ಹಾವೇರಿ ಜಿಲ್ಲೆಯಲ್ಲಿ ನೋಡಬಹುದಾದ ತಾಣಗಳು
ಹಾವೇರಿ(Haveri) ಉತ್ತರ ಕರ್ನಾಟಕದ(North Karnataka)ಜಿಲ್ಲೆಗಳಿಗೆ ಹೆಬ್ಬಾಗಿಲು. ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆ.ಸಂತ ಶಿಶುನಾಳ ಶರೀಫರು(Santha Shishunala Sharifa), ಕನಕದಾಸರು(Kanaka Dasa), ಸರ್ವಜ್ಞ(Sarvajna), ಗಾನಯೋಗಿ ಪಂಚಾಕ್ಷರಿ ಗವಾಯಿಗಳು(Ganayogi Panchakshara Gavai), ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ:ವಿನಾಯಕ ಕೃಷ್ಣ ಗೋಕಾಕರು(Vinayaka Krishna Gokak) ಮುಂತಾದ ಮಹನಿಯರುಗಳಿಗೆ ಜನ್ಮನೀಡಿದ ಹೆಮ್ಮೆಯ ಜಿಲ್ಲೆ ಹಾವೇರಿ.
ಹಾವೇರಿ ಜಿಲ್ಲೆಯು ಗದಗ (Gadag) ಜಿಲ್ಲೆಯನ್ನು ಒಳಗೊಂಡಂತೆ ಮೊದಲು ಧಾರವಾಡ ಜಿಲ್ಲೆಯ ಭಾಗವಾಗಿತ್ತು. ಇಲ್ಲಿನ ಜನರ ಬೇಡಿಕೆಯಂತೆ ಬಹುದಿನಗಳ ಹೋರಾಟದ ನಂತರ ಧಾರವಾಡ ಜಿಲ್ಲೆಯಿಂದ ವಿಭಜಿಸಲ್ಪಟ್ಟ ಹಾವೇರಿ ಜಿಲ್ಲೆ ದಿನಾಂಕ: 1997 ರಂದು ಹೊಸ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿತು.
ಬಾಡ: (Bada)
16 ನೇ ಶತಮಾನದ ಕವಿ, ದಾರ್ಶನಿಕ ಮತ್ತು ಸಂಗೀತಗಾರ ಕನಕ ದಾಸರ ನೆನಪಿಗಾಗಿ ನಿರ್ಮಿಸಲಾದ ಕನಕದಾಸ ಅರಮನೆಗೆ(Palace) ಹಾವೇರಿ ಜಿಲ್ಲೆಯ ಬಾಡ ಹೆಸರುವಾಸಿಯಾಗಿದೆಶಿಶುನಾಳ(Shishunala) 19 ನೇ ಶತಮಾನದ ಸಾಮಾಜಿಕ ಸುಧಾರಕ, ದಾರ್ಶನಿಕ ಮತ್ತು ಕವಿ ಸಂತ ಶಿಶುನಾಳ ಶರೀಫ ಅವರ ಜನ್ಮಸ್ಥಳವು ಹಾವೇರಿಯ ಶಿಶುನಾಳ ಗ್ರಾಮವಾಗಿದೆ.
ಅಬಲೂರು(Abaluru)
ಹಾವೇರಿಯಲ್ಲಿರುವ ಅಬಲೂರು ತ್ರಿಪದಿ ಸಾಮ್ರಾಜ್ಯದ ಚಕ್ರವರ್ತಿ, ಕವಿಯಾದ ಸರ್ವಜ್ಞನ ಜನ್ಮಸ್ಥಳ. ಅಬಲೂರಿನಲ್ಲಿ ನಂದಿ ದೇವಾಲಯವೂ(Nandi )ಇದೆ.
ಸವಣೂರು(Savanur)
ಆಫ್ರಿಕಾದಲ್ಲಿ(Africa )ಹೆಚ್ಚಾಗಿ ಕಾಣಿಸಿಕೊಳ್ಳುವುದು ಬಾವೊಬಾಬ್(Baobab) ಮರಗಳು. ವಿಶೇಷವೆಂದರೆ ಈ ಬಾವೊಬಾಬ್ ಮರಗಳು ಹಾವೇರಿಯ ಸವಣೂರಿನಲ್ಲೂ ಇವೆ. ಮೂರು ಬಾವೊಬಾಬ್ ಮರಗಳನ್ನು ಹತ್ತಿರ ಹತ್ತಿರದಲ್ಲೇ ತ್ರಿಕೋನಾಕಾರದಲ್ಲಿ ನೆಡಲಾಗಿದೆ. ಈ ರೀತಿ ಹತ್ತಿರದಲ್ಲಿ ಮೂರು ಬಾವೊಬಾಬ್ ಮರಗಳನ್ನು ಹೊಂದಿರುವ ದೇಶದ ಏಕೈಕ ಸ್ಥಳ ಎನ್ನುವ ಖ್ಯಾತಿ ಸವಣೂರಿಗೆ ಸಿಕ್ಕಿದೆ. ಈ ಮರಗಳು ಸರಿಸುಮಾರು 2 ಸಾವಿರ ವರ್ಷಗಳಷ್ಟು ಹಳೆಯವು ಎನ್ನಲಾಗುತ್ತದೆ.
