2026 ರ ವೇಳೆಗೆ ದೇಶದಲ್ಲಿ ಕಮಾಲ್ ಮಾಡಲಿದೆ ಏರ್ ಟ್ಯಾಕ್ಸಿ
ದೇಶದಲ್ಲಿ 2026ರ ವೇಳೆಗೆ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ(Electric Air Taxi)ಸೇವೆ ಆರಂಭಿಸಲು ಇಂಡಿಗೊ(Indigo )ಕಂಪನಿಯ ಮಾತೃಸಂಸ್ಥೆಯಾದ ಇಂಟರ್‌ಗ್ಲೋಬಲ್ ಎಂಟರ್‌ಪ್ರೈಸಸ್(Interglobe Enterprises)ಮತ್ತು ಅಮೆರಿಕದ ಆರ್ಚರ್ ಏವಿಯೇಷನ್ (America Archer Aviation)ಜಂಟಿಯಾಗಿ ಸಿದ್ಧತೆ ನಡೆಸಿವೆ. ಪ್ರಥಮ ಬಾರಿಗೆ ನವದೆಹಲಿಯ(New Delhi )ಕನೌಟ್ (Kanota)ಸ್ಥಳದಿಂದ ಹರಿಯಾಣದ(Haryana) ಗುರುಗ್ರಾಮಕ್ಕೆ(Gurugram )ಈ ಸೇವೆ ಆರಂಭವಾಗಲಿದೆ.
ಏರ್ ಟ್ಯಾಕ್ಸಿಯಲ್ಲಿ ಕನೌಟ್‌ನಿಂದ ಗುರುಗ್ರಾಮಕ್ಕೆ ತಲುಪಲು 2 ಸಾವಿರದಿಂದ 3 ಸಾವಿರ ಪ್ರಯಾಣ ವೆಚ್ಚವಾಗಲಿದ್ದು, ಈ ಎರಡು ಸ್ಥಳಗಳ ನಡುವೆ 27 ಕಿ.ಮೀ. ದೂರವಿದೆ(Distance) ರಸ್ತೆ ಮಾರ್ಗದಲ್ಲಿ ಕಾರಿನಲ್ಲಿ(Roadways) ಕ್ರಮಿಸಲು 90 ನಿಮಿಷ ಬೇಕಿದ್ದು, 1,500 ವೆಚ್ಚವಾಗಲಿದೆ ಎಂದು ಹೇಳಿಲಾಗುತ್ತಿದೆ. ಐದು ಆಸನಗಳ ಸಾಮರ್ಥ್ಯದ 200 ಮಿಡ್‌ನೈಟ್ ಏರ್‌ಕ್ರಾಫ್ಟ್‌ಗಳನ್ನು ಈ ಮಾರ್ಗದಲ್ಲಿ ಕಾರ್ಯಾಚರಣೆಗೆ ಇಳಿಸಲು ನಿರ್ಧರಿಸಲಾಗಿದೆ. ಪೈಲಟ್ ಸೇರಿ(Pilot )ನಾಲ್ವರು ಪ್ರಯಾಣಿಸಲು ಅವಕಾಶ ಸಿಗಲಿದೆ.ಸೆಂಟ್ರಲ್ ದೆಹಲಿಯಿಂದ (ಕನ್ನಾಟ್ ಪ್ಲೇಸ್) ಹರಿಯಾಣದ ಗುರುಗ್ರಾಮ್‌ಗೆ ಕೇವಲ 7 ನಿಮಿಷಗಳಲ್ಲಿ ಪ್ರಯಾಣಿಸಲು ಸಿದ್ಧರಾಗಿ.
ನೀವು ಇದನ್ನು ಇಷ್ಟ ಪಡಬಹುದು:ಏರ್ ಇಂಡಿಯಾದ ಸುರಕ್ಷತೆ ವಿಡಿಯೋದಲ್ಲಿ ಭಾರತೀಯ ಸಂಸ್ಕೃತಿ ಅನಾವರಣ
ಹರಿಯಾಣದ ಬಳಿಕ ಭವಿಷ್ಯದಲ್ಲಿ ಮುಂದಿನ ದಿನಗಳಲ್ಲಿ ಮುಂಬೈ(Mumbai) ಮತ್ತು ಬೆಂಗಳೂರಿನಲ್ಲಿ(Bangalore)ಇದೇ ರೀತಿಯ ಸೇವೆಗಳನ್ನು ಪ್ರಾರಂಭಿಸಲಾಗುತ್ತದೆ.IGE ಮತ್ತು ಆರ್ಚರ್ ನವೆಂಬರ್ 2023 ರಲ್ಲಿ ಒಪ್ಪಂದ ಮಾಡಿಕೊಂಡಿದ್ದವು. ಇದರಲ್ಲಿ ಅವರು ಆರ್ಚರ್‌ನ 200 ಎಲೆಕ್ಟ್ರಿಕ್ ಟೇಕ್-ಆಫ್ ಮತ್ತು ಲ್ಯಾಂಡಿಂಗ್ (eVTOL) ವಿಮಾನಗಳನ್ನು ಭಾರತೀಯ ಮಾರುಕಟ್ಟೆಗೆ ಖರೀದಿಸಲು ಹಣಕಾಸು ಒದಗಿಸಲು ಯೋಜಿಸಿದ್ದರು. ಈ ವಿಮಾನಗಳು, ಪ್ರತಿಯೊಂದೂ 12 ರೋಟರ್‌ಗಳನ್ನು ಹೊಂದಿದ್ದು, ಸುಮಾರು 1 ಬಿಲಿಯನ್ ಡಾಲರ್ ವೆಚ್ಚವಾಗಲಿದೆ.
