ಕಾರ್ಕಳಕ್ಕೆ ಬಂದರೆ ಈ ಸ್ಥಳಕ್ಕೆ ಭೇಟಿ ನೀಡಲು ಮರೆಯದಿರಿ
ಕಾರ್ಕಳವು(Karkala) ಕರ್ನಾಟಕದ ಉಡುಪಿ (Udupi)ಜಿಲ್ಲೆಯಲ್ಲಿರುವ ಒಂದು ಪಟ್ಟಣವಾಗಿದೆ.ಇಲ್ಲಿ ಐತಿಹಾಸಿಕ ದೇವಾಲಯ, ಜೈನ ಬಸಿದಿಗಳನ್ನು ನಾವು ನೋಡಬಹುದು. ಕಾರ್ಕಳದಲ್ಲಿ ಕಪ್ಪು ಗ್ರಾನೈಟ್ ಹೇರಳವಾಗಿದೆ.ಈ ಪ್ರದೇಶದಲ್ಲಿ ಹೇರಳವಾಗಿರುವ ಕಪ್ಪು ಗ್ರಾನೈಟ್‌ನಿಂದಾಗಿ ‘ಕರಿಕಲ್’ ಅಂದರೆ ‘ಕಪ್ಪು ಕಲ್ಲು’ ಎಂಬ ಪದದಿಂದ ಅದರ ಹೆಸರನ್ನು ಪಡೆದುಕೊಂಡಿದೆ. ಇಲ್ಲಿಗೆ ಪ್ರವಾಸ ಕೈಗೊಳ್ಳುವುದರಿಂದ ಒಂದು ಒಳ್ಳೆಯ ಅನುಭವವನ್ನು ಪಡೆದುಕೊಳ್ಳಬಹುದು.
ವಿಶ್ವದ ಅತ್ಯಂತ ಎರಡನೇ ಎತ್ತರದ ಬಾಹುಬಲಿ( Bahubali) ಪ್ರತಿಮೆಯು ಉಡುಪಿ ಜಿಲ್ಲೆಯ( Udupi District )ಕಾರ್ಕಳ( Karkala) ತಾಲೂಕಿನಲ್ಲಿದೆ.ವೀರ ಪಾಂಡ್ಯ ಭೈರರಸ ಒಡೆಯರ್( Veera Pandya Bairarasa Odeyar)ಅಂದಿನ ಜೈನ ಮಠದ ಭಟ್ಟರಕಾರದ ಲಲಿತಕೀರ್ತಿಯವರ( Lalitakeerti) ಸಲಹೆಯನ್ನು ಮೇರೆಗೆ 1432 ರಲ್ಲಿ ಈ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಶ್ರವಣಬೆಳಗೊಳದ( Shravanabelagola) ದೊಡ್ಡ ಗೊಮ್ಮಟೇಶ್ವರ ಪ್ರತಿಮೆಯ ಸ್ಫೂರ್ತಿಯ ಪ್ರತೀಕವಾಗಿದೆ.
ಗೊಮ್ಮಟೇಶ್ವರ ( Gommateshwara) ಪ್ರತಿಮೆಯನ್ನು ಗ್ರಾನೈಟ್ನ ( Granait)ಒಂದೇ ಬಂಡೆಯಿಂದ ಕೆತ್ತಲಾಗಿದ್ದು ಇದು 42 ಅಡಿ ಎತ್ತರ ಹಾಗೂ 10.33 ಅಡಿ ಅಗಲವನ್ನು ಹೊಂದಿದೆ.ಶ್ರವಣಬೆಳಗೊಳ( Shravanabelagola), ಧರ್ಮಸ್ಥಳ( Dharmastala) , ವೇಣೂರು (Venuru), ಗೊಮ್ಮಟಗಿರಿಯಲ್ಲಿರುವ( Gommatagiri) ಗೊಮ್ಮಟೇಶ್ವರ ಪ್ರತಿಮೆ ಜೊತೆಗೆ ಕಾರ್ಕಳದಲ್ಲಿರುವ( Karkala) ಬಾಹುಬಲಿಯ ಐದು ಏಕಶಿಲಾ ಪ್ರತಿಮೆಗಳು ಕರ್ನಾಟಕದಲ್ಲಿವೆ.