ನೀವು ಇದನ್ನು ಇಷ್ಟ ಪಡಬಹುದು:ಹುಬ್ಬಳ್ಳಿ ಧಾರವಾಡದಲ್ಲಿ ನೋಡಬಹುದಾದ ತಾಣಗಳು
ಕೃಷ್ಣಮೃಗ ಅಭಯಾರಣ್ಯ(Ranebennur Blackbuck Sanctuary)
ರಾಣೆಬೆನ್ನೂರಿನಲ್ಲಿ(Ranebennur) ಕೃಷ್ಣಮೃಗ ಅಭಯಾರಣ್ಯವಿದೆ. ಈ ಅಭಯಾರಣ್ಯವು 119 ಚದರ ಕಿ.ಮೀ.ಗೆ ಹಬ್ಬಿದೆ. ಅದರಲ್ಲಿ 14.87 ಕಿ.ಮೀ. ಅನ್ನು ಮುಖ್ಯ ಅಭಯಾರಣ್ಯವೆಂದು ಪರಿಗಣಿಸಲಾಗಿದೆ. ಕೃಷ್ಣಮೃಗ ಮಾತ್ರವಲ್ಲದೆ ಇಲ್ಲಿ ತೋಳ, ಕಾಡು ಹಂದಿ, ಕತ್ತೆ ಕಿರುಬ, ನರಿ, ಲಾಂಗುರ್, ಮುಳ್ಳು ಹಂದಿ, ಮುಂಗುಸಿ, ಮೊಲ ಮತ್ತು ಪ್ಯಾಂಗೋಲಿನ್‌ಗಳೂ ಇವೆ. ಅದಲ್ಲದೆ ನವಿಲು, ಸಿರ್ಕೀರ್ ಕೋಗಿಲೆ, ಬೂದು ಬಣ್ಣದ ಬಾಬ್ಲರ್, ಬೇಬ್ಯಾಕ್ಡ್ ಶ್ರೈಕ್, ಬ್ಲ್ಯಾಕ್ ಡ್ರೊಂಗೊ, ಗ್ರೇ ಪಾರ್ಟ್ರಿಡ್ಜ್, ಸ್ಯಾಂಡ್ ಗ್ರೌಸ್ ಹೆಸರಿನ ಹಕ್ಕಿಗಳು ಕೂಡ ಇವೆ
ಉತ್ಸವ ರಾಕ್ ಗಾರ್ಡನ್(Utsav Rock Garden)
ಕರ್ನಾಟಕದ ಪ್ರವಾಸಿ ಕೇಂದ್ರಗಳಲ್ಲಿ ತನ್ನದೇ ಆದ ವೈಶಿಷ್ಟತೆಗಳಿಂದ ಗುರುತಿಸಿಕೊಂಡ ಉತ್ಸವ ರಾಕ್ ಗಾರ್ಡನ್ ಹಾವೇರಿ ಜಿಲ್ಲೆ ಶಿಗ್ಗಾಂವ(Shiggaon) ತಾಲೂಕಿನ ಗೊಟಗೋಡಿಯ(Gotagodi) ಹೆಮ್ಮೆಯ ಕಲಾನೆಲ.
ಗಳಗನಾಥ ದೇವಸ್ಥಾನ(Galaganatha Temple)
ಗಳಗನಾಥ ದೇವಸ್ಥಾನ ಎಂದೂ ಕರೆಯಲ್ಪಡುವ ಗಳಗೇಶ್ವರ ದೇವಸ್ಥಾನವು(Galageshwara) ಗಳಗನಾಥ ಎಂಬ ಸಣ್ಣ ಹಳ್ಳಿಯಲ್ಲಿದೆ. ಇದನ್ನು ಚಾಲುಕ್ಯರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಈ ದೇವಾಲಯದ ತುಂಬ ಶಿಲ್ಪಗಳು ಮತ್ತು ಸಂಕೀರ್ಣವಾದ ಕೆತ್ತನೆಗಳನ್ನು ಕಾಣಬಹುದಾಗಿದೆ. ಈ ದೇವಸ್ಥಾನದ ಗೋಪುರ ನೆಲದಿಂದಲೇ ಮೇಲಕ್ಕೆದ್ದಂತೆ ಕಾಣುವುದರಿಂದಾಗಿ ಇದು ಬೇರೆ ದೇಗುಲಗಳಿಗಿಂತ ವಿಭಿನ್ನವಾಗಿದೆ.
ಕಾಗಿನೆಲೆ (Kaginelli)
ಕಾಗಿನೆಲೆಯು ಇತಿಹಾಸ ಪ್ರಸಿದ್ಧ ಸ್ಥಳವಾಗಿದ್ದು, ಇಲ್ಲಿ ನೀವು ಸಂಗಮೇಶ್ವರ ದೇವಾಲಯ(Shri Sangameshwara Swami Temple), ಆದಂ ಶಾಫಿಯಾ ದರ್ಗಾ(Adam Shafiya Darga), ಆದಿಕೇಶ್ವರ ದೇವಸ್ಥಾನವು(Adikeshwara Temple) ಇಲ್ಲಿದೆ. ಹಾಗೆಯೇ ಪ್ರಸಿದ್ಧ ಕನಕದಾಸರ ಬೃಂದಾವನ (Kanakadasa Brindavana)ಮತ್ತು ಕನಕ ಗುರು ಪೀಠವನ್ನು(Kanaka Guru peetha)ಇಲ್ಲಿ ನೀವು ಕಾಣಬಹುದು.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.