ದೂರ ತೀರ ಯಾನವಿಂಗಡಿಸದಸಂಸ್ಕೃತಿ, ಪರಂಪರೆ

ಸಾವಿರವಿದ್ರೆ ಸಾಕು ವಿಮಾನದಲ್ಲಿ ಹೋಗಬಹುದು

ಪ್ರತಿಯೊಬ್ಬರಿಗೂ ಜೀವಿತಾವಧಿಯಲ್ಲಿ ಒಮ್ಮೆಯಾದರೂ ವಿಮಾನ(Flight)ದಲ್ಲಿ ಪ್ರಯಾಣ ಮಾಡುವ ಕನಸಿರುತ್ತದೆ. ವಿಮಾನ ಪ್ರಯಾಣ ಅಂದರೆ ಹಣ ಜಾಸ್ತಿ ಅನ್ನೋದು ಸರ್ವೇ ಸಾಮಾನ್ಯ ಅಭಿಪ್ರಾಯ. ಆದರೆ ನಿಮಗೆ ಗೊತ್ತಾ, ಸಾವಿರ ರೂಪಾಯಿ ಇದ್ರೆ ಸಾಕು ನೀವು ಬೆಂಗಳೂರಿಂದ (Bengaluru)ದೇಶೀಯ ವಿಮಾನದಲ್ಲಿ ಪ್ರಯಾಣ ಹೊರಡಬಹುದು.


ಹೌದು,ಬೆಂಗಳೂರಿಂದ ಸೇಲಂ ಗೆ(Salem) ಅತಿ ಕಡಿಮೆ ವೆಚ್ಚದಲ್ಲಿ ವಿಮಾನ ಪ್ರಯಾಣ ಮಾಡಬಹುದು.

ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ (Kempegowda International Airport) ತಮಿಳುನಾಡಿನ ಸೇಲಂ (Salem , Tamil Nadu )ತಲುಪುವುದಕ್ಕೆ ವಿಮಾನಗಳು ಸಂಚಾರವನ್ನು ನಡೆಸುತ್ತವೆ.

Cheapest flight from Bengaluru


ಬೆಳಗ್ಗೆ 12.20 ಕ್ಕೆ ವಿಮಾನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲಿದ್ದು,1.20 ಕ್ಕೇ ಸೇಲಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ.

ಸಂಜೆ 4.40 ಕ್ಕ ಸೇಲಂ ನಿಲ್ದಾಣದಿಂದ ಬೆಂಗಳೂರಿನ ವಿಮಾನವಿದೆ. ಇದು 4.40 ಕ್ಕೆ ಅಲ್ಲಿಂದ ಹೊರಟು 5.50 ಕ್ಕೆ ಬೆಂಗಳೂರು ತಲುಪಲಿದೆ.

ಬೆಂಗಳೂರಿಂದ ಸೇಲಂ ದಾರಿ ಅಂದಾಜು 1.08 ನಿಮಿಷ . ಈ ಹಾದಿಗೆ ಸುಮಾರು 946 ರು ತಗಲುತ್ತದೆ. ಆದರೆ ನೀವು ಗಂಟೆಯೊಳಗೆ ತಲುಪಲು ಬಹುದು. .

Cheapest flight from Bengaluru

ತಮಿಳುನಾಡು ರಾಜ್ಯದ 5 ನೇ ದೊಡ್ಡ ನಗರವಾದ ಸೇಲಂ, ಯೆರ್ಕಾಡ್ ಬೆಟ್ಟಗಳ ತಳದಲ್ಲಿದೆ. ರುಚಿಕರವಾದ ಮಾವಿನ ಹಣ್ಣುಗಳಿಗೆ ಹೆಸರುವಾಸಿಯಾದ ಈ ದಕ್ಷಿಣ ಭಾರತದ ನಗರವು ಅದರ ಉತ್ತರಕ್ಕೆ ನಾಗರಮಲೈ(Nagaramalai), ಪಶ್ಚಿಮಕ್ಕೆ ಕಂಜಮಲೈ(Kanjamalai), ದಕ್ಷಿಣಕ್ಕೆ ಜರುಗುಮಲೈ(Jarugumalai) ಮತ್ತು ಪೂರ್ವಕ್ಕೆ ಗೋಡುಮಲೈ(Godumalai) ಬೆಟ್ಟಗಳಿಂದ ಸುತ್ತುವರಿದಿದೆ.ತಿಳಿದಿರುವ ಪ್ರವಾಸಿ ತಾಣವಲ್ಲದೆ, ಈ ಸ್ಥಳವು ಅಲ್ಲಿರುವ ಬೆಟ್ಟಗಳ ಶ್ರೇಣಿಗಾಗಿ ಭೂವಿಜ್ಞಾನಿಗಳಿಗೆ ಸ್ವರ್ಗವಾಗಿದೆ. ಈ ನಗರವು ವಿಶ್ವದ ಪ್ರಮುಖ ಜವಳಿ ನೇಯ್ಗೆ ಕೇಂದ್ರಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ.