ಶ್ರವಣಬೆಳಗೊಳ, ಕಾರ್ಕಳ ಮತ್ತು ವೇಣೂರಿನ ಬಾಹುಬಲಿಯ ಏಕಶಿಲೆಯ ಬೃಹತ್ ಪ್ರತಿಮೆಗಳು ಪ್ರಪಂಚದ ಅದ್ಭುತವೆಂದು ಪರಿಗಣಿಸಲಾಗಿದೆ. ಹಾಗೆಯೇ ಉಡುಪಿ ಜಿಲ್ಲೆಯ( Udupi District )ವರಂಗ (Varanga)ಎಂಬಲ್ಲಿ ಕೆರೆ ಬಸಿದಿ ಎಂದು ಕರೆಯುವ ಜೈನ ದೇವಾಲಯವು( Jain Temple )ಬಹಳ ಪ್ರಸಿದ್ಧಿಯಾಗಿದೆ. 12ನೆಯ ಶತಮಾನದ ಈ ದೇವಾಲಯವು ಕೆರೆಯ ಮದ್ಯದಲ್ಲಿ ನೆಲೆಸಿರುವುದು ಆಕರ್ಷಣೆಯಾಗಿದೆ.ತೀರ್ಥಂಕರರ ನಾಲ್ಕು ವಿಗ್ರಹವನ್ನು ಹೊಂದಿರುವ ಈ ದೇವಾಲಯವನ್ನು ಚತುರ್ಮುಖ ಬಸದಿ ಎಂದೂ ಕರೆಯಲಾಗುತ್ತದೆ . ಜೈನ ತಮಿಳರ 8ನೇ ಶತಮಾನದ ಪ್ರಸಿದ್ಧ ಕೃತಿಗಳಲ್ಲಿ ಒಂದಾದ ಶ್ರೀಪುರಾಣವು( Shreepurana) ವರಂಗದಲ್ಲಿ ಜೈನದೇವಾಲಯದ ( Jaina Temple )ಕುರುಹನ್ನು ನೀಡುತ್ತದೆ.
ಇದು 850 ವರ್ಷಗಳ ಹಿಂದಿನ ದೇವಾಲಯವಾಗಿದೆ.ಜೈನ ಮಠವು ಹಮ್ಚಾ ಜೈನ ಮಠದ( Humcha Jain Mutt)ಒಂದು ಶಾಖೆಯಾಗಿದೆ ಎನ್ನಲಾಗಿದೆ. ಜೈನ ಧರ್ಮದ 23ನೇ ತೀರ್ಥಂಕರ ನಾದ ಪಾರ್ಶ್ಶ್ವನಾಥನು( Parshvanatha) ಇದರ ಮೂಲನಾಯಕನಾಗಿದ್ದಾನೆ.ದೇವಾಲಯವನ್ನು ಚತುರ್ಮುಖ ಶೈಲಿಯಲ್ಲಿ( Chaturmukha Style ) ನಿರ್ಮಿಸಲಾಗಿದೆ , ನಾಲ್ಕು ಪ್ರವೇಶದ್ವಾರಗಳನ್ನು ಹೊಂದಿದೆ ಮತ್ತು ಪಾರ್ಶ್ವನಾಥ( Parshvanatha), ನೇಮಿನಾಥ( Neminatha ) , ಶಾಂತಿನಾಥ ( Shantinatha)ಮತ್ತು ಅನಂತನಾಥರ( Anantanatha) ಚಿತ್ರಗಳನ್ನು ಹೊಂದಿರುವ ಚತುರ್ಮುಖ ವಿಗ್ರಹವು ನಾಲ್ಕು ದಿಕ್ಕನ್ನು ಪ್ರತಿನಿಧಿಸುತ್ತದೆ.
