ದೂರ ತೀರ ಯಾನವಿಂಗಡಿಸದ

ಮೋದಿ ಭೇಟಿ ನಂತರ ಲಕ್ಷದ್ವೀಪ ಪ್ರವಾಸೋದ್ಯಮದಲ್ಲಿ ಹೆಚ್ಚಳ

ಲಕ್ಷದ್ವೀಪವು(Lakshadweep)ಸ್ಕೂಬಾ ಡೈವಿಂಗ್ ಸೇರಿದಂತೆ ಹಲವು ಜಲ ಕ್ರೀಡೆಗಳಿಗೆ ಹೇಳಿ ಮಾಡಿಸಿದ ತಾಣಗಳನ್ನು ಹೊಂದಿದೆ .


ಈ ಜನವರಿಯಲ್ಲಿ(January )ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಈ ದ್ವೀಪಕ್ಕೆ ಭೇಟಿ ನೀಡಿದ ನಂತರ, ಭಾರತದ ಈ ದ್ವೀಪ ಸಾಕಷ್ಟು ಪ್ರಚಾರವನ್ನು ಪಡೆಯಿತು ಅನ್ನೋದು ಗೊತ್ತೇ ಇರುವ ವಿಚಾರ.

ಲಕ್ಷದ್ವೀಪ ಪ್ರವಾಸೋದ್ಯಮ ಅಧಿಕಾರಿ (Tourism Department Office)ಅವರ ಪ್ರಕಾರ, ಪ್ರಧಾನಿ ಮೋದಿಯವರ ಭೇಟಿಯ ಪರಿಣಾಮವಾಗಿ, ದ್ವೀಪ ಪ್ರದೇಶದಲ್ಲಿ ಪ್ರವಾಸೋದ್ಯಮದ ಏರುಗತಿಯ ಬೆಳವಣಿಗೆ ಆಗುತ್ತಿದೆ.

Narendra Modi Lakshadweep

“ಪ್ರಧಾನಿ ಮೋದಿಯವರ ಭೇಟಿಯ ಪರಿಣಾಮವು ದೊಡ್ಡದಾಗಿದೆ, ನಾವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರವಾಸೋದ್ಯಮ ಕ್ಷೇತ್ರದಿಂದ ಸಾಕಷ್ಟು ವಿಚಾರಣೆಗಳನ್ನು ಸ್ವೀಕರಿಸುತ್ತಿದ್ದೇವೆ” ಎಂದು ಅಧಿಕಾರಿ ಹೇಳಿಕೊಂಡಿದ್ದಾರೆ.

ಇನ್ನು ಈ ದೀಪವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಅಲ್ಲಿನ ಪ್ರವಾಸೋದ್ಯಮ ಇಲಾಖೆಯು ಲಕ್ಷದ್ವೀಪವು ಹೆಚ್ಚಿನ ಕ್ರೂಸ್ ಹಡಗು(Cruise Ship)ಕಂಪನಿಗಳನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ.

ದ್ವೀಪಕ್ಕೆ ವಿಮಾನ ಸಂಪರ್ಕವನ್ನು ಸುವ್ಯವಸ್ಥಿತಗೊಳಿಸಿದ ನಂತರ, ಪ್ರವಾಸಿಗರ ಒಳಹರಿವಿನಲ್ಲಿ ಹೆಚ್ಚಳವಾಗಿದೆ.

ಪ್ರಧಾನಿ ಮೋದಿಯವರ ಈ ದ್ವೀಪದ ಭೇಟಿಯು ಅರಬ್ಬೀ ಸಮುದ್ರದಲ್ಲಿನ ದ್ವೀಪ ಸಮೂಹಕ್ಕೆ ಸಂಬಂಧಿಸಿದ ಹಲವಾರು ಪುರಾಣಗಳನ್ನು ಬುಡಮೇಲು ಮಾಡಿದೆ.