ಸೇಲಂ ಜೊತೆಗೆ ತಮಿಳುನಾಡಿನಲ್ಲಿ ನೋಡಬಹುದಾದ ತಾಣಗಳು

ಕೊಡೈಕೆನಾಲ್(Kodaikanal)

ಕೊಡೈಕೆನಾಲ್ ಮಂಜಿನಿಂದ ಆವೃತವಾದ ಬೆಟ್ಟದ ಪಟ್ಟಣವಾಗಿದ್ದು, ಸುಂದರ ಬಂಡೆಗಳು ಮತ್ತು ಜಲಪಾತಗಳನ್ನು ಹೊಂದಿದೆ. ತಮಿಳುನಾಡಿನಲ್ಲಿ ಭೇಟಿ ನೀಡಲು ಇದು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಕೊಡೈಕೆನಾಲ್ ಸುಂದರವಾದ ಹವಾಗುಣವನ್ನು ಹೊಂದಿದೆ.

Cheapest flight from Bengaluru

ನೀವು ಇದನ್ನು ಇಷ್ಟ ಪಡಬಹುದು:15 ಸಾವಿರವಿದ್ದರೆ ಸಾಕು ಈ ದೇಶಗಳಿಗೆ ವಿಮಾನದಲ್ಲಿ ಹೋಗಬಹುದು

ಊಟಿ (Ooty)

ನೀಲಗಿರಿ ಬೆಟ್ಟಗಳ ನಡುವೆ ನೆಲೆಸಿರುವ ಊಟಿಯು ತನ್ನ ಸೌಂದರ್ಯ ಮತ್ತು ಉನ್ನತ ದರ್ಜೆಯ ಪ್ರವಾಸಿ ಆಕರ್ಷಣೆಗಳಿಗಾಗಿ ಗುರುತಿಸಲ್ಪಟ್ಟಿರುವ ಒಂದು ಸುಂದರವಾದ ವಿಹಾರ ತಾಣವಾಗಿದೆ. ಸುಂದರವಾದ ಗಿರಿಧಾಮವನ್ನು ಬ್ರಿಟಿಷರು ‘ಬೆಟ್ಟಗಳ ರಾಣಿ’ ಎಂದು ಗೌರವಿಸುತ್ತಾರೆ. ತನ್ನ ರಮಣೀಯ ಸೌಂದರ್ಯಕ್ಕೆ ಹೆಸರುವಾಸಿಯಾದ ಊಟಿಯು ತಮಿಳುನಾಡಿನಲ್ಲಿ ಭೇಟಿ ನೀಡಲು ಅತ್ಯುತ್ತಮವಾದ ಸ್ಥಳಗಳಲ್ಲಿ ಒಂದಾಗಿದೆ .

Cheapest flight from Bengaluru

ಮಧುರೈ(Madurai)

ಮಧುರೈ ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮತ್ತು ತಮಿಳುನಾಡಿನ ಅತ್ಯುತ್ತಮ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ . ಈ ನಗರವನ್ನು ‘ಲೋಟಸ್ ಸಿಟಿ’ ಎಂದೂ ಕರೆಯುತ್ತಾರೆ ಏಕೆಂದರೆ ಅದರ ವಿನ್ಯಾಸವು ತೆರೆದ ಕಮಲದ ಹೂವನ್ನು ಹೋಲುತ್ತದೆ. ಪುರಾತನ ನಗರವು ಭಾರತದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಮೀನಾಕ್ಷಿ ಅಮ್ಮನ್ ದೇವಾಲಯಕ್ಕೆ ನೆಲೆಯಾಗಿದೆ . ವಾಸ್ತುಶಿಲ್ಪದ ಮೇರುಕೃತಿ, ಮೀನಾಕ್ಷಿ ದೇವಸ್ಥಾನವು ಮೀನಾಕ್ಷಿ ದೇವಿ ಮತ್ತು ಅವಳ ಸಂಗಾತಿಗೆ ಸಮರ್ಪಿತವಾಗಿದೆ ಮತ್ತು ಇದು ಮಧುರೈನ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button