ದೇವಾಲಯವು ಪದ್ಮಾವತಿಯ( Padmavati) ವಿಗ್ರಹವನ್ನು ಸಹ ಹೊಂದಿದೆ . ನಂಬಿಕೆಗಳ ಪ್ರಕಾರ, ಇಲ್ಲಿ ಪೂಜೆ ಮಾಡುವುದರಿಂದ ಸಮೃದ್ಧಿಯನ್ನು ತರುತ್ತದೆ ಮತ್ತು ವಿಗ್ರಹದ ಬಲಭಾಗದಿಂದ ಹೂವು ಬೀಳುವುದು ಆಶೀರ್ವಾದವಾಗಿದೆ ಎಂದು ಊರಿನವರು ನಂಬುತ್ತಾರೆ..ಅನಂತಶಯನ ದೇವಸ್ಥಾನ ( Anantashayana Temple )ಈ ದೇವಾಲಯವು ಜೈನ( Jain )ರಾಜನಿಂದ ಸುಮಾರು 1567 ರ ಸಮಯದಲ್ಲಿ ನಿರ್ಮಿಸಲ್ಪಟ್ಟಿದ್ದೆ.
ಪುರಾಣದ ಪ್ರಕಾರ ಒಮ್ಮೆ ಶೃಂಗೇರಿ( Sringeri) ಜಗದ್ಗುರು ಶ್ರೀ ನರಸಿಂಹ ಭಾರತೀ ಸ್ವಾಮೀಜಿ ಕಾರ್ಕಳಕ್ಕೆ ( Karkala) ಭೇಟಿ ನೀಡಿದಾಗ, ರಾಜರು ಅವರನ್ನು ಪ್ರೀತಿಯಿಂದ ಸ್ವಾಗತಿಸಿದರು.ಆದಾಗ್ಯೂ, ಸರ್ವಶಕ್ತ ಭಗವಂತನಿಗೆ ಸಮರ್ಪಿತವಾದ ದೇವಾಲಯದ ನಿರ್ಮಾಣದೊಂದಿಗೆ ಸ್ವಾಮೀಜಿ ತನ್ನ ವಾಸ್ತವ್ಯವನ್ನು ಷರತ್ತು ವಿಧಿಸಿದರು. ಹೀಗೆ ರಾಜನು ತನ್ನ ಬಸದಿಯನ್ನು ಸ್ವಾಮೀಜಿಗೆ ಕೊಟ್ಟು ಮಲಗಿರುವ ವಿಷ್ಣುವಿನ( Vishnu) ಭವ್ಯವಾದ ಕಲ್ಲಿನ ಶಿಲ್ಪದ ವಿಗ್ರಹವನ್ನು ಸ್ಥಾಪಿಸಿದನು.
ನೆಲ್ಲಿಕಾರ್(Nellikar) ಎಂಬ ಗ್ರಾಮದ ಬಳಿಯ ಕೆರೆಯಲ್ಲಿ ಸ್ಥಾಪಿತವಾದ ಈ ವಿಗ್ರಹವು ಒಂದೇ ಕಪ್ಪು ಕಲ್ಲಿನಿಂದ ಕೆತ್ತಲಾಗಿದೆಯಂತೆ. ಈ ದೇವಾಲಯವು ಬಸದಿಯ ಹಲವಾರು ಭವ್ಯವಾದ ಮತ್ತು ಉತ್ತಮವಾದ ಶಿಲ್ಪಗಳನ್ನು ಹೊಂದಿದೆ ಮತ್ತು ಇದನ್ನು ಭಾರತೀಯ ಪುರಾತತ್ವ ಸಮೀಕ್ಷೆಯ ಅಡಿಯಲ್ಲಿ ರಕ್ಷಿಸಲಾಗಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.