್ನಾಟಕದ ಏಳು ಪವಿತ್ರ ಮುಕ್ತಿಕ್ಷೇತ್ರಗಳಲ್ಲಿ ಅಥವಾ ಮುಕ್ತಿಸ್ಥಳ (“ಮೋಕ್ಷದ ಸ್ಥಳಗಳು”)ಗಳಲ್ಲಿ ಒಂದಾಗಿದೆ. ಇದು ಕರ್ನಾಟಕದ ಅನೇಕ ಹಿಂದೂಗಳು ತಮ್ಮನ್ನು ಅಗಲಿದವರಿಗೆ ವಿಧಿವಿಧಾನಗಳನ್ನು (ಮರಣ ಸಂಸ್ಕಾರ) ಮಾಡುವ ಸ್ಥಳವಾಗಿದೆ.

ಮುರುಡೇಶ್ವರ (Murudeshwar)

ಮುರುಡೇಶ್ವರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ (Bhatkal)ತಾಲೂಕಿನಲ್ಲಿದೆ. ಇಲ್ಲಿರುವ ಮುರುಡೇಶ್ವರ ಸ್ವಾಮಿಯ ದೇವಸ್ಥಾನವು ಧಾರ್ಮಿಕ ಪುಣ್ಯ ಸ್ಥಳವಾಗಿದ್ದು, ಐತಿಹಾಸಿಕವಾಗಿ ಪ್ರಖ್ಯಾತಿಯನ್ನು ಹೊಂದಿದೆ. ಅರಬ್ಬೀ ಸಮುದ್ರದ ತೀರದಲ್ಲಿರುವ ಈ ಊರು, ಪ್ರಪಂಚದ ಅತ್ಯಂತ ಎತ್ತರದ ಶಿವನ(Shiva) ವಿಗ್ರಹಕ್ಕೆ ಹೆಸರುವಾಸಿ ಯಾಗಿದೆ. ಮುರುಡೇಶ್ವರ ಕೇವಲ ಧಾರ್ಮಿಕ ಕ್ಷೇತ್ರ ಮಾತ್ರವಲ್ಲ, ಪ್ರವಾಸಿ ತಾಣವೂ ಆಗಿದೆ.

Must visit places in Uttara Kannada

ಏಷ್ಯಾದಲ್ಲಿಯೆ (Asia)2ನೇ ಎತ್ತರದ ಶಿವನ ಪ್ರತಿಮೆ ಇದೆ ಮತ್ತು ಜಗತ್ತಿನಲ್ಲಿಯೇ ಅತಿ ಎತ್ತರವಾದ ರಾಜ ಗೋಪುರವಿದೆ. ಇದು ಧಾರ್ಮಿಕರನ್ನಷ್ಟೇ ತನ್ನತ್ತ ಸೆಳೆಯದೆ ವಿಹಾರಿಗಳನ್ನೂ ಆಕರ್ಷಿಸುತ್ತಿದೆ. ಇತ್ತೀಚೆಗೆ ಇಲ್ಲಿ ರಾಮ(Rama), ಲಕ್ಷ್ಮಣ(Lakshmana) ಮತ್ತು ಸೀತಾ(Sita) ಪ್ರತಿಮೆಯ ರಾಮಮಂದಿರವನ್ನು ಮತ್ತು ಶನಿ ದೇವಾಲಯವನ್ನು ಮಾಡಲಾಗಿದೆ. ಇಲ್ಲಿನ ಸಮುದ್ರದಲ್ಲಿ ಜಲ ಕ್ರೀಡೆ ಆಡುವುದೆ ಒಂದು ಅನನ್ಯ ಅನುಭವ.

ರಾಷ್ಟ್ರೀಯ ಹೆದ್ದಾರಿಯಿಂದ ಊರನ್ನು ಪ್ರವೇಶಿಸುವಾಗ ಮಹಾದ್ವಾರವು ಕಲಾತ್ಮಕವಾಗಿದ್ದು ದೇವಾಲಯದ ಬಳಿ ಸಾಗಿದಂತೆ ಎರಡು ಆನೆಗಳು(Elephant )ಪ್ರವಾಸಿಗರ ಮನ ಸೆಳೆಯುತ್ತವೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button