Narendra Modi Lakshadweep


ಭಾರತದ ಕೆಲವು ಸುಂದರ ಮತ್ತು ವಿಲಕ್ಷಣ ದ್ವೀಪಗಳಲ್ಲಿ ಇವು ಕೂಡ ಒಂದಾಗಿದೆ. ಭಾರತದ ಚಿಕ್ಕ ಕೇಂದ್ರಾಡಳಿತ ಪ್ರದೇಶವು(Union Territoryಕೇವಲ 36 ದ್ವೀಪಗಳನ್ನು ಹೊಂದಿದ್ದು ಒಟ್ಟು 32 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಇದು 12 ಹವಳಗಳು, 3 ಬಂಡೆಗಳು ಮತ್ತು 5 ಮುಳುಗಿರುವ ದಡಗಳಿಂದ ಮಾಡಲ್ಪಟ್ಟಿದೆ.

ನೀವು ಇದನ್ನು ಇಷ್ಟ ಪಡಬಹುದು: ಲಕ್ಷದ್ವೀಪ v/s ಮಾಲ್ಡೀವ್ಸ್‌; ಪ್ರತೀ ದ್ವೀಪದ ಪ್ರವಾಸದಲ್ಲೂ ವೆಚ್ಚವಾಗುವ ಹಣವೆಷ್ಟು ಗೊತ್ತಾ? ಇಲ್ಲಿದೆ ಮಾಹಿತಿ


ಲಕ್ಷದ್ವೀಪ ದ್ವೀಪಗಳಿಗೆ ಭೇಟಿ ನೀಡಲು ಸೆಪ್ಟೆಂಬರ್‌ನಿಂದ(September )ಫೆಬ್ರವರಿ (February)ಅತ್ಯುತ್ತಮ ಸಮಯ. ಮಾರ್ಚ್‌ನಿಂದ(March) ಮೇ ತಿಂಗಳುಗಳು (May)ಸಹ ಉತ್ತಮವಾದ ತಿಂಗಳುಗಳಾಗಿವೆ ಆದರೆ ಹವಾಮಾನವು 2-3 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿಯಾಗಿರುತ್ತದೆ. ಮಳೆಗಾಲದಲ್ಲಿ ಆದಷ್ಟು ಹೋಗುವುದನ್ನು ತಪ್ಪಿಸುವುದು ಒಳ್ಳೆಯದು

ಲಕ್ಷದ್ವೀಪವು ತನ್ನ ಅದ್ಭುತವಾದ ಆಕರ್ಷಣೆಗಳಿಂದ ಜನರನ್ನು ಹಿಡಿದಿಟ್ಟುಕೊಳ್ಳುತ್ತದೆ. ಒಂದು ಕಾಲದಲ್ಲಿ ಇಲ್ಲಿನ ದ್ವೀಪಗಳನ್ನು ಲಕ್ಕಾಡಿವ್ ದ್ವೀಪಗಳು ಎಂದೇ ಕರೆಯಲಾಗುತ್ತಿತ್ತು.ಕಡಲತೀರಗಳಿಗೆ ನೆಲೆಯಾಗಿರುವ ಲಕ್ಷದ್ವೀಪವು ಅರೇಬಿಯನ್ ಸಮುದ್ರದ ನೈಋತ್ಯ ಕರಾವಳಿಯಿಂದ 400 ಕಿಮೀ ದೂರದಲ್ಲಿದೆ.

Narendra Modi Lakshadweep

ಲಕ್ಷದ್ವೀಪವನ್ನು ಸಾಮಾನ್ಯವಾಗಿ ಕೇರಳ(Kerala) ರಾಜ್ಯದ ಕೊಚ್ಚಿ ಯಿಂದ(Kochi )ಪ್ರವೇಶಿಸಬಹುದು. ಆದರೆ ಎಲ್ಲಾ ಪ್ರವಾಸಿಗರು ಲಕ್ಷದ್ವೀಪಕ್ಕೆ ಹೋಗಲು ಅನುಮತಿ ಪಡೆಯುವುದು ಕಡ್ಡಾಯ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button