ವಿಮಾನವು ನಾಲ್ಕು ಪ್ರಯಾಣಿಕರು ಮತ್ತು ಪೈಲಟ್ ಅನ್ನು ಹೊತ್ತೊಯ್ಯಬಹುದು. ಇದು ಆರು-ಬ್ಯಾಟರಿ ಪ್ಯಾಕ್‌ನೊಂದಿಗೆ ಅಳವಡಿಸಲ್ಪಟ್ಟಿದ್ದು, 30-40 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ.ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್( United State Fedral Aviation Administration)(ಎಫ್‌ಎಎ) ನೊಂದಿಗೆ ಚರ್ಚೆಗಳು ನಡೆಯುತ್ತಿವೆ ಮತ್ತು ಅದರ ವಿಮಾನಗಳಿಗೆ ಪ್ರಮಾಣೀಕರಣ ಪ್ರಕ್ರಿಯೆಯು ಮುಂದುವರಿದ ಹಂತದಲ್ಲಿದೆ.
ಮುಂದಿನ ವರ್ಷ ಪ್ರಮಾಣೀಕರಣವನ್ನು ನಿರೀಕ್ಷಿಸಲಾಗಿದೆ ಮತ್ತು ಅದು ಜಾರಿಯಾದ ನಂತರ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಪ್ರಮಾಣೀಕರಣಕ್ಕಾಗಿ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ.
ವಿಮಾನವು ಹೆಲಿಕಾಪ್ಟರ್‌ನಂತೆಯೇ ಕಾರ್ಯನಿರ್ವಹಿಸುತ್ತದೆ ಆದರೆ ಕಡಿಮೆ ಶಬ್ದ ಮತ್ತು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಕಾರ್ಯನಿರ್ವಹಿಸುತ್ತದೆ
eVTOL ಗಳು ತ್ವರಿತ ಮತ್ತು (ಆಶಾದಾಯಕವಾಗಿ!) ಆರಾಮದಾಯಕ ಪ್ರಯಾಣವನ್ನು ನೀಡುತ್ತವೆ. ನಿಖರವಾದ ವೆಚ್ಚವನ್ನು ಇನ್ನೂ ನಿರ್ಧರಿಸಲಾಗಿಲ್ಲ, ಅಂದಾಜಿನ ಪ್ರಕಾರ ಇದು ಪ್ರತಿ ಪ್ರಯಾಣಿಕರಿಗೆ ¹2,000-3,000 ನಡುವೆ ಇರಬಹುದು
ಆರ್ಚರ್ ಏವಿಯೇಷನ್(Archer Aviation)ಸಿಇಒ ಆಡಮ್ ಗೋಲ್‌ಸ್ಟೈನ್(Adam goldstein) ಪ್ರಕಾರ, 27 ಕಿಲೋಮೀಟರ್ ರೈಡ್‌ಗೆ ಸುಮಾರು 1,500 ರೂ. ಇದು ಸ್ವಚ್ಛ ಸಾರಿಗೆಯತ್ತ ಒಂದು ಹೆಜ್ಜೆಯಾಗಿದೆ. ಅಲ್ಲದೆ ನಗರಗಳ ಟ್ರಾಫಿಕ್ ಜಾಮ್ ನಿಂದ ಮುಕ್ತಿಗೂ ನೆರವಾಗಲಿದೆ.
ಅಂದುಕೊಂಡಂತೆ ಬೆಂಗಳೂರಿನಲ್ಲಿ ಭವಿಷ್ಯದಲ್ಲಿ ಈ ಯೋಜನೆ ಕಾಲಿಟ್ಟರೆ ರಾಜ್ಯ ರಾಜಧಾನಿ ಮಂದಿಗೆ ಇದು ಸಾಕಷ್ಟು ಪ್ರಯೋಜನ ನೀಡಲಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಬೇಕಂದರೆ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ನಲ್ಲಿ (Bengaluru Traffic) ನಿಂತು ಪರದಾಡಬೇಕು. ಅದರಲ್ಲೂ ತುರ್ತು ಕೆಲಸವಿದ್ದಾಗ ವೇಗವಾಗಿ ಹೋಗಲು ಆಗುವುದಿಲ್ಲ. ಅಷ್ಟರಮಟ್ಟಿಗೆ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಆದರೆ ಇನ್ಮುಂದೆ ಈ ಸಮಸ್ಯೆ ಗೆ ಏರ್ ಟ್ಯಾಕ್ಸಿ ಬಂದರೆ ಮುಕ್ತಿ ಸಿಗಬಹುದು